ಸಧ್ಯಕ್ಕೆ ಬಾಕ್ಸ್ ಆಫೀಸ್ ಲೂಟಿ ಮಾಡುತ್ತಿರುವ ಸಿನಿಮಾ ಪುಷ್ಪ2. ಈ ಸಿನಿಮಾ ನೋಡೋಕೆ ಅಭಿಮಾನಿಗಳು 2 ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಕಾಯುತ್ತಿದ್ದರು. ಕೊನೆಗೂ ಪುಶ್ಪ2 ಸಿನಿಮಾ ಕಳೆದ ಗುರುವಾರ ತೆರೆಕಂಡಿದೆ. ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದರು ಸಹ, ಸಿನಿಮಾಗೆ ಇರುವ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ. ಒಳ್ಳೆಯ ಕಲೆಕ್ಷನ್ ಅಂತೂ ಮಾಡುತ್ತಿದೆ. ಈಗಾಗಲೇ 400 ಕೋಟಿ ಗಿಂತ ಹೆಚ್ಚು ಹಣಗಳಿಕೆ ಮಾಡಿದ್ದು, 1000 ಕೋಟಿ ಗಳಿಕೆಯ ಕಡೆಗೆ ದಾಪುಗಾಲು ಹಾಕುತ್ತಿದೆ. ಪುಷ್ಪ2 ಸಿನಿಮಾ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಇನ್ನು ಪುಷ್ಪ2 ಸಿನಿಮಾ ಕುರಿತ ಕಾರ್ಯಕ್ರಮ ಒಂದರಲ್ಲಿ ನಟ ಅಲ್ಲು ಅರ್ಜುನ್ ಅವರು ರಶ್ಮಿಕಾ ಅವರನ್ನು ಹಾಡಿ ಹೊಗಳಿದ್ದು ವಿಡಿಯೋ ಈಗ ವೈರಲ್ ಆಗಿದೆ.

ಹೌದು, ನಟ ಅಲ್ಲು ಅರ್ಜುನ್ ಅವರು ಈ ಸಿನಿಮಾಗಾಗಿ ಬಹಳಷ್ಟು ಸಮಯ ನೀಡಿದ್ದಾರೆ, ಪುಷ್ಪ2 ಗಾಗಿ ಅಲ್ಲು ಅರ್ಜುನ್ ಅವರು 4 ವರ್ಷಕ್ಕಿಂತ ಹೆಚ್ಚಿನ ಸಮಯ ಮೀಸಲಾಗಿ ಇಟ್ಟಿದ್ದರು, ಇನ್ಯಾವುದೇ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರು ತೊಡಗಿಸಿಕೊಂಡಿರಲಿಲ್ಲ. ನಟ ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ಸುಕುಮಾರ್ ಇವರಿಬ್ಬರು ಕೂಡ ಸಂಪೂರ್ಣ ಸಮಯವನ್ನು ಪುಷ್ಪ ಮತ್ತು ಪುಷ್ಪ2 ಗಾಗಿಯೇ ಮೀಸಲಾಗಿ ಇಟ್ಟಿದ್ದರು. ಹಾಗಾಗಿ ಈ ಸಿನಿಮಾ ಇಬ್ಬರಿಗೂ ತುಂಬಾ ಸ್ಪೆಷಲ್. ಇವರಷ್ಟೇ ಸ್ಪೆಶಲ್ ಆಗಿರೋರು ಮತ್ತೊಬ್ಬರು, ಅವರು ಮತ್ಯಾರು ಅಲ್ಲ ಸಿನಿಮಾದ ಹೀರೋಯಿನ್ ಆಗಿರುವ ನಟಿ ರಶ್ಮಿಕಾ ಮಂದಣ್ಣ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಹೌದು, ರಶ್ಮಿಕಾ ಅವರು ಮಧ್ಯದಲ್ಲಿ ಹಲವು ಬೇರೆ ಸಿನಿಮಾಗಳಲ್ಲಿ ನಟಿಸಿದರು ಸಹ, ಪುಷ್ಪ ಮತ್ತು ಪುಷ್ಪ2 ಸಿನಿಮಾದ ಶ್ರೀವಲ್ಲಿ ಪಾತ್ರಕ್ಕೆ ಬಹಳಷ್ಟು ಸಮಯವನ್ನು ಮೀಸಲಾಗಿ ಇಟ್ಟಿದ್ದರು. ಇವರು ಸಹ ಬಹಳ ಕಷ್ಟಪಟ್ಟು, ಶ್ರಮ ಹಾಕಿ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಸಿನಿಮಾ ಪ್ರೊಮೋಷನ್ ಗಳಲ್ಲಿ ಕೂಡ ಬಿಡುವಿಲ್ಲದೇ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ರಶ್ಮಿಕಾ ಅವರು ಸಹ ಸಿನಿಮಾ ತಂಡದ ದೊಡ್ಡ ಭಾಗ ಎಂದರೆ ತಪ್ಪಲ್ಲ. ಇವರ ಬಗ್ಗೆ ಚಿತ್ರತಂಡಕ್ಕೂ ಅಷ್ಟೇ ಒಲವಿದೆ. ರಶ್ಮಿಕಾ ಅವರ ಬಗ್ಗೆ ಅಲ್ಲು ಅರ್ಜುನ್ ಅವರು ಪುಷ್ಪ2 ಸಿನಿಮಾ ಕುರಿತ ಕಾರ್ಯಕ್ರಮ ಒಂದರಲ್ಲಿ ಪ್ರೀತಿಯಿಂದ ಮಾತನಾಡಿದ್ದು, ಆ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.
“ನನಗೆ ತುಂಬಾ ವಿಶೇಷವಾದ., ನನ್ನ ಶ್ರೀವಲ್ಲಿ..ಕಳೆದ 4 ವರ್ಷಗಳಲ್ಲಿ ನಾನು ಕೆಲಸ ಮಾಡಿರೋದು ಒಬ್ಬರೇ ನಾಯಕಿಯ ಜೊತೆಗೆ, ಅದು ಮತ್ಯಾರು ಅಲ್ಲ.. ರಶ್ಮಿಕಾ.. ನಾವು ಈಗ ಫ್ಯಾಮಿಲಿ ಥರ ಆಗಿ ಹೋಗಿದ್ದೀವಿ.. ನನಗೆ ಅವರ ಜೊತೆಗೆ ಕೆಲಸ ಮಾಡೋಕೆ ಅಷ್ಟು ಕಂಫರ್ಟಬಲ್ ಆಗಿದೆ. ಸಿನಿಮಾಗಾಗಿ ಅವರು ಮಾಡಿರೋ ಎಲ್ಲಾ ಕೆಲಸಕ್ಕೂ ನಾನು ಸಮಯ ತೆಗೆದುಕೊಂಡು ಥ್ಯಾಂಕ್ಸ್ ಹೇಳಬೇಕು. ನಾನು ಮತ್ತು ನಿರ್ದೇಶಕ ಸುಕುಮಾರ್ ಅವರು ಸಿನಿಮಾಗಾಗಿ ಯಾವಾಗಲೂ ಕೆಲಸ ಮಾಡ್ತಿದ್ವಿ, ಶೂಟಿಂಗ್ ಮಾಡ್ತಿದ್ವಿ. ರಶ್ಮಿಕಾ ಆಗಾಗ ಶೂಟಿಂಗ್ ಗೆ ಬರೋರು, ಅವರು ಬಂದಾಗ ಆ ಪಾಸಿಟಿವ್ ವೈಬ್ಸ್ ತರ್ತಿದ್ರು. ರಶ್ಮಿಕಾ ವಾಪಸ್ ಹೋಗಬೇಕಾದ್ರೆ, ಎಷ್ಟು ಸ್ವೀಟ್ ಆದ ಹುಡುಗಿ..
ಎಷ್ಟು ಪಾಸಿಟಿವ್ ಎನರ್ಜಿ ತರ್ತಾರೆ ಅಂತ ಮಾತಡ್ಕೊತಾ ಇದ್ವಿ. ಈ ಥರ ಇರೋ ಹುಡುಗಿಯರ ಜೊತೆಗೆ ನಾವು ಕೆಲಸ ಮಾಡಬೇಕು. ಪ್ರಪಂಚಕ್ಕೆ ಈ ಥರ ಹುಡುಗಿಯರು ಬೇಕು. ನಾವು ಯಾವಾಗಲೂ ಹುಡುಗಿಯರು ಹಾಗೆ, ಹೀಗೆ ಅಂತ ಕಂಪ್ಲೇಂಟ್ ಮಾಡ್ತಾ ಇರ್ತೀವೋ. ಆದರೆ ರಶ್ಮಿಕಾ ಅವರ ಥರ ಇರೋ ಹುಡುಗಿಯರನ್ನ ನೋಡಿದಾಗ, ಹುಡುಗಿಯರು ಈ ಥರ ಇರಬೇಕು ಅಂತ ಅನ್ಸುತ್ತೆ. ಥ್ಯಾಂಕ್ ಯು ರಶ್. ನಿಮ್ಮ ಮೇಲೆ ನನಗಿರೋ ಪ್ರೀತಿಯನ್ನ ಇದಕ್ಕಿಂತ ಬೇರೆ ರೀತಿಯಲ್ಲಿ ವ್ಯಕ್ತಪಡಿಸೋಕೆ ಬರೋದಿಲ್ಲ. ಥ್ಯಾಂಕ್ ಯು ಸೋ ಮಚ್..” ಎಂದು ವೇದಿಕೆ ಮೇಲೆ ಹೇಳಿದ್ದಾರೆ ನಟ ಅಲ್ಲು ಅರ್ಜುನ್. ತಲುಪಿತು.