ನಮ್ಮೆಲ್ಲರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ. ಹೌದು, ಮಾರ್ಚ್ 17ರಂದು ಪುನೀತ್ ರಾಜ್ ಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬ. ಅಪ್ಪು ಅವರೇ ಈ ವಿಶೇಷವಾದ ವರ್ಷ ನಮ್ಮ ಜೊತೆಗಿಲ್ಲ ಅನ್ನೋದು ಬೇಸರದ ವಿಷಯ. ಆದರೆ ಅಪ್ಪು ಅವರು ನಮ್ಮ ಜೊತೆಗೆ ಇದ್ದಾರೆ ಅನ್ನೋದಕ್ಕೆ ಅವರ ಸಿನಿಮಾ ಬಿಡುಗಡೆ ಆಗುತ್ತಿದೆ. ಅಪ್ಪು ಅವರು ತಮ್ಮ ಸಿನಿಮಾಗಳ ಮೂಲಕ, ಅವರ ಒಳ್ಳೆಯ ಕೆಲಸಗಳ ಮೂಲಕ ಸದಾ ನಮ್ಮ ನೆನಪಲ್ಲೆ ಇದ್ದಾರೆ. ನಮ್ಮ ಜೊತೆಗೆ ಇದ್ದಾರೆ. ಅಪ್ಪು ಅಂದ ತಕ್ಷಣ ನಮಗೆ ನೆನಪಾಗುವುದು ಅವರಿಗೆ ಇರುವ ಬಿರುದ್ಧು ಪವರ್ ಸ್ಟಾರ್. ಆದರೆ ಅಪ್ಪು ಅವರು ಪವರ್ ಸ್ಟಾರ್ ಅನ್ನುವ ಬಿರುದ್ಧನ್ನ ಸಿನಿಮಾ ಟೈಟಲ್ ಕಾರ್ಡ್ ನಲ್ಲಿ ಹಾಕೋದು ಬೇಡ ಎಂದು ಪಟ್ಟು ಹಿಡಿದಿದ್ದರಂತೆ. ಆ ರೀತಿ ಆಗಿದ್ದು ಯಾಕೆ? ಅಪ್ಪು ಅವರು ಬೇಡ ಅಂದಿದ್ದು ಯಾಕೆ? ನಿರ್ದೇಶಕ ಮಹೇಶ್ ಬಾಬು ರಿವೀಲ್ ಮಾಡಿದ್ದಾರೆ..
ಅಪ್ಪು ಅವರ ಬರ್ತ್ ಡೇ ಅಂದರೆ ಅದೊಂದು ಸೆಲೆಬ್ರೇಷನ್ ಇದ್ದ ಹಾಗೆ. ಒಂದು ಹಬ್ಬ ಇದ್ದ ಹಾಗೆ ಎಂದು ಹೇಳಿದರು ತಪ್ಪಲ್ಲ. ಅಭಿಮಾನಿಗಳು ಅಪ್ಪು ಅವರ ಹುಟ್ಟುಹಬ್ಬವನ್ನು ಅಷ್ಟು ಚೆನ್ನಾಗಿ ಆಚರಣೆ ಮಾಡುತ್ತಾರೆ. ಅಪ್ಪು ಅವರು ಇದ್ದಾಗ ಅವರ ಮನೆಗೆ ಭೇಟಿ ನೀಡಿ, ಸಾವಿರಾರು ಅಭಿಮಾನಿಗಳು ವಿಶ್ ಮಾಡುತ್ತಿದ್ದರು.. ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬದ ಆಚರಣೆ ಮಾಡಿಕೊಳ್ಳುತ್ತಿದ್ದರು ಅಪ್ಪು. ಜೊತೆಗೆ ಅವರ ಹುಟ್ಟುಹಬ್ಬದ ದಿವಸ ಅನೇಕ ಒಳ್ಳೆಯ ಕೆಲಸಗಳು ಕೂಡ ನಡೆಯುತ್ತಿತ್ತು. ಅಭಿಮಾನಿಗಳು ಅನ್ನದಾನ ಮಾಡುವುದು, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವುದು, ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು, ಹಿರಿಯರಿಗೆ ಸಹಾಯ ಮಾಡುವುದು, ರಕ್ತದಾನ ಶಿಬಿರಗಳನ್ನು ನಡೆಸುವುದು, ನೇತ್ರದಾನ ಶಿಬಿರ ನಡೆಸುವುದು, ಹೀಗೆ ಅನೇಕ ಒಳ್ಳೆಯ ಕಾರ್ಯಗಳನ್ನು ಸಹ ಮಾಡುತ್ತಲೇ ಬಂದಿದ್ದಾರೆ..

ಇನ್ನು ಅಪ್ಪು ಅವರು ನಮ್ಮನ್ನೆಲ್ಲಾ ದೈಹಿಕವಾಗಿ ಬಿಟ್ಟು ಹೋದ ನಂತರ ಕೂಡ ಅಭಿಮಾನಿಗಳಿಂದ ಈ ಪುಣ್ಯದ ಕೆಲಸಗಳು ಮುಂದುವರೆಯುತ್ತಲೇ ಇದೆ. ಅಭಿಮಾನಿಗಳು ಇವತ್ತಿಗೂ ಕೂಡ ಅಪ್ಪು ಅವರ ಹೆಸರಿನಲ್ಲಿ ಒಳ್ಳೇ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಈ ವರ್ಷವೂ ಅದನ್ನೇ ಮುಂದುವರೆಸಿಕೊಂಡು ಹೋಗಲಿದ್ದಾರೆ. ಇದರ ಜೊತೆಗೆ ಅಪ್ಪು ಅವರ ಸಿನಿಮಾ ಬಿಡುಗಡೆ ಆಗುತ್ತಿರುವುದು ಮತ್ತೊಂದು ವಿಶೇಷ. ಕಳೆದ ವರ್ಷ ಅಭಿಮಾನಿಗಳಿಗಾಗಿ ಪುನೀತ್ ಅವರ ಹುಟ್ಟುಹಬ್ಬದ ದಿವಸ ಜಾಕಿ ಸಿನಿಮಾ ರೀರಿಲೀಸ್ ಆಗಿತ್ತು. ಈ ವರ್ಷ ಪುನೀತ್ ಅವರ ಮೊದಲ ಸಿನಿಮಾ ಅಪ್ಪು ಬಿಡುಗಡೆ ಆಗುವುದಕ್ಕೆ ಸಜ್ಜಾಗಿದೆ..
ಮಾರ್ಚ್ 14ರಂದು ಶುಕ್ರವಾದ ಅಪ್ಪು ಸಿನಿಮಾ ಬಿಡುಗಡೆ ಆಗುತ್ತಿದ್ದು, ಅಭಿಮಾನಿಗಳು ಅಪ್ಪು ಅವರನ್ನು ಕಣ್ತುಂಬಿಕೊಳ್ಳೋಕೆ ಕಾಯುತ್ತಿದ್ದಾರೆ. ಅಪ್ಪು ಅವರ ಮೊದಲ ಸಿನಿಮಾ ಎಷ್ಟು ಸ್ಪೆಷಲ್ ಎಂದು ನಮಗೆಲ್ಲಾ ಗೊತ್ತೇ ಇದೆ. 23 ವರ್ಷಗಳ ಹಿಂದೆ ಪುನೀತ್ ಅವರು ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸಿನಿಮಾ ಇದು. ಈ ಸಿನಿಮಾ ಕ್ರೇಜ್ ಇವತ್ತಿಗೂ ಹಾಗೆ ಇದೆ. ಸಿನಿಮಾದಲ್ಲಿ, ಇಲ್ಲಿರೋದು ನಾನೊಬ್ಬನೇ ಅಪ್ಪು ಲೋಕಲ್ ಎಂದು ಹೇಳೋ ಡೈಲಾಗ್ ಇರಬಹುದು, ಡ್ಯಾನ್ಸ್ ಇರಬಹುದು, ಫೈಟ್ ಸೀನ್ ಗಳೇ ಇರಬಹುದು, ಎಲ್ಲವೂ ಅದ್ಭುತ. ಮೊದಲ ಸಿನಿಮಾದಲ್ಲೇ ಅಪ್ಪು ಪಕ್ಕಾ ಕಮರ್ಶಿಯಲ್ ಹೀರೋ ಆಗಿ ಜನಮನ ಗೆದ್ದಿದ್ದರು. ರಾಜ್ ಕುಮಾರ್ ಅವರ ಮಗನಾಗಿ ಅಲ್ಲ, ಪುನೀತ್ ಆಗಿ ಎಲ್ಲರ ಫೇವರೆಟ್ ಆಗಿದ್ದರು.

ರಕ್ಷಿತಾ ಅವರು ಮೊದಲ ಬಾರಿಗೆ ಹೀರೋಯಿನ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಅಪ್ಪು ಸಿನಿಮಾ ಮೂಲಕ. 23 ವರ್ಷಗಳ ಹಿಂದೆ ಅಪ್ಪು ಸಿನಿಮಾ ಭರ್ಜರಿ 23 ವಾರಗಳ ಪ್ರದರ್ಶನ ಕಂಡಿತ್ತು. ಈಗ ಪುನೀತ್ ಅವರ 50ನೇ ವರ್ಷದ ಹುಟ್ಟುಹಬ್ಬದ ವಿಶೇಷವಾಗಿ ಮತ್ತೆ ಬಿಡುಗಡೆ ಆಗುತ್ತಿರುವುದು ಖುಷಿಯ ವಿಚಾರ. ಆಗ ಅಪ್ಪು ಸಿನಿಮಾ ಸಕ್ಸಸ್ ಸೆಲೆಬ್ರೇಷನ್ ಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ಬಂದಿದ್ದರು, ಸಿಂಹದಮರಿ ಎಂದು ಅಪ್ಪು ಅವರನ್ನು ಹೊಗಳಿದ್ದರು. ರಜನಿಕಾಂತ್ ಅವರಿಗೆ ಅಪ್ಪು ಅವರ ಹೆಡ್ ಫೈಟ್ ಸೀನ್, ಸಿನಿಮಾದಲ್ಲಿ ಅಪ್ಪು ಅವರ ಆಟಿಟ್ಯೂಡ್ ಇದೆಲ್ಲವೂ ಬಹಳ ಇಷ್ಟವಾಗಿತ್ತು. ಅಪ್ಪು ಸ್ಟಾರ್ ಆಗ್ತಾರೆ ಅಂತ ಆವತ್ತೆ ಭವಿಷ್ಯ ನುಡಿದಿದ್ದರು ಸೂಪರ್ ಸ್ಟಾರ್ ರಜನಿ ಕಾಂತ್ ಅವರು. ಅವರು ಹೇಳಿದ ಹಾಗೆಯೇ ಆಯಿತು.
ಈಗ ಅಪ್ಪು ಸಿನಿಮಾ ಮರುಬಿಡುಗಡೆ ವೇಳೆ ಸಿನಿಮಾಗೆ ಸಂಬಂಧಿಸಿದ ಅನೇಕ ವಿಚಾರಗಳು ಗೊತ್ತಾಗುತ್ತಿದೆ. ಅಪ್ಪುಅವರ ಜೊತೆಗೆ ಆಕಾಶ್, ಅರಸು ಅಂಥ ಒಳ್ಳೇ ಸಿನಿಮಾಗಳನ್ನು ಮಾಡಿದ ನಿರ್ದೇಶ ಮಹೇಶ್ ಬಾಬು ಅಪ್ಪು ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಅಪ್ಪು ತಂಡದಲ್ಲಿ ಮಹೇಶ್ ಅವರು ಸಹ ಕೆಲಸ ಮಾಡಿದ್ದರು, ಆ ಸಮಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅಪ್ಪು ಅವರಿಗೆ ಹೆಡ್ ಫೈಟ್ ಸೀನ್ ಮಾಡೋವಾಗ, ತಲೆಯಲ್ಲಿ ಮಾತ್ರ ಹೊಡೆಯೋದು ಇಂಪ್ಯಾಕ್ಟ್ ಆಗುತ್ತಾ ಎಂದು ಒಂದು ಡೌಟ್ ಇತ್ತಂತೆ, ಅದನ್ನು ಮಹೇಶ್ ಅವರ ಬಳಿ ಕೇಳಿದಾಗ ಈ ಸೀನ್ ತುಂಬಾ ಇಂಪ್ಯಾಕ್ಟ್ ಆಗುತ್ತೆ ಸರ್ ಎಂದು ಹೇಳಿದ್ರಂತೆ. ಶೂಟಿಂಗ್ ಆಗಿ ಆ ಸೀನ್ ನೋಡಿದ ಬಳಿಕ ಅಪ್ಪು ಅವರು ತುಂಬಾ ಚೆನ್ನಾಗಿ ಬಂದಿದೆ ಎಂದು ಹೇಳಿದ್ದರಂತೆ. ಆ ಫೈಟ್ ಇಂಪ್ಯಾಕ್ಟ್ ಇವತ್ತಿಗು ಹಾಗೆ ಇದೆ ಎಂದರೆ ತಪ್ಪಲ್ಲ.
ಇನ್ನು ಪುನೀತ್ ಅವರಿಗೆ ಪವರ್ ಸ್ಟಾರ್ ಎಂದು ಬಿರುದ್ಧು ಕೊಡಬೇಕು ಎಂದು ಬಂದಾಗ, ಶಿವಣ್ಣ ಅವರೇ ಆ ಹೆಸರನ್ನು ಸಜೆಸ್ಟ್ ಮಾಡಿದ್ದು, ಪವರ್ ಸ್ಟಾರ್ ಅನ್ನೋ ಬಿರುದ್ಧು ಕೊಟ್ಟಿದ್ದೇ ಶಿವಣ್ಣ. ಆದರೆ ಆ ಟೈಟಲ್ ಅನ್ನು ಶುರುವಿನಲ್ಲಿ ಹಾಕೋದು ಬೇಡ, ಟೈಟಲ್ ಕಾರ್ಡ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಂದು ಬರೋದು ಬೇಡ ಎಂದು ಅಪ್ಪು ಅವರು ಪಟ್ಟು ಹಿಡಿದು ಕುಳಿತಿದ್ದರಂತೆ. ಬಳಿಕ ಚೆನ್ನಾಗಿರುತ್ತದೆ ಎಂದು ಒಪ್ಪಿಸಿ, ಶಿವಣ್ಣ ಕೂಡ ಹೇಳಿದಮೇಲೆ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಂದು ಟೈಟಲ್ ಕಾರ್ಡ್ ನಲ್ಲಿ ಹಾಕೋಕೆ ಒಪ್ಪಿಕೊಂಡರಂತೆ ಅಪ್ಪು. ಇದು ಅಪ್ಪು ಸಿನಿಮಾ ಹಿಂದಿನ ಕಹಾನಿ. ಏನೇ ಹೇಳಿ, ನಮ್ಮ ಅಪ್ಪು ಅವರ ಸಿಂಪ್ಲಿಸಿಟಿಯನ್ನ ನಾವು ಮರೆಯುವ ಹಾಗಿಲ್ಲ. ಸರಳತೆಯ ರಾಜಕುಮಾರ ಅಪ್ಪು.