ಜೀಕನ್ನಡ ವಾಹಿನಿಯ ನಂಬರ್1 ಧಾರಾವಾಹಿ ಲಕ್ಷ್ಮಿನಿವಾಸ. ಟಿಆರ್ಪಿ ಲಿಸ್ಟ್ ನಲ್ಲಿ ಈ ಧಾರಾವಾಹಿ ಮೊದಲ ಸ್ಥಾನದಲ್ಲಿದೆ, ಕರ್ನಾಟಕದ ಜನತೆಯ ಮೆಚ್ಚಿನ ಧಾರಾವಾಹಿ ಆಗಿದೆ ಲಕ್ಷ್ಮಿನಿವಾಸ. ಕನ್ನಡ ಚಿತ್ರರಂಗದಲ್ಲಿ 90ರ ದಶಕದಲ್ಲಿ ಫೇಮಸ್ ಆಗಿದ್ದ ನಟಿ ಶ್ವೇತಾ ಅವರು ಈ ಧಾರಾವಾಹಿ ಮೂಲಕ ಮತ್ತೆ ಕನ್ನಡ ಚಿತ್ರಪ್ರೇಮಿಗಳಿಗೆ ಹತ್ತಿರ ಆಗಿದ್ದಾರೆ. ಕೂಡು ಕುಟುಂಬದ ಧಾರಾವಾಹಿ ಆಗಿದ್ದು, ಈ ಧಾರಾವಾಹಿಯ ಎಲ್ಲಾ ಪಾತ್ರಗಳು ಸಹ ಜನರಿಗೆ ತುಂಬಾ ಇಷ್ಟವಾಗಿದೆ. ಲಕ್ಷ್ಮಿನಿವಾಸ ಧಾರಾವಾಹಿಯ ಪ್ರಮುಖವಾದ ಪಾತ್ರಗಳಲ್ಲಿ ಭಾವನಾ ಪಾತ್ರ ಕೂಡ ಒಂದು. ಈ ಪಾತ್ರಕ್ಕೆ ಈಗ ನಟಿ ಛಾಯಾ ಸಿಂಗ್ ಎಂಟ್ರಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಹೌದು, ಕನ್ನಡದ ಲಕ್ಷ್ಮಿನಿವಾಸ ಧಾರಾವಾಹಿಯಲ್ಲಿ ನಟಿ ದಿಶಾ ಮದನ್ ಅವರು ಭಾವನಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ಬಹಳ ಸೂಕ್ಷ್ಮವಾದ ಪಾತ್ರ, 35 ವರ್ಷವಾಗಿದ್ದರೂ ಜಾತಕ ದೋಷದ ಕಾರಣಕ್ಕೆ ಭಾವನಾಳಿಗೆ ಮದುವೆ ಆಗಿರಲಿಲ್ಲ. ಮದುವೆ ಫಿಕ್ಸ್ ಆದ ನಂತರ ವರ ಆಕ್ಸಿಡೆಂಟ್ ನಲ್ಲಿ ಇನ್ನಿಲ್ಲವಾಗುತ್ತಾನೆ. ಅವಮಾನಗಳನ್ನು ಎದುರಿಸುವ ಭಾವನಾ, ತಾನು ಮದುವೆ ಅಗಬೇಕಿದ್ದ ಹುಡುಗನ ಮಗಳ ಜವಾಬ್ದಾರಿ ತೆಗೆದುಕೊಂಡು, ಅದಾಗಲೇ ತಾಯಿ, ತಂದೆ, ಅಜ್ಜಿ ಎಲ್ಲರನ್ನು ಕಳೆದುಕೊಂಡಿದ್ದ ಮಗುವಿಗೆ ತಾಯಿಯಾಗಿ, ಜೀವನವನ್ನು ಧೈರ್ಯವಾಗಿ ಎದುರಿಸುವ ನಿರ್ಧಾರ ಮಾಡುತ್ತಾಳೆ.
ಆ ವೇಳೆ ಸಿದ್ದೇಗೌಡರಿಗೆ ಭಾವನಾ ಮೇಲೆ ಪ್ರೀತಿ ಶುರುವಾಗಿ, ಯಾರಿಗೂ ಗೊತ್ತಿಲ್ಲದ ಹಾಗೆ ಭಾವನಾಳಿಗೆ ತಾಳಿ ಕಟ್ಟಿ, ಈಗ ಆ ವಿಷಯ ಎಲ್ಲರಿಗೂ ಗೊತ್ತಾಗಿ, ಭಾವನಾ ಸಿದ್ದೇಗೌಡರ ಮನೆಯಲ್ಲಿದ್ದಾಳೆ. ಈ ಪಾತ್ರ ದಿಶಾ ಅವರಿಗೆ ಹೇಳಿ ಮಾಡಿಸಿದ ಹಾಗಿದೆ, ಎಲ್ಲರಿಗೂ ದಿಶಾ ಅವರ ಪಾತ್ರ ತುಂಬಾ ಇಷ್ಟವಾಗಿದೆ. ಆದರೆ ಇದೀಗ ಭಾವನಾ ಪಾತ್ರಕ್ಕೆ ಅಮೃತಧಾರೆ ಧಾರಾವಾಹಿಯ ಹೀರೋಯಿನ್ ಛಾಯಾ ಸಿಂಗ್ ಎಂಟ್ರಿ ಕೊಟ್ಟಿದ್ದಾರೆ. ಹೌದು ಇದು ನಿಜ, ಛಾಯಾ ಸಿಂಗ್ ಅವರು ಭಾವನಾ ಪಾತ್ರಕ್ಕೆ ಎಂಟ್ರಿ ಕೊಟ್ಟಿರುವುದು ನಿಜ, ಆದರೆ ಅದು ಕನ್ನಡ ಲಕ್ಷ್ಮಿನಿವಾಸ ಧಾರಾವಾಹಿಯಲ್ಲಿ ಅಲ್ಲ..

ಲಕ್ಷ್ಮಿನಿವಾಸ ಧಾರಾವಾಹಿ ಕನ್ನಡದಲ್ಲಿ ಸೂಪರ್ ಹಿಟ್ ಆದ ನಂತರ ತಮಿಳಿಗೆ ಗಟ್ಟಿಮೇಳ ಹೆಸರಿನಲ್ಲಿ ಡಬ್ ಆಗುತ್ತಿದೆ. ಈ ಧಾರಾವಾಹಿಯ ತಮಿಳು ರಿಮೇಕ್ ನಲ್ಲಿ ನಟಿ ಛಾಯಾ ಸಿಂಗ್ ಅವರು ಭಾವನಾ ಪಾತ್ರದಲ್ಲಿ ನಟಿಸಲಿದ್ದಾರೆ, ಹಾಗೆಯೇ ಅಮೃತಧಾರೆ ಧಾರಾವಾಹಿಯಲ್ಲಿ ಆನಂದ್ ಪಾತ್ರದಲ್ಲಿ ನಟಿಸುತ್ತಿರುವವರು ವೆಂಕಿ ಪಾತ್ರದಲ್ಲಿ ನಟಿಸಲಿದ್ದು, ಅಮೃತಧಾರೆಯಲ್ಲೇ ಅಪರ್ಣಾ ಪಾತ್ರದಲ್ಲಿ ನಟಿಸುತ್ತಿರುವ ಸ್ವಾತಿ ಅವರು ವೀಣಾ ಪಾತ್ರದಲ್ಲಿ ನಟಿಸಲಿದ್ದಾರೆ. ಹಲವು ಕನ್ನಡ ಕಲಾವಿದರು ತಮಿಳು ಧಾರಾವಾಹಿಯಲ್ಲಿ ಒಳ್ಳೆಯ ಪಾತ್ರಗಳಲ್ಲಿ ನಟಿಸುತ್ತಿರುವುದು ಸಂತೋಷದ ವಿಷಯ.
ಛಾಯಾ ಸಿಂಗ್ ಅವರು ತಮಿಳಿನಲ್ಲಿ ಭಾವನಾ ಪಾತ್ರದಲ್ಲಿ ನಟಿಸುತ್ತಿರುವುದು ಅವರ ಅಭಿಮಾನಿಗಳಿಗೆ ಸಂತೋಷ ಕೊಟ್ಟಿದೆ. ಸಿನಿಮಾ ಸೀರಿಯಲ್ ಎರಡರಲ್ಲೂ ಛಾಯಾ ಸಿಂಗ್ ಅವರು ಬ್ಯುಸಿ ಇದ್ದು, ಬಿಡುವಿಲ್ಲದೇ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಗಟ್ಟಿಮೇಳ ತಮಿಳು ಧಾರಾವಾಹಿಯಲ್ಲಿ ಸಹ ಹೆಸರು ಸಿಗುತ್ತದೆ ಎನ್ನುವುದಕ್ಕೆ ಯಾವುದೇ ಸಂಶಯವಿಲ್ಲ. ಭಾವನಾ ಪಾತ್ರ ಕನ್ನಡದಲ್ಲಿ ತುಂಬಾ ಪಾಪ್ಯುಲರ್ ಆಗಿದೆ, ಅದೇ ಥರ ತಮಿಳಿನಲ್ಲಿ ಸಹ ಯಶಸ್ಸು ಸಿಗಲಿ ಎಂದು ವಿಶ್ ಮಾಡೋಣ. ಕನ್ನಡದ ಹಾಗೆ ತಮಿಳಿನಲ್ಲಿ ಸಹ ಟಿಆರ್ಪಿ ರೇಟಿಂಗ್ ನಲ್ಲಿ ಟಾಪ್ ಸ್ಥಾನಕ್ಕೆ ಬಂದರೆ ಕನ್ನಡಕ್ಕೆ ಸಹ ಹೆಮ್ಮೆ ಆಗುತ್ತದೆ.