ಜಿ.ಟಿ.ದೇವೇಗೌಡ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಮತ್ತು ಅವರ ಪುತ್ರ ಹರೀಶ್ಗೌಡ ಅವರಿಗೆ ಜೆಡಿಎಸ್ ಟಿಕೆಟ್ ಖಚಿತವಾಗಿದೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾನು ಮತ್ತೆ ಚಾಮುಂಡೇಶ್ವರಿಯಿಂದ ಸ್ಪರ್ಧಿಸುತ್ತೇನೆ ಮತ್ತು ನನ್ನ ಮಗ(ಜಿ.ಡಿ.ಹರೀಶ್ಗೌಡ)ನಿಗೆ ಹುಣಸೂರು ಕ್ಷೇತ್ರದಿಂದ ಟಿಕೆಟ್ ನೀಡುವ ಭರವಸೆ ಸಿಕ್ಕಿದೆ ಎಂದು ಜಿಟಿ ದೇವೇಗೌಡ ಅವರ ಶುಕ್ರವಾರ ಹೇಳಿದ್ದಾರೆ.
ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಟಿಡಿ, ಪಕ್ಷದ ನಾಯಕರು ನನಗೆ ಮೈಸೂರು ಉಸ್ತುವಾರಿ ನೀಡಿದ್ದಾರೆ. ನಾನು ಮತ್ತೊಮ್ಮೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಮಗ ಹರೀಶ್ ಗೌಡ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಕೆ ಆರ್ ನಗರದಿಂದ ಸಾ ರಾ ಮಹೇಶ್, ಟಿ ನರಸೀಪುರದಿಂದ ಅಶ್ವಿನ್, ಪಿರಿಯಾಪಟ್ಟಣದಿಂದ ಮಹಾದೇವ ಮತ್ತು ಎಚ್ ಡಿ ಕೋಟೆಯಿಂದ ಸಿದ್ದಣ್ಣ ಇಲ್ಲವೇ ಅವರ ಮಗ ಸ್ಪರ್ಧಿಸಲಿದ್ದಾರೆಂದು ಜಿಟಿಡಿ ಹೇಳಿದರು.
ನಾನು ನಿನ್ನೆಯಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ.ಈಗ ಮನಸ್ಸು ಮೂರು ವರ್ಷಗಳ ನಂತರ ಸಮಾಧಾನದಲ್ಲಿದೆ.ನಾನು ನನ್ನ ಮನೆಯವರು ಹೆಚ್ಚು ಖುಷಿಯಲ್ಲಿದ್ದೇವೆ.
ಇನ್ನೂ ಯಾವ ಗೊಂದಲಗಳು ಉಳಿದಿಲ್ಲ. ಎಚ್.ಡಿ. ದೇವೇಗೌಡರ ಉತ್ಸಾಹ ನಾವೇ ಅಚ್ಚರಿಗೆ ಒಳಗಾಗಿದ್ದೇವೆ. ಅವರೇ ನಮಗೆ ಪ್ರೇರಣೆ ಅವರನ್ನು ಸಂತೋಷವಾಗಿಡುವುದೇ ನಮ್ಮ ಸಂತೋಷ. ಎಂದಿದ್ದಾರೆ ಜಿಟಿಡಿ.
ಚಾಮುಂಡಿ ತಾಯಿಗೆ ಎಚ್.ಡಿ. ದೇವೇಗೌಡರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನೊಂದು ತಿಂಗಳನಲ್ಲಿ ನಾನು ವಾಕ್ ಮಾಡುವ ಶಕ್ತಿ ಕೊಡು ಎಂದು ತಾಯಿ ಮುಂದೆ ಬೇಡಿದ್ದಾರೆ.ಜನವರಿ ತಿಂಗಳಿನಲ್ಲಿ ಎಚ್.ಡಿ. ದೇವೇಗೌಡರು ಚಂಡಿಕಾ ಹೋಮ ನಡೆಸಲಿದ್ದಾರೆ.
ಚಾಮುಂಡಿ ಸನ್ನಿಧಿಯಲ್ಲಿ ಮೈಸೂರು ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಘೋಷಣೆ ! ಜಿ.ಟಿ ದೇವೇಗೌಡ ಹೇಳಿದ್ದೇನು