ಪುಷ್ಪ2, ಇದು ಟಾಲಿವುಡ್ ನ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಪುಷ್ಪ2 ಶೀಘ್ರದಲ್ಲೇ ಬಿಡುಗಡೆ ಆಗುವುದಕ್ಕೆ ಸಜ್ಜಾಗಿದೆ. ಈ ಸಿನಿಮಾದ ಪೋಸ್ಟರ್ ಗಳು ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು, ಮೊನ್ನೆಯಷ್ಟೇ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದು, ಸಿನಿಮಾ ಮೇಲೆ ಅಭಿಮಾನಿಗಳಿಗೆ ಇದ್ದ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಹೌದು, ಪುಷ್ಪ2 ಸಿನಿಮಾದ ಟ್ರೇಲರ್ ಅದ್ಭುತ ವ್ಯುಸ್ ಹಾಗೂ ಜನರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಈ ಸಿನಿಮಾದಲ್ಲಿ ಇದೀಗ ಮತ್ತೊಬ್ಬ ಕನ್ನಡಿಗ ಇರುವುದು ಗೊತ್ತಾಗಿದ್ದು, ಇವರನ್ನು ಗುರುತು ಹಿಡಿಯುವುದಕ್ಕೆ ಒಂದಷ್ಟು ಜನರಿಗೆ ಆಗಿಲ್ಲ, ಯಾರು ಎಂದು ಗೊತ್ತಾದವರು ಶಾಕ್ ಆಗಿದ್ದಾರೆ..
ಹೌದು, ಪುಷ್ಪ2 ಸಿನಿಮಾ ಹೆಚ್ಚು ಕನ್ನಡಿಗರು ನಟಿಸಿದ್ದಾರೆ. ನಾಯಕಿಯ ಪಾತ್ರದಲ್ಲಿ ನಟಿಸಿರುವುದು ಕನ್ನಡತಿ ರಶ್ಮಿಕಾ ಮಂದಣ್ಣ. ಇವರು ಪುಷ್ಪ ಪ್ರೀತಿಸಿ, ಮದುವೆಯಾದ ಶ್ರೀವಲ್ಲಿ ಪಾತ್ರದಲ್ಲಿ ನಟಿಸಿದ್ದಾರೆ. ರಶ್ಮಿಕಾ ಅವರ ಪಾತ್ರದ ಮೇಲು ಎಲ್ಲರಿಗೂ ಕುತೂಹಲ ಇದೆ. ಇನ್ನು ಈ ಸಿನಿಮಾದ ಸ್ಪೆಷಲ್ ನಲ್ಲಿ ಹೆಜ್ಜೆ ಹಾಕಿರುವುದು ಕೂಡ ಕನ್ನಡದ ಹುಡುಗಿ. ಕಿಸ್ ಸಿನಿಮಾ ಮೂಲಕ ಹೀರೋಯಿನ್ ಆಗಿ, ಬಳಿಕ ತೆಲುಗು ಸಿನಿಮಾಗಳಲ್ಲಿ ನಟಿಸಿ, ಸ್ಟಾರ್ ಹೀರೋಯಿನ್ ಎನ್ನಿಸಿಕೊಂಡಿರುವ ಶ್ರೀಲೀಲಾ ಅವರು ಪುಷ್ಪ2 ಸಿನಿಮಾದ ಸ್ಪೆಷಲ್ ಸಾಂಗ್ ಒಂದರಲ್ಲಿ ಹೆಜ್ಜೆ ಹಾಕಿದ್ದಾರೆ. ಇದು ನಮಗೆಲ್ಲ ಗೊತ್ತಿರುವ ವಿಷಯ.

ಇನ್ನು ನಟ ಡಾಲಿ ಧನಂಜಯ್ ಅವರು ಸಹ ಪುಷ್ಪ2 ಸಿನಿಮಾದಲ್ಲಿ ನಟಿಸಿರುವುದು ಗೊತ್ತೇ ಇದೆ. ಮೊದಲ ಭಾಗದಲ್ಲಿ ಜಾಲಿ ರೆಡ್ಡಿ ಪಾತ್ರದಲ್ಲಿ ಖಡಕ್ ಆಗಿ ನಟಿಸಿದ್ದರು ಧನಂಜಯ್. ಇವರ ಪಾತ್ರ ಎರಡನೇ ಭಾಗದಲ್ಲಿ ಕೂಡ ಮುಂದುವರೆಯುತ್ತಿದೆ. ಧನಂಜಯ್ ಅವರ ಪಾತ್ರ ಒಳ್ಳೆಯ ರೀಚ್ ಪಡೆದುಕೊಳ್ಳುತ್ತದೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದರ ಜೊತೆಗೆ ಮತ್ತೊಬ್ಬ ಕನ್ನಡಿಗನ ಪಾತ್ರ ಪುಷ್ಪ2 ಟ್ರೇಲರ್ ನಲ್ಲಿ ಎಲ್ಲರ ಗಮನ ಸೆಳೆದಿದೆ. ಕಳೆದ ಬಾರಿ ಅಲ್ಲು ಅರ್ಜುನ್ ಅವರ ಜಾತರ ಗೆಟಪ್ ಪೋಸ್ಟರ್ ಎಷ್ಟರ ಮಟ್ಟಿಗೆ ವೈರಲ್ ಆಗಿತ್ತು ಎನ್ನುವ ವಿಷಯ ಗೊತ್ತೇ ಇದೆ. ಅಲ್ಲು ಅರ್ಜುನ್ ಅವರು ಮುಖಕ್ಕೆ ದೇವಿಯ ಹಾಗೆ ಬಣ್ಣ ಹಚ್ಚಿಕೊಂಡು, ನೀಲಿ ಬಣ್ಣದ ಸೀರೆ ಉಟ್ಟುಕೊಂಡು, ನಿಂಬೆ ಹಣ್ಣಿನ ಮಾಲೆ ಹಾಕಿಕೊಂಡಿದ್ದರು.
ಈ ಒಂದು ಪೋಸ್ಟರ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು, ಇದೀಗ ಟ್ರೇಲರ್ ನಲ್ಲಿ ಇದೇ ಥರದ ಒಬ್ಬ ವ್ಯಕ್ತಿ ಕಾಣಿಸಿಕೊಂಡಿದ್ದಾರೆ. ಅರ್ಧ ಕೂದಲು ಇದ್ದು, ಇನ್ನರ್ಧ ತಲೆ ಬೋಳಿಸಿಲಾಗಿದೆ, ಸೀರೆ ಉಟ್ಟುಕೊಂಡು, ಮುಖಕ್ಕೆ ಬಣ್ಣ ಹಚ್ಚಿಕೊಂಡಿರುವ ಈತ ಯಾರು ಎನ್ನುವ ಕುತೂಹಲ ಹಲವರಲ್ಲಿ ಶುರುವಾಗಿದೆ. ಮೊದಲಿಗೆ ಎಲ್ಲರೂ ಅದು ಅಲ್ಲು ಅರ್ಜುನ್ ಅವರೇ ಇರಬಹುದು ಎಂದುಕೊಂಡರು. ಆದರೆ ಅದು ಅಲ್ಲು ಅರ್ಜುನ್ ಅವರ ಪಾತ್ರವಲ್ಲ, ಅಲ್ಲು ಅರ್ಜುನ್ ಅವರ ಪುಷ್ಪ ಪಾತ್ರಕ್ಕಿಂತಲು ಈ ಒಂದು ಪಾತ್ರದ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿದೆ, ಜನರಲ್ಲಿಯೂ ಇವರು ಯಾರಿರಬಹುದು ಎನ್ನುವ ಕುತೂಹಲ ಕೂಡ ಜಾಸ್ತಿ ಆಗುತ್ತಿದೆ.

ಅಷ್ಟಕ್ಕೂ ಈ ವ್ಯಕ್ತಿ ಮತ್ಯಾರು ಅಲ್ಲ, ಕನ್ನಡದ ನಟ ತಾರಕ್ ಪೊನ್ನಪ್ಪ. ಹೌದು, ಇವರು ಕೂಡ ಪುಷ್ಪ2 ಸಿನಿಮಾದಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಕೆಲವು ಧಾರಾವಾಹಿಗಳು ಹಾಗೂ ಸಿನಿಮಾದಲ್ಲಿ ನಟಿಸಿದ್ದಾರೆ, ಇತ್ತೀಚೆಗೆ ತೆಲುಗಿನ ದೇವರ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. ಇದೀಗ ಪುಷ್ಪ2 ಸಿನಿಮಾದಲ್ಲಿ ಇವರ ಲುಕ್ ಹಾಗೂ ಖದರ್ ಜನರಿಗೆ ಮೆಚ್ಚುಗೆಯಾಗಿದೆ. ಸಿನಿಮಾ ಬಿಡುಗಡೆ ಆದ ನಂತರ ತಾರಕ್ ಪೊನ್ನಪ್ಪ ಅವರ ಪಾತ್ರಕ್ಕೆ ಹಾಗೂ ಅವರಿಗೆ ಒಳ್ಳೆಯ ಹೆಸರು ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ಒಟ್ಟಿನಲ್ಲಿ ನಮ್ಮ ಕನ್ನಡದ ಕಲಾವಿದರು ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಗುರುತಿಸಿಕೊಳ್ಳುತ್ತಿರುವುದು ಸಂತೋಷದ ವಿಷಯ.