ನಟಿ ಅನುಪಮಾ ಗೌಡ ಇಂದು ನಿರೂಪಕಿಯಾಗಿ ಸಖತ್ ಸದ್ದು ಮಾಡುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗಿಚ್ಚಿ ಗಿಲಿ ಗಿಲಿ ಶೋ ನಿರೂಪಣೆ ಮಾಡ್ತಿದ್ದಾರೆ. ಅದಕ್ಕಿಂತ ಮೊದಲು ನನ್ನಮ್ಮ ಸೂಪರ್ ಸ್ಟಾರ್, ರಾಜಾ ರಾಣಿ, ಈ ಶೋಗಳನ್ನು ಸಹ ಅನುಪಮಾ ನಿರೂಪಣೆ ಮಾಡಿದ್ದಾರೆ. ಅನುಪಮಾ ಅವರಿಗೆ ಯಾಕಿನ್ನು ಮದುವೆಯಾಗಿಲ್ಲ ಎನ್ನುವ ಪ್ರಶ್ನೆ ಹಲವರಲ್ಲಿ ಇತ್ತು, ಇತ್ತೀಚೆಗೆ ಇವರು ತಮ್ಮ ಜೀವದ ಗೆಳೆಯ ಯಾರು ಎಂದು ತಿಳಿಸಿದ್ದಾರೆ..
ಹೌದು, ನಟಿ ಅನುಪಮಾ ಗೌಡ ಮೊದಲ ಬಾರಿಗೆ ತಮ್ಮ ಬಾಯ್ ಫ್ರೆಂಡ್ ಯಾರು ಎಂದು ತೋರಿಸಿದ್ದಾರೆ. ಇಂದು ಇವರು ನಿರೂಪಣೆಯಲ್ಲಿ ಹೆಸರು ಮಾಡಿ, ಒಳ್ಳೆಯ ನಿರೂಪಕಿ ಅನ್ನಿಸಿಕೊಂಡಿದ್ದಾರೆ. ಆದರೆ ಅನುಪಮಾ ಅವರು ಒಳ್ಳೆಯ ನಟಿ ಕೂಡ ಹೌದು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಅಕ್ಕ ಧಾರಾವಾಹಿಯಲ್ಲಿ ಅವಳಿ ಜವಳಿ ಪಾತ್ರದಲ್ಲಿ ನಟಿಸಿದ್ದರು ಅನುಪಮಾ, ಇವರ ಅಭಿನಯ ಅದ್ಭುತವಾಗಿ ಮೂಡಿಬಂದಿತ್ತು. ಬಳಿಕ ಬಿಗ್ ಬಾಸ್ ಕನ್ನಡ ಸೀಸನ್ 5ಕ್ಕೆ ಸ್ಪರ್ಧಿಯಾಗಿ ಬಂದು, ಫಿನಾಲೆ ವರೆಗು ತಲುಪಿದ್ದರು.

ಬಿಗ್ ಬಾಸ್ ಇಂದ ಬಂದ ನಂತರ ಅನುಪಮಾ ಅವರು ಇನ್ಯಾವುದೇ ಧಾರಾವಾಹಿಯಲ್ಲಿ ನಟಿಸಲಿಲ್ಲ. ನಿರೂಪಣೆಯಲ್ಲಿಯೇ ನಿರತರಾದರು. ಹಾಗೆಯೇ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಅನುಪಮಾ ಅವರು ಜಿಮ್ ಹಾಗೂ ವರ್ಕೌಟ್ ವಿಡಿಯೋಗಳು ಜೊತೆಗೆ ಟ್ರಿಪ್ ವಿಡಿಯೋಗಳು ಇದೆಲ್ಲವನ್ನು ಕೂಡ ಶೇರ್ ಮಾಡಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಇವರದ್ದೇ ಆದ ಒಂದು ಯೂಟ್ಯೂಬ್ ಚಾನೆಲ್ ಕೂಡ ಇದೆ. ಅದರಲ್ಲಿಯೂ ಹಲವು ವಿಷಯಗಳನ್ನು ಹಂಚಿಕೊಳ್ಳುತ್ತಾರೆ.
ಇದೆಲ್ಲವೂ ಒಂದು ಕರೆಯಾದರೆ, ಇತ್ತೀಚೆಗೆ ಅನುಪಮಾ ಗೌಡ ಅವರು ಕಷ್ಟಪಟ್ಟು ದುಡಿದ ಸ್ವಂತ ಹಣದಿಂದ ಸುಂದರವಾದ ಮನೆಯೊಂದನ್ನು ಕಟ್ಟಿಸಿದ್ದಾರೆ. ತಮ್ಮ ಮನೆಗೆ, ನಮ್ಮನೆ ಎಂದು ಹೆಸರನ್ನು ಇಟ್ಟಿದ್ದಾರೆ. ಈ ಸುಂದರವಾದ ಮನೆಯ ಗೃಹಪ್ರವೇಶ ಇತ್ತೀಚೆಗೆ ಭರ್ಜರಿಯಾಗಿ ನಡೆಯಿತು. ಸ್ನೇಹಿತರು ಹಾಗೂ ಬಂಧು ಮಿತ್ರರನ್ನು ಕರೆದು ಅದ್ಧೂರಿಯಾಗಿ ಮನೆಯ ಗೃಹಪ್ರವೇಶ ಮಾಡಿದರು ಅನುಪಮಾ ಗೌಡ. ಈ ವರ್ಷ ಫ್ರೆಂಡ್ಶಿಪ್ ಡೇ ವೇಳೆ ಅನುಪಮಾ ಗೌಡ ಅವರು ತಮ್ಮ ಜೀವದ ಗೆಳೆಯನನ್ನು ಪರಿಚಯಿಸಿದ್ದಾರೆ..
ಒಬ್ಬ ತಂದೆ ತೀರಿಹೋದ ಮೇಲೆ, ಮಗುವಿನ ರೂಪದಲ್ಲಿ ಬರುತ್ತಾರೆ ಅಂತ ಎಲ್ಲರೂ ಹೇಳ್ತಾರೆ. ನನ್ನ ಲೈಫ್ ಗು ಇವನು ಅದೇ ರೀತಿ ಬಂದಿರೋದು ಎಂದು ಹೇಳಿದ್ದಾರೆ. ಅನುಪಮಾ ಅವರಿಗೆ ನಿಜಕ್ಕೂ ಬಾಯ್ ಫ್ರೆಂಡ್ ಇಲ್ಲ. ಅವರು ಹೇಳಿದ್ದು, ತಮ್ಮ ಮುದ್ದಿನ ಶ್ವಾನದ ಬಗ್ಗೆ, ಅವರಿಗೆ ಆ ಶ್ವಾನವೇ ಜೀವದ ಗೆಳೆಯ ಆಗಿದೆ. ತುಂಬಾ ಪ್ರೀತಿಯಿಂದ ಒಂದು ಪುಟ್ಟ ಮಗುವಿನ ಹಾಗೆ ನೋಡಿಕೊಳ್ಳುತ್ತಾರೆ ಅನುಪಮಾ ಗೌಡ.