ಆಂಕರ್ ಅನುಶ್ರೀ ಬಹಳ ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಹೆಸರು ಮಾಡಿರುವ ನಿರೂಪಕಿ. ಇವರು ನಿರೂಪಣೆ ಮಾಡುವ ಶೈಲಿ, ತಮಾಷೆ ಮಾಡುವ ರೀತಿ ಎಲ್ಲರಿಗೂ ಅಚ್ಚುಮೆಚ್ಚು. ಜೀಕನ್ನಡ ವಾಹಿನಿಯ ಖಾಯಂ ನಿರೂಪಕಿ ಅನುಶ್ರೀ ಅವರು ಎಂದರೆ ಖಂಡಿತ ತಪ್ಪಲ್ಲ. ಅನುಶ್ರೀ ಅವರು ಆಗಾಗ ತಮ್ಮ ಮದುವೆ ವಿಚಾರಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಹಲವು ಬಾರಿ ಯೂಟ್ಯೂಬ್ ನಲ್ಲಿ ಅವರ ಮದುವೆ ಬಗ್ಗೆ ವಿಡಿಯೋಗಳು ಹರಿದಾಡುತ್ತಲೇ ಇರುತ್ತದೆ ಎನ್ನುವುದು ಕೂಡ ಗೊತ್ತಿರುವ ವಿಷಯವೇ.
ಇದೀಗ ಅನುಶ್ರೀ ಅವರ ಮದುವೆ ಯಾವಾಗ ಎಂದು ಖುದ್ದು ಅನುಶ್ರೀ ಅವರೇ ತಿಳಿಸಿದ್ದಾರೆ. ಈ ವಿಚಾರ ಬಂದಿರುವುದು ಜೀಕನ್ನಡ ವಾಹಿನಿಯ ಜೀಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ. ಅಕುಲ್ ಬಾಲಾಜಿ ಅವರು ಅನುಶ್ರೀ ಮದುವೆ ಬಗ್ಗೆ ಮಾತನಾಡಿ ಕಾಲೆಳಿದ್ದಾರೆ. ಅನುಶ್ರೀ ಮದುವೆ ಯಾವಾಗ ಅನ್ನೋ ಚಿಂತೆ ಎಲ್ಲರಿಗೂ ಎಂದಿದ್ದಾರೆ ಅಕುಲ್. ಆಗ ಅನುಶ್ರೀ ನಕ್ಕು, ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ.

ನನ್ನ ಮನೆಯವರಿಗಿಂತ ಯೂಟ್ಯೂಬರ್ ಗಳಿಗೆ ನನ್ನ ಮದುವೆ ಬಗ್ಗೆ ಆಸಕ್ತಿ ಜಾಸ್ತಿ, ಪ್ರತಿ ವಾರ ಸಿಂಗಲ್ ಇರೋರ ಜೊತೆಗೆಲ್ಲಾ ನನ್ನ ಮದುವೆ ಮಾಡಿಸ್ತಾರೆ, ಮದುವೆ ಬಗ್ಗೆ ಮೊದಲು ನನಗೆ ಆಸಕ್ತಿ ಇರಬೇಕು. ಇಷ್ಟು ದಿನ ನನಗೆ ಆಸಕ್ತಿ ಇರಲಿಲ್ಲ, ಈಗ ಮದುವೆ ಆಗಬೇಕು ಅನ್ನಿಸಿದೆ. ಒಳ್ಳೆಯ ಹುಡುಗನಿಗಾಗಿ ಕಾಯುತ್ತಿದ್ದೇನೆ. ಅಂಥಾ ಒಳ್ಳೆಯ ಹುಡುಗ ಸಿಕ್ಕರೆ, ಖಂಡಿತ ಮದುವೆಯಾಗುತ್ತೇನೆ. ಆ ಹುಡುಗನನ್ನು ನಿಮ್ಮೆಲ್ಲರ ಎದುರು ಕರೆತಂದು, ಪರಿಚಯ ಮಾಡಿಕೊಡುತ್ತೇನೆ ಎಂದು ಹೇಳಿದ್ದಾರೆ ಅನುಶ್ರೀ.
ಅನುಶ್ರೀ ಅವರು ಕೊನೆಗೂ ಮದುವೆಯಾಗೋ ಮನಸ್ಸು ಮಾಡಿರೋದು ಒಳ್ಳೆಯ ವಿಷಯ. ಅವರಿಗೆ ಇಷ್ಟ ಆಗುವಂಥ ಹುಡುಗ ಬೇಗ ಸಿಗಲಿ ಎನ್ನುತ್ತಿದ್ದಾರೆ ಅನುಶ್ರೀ ಫ್ಯಾನ್ಸ್. ಎಲ್ಲವೂ ಅಂದುಕೊಂಡಂತೆ ನಡೆದರೆ, ಮುಂದಿನ ವರ್ಷ ಅನುಶ್ರೀ ಅವರ ಮದುವೆ ಆಗೋದು ಖಂಡಿತ. ಒಳ್ಳೆಯ ಹುಡುಗ ಅವರಿಗಾಗಿ ಸಿಗಬೇಕು ಅಷ್ಟೇ. ಈ ರೀತಿ ಅನುಶ್ರೀ ಹೇಳುತ್ತಿದ್ದ ಹಾಗೆ ಅಕುಲ್ ಬಾಲಾಜಿ ಅವರಿಗೂ ಬಹಳ ಸಂತೋಷ ಆಗಿದ್ದು, ಸ್ಟೇಜ್ ಮೇಲೆ ಡ್ಯಾನ್ಸ್ ಮಾಡಿದ್ದಾರೆ.
ನಿರೂಪಕಿಯಾಗಿ 20 ವರ್ಷದಿಂದ ಅನುಶ್ರೀ ಚಾಲ್ತಿಯಲ್ಲಿದ್ದಾರೆ, ಪ್ರಸ್ತುತ ಕನ್ನಡ ನಿರೂಪಣೆಯ ಕ್ಷೇತ್ರದಲ್ಲಿ ಇವರೇ ಬೆಸ್ಟ್ ಎಂದು ಹೇಳಿದರೂ ಖಂಡಿತ ತಪ್ಪಲ್ಲ. ಇಂಥ ಹುಡುಗಿಗೆ 35 ದಾಟಿದ್ದರೂ ಇನ್ನು ಮದುವೆಯಾಗಿಲ್ಲ, ಎನ್ನುವ ಮಾತೊಂದು ಕೇಳಿಬರುತ್ತಲೇ ಇತ್ತು. ಈಗ ಅನುಶ್ರೀ ಅವರ ಮನಸ್ಸು ಬದಲಾಗಿರುವುದು ನಿಜಕ್ಕೂ ಸಂತೋಷವಾದ ವಿಷಯ ಆಗಿದೆ. ಅನುಶ್ರೀ ಅವರ ಫ್ಯಾನ್ಸ್ ಇದರಿಂದ ಸಂತೋಷಗೊಂಡಿದ್ದಾರೆ.