ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವ ಯೋಜನೆ ಮಾಡುತ್ತಿರುವ ಭಕ್ತರಿಗೆ ಮಾಹಿತಿಯೊಂದಿದೆ. ಎರಡು ದಿನಗಳ ಕಾಲ ತಿರುಪತಿಯಲ್ಲಿ ದರ್ಶನ ಭಾಗ್ಯ ಬಂದ್ ಮಾಡಲಾಗಿದೆ. ಆದ್ದರಿಂದ ಪ್ರವಾಸ ಹೊರಡುವ ಮುನ್ನ ದಿನಾಂಕ ತಿಳಿದುಕೊಳ್ಳಿ.
ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಒಂದು ದಿನ ತಿರುಪತಿ ದೇವಾಲಯಲ್ಲಿ ದರ್ಶನ ಸ್ಥಗಿತಗೊಳಿಸಲಾಗಿದೆ. ದೇವಾಲಯಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಟಿಟಿಡಿ ಮೊದಲೇ ದಿನಾಂಕ ಘೋಷಣೆ ಮಾಡಿದೆ.
ಅಕ್ಟೋಬರ್ 25 ಮತ್ತು ನವೆಂಬರ್ 8ರಂದು ತಿರುಪತಿ ತಿರುಮಲ ದೇವಾಲಯ ಬಾಗಿಲು ಮುಚ್ಚಿರಲಿದೆ. ಸುಮಾರು 12ಗಂಟೆಗಳಿಗೂ ಅಧಿಕ ಕಾಲ ದೇವಾಲಯದ ಬಾಗಿಲು ಮುಚ್ಚಲಾಗಿರುತ್ತದೆ ಎಂದು ಆಡಳಿತ ಮಂಡಳಿ ಹೇಳಿದೆ.

ದೇವಾಲಯ ಮುಚ್ಚಿರುವುದು ಮಾತ್ರವಲ್ಲ, ದೇವಾಲಯದ ಪ್ರಸಾದ ನಿಲಯದಲ್ಲಿ ಎರಡು ದಿನಗಳ ಕಾಲವೂ ಪ್ರಸಾದವನ್ನು ಸಹ ನೀಡಲಾಗುವುದಿಲ್ಲ ಎಂದು ಟಿಟಿಡಿ ಹೇಳಿದೆ.
ಅಕ್ಟೋಬರ್ 25ರಂದು ಸೂರ್ಯ ಗ್ರಹಣವಿದೆ. ಅಂದು ಸಂಜೆ 5.11 ರಿಂದ 6.27ರ ತನಕ ಗ್ರಹಣಕಾಲವಾಗಿದೆ. ನವೆಂಬರ್ 8ರಂದು ಸೂರ್ಯ ಗ್ರಹಣವಿದೆ. ಅಂದು ಮಧ್ಯಾಹ್ನ 2.39ರಿಂದ 6.19ರ ತನಕ ಗ್ರಹಣಕಾಲವಾಗಿದೆ.
ಗ್ರಹಣ ಸಮೀಪಿಸುತ್ತಿರುವ ಎರಡು ದಿನಗಳಲ್ಲಿ ದೇಗುಲದಲ್ಲಿ ಪ್ರತಿದಿನ ನಡೆಸುವ ‘ಕಲ್ಯಾಣೋತ್ಸವ’ ಸೇರಿದಂತೆ ಪಾವತಿಸಿದ ಆಚರಣೆಗಳು ಬಂದ್ ಇರುತ್ತವೆ. ಈ ಎರಡು ದಿನಗಳಲ್ಲಿ ವಿಐಪಿ ಬ್ರೇಕ್ ದರ್ಶನ, ಉಂಜಲ್ ಸೇವೆ, ಬ್ರಹ್ಮೋತ್ಸವ ಮತ್ತು ಸಹಸ್ರ ದೀಪಾಲಂಕಾರ ಸೇವೆಗಳನ್ನು ಟಿಟಿಡಿ ರದ್ದುಗೊಳಿಸಿದೆ.

ಸೂರ್ಯ ಹಾಗೂ ಚಂದ್ರ ಗ್ರಹಣದ ಕಾರಣ ಅ. 25 ಮತ್ತು ನವೆಂಬರ್ 8ರಂದು ತಿರುಮಲದಲ್ಲಿರುವ ವೆಂಕಟೇಶ್ವರನ ಬೆಟ್ಟದ ದೇವಾಲಯವನ್ನು 12 ಗಂಟೆಗಳ ಕಾಲ ಭಕ್ತರಿಗೆ ದರ್ಶನ ಭಾಗ್ಯ ಇರುವುದಿಲ್ಲ.