ಬಿಗ್ ಬಾಸ್ ಸೀಸನ್ 9 ಶುರುವಿನಲ್ಲಿ ಬಹಳ ಛಾಪು ಪಡೆದುಕೊಂಡಿತ್ತು. ಈ ಶೋ ಪ್ರಸಾರವಾಗುವ ಮುನ್ನ ಹಾಗೂ ಲಾಂಚ್ ಆದ ನಂತರವೂ ಕೊಡ ಬಹಳ ಜನರು ಹೆಚ್ಚು ಮೆಚ್ಚುಗೆಯನ್ನು ಸೂಚಿಸಿ ವೀಕ್ಷಿಸುತ್ತಾರೆ.ಈ ಬಿಗ್ ಬಾಸ್ ಕನ್ನಡ ಶುರುವಾಗಿ ಹಲವಾರು ಸೀಸನ್ ಗಳು ಮುಗಿದಿದೆ ಹೀಗಿದ್ದರೂ ಈ ಶೋ ನ ವೀಕ್ಷಕರು ಎಂದಿಗೂ ಕಡಿಮೆಯಾಗಿಲ್ಲ ಆದರೆ ದಿನದಿಂದ ದಿನಕ್ಕೆ ಈ ಶೋ ನ ವೀಕ್ಷಕರು ಹೆಚ್ಚುತ್ತಲೇ ಇದ್ದಾರೆ. ಈ ಬಾರಿ ಬಹಳ ಕುತೂಹಲವನ್ನು ಮೂಡಿಸಿದೆ ಸೀಸನ್ 9 ಏಕೆಂದರೆ ಇದರ ವಿಬ್ಬಿನ್ನತೆ.ಈ ಬಾರಿ ಸೀಸನ್ 9 ಬಹಳ ಟ್ವಿಸ್ಟ್ ಗಳನ್ನು ತಂದಿದೆ.

ಈ ಬಾರಿ ಕಳೆದ ಸೀಸನ್ ಗಳ ಸ್ಪರ್ದಿಗಳಾಗಿ 5 ಜನರನ್ನು ಹಾಗೂ ಓಟಿಟಿ ಯಲ್ಲಿ ಅರ್ಹತೆ ಪಡೆದ 4 ಜನರೊಟ್ಟಿಗೆ ನವೀನರಾಗಿ 8 ಜನರನ್ನು ಅಯ್ಕೆ ಮಾಡಿ ಬಿಗ್ ಬಾಸ್ ಸೀಸನ್ 9 ರ ಪ್ರವೇಶ ಪಡೆದಿದ್ದಾರೆ.ಕಳೆದ ಎಲ್ಲಾ ಸೀಸನ್ ಗಳಿಗಿಂತ ಈ ಸೀಸನ್ ಬಹಳ ಕ್ಲಿಷ್ಟಕರ ಹಾಗೂ ಕುತೂಹಲ ಮೂಡಿಸುವಂತೆ ಇರುತ್ತದೆ ಎಂದು ಬಹಳಷ್ಟು ಮಂದಿ ಅಭಿಪ್ರಾಯಗಳನ್ನು ಹೊರಹಾಕುತ್ತಿದ್ದಾರೆ.ಈ ಬಾರಿ ಸೀಸನ್ 9 ರ ಹೊಸ ಸ್ಪರ್ದಿಗಳಾಗಿ “ಕಾವ್ಯ,ದರ್ಶ,ನವಾಬ್,ನೇಹಾ,ಮಯೂರಿ,ವಿನೋದ್,ಐಶ್ವರ್ಯ ಹಾಗೂ ಅಮೂಲ್ಯ” ಅವರು ಆಯ್ಕೆ ಆಗಿದ್ದರು.
ಆದರೆ ಈ ಐದು ವಾರಗಳಲ್ಲಿ ಮನೆಯಿಂದ ಕೇವಲ ನವಿನರೆ ಹೊರ ಬಂದಿರುವುದರಿಂದ ಕೇವಲ 4 ನವೀನರು ಇದ್ದಾರೆ.ಈ ಎಲ್ಲಾ ಸ್ಪರ್ದಿಗಳು ತಮ್ಮ ತಮ್ಮ ಆಟವನ್ನು ಈಗಾಗಲೇ ಶುರುವಾಗಿ 6ನೆ ವಾರಕ್ಕೆ ಕಾಲಿಟ್ಟಿದೆ.6 ವಾರಗಳಲ್ಲಿ ಸೀಸನ್ 9ರ ಮನೆ ಬಹಳಷ್ಟು ಏರಿಳಿತಗಳನ್ನು ಕಂಡಿದೆ.ಈ ಏರಳಿತಗಳಿಗೆ ಮೂಲ ಕಾರಣ ಎಂದರೆ ಅದು ಬಿಗ್ ಬಾಸ್ ಮನೆಯಲ್ಲಿರುವ ಮೂವರಿಂದ ಮಾತ್ರ.ಈ ಮೂವರು ಜಗಳಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಬಂದು ನಿಲ್ಲುತ್ತಾರೆ. ಆ ಮೂವರು ಯಾರೆಂದರೆ ಆರ್ಯವರ್ಧನ್ ಗುರೂಜಿ,ರೂಪೇಶ್ ರಾಜಣ್ಣ ಹಾಗೂ ಪ್ರಶಾಂತ್ ಸಂಬರ್ಗಿ.
ಆರ್ಯವರ್ಧನ್ ಅವರನ್ನು ಮನೆಯವರು ಸಂಬಳಿಸಲು ಯಶಸ್ವಿಯಾಗಿದ್ದಾರೆ ಆದರೆ ರೂಪೇಶ್ ಹಾಗೂ ಪ್ರಶಾಂತ್ ಅವರು ಜಗಳಗಳಿಗೆ ನಿಂತರೆ ಮನೆಯವರೇ ಮಾತ್ರ ಅಲ್ಲ ಅವರ ಬಾಯಿಯ ನಿಯಂತ್ರಣ ಅವರಲ್ಲಿ ಇರುವುದಿಲ್ಲ.ಈ ಮೊದಲು ಇವರಿಬ್ಬರ ಜಗಳ ಕನ್ನಡ ಹೋರಾಟದ ವಿಚಾರವಾಗಿ ಶುರುವಾಗಿತ್ತು ನಂತರ ಎಲ್ಲಾ ವಿಚಾರಗಳಿಗೂ ಮೂಗುತೋರಿಸಿ ಎಲ್ಲದಕ್ಕೂ ಅಲ್ಲಗಳಿಯುವ ಕಾರ್ಯ ಈ ಇಬ್ಬರು ಶುರುಮಾಡಿಕೊಂಡಿದ್ದಾರೆ. ಆದರೆ ಕಿಚ್ಚನ ಚಪ್ಪಾಳೆ ಪಡೆದುಕೊಂಡ ನಂತರ ಮತ್ತು ಈ ವಾರ ಕ್ಯಾಪ್ಟನ್ ಜವಾಬ್ದಾರಿ ಹೊತ್ತಿರುವುದರಿಂದ ಪ್ರಶಾಂತ್ ಬಹಳ ಮೌನಿಯಾಗಿದ್ದಾರೆ.ಆದರೆ ರಾಜಣ್ಣ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ.
ಈ ವಾರ ಯಾರು ಫೇಕ್ ಹಾಗೂ ಯಾರು ರಿಯಲ್ ಎಂದು ತಿಳಿದುಕೊಳ್ಳಲು ಬಿಗ್ ಬಾಸ್ ಟಾಸ್ಕ್ ಮುಕಾಂತರ ಅವಕಾಶ ಕಲ್ಪಿಸಲಾಗಿತ್ತು.ಆದರೆ ರಾಜಣ್ಣ ಈ ಬಾರಿ ಬಹಳ ಅತಿಯಾದ ವರ್ತನೆಯನ್ನು ತೋರಿಸುತ್ತಿರುವ ಕಾರಣ ಮನೆ ಮಂದಿಗೆಲ್ಲಾ ಬೇಸರವನ್ನು ಉಂಟುಮಾಡಿದ್ದಾರೆ.ಇನ್ನು ಫೆಕ್ ಎಂದು ಕಾರಣ ನೀಡುವ ಬರದಲ್ಲೂ ಕೂಡ ಮನೆಯವರ ಮನಸ್ಸಿಗೆ ಬಹಳ ನೋವು ಉಂಟುಮಾಡುವುದಲ್ಲದೆ.ಮನೆಯವರೇ ಒಂದು ದಿಕ್ಕಾದರೆ ಇವರು ಮತ್ತೊಂದು ದಿಕ್ಕಿ ನಲ್ಲಿ ನಿಲ್ಲುತ್ತಿದ್ದರೆ.ಇವರ ವರ್ತನೆಯಿಂದ ಅಮೂಲ್ಯ ಗೌಡ ಬೇಸರ ಗೊಂಡು ಎಲ್ಲದರಲ್ಲೂ ತಪ್ಪು ಹುಡುಕಿ ನಮ್ಮನ್ನು ದೋಷಿಸಬೇಡಿ.ನಿಮ್ಮ ಭಾಷೆಯಲ್ಲಿ ಹೇಳುವುದಾದರೆ ನೀವು ದೊಡ್ಡ ಫೆಕ್ ಎಂದು ತಿರುಗೇಟು ನೀಡಿದ್ದಾರೆ.