ಒಂದು ವರ್ಷ ಕಳೆದೇ ಹೋಯ್ತು, ಮೊನ್ನೆ ಮೊನ್ನೆಯಷ್ಟೇ 2024ನ್ನು ಸ್ವಾಗತಿಸಿದ್ದೆವು ಇಷ್ಟು ಬೇಗ ವರ್ಷ ಕಳೆಯಿತಾ ಎನ್ನುವಷ್ಟರ ಮಟ್ಟಿಗೆ ಸಮಯ ಉರುಳಿಹೋಗಿದೆ. ಹೊಸ ವರ್ಷವನ್ನು ಸ್ವಾಗತಿಸಲು ಇಡೀ ವಿಶ್ವವೇ ಸಜ್ಜಾಗಿದೆ. ಗಡಿಯಾರದ ಮುಳ್ಳು 12 ಗಂಟೆ ತಲುಪುತ್ತಿದ್ದಂತೆ ಹರ್ಷೋದ್ಘಾರ, ಪಟಾಕಿ ಸದ್ದು, ಶುಭಾಶಯಗಳ ವಿನಿಮಯ, ಸಂಭ್ರಮ, ಸಂತೋಷ ತುಂಬಿರುತ್ತದೆ. ಮತ್ತೊಂದು ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ.
ಹೊಸ ವರ್ಷ ಬರುತ್ತಿದ್ದಂತೆ ಮುಂದಿನ ವರ್ಷ ನಮ್ಮ ಜೀವನ ಹೇಗಿರಬಹುದು ಎಂದು ಎಲ್ಲರೂ ಕುತೂಹಲ ವ್ಯಕ್ತಪಡಿಸುತ್ತಾರೆ. ಎಷ್ಟೋ ಜನರು ತಮ್ಮ ಭವಿಷ್ಯ ತಿಳಿದುಕೊಳ್ಳಲು ಬಯಸುತ್ತಾರೆ. ಹಾಗಾದರೆ ಮೇಷದಿಂದ ಮೀನ ರಾಶಿಯವರಿಗೆ 12 ರಾಶಿಗಳ 2025ರ ವರ್ಷ ಭವಿಷ್ಯ ಹೇಗಿದೆ? ಯಾರ ಜೀವನದಲ್ಲಿ ಬದಲಾವಣೆಗಳಾಗಲಿವೆ? ಯಾರ ಜೀವನದಲ್ಲಿ ಸಮಸ್ಯೆಗಳು ಉದ್ಭವಿಸಲಿವೆ? ನೋಡೋಣ.
ಮೇಷ ರಾಶಿ
ಈ ವರ್ಷವು ವೈಯಕ್ತಿಕ ಆಸೆಗಳು, ಗುರಿಗಳು ಮತ್ತು ಸಂಬಂಧಗಳಲ್ಲಿ ನಿಮಗೆ ಇನ್ನಷ್ಟು ಆರಾಮ್ ಎನಿಸುವಂತೆ ಇರುತ್ತದೆ. ಇಡೀ ವರ್ಷ ನೀವು ವಿಶ್ವಾಸದಿಂದ ಇರಲಿದ್ದೀರಿ. 2025ರ ಮೊದಲ ಕೆಲವು ತಿಂಗಳುಗಳು ನಿಧಾನವಾಗಿ ಸಾಗುತ್ತಿದೆ ಎನಿಸಿದರೂ ನಂತರ ನಿಮ್ಮ ಜೀವನದಲ್ಲಿ ಕೆಲವೊಂದು ಬದಲಾವಣೆಗಳಾಗಲಿವೆ. ಜವಾಬ್ದಾರಿಗಳು ಹೆಚ್ಚಾಗಲಿವೆ. ನಿಮ್ಮ ಶಕ್ತಿಯನ್ನು ಎಲ್ಲಿ ಕೇಂದ್ರೀಕರಿಸುತ್ತೀರಿ ಎಂಬುದರ ಕುರಿತು ಗಮನವಿರಲಿ. ಒಟ್ಟಿನಲ್ಲಿ ಮೇಷ ರಾಶಿಯವರಿಗೆ 2025 ರ ವರ್ಷವು ಪ್ರಗತಿ ಮತ್ತು ಯಶಸ್ಸಿನ ವರ್ಷವಾಗಿರುತ್ತದೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ ಮತ್ತು ನೀವು ಅನೇಕ ಮೂಲಗಳಿಂದ ಆರ್ಥಿಕ ಲಾಭಗಳನ್ನು ಪಡೆಯುತ್ತೀರಿ. ಹೊಸ ಮನೆ ಅಥವಾ ವಾಹನ ಖರೀದಿಸುವ ಸಾಧ್ಯತೆ ಇದೆ. ದಾಂಪತ್ಯ ಜೀವನ, ಪ್ರೀತಿಯಲ್ಲಿರುವವರ ಸಂಬಂಧ ಸುಧಾರಿಸುತ್ತದೆ. ಈ ಅವಧಿಯು ವೃತ್ತಿಪರರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.
ವೃಷಭ ರಾಶಿ
ಈ ಹೊಸ ವರ್ಷವು ವೃಷಭ ರಾಶಿಯವರಿಗೆ ಮಂಗಳಕರ ಸಮಯವಾಗಿದೆ. ಈ ವರ್ಷ ನಿಮ್ಮ ಆರೋಗ್ಯ ಸುಧಾರಿಸುತ್ತದೆ, ಹಳೆಯ ವಿವಾದಗಳು ಕೊನೆಗೊಳ್ಳುತ್ತವೆ ಮತ್ತು ಕುಟುಂಬದಲ್ಲಿ ಶಾಂತಿ ಇರುತ್ತದೆ. ಕೆಲಸದಲ್ಲಿ ನಿಮ್ಮ ಶ್ರಮದ ಪ್ರತಿಫಲವನ್ನು ನೀವು ಪಡೆಯುತ್ತೀರಿ ಮತ್ತು ಬಡ್ತಿಯ ಸಾಧ್ಯತೆಯಿದೆ. ವ್ಯಾಪಾರ ಪ್ರಯಾಣದಿಂದ ಲಾಭವಾಗಲಿದೆ. ಆಶ್ಚರ್ಯ ಮತ್ತು ಹೊಸ ಆರಂಭಗಳಿಂದ ತುಂಬಿದೆ. ವೈಯಕ್ತಿಕ ಬೆಳವಣಿಗೆ ಮತ್ತು ನಿಮ್ಮ ಜೀವನದ ಹಲವು ಅಂಶಗಳಲ್ಲಿ ಏಳಿಗೆಗೆ ಅವಕಾಶವಿರಲಿದೆ. ನೀವು ಎಲ್ಲಿಗೆ ಹೋದರೂ ಸಂತೋಷ, ಉತ್ಸಾಹ ನಿಮ್ಮ ಬೆನ್ನ ಹಿಂದೆ ಇರಲಿದೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಈ ವರ್ಷ ಏರಿಳಿತಗಳಿಂದ ತುಂಬಿರುತ್ತದೆ. ಹೊಸ ವೃತ್ತಿ ಅವಕಾಶಗಳು ತೆರೆದುಕೊಳ್ಳುತ್ತವೆಯಾದರೂ, ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಕುಟುಂಬದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಉಂಟಾಗಬಹುದು. ಕಲಹ ಹೆಚ್ಚಾಗಬಹದು. ಹಣವನ್ನು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ. ನಿಮ್ಮ ಗುರಿಗಳು ಮತ್ತು ಉದ್ದೇಶಗಳು ನಿಮ್ಮ ಬಳಿಗೆ ಬರುವವರೆಗೂ ಕಾಯುವ ಬದಲು ನೀವು ಸಕ್ರಿಯವಾಗಿ ಕೆಲಸ ಮಾಡಿದರೆ ಮಾತ್ರ ಯಶಸ್ಸು ಬರುತ್ತದೆ. ಇದು ನಿಮ್ಮ ಜೀವನದ ಪ್ರತಿಯೊಂದು ಕ್ಷೇತ್ರದಲ್ಲು ಆಮೂಲಾಗ್ರ ಬದಲಾವಣೆಗಳನ್ನು ತರುತ್ತದೆ.
ಕಟಕ ರಾಶಿ
ಕಟಕ ರಾಶಿಯವರಿಗೆ ಇದು ಸಂತೋಷ, ಸಮೃದ್ಧಿ ಮತ್ತು ಸಂತೋಷದ ವರ್ಷವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ಪ್ರಗತಿಗೆ ಅವಕಾಶವಿರುತ್ತದೆ. ದಾಂಪತ್ಯ ಜೀವನದಲ್ಲಿ ಮಧುರತೆ ಇರುತ್ತದೆ. ಮಕ್ಕಳಿಂದ ಒಳ್ಳೆಯ ಸುದ್ದಿ ದೊರೆಯುತ್ತದೆ. ಹೂಡಿಕೆ ಮತ್ತು ಆಸ್ತಿ ಸಂಬಂಧಿತ ಯೋಜನೆಗಳಲ್ಲಿ ಯಶಸ್ಸು ಇರುತ್ತದೆ. ವರ್ಷದ ಆರಂಭದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಕಾಡಿದರೂ ನಂತರ ನಿಮ್ಮ ಜೀವನದಲ್ಲಿ ಕೆಲವೊಂದು ಬದಲಾವಣೆಗಳನ್ನು ನೀವು ಗಮನಿಸಬಹುದು. ಏನೇ ಕೆಲಸ ಮಾಡುವುದಿದ್ದರೂ ಸ್ಪಷ್ಟ ಉದ್ದೇಶಗಳನ್ನು ಹೊಂದಿದ್ದರೆ ನಿಮ್ಮ ಕನಸುಗಳಿಗೆ ಜೀವ ತುಂಬಲು ಸಹಾಯ ಮಾಡುತ್ತದೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಸಿಂಹ ರಾಶಿ
2025 ಸಿಂಹ ರಾಶಿಯವರಿಗೆ ಆತ್ಮವಿಶ್ವಾಸ ಮತ್ತು ಯಶಸ್ಸಿನ ವರ್ಷವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ವ್ಯಾಪಾರದಲ್ಲಿ ದೊಡ್ಡ ಲಾಭದ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ನಿಮ್ಮ ಆರೋಗ್ಯವು ಸ್ಥಿರವಾಗಿರುತ್ತದೆ. ವರ್ಷದ ಆರಂಭ ನಿಧಾನ ಎನಿಸಿದರೂ ಸಮಯ ಕಳೆದಂತೆ ನೀವು ಹೆಚ್ಚು ಜನಪ್ರಿಯತೆ ಗಳಿಸುತ್ತೀರಿ ಮತ್ತು ಹೊಸ ಅವಕಾಶಗಳು ನಿಮ್ಮ ದಾರಿಗೆ ಬರಲಿದೆ.
ಕನ್ಯಾ ರಾಶಿ
ಈ ರಾಶಿಯವರಿಗೆ 2025 ಅತ್ಯಂತ ಪ್ರಮುಖವಾದ ವರ್ಷಗಳಲ್ಲಿ ಒಂದಾಗಿದೆ.. ವೃತ್ತಿ ಜೀವನದಲ್ಲಿ ಸ್ಥಿರತೆ ಇರುತ್ತದೆ, ಆದರೆ ನೀವು ಹೆಚ್ಚು ಶ್ರಮ ವಹಿಸಬೇಕಾಗುತ್ತದೆ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ವೈವಾಹಿಕ ಜೀವನದಲ್ಲಿ ಸ್ವಲ್ಪ ಒತ್ತಡ ಉಂಟಾಗಬಹುದು. ಕೆಲಸದಲ್ಲಿ ಸಹೋದ್ಯೋಗಿಗಳ ಬೆಂಬಲ ಸಿಗುತ್ತದೆ. ವರ್ಷದ ಮೊದಲ ಭಾಗದಲ್ಲಿ, ಹೆಚ್ಚು ಶ್ರಮ ವಹಿಸಲು ಸಮಯ ತೆಗೆದುಕೊಳ್ಳಿ, ವಿಶೇಷವಾಗಿ ನಿಮ್ಮ ವೃತ್ತಿಜೀವನದ ಕಡೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ವರ್ಷದ ಮಧ್ಯದಲ್ಲಿ ಎಲ್ಲವೂ ಬದಲಾಗಲಿದೆ. ಹೆತ್ತವರ ಆಶೀರ್ವಾದ ನಿಮ್ಮ ಪಾಲಿಗೆ ಇದೆ. ಹೊಸ ಅವಕಾಶಗಳು ಮತ್ತು ಅದೃಷ್ಟವು ನಿಮಗೆ ಬೆಂಬಲ ನೀಡುತ್ತದೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಹೊಸ ವರ್ಷವು ಒಳ್ಳೆ ಫಲಗಳನ್ನು ನೀಡುತ್ತದೆ. ನಿಮ್ಮ ಜೀವನದಲ್ಲಿ ಕೆಲವೊಂದು ದೊಡ್ಡ ಬದಲಾವಣೆಗಳಾಗಲಿವೆ. ನೀವು ರಿಸ್ಕ್ ತೆಗೆದುಕೊಂಡರೂ, ನೀವು ಬಯಸಿದ್ದನ್ನು ಸಾಧಿಸುವಿರಿ. ಉದ್ಯೋಗ, ವ್ಯಾಪಾರ, ವಿದ್ಯಾಭ್ಯಾಸ, ಎಲ್ಲಾ ಕ್ಷೇತ್ರಗಳಲ್ಲೂ ಪ್ರಗತಿ ಕಾಣಲಿದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರಲಿದೆ. ವೈವಾಹಿಕ ಜೀವನದಲ್ಲಿ ಸಣ್ಣಪುಟ್ಟ ತೊಂದರೆಗಳು ಇರುತ್ತವೆ. ಹೊಸ ಅನುಭವಗಳನ್ನು ಹೊಂದಲು ಸಿದ್ಧರಾಗಿರಿ. ಆದರೆ ಏನೇ ದೊಡ್ಡ ನಿರ್ಧಾರ ತೆಗೆದುಕೊಳ್ಳುವುದಿದ್ದರೂ ಯೋಚಿಸಿ ಮುಂದುವರೆಯಿರಿ.
ವೃಶ್ಚಿಕ ರಾಶಿ
ಈ ರಾಶಿಯವರಿಗೆ 2025ರ ಆರಂಭದಲ್ಲಿ ಅರ್ಧಾಷ್ಟಮ ಶನಿ ಇರುವುದರಿಂದ ಕಿರಿಕಿರಿಗಳು ಉಂಟಾಗುತ್ತವೆ. ಆದರೆ, ಶನಿಯ ರಾಶಿಯ ಪರಿವರ್ತನೆ ನಂತರ, ಏಪ್ರಿಲ್ 2025 ರಿಂದ ಅನಿರೀಕ್ಷಿತ ಬದಲಾವಣೆ ಕಂಡುಬರುತ್ತದೆ. ಅಂದಿನಿಂದ ಎಲ್ಲಾ ಒಳ್ಳೆಯ ದಿನಗಳು. 2025 ಏಪ್ರಿಲ್ ನಂತರ ನಿಮ್ಮ ಜೀವನದ ಹಾದಿಯನ್ನು ಬದಲಾಯಿಸುವ ಅನೇಕ ಅವಕಾಶಗಳು ನಿಮ್ಮ ಮುಂದೆ ಬರಲಿದೆ. ಮೊದಲ 5 ತಿಂಗಳು ನಿಧಾನವಾಗಬಹುದು, ಆದರೆ ಚಿಂತೆ ಬೇಡ. ವರ್ಷದ ದ್ವಿತೀಯಾರ್ಧವು ನಿಮಗೆ ಎಲ್ಲಾ ರೀತಿಯ ಅನುಕೂಲಗಳು ದೊರೆಯಲಿದೆ.
ಧನು ರಾಶಿ
ಹೊಸ ವರ್ಷದ ಆರಂಭದಲ್ಲಿ ಧನು ರಾಶಿಯವರಿಗೆ ಚೆನ್ನಾಗಿರುತ್ತದೆ ಆದರೆ ಏಪ್ರಿಲ್ನಿಂದ ಕೆಲವು ಸಮಯ. ಶನಿಯು ಕುಂಭ ರಾಶಿಯಿಂದ ಮೀನ ರಾಶಿಗೆ ತೆರಳಿದ ನಂತರ ಅರ್ಧಾಷ್ಟಮ ಶನಿ ಆರಂಭವಾಗುತ್ತದೆ. ಪರಿಣಾಮವಾಗಿ ಕೆಲವು ಸಮಸ್ಯೆಗಳನ್ನು ನೀವು ಎದುರಿಸಿ ಹೊರ ಬರಲೇಬೇಕಾಗುತ್ತದೆ. ಮೇ ತಿಂಗಳಲ್ಲಿ ಗುರು ಸಂಕ್ರಮಣದ ನಂತರ ಮತ್ತೆ ನಿಮ್ಮ ಜೀವನದಲ್ಲಿ ಹೊಸ ಬದಲಾವಣೆಗಳು ಬರಲಿವೆ. ನೀವು ಪ್ರೀತಿಯಲ್ಲಿದ್ದರೆ ನಿಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ. ಕೌಟುಂಬಿಕ ಸಮಸ್ಯೆಗಳು ಪರಿಹಾರವಾಗುತ್ತದೆ. ಹೊಸ ಅವಕಾಶಗಳು ದೊರೆಯುತ್ತದೆ, ಮದುವೆ ನಿಶ್ಚಯವಾಗುವ ಸಾಧ್ಯತೆ ಇದೆ.
ಮಕರ ರಾಶಿ
ವರ್ಷಗಳಿಂದ ಶನಿ ಗ್ರಹದಿಂದ ತೊಂದರೆ ಅನುಭವಿಸುತ್ತಿದ್ದ ಮಕರ ರಾಶಿಯವರಿಗೆ 2025ರಲ್ಲಿ ಪರಿಹಾರ ಸಿಗಲಿದೆ. ಮಾರ್ಚ್ ಅಂತ್ಯದಲ್ಲಿ ಶನಿಯು ಕುಂಭ ರಾಶಿಯಿಂದ ಮೀನ ರಾಶಿಗೆ ಸಾಗುತ್ತಾನೆ. ಅಂದಿನಿಂದ ನಿಮಗೆ ಎಲ್ಲವೂ ಶುಭವಾಗಲಿದೆ, 2025 ರ ಉದ್ದಕ್ಕೂ ಗಮನಾರ್ಹ ಪರಿವರ್ತನೆಗಳನ್ನು ನಿರೀಕ್ಷಿಸಬಹುದು. ವಿವಿಧ ಕ್ಷೇತ್ರಗಳಲ್ಲಿ ಕೆಲವು ಸವಾಲುಗಳು ಎದುರಾದರೂ ನೀವು ಅದನ್ನು ಸುಲಭವಾಗಿ ಜಯಿಸುತ್ತೀರಿ. ವರ್ಷದ ದ್ವಿತೀಯಾರ್ಧದಲ್ಲಿ ನಿಮ್ಮ ಸಂಬಂಧಗಳಲ್ಲಿ ವೈಯಕ್ತಿಕ ಮತ್ತು ವೃತ್ತಿಪರ ಎಲ್ಲಾ ವಿಚಾರಗಳಲ್ಲೂ ಉತ್ತಮವಾಗಿರುತ್ತದೆ.
ಕುಂಭ ರಾಶಿ
2024ರಲ್ಲಿ ನಿಮ್ಮನ್ನು ಕಾಡುತ್ತಿದ್ದ ಬಹುತೇಕ ಸಮಸ್ಯೆಗಳು 2025ರಲ್ಲಿ ನಿಮಗೆ ಪರಿಹಾರ ನೀಡುತ್ತವೆ. ಉದ್ಯೋಗ, ಶಿಕ್ಷಣ, ವೈಯಕ್ತಿಕ ಜೀವನ ಮತ್ತು ವ್ಯವಹಾರದಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ. ಆದರೆ ವರ್ಷದ ಆರಂಭದಲ್ಲಿ ಕೆಲವು ತೊಂದರೆಗಳನ್ನು ಅನಿವಾರ್ಯವಾಗಿ ಎದುರಿಸಲೇಬೇಕಾಗುತ್ತದೆ. ನಂತರ ಮುಂದಿನ 20 ವರ್ಷಗಳಲ್ಲಿ, ನಿಮ್ಮ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ನೀವು ಪ್ರಮುಖ ಬದಲಾವಣೆಗಳನ್ನು ಅನುಭವಿಸುವಿರಿ. ಸಂಪತ್ತು ಹೆಚ್ಚಾಗುತ್ತದೆ. ಅದ್ಭುತ ವ್ಯಕ್ತಿಗಳು ನಿಮಗೆ ಪರಿಚಯವಾಗಲಿದ್ದಾರೆ. ಸಂಬಂಧಗಳು ಸುಧಾರಿಸುತ್ತದೆ. ಶನಿಯ ಆಶೀರ್ವಾದ ನಿಮ್ಮ ಮೇಲಿದೆ.
ಮೀನ ರಾಶಿ
2024ಕ್ಕಿಂತ 2025ರಲ್ಲಿ ಮೀನ ರಾಶಿಯವರಿಗೆ ಹೆಚ್ಚಿನ ಸಮಸ್ಯೆ ಎದುರಾಗಲಿದೆ. ಜನ್ಮದಲ್ಲಿ ಶನಿ ಸಂಕ್ರಮಣ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಗುರುವಿನ ಪ್ರಭಾವದಿಂದ ಆದಾಯಕ್ಕೆ ಕೊರತೆ ಇರುವುದಿಲ್ಲ. ಇದು ಉದ್ಯೋಗಿಗಳಿಗೆ ಮತ್ತು ವ್ಯಾಪಾರಿಗಳಿಗೆ ಸೂಕ್ತವಾಗಿದೆ. ಮುಂದಿನ ವರ್ಷ ಶಕ್ತಿ ಮತ್ತು ಕಠಿಣ ಪರಿಶ್ರಮದ ವರ್ಷವಾಗಿರುತ್ತದೆ. ವರ್ಷದ ಆರಂಭವು ವಿಳಂಬ ಮತ್ತು ಗೊಂದಲವನ್ನು ತರಬಹುದಾದರೂ, ನಿಮ್ಮ ಗುರಿಗಳತ್ತ ಮತ್ತೆ ಯೋಜಿಸಲು ನಿಮಗೆ ಅವಕಾಶವನ್ನು ನೀಡುತ್ತದೆ.ನಿಮ್ಮ ಗಮನವು ಮನೆ ಮತ್ತು ಕುಟುಂಬದ ಕಡೆಗೆ ಬದಲಾಗುತ್ತದೆ. ಆದರೆ ವರ್ಷದ ದ್ವಿತೀಯಾರ್ಧ ಹೊಸ ಅವಕಾಶಗಳನ್ನು ನೀಡುತ್ತದೆ.
ಗಮನಿಸಿ: ಇಲ್ಲಿ ತಿಳಿಸಿರುವ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರವನ್ನು ಆಧರಿಸಿದ್ದು, ನಿಮ್ಮ ನಂಬಿಕೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಿ. ಹೆಚ್ಚಿನ ಮಾಹಿತಿಗೆ ತಜ್ಞ ಜ್ಯೋತಿಷಿಗಳನ್ನು ಸಂಪರ್ಕಿಸಿ.