ಕನ್ನಡದ ಖ್ಯಾತ ಆಂಕರ್ ಗಳಲ್ಲಿ ಅನುಶ್ರೀ ಮುಖ್ಯ ಸ್ಥಾನದಲ್ಲಿ, ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಪ್ರಸ್ತುತ ಇವರಿಗೆ ಭಾರಿ ಬೇಡಿಕೆ ಇದೆ. ಕಿರುತೆರೆ ಕಾರ್ಯಕ್ರಮಗಳು ಮಾತ್ರವಲ್ಲದೆ ಸಿನಿಮಾ ಕುರಿತಂತ ಹಲವು ಕಾರ್ಯಕ್ರಮಗಳಿಗೆ ಅನುಶ್ರೀ ಅವರೇ ನಿರೂಪಣೆ ಮಾಡುತ್ತಿದ್ದಾರೆ, ಕಾರ್ಯಕ್ರಮಗಳ ಬೇಡಿಕೆ ಎಂದರೆ ತಕ್ಷಣಕ್ಕೆ ಅನುಶ್ರೀ ಅವರೇ ನೆನಪಾಗುವುದು ಎಂದರೂ ತಪ್ಪಲ್ಲ. ಇವರ ಕೆಲಸದ ಜೊತೆಗೆ ಹೆಚ್ಚು ಚರ್ಚೆ ಆಗುವುದು ಅನುಶ್ರೀ ಅವರ ಮದುವೆ ಬಗ್ಗೆ. ವಯಸ್ಸು 35 ದಾಟಿದ್ದರೂ ಇವರಿಗೆ ಇನ್ನು ಮದುವೆ ಆಗಿಲ್ಲದೇ ಇರುವುದೇ ಹೆಚ್ಚು ಜನರಿಗೆ ಚಿಂತೆ ಆಗಿದೆ ಎಂದು ಹೇಳಿದರು ಸಹ ತಪ್ಪಲ್ಲ. ಇದೀಗ ಅನುಶ್ರೀ ಅವರ ಮದುವೆ ಬಗ್ಗೆ ಹೊಸ ವಿಷಯ ಕೇಳಿಬಂದಿದೆ..

ಆಂಕರ್ ಅನುಶ್ರೀ ಅವರು ಮದುವೆ ಯಾವಾಗ ಅನ್ನೋದು ಬಹಳಷ್ಟು ಜನಗಳಲ್ಲಿ ಕೇಳಿಬರುತ್ತಲೇ ಇರುತ್ತದೆ. ಅನುಶ್ರೀ ಅವರು ಎಲ್ಲೇ ಹೋದ್ರು ಎಲ್ಲರೂ ಕೇಳೋದು ಮದುವೆ ಯಾವಾಗ ಎಂದು.. ಅನುಶ್ರೀ ಅವರು ಇಷ್ಟು ವರ್ಷಗಳ ಕಾಲ ಇದನ್ನೆಲ್ಲಾ ಏನೋ ಒಂದು ಉತ್ತರ ಕೊಟ್ಟು ಬಂದಿದ್ದರು, ಆದರೆ ಕೆಲವು ಯೂಟ್ಯೂಬ್ ಚಾನೆಲ್ ಗಳು ಸಹ ಅನುಶ್ರೀ ಅವರ ಮದುವೆಯ ಬಗ್ಗೆ ಅನೇಕ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಕೆಲವು ಕಲಾವಿದರ ಜೊತೆಗೆ ಮದುವೆ ಆಗೇ ಹೋಗಿದೆ ಎಂದು ಫೋಟೋಗಳನ್ನು ಎಡಿಟ್ ಮಾಡಿ ಕೂಡ ಪೋಸ್ಟ್ ಮಾಡಿದ್ದಾರೆ. ಇಂಥ ಅನೇಕ ವಿಚಾರಗಳು ವೈರಲ್ ಆಗುತ್ತೆಲೇ ಇರುತ್ತದೆ.
ಇದೀಗ ಮತ್ತೆ ಅನುಶ್ರೀ ಮದುವೆಯ ವಿಚಾರ ಭಾರಿ ಚರ್ಚೆಗೆ ಕೇಳಿಬರುತ್ತಿದೆ. ಅನುಶ್ರೀ ಅವರ ಮದುವೆಯ ವಿಚಾರ ಚರ್ಚೆ ಆಗಿರುವುದು ಡಿಕೆಡಿ ವೇದಿಕೆಯಲ್ಲಿ. ಇದೊಂದು ತಮಾಷೆಯ ಘಟನೆ ಆಗಿದೆ. ಡಿಕೆಡಿ ವೇದಿಕೆಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವುದು ಗಿಲ್ಲಿ ನಟ. ಇವರ ಕಾಮಿಡಿ ಟೈಮಿಂಗ್, ಡ್ಯಾನ್ಸ್, ತಮಾಷೆ ಇದೆಲ್ಲವೂ ಸಹ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗುತ್ತದೆ. ಅನುಶ್ರೀ ಅವರ ಮದುವೆ ವಿಚಾರ ಸಹ ಗಿಲ್ಲಿ ನಟ ಅವರೇ ತಮಾಶೆಯ ರೀತಿಯಲ್ಲಿ ತಂದಿದ್ದಾರೆ. ಗಿಲ್ಲಿ ನಟ ದೇವಸ್ಥಾನಕ್ಕೆ ಹೋಗಿಬಂದಿದ್ದ ರೀತಿಯಲ್ಲಿ ಕಾಣಿಸಿಕೊಂಡರು, ಆಗ ಅನುಶ್ರೀ ನನ್ನನ್ನ ಅಕ್ಕ ಅಂತಿಯಾ, ದೇವಸ್ಥಾನದಲ್ಲಿ ನನಗೋಸ್ಕರ ಏನು ಪ್ರಾರ್ಥನೆ ಮಾಡಿಕೊಂಡಿದ್ದೀಯಾ ಎಂದು ಕೇಳಿದ್ದಾರೆ.

ಆಗ ಗಿಲ್ಲಿ ನಟ ನಿಮಗಾಗಿ ವಿಶೇಷ ಪ್ರಾರ್ಥನೆ ಮಾಡಿದ್ದೇನೆ ಎಂದು ಹೇಳಿ, ಮದುವೆಯ ಲಗ್ನಪತ್ರಿಕೆಗೆ ಪೂಜೆ ಮಾಡಿಸಿರುವುದನ್ನು ತೋರಿಸಿದ್ದಾರೆ. ಆದರೆ ತಮಾಷೆ ಏನು ಎಂದರೆ, ಈ ಕಾರ್ಡ್ ನಲ್ಲಿ ಏನು ಇರಲಿಲ್ಲ, ಏನನ್ನು ಬರೆಸಿರಲಿಲ್ಲ. ಇದನ್ನು ನೋಡಿ ಅನುಶ್ರೀ ಅವರು ಏನೋ ಇದು ಏನು ಬರೆದೇ ಇಲ್ವಲ್ಲೋ ಎಂದು ಕೇಳಿದ್ದಾರೆ. ಅದಕ್ಕೆ ಗಿಲ್ಲಿ ನಟ ಉತ್ತರ ಕೊಟ್ಟಿದ್ದು, ಇದು ಖಾಲಿ ಲಗ್ನಪತ್ರಿಕೆ, ಇದನ್ನ ಪ್ರಿಂಟ್ ಮಾಡಿಸಿ, ಬೇಗ ಜನರನ್ನ ಮದುವೆಗೆ ಕರಿರಿ ಎಂದು ಹೇಳಿದ್ದಾರೆ. ಇದಕ್ಕೆ ಅನುಶ್ರೀ ಕೂಡ ಸಿಕ್ಕಾಪಟ್ಟೆ ನಗಾಡಿದ್ದು, ಈ ಒಂದು ವಿಚಾರ ಸಿಕ್ಕಾಪಟ್ಟೆ ತಮಾಷೆ ಆಗಿತ್ತು.
ಇನ್ನು ಇದೆಲ್ಲವೂ ನಡೆದ ನಂತರ ಅನುಶ್ರೀ ಅವರ ಮದುವೆ ಬಗ್ಗೆ ಭಾರಿ ಚರ್ಚೆ ಆಗುತ್ತದೆ. ಇನ್ನು ಎಲ್ಲರೂ ಸಹ ಇದೇ ರೀತಿ ಪ್ರಶ್ನೆ ಕೇಳುತ್ತಿರುವುದಕ್ಕೆ ಅನುಶ್ರೀ ಅವರು ಸಹ ಮದುವೆ ಆಗುವ ಬಗ್ಗೆ ನಿರ್ಧಾರ ಮಾಡಿದ್ದು, ಶೀಘ್ರದಲ್ಲೇ ಗುಡ್ ನ್ಯೂಸ್ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಮದುವೆ ಆಗುವ ಹುಡುಗ ಯಾರು? ಮದುವೆ ಯಾವಾಗ ಎನ್ನುವ ವಿಷಯವನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನದಂದು ಎಲ್ಲರಿಗೂ ತಿಳಿಸುತ್ತಾರೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಅನುಶ್ರೀ ಅವರು ಯಾವಾಗ ಈ ಗುಡ್ ನ್ಯೂಸ್ ಕೊಡುತ್ತಾರೆ ಎಂದು ಹೇಳಲಾಗುತ್ತಿದೆ.