ಕಿರುತೆರೆ ಯಾವ ಹಿರಿತೆರೆ ಗಿಂತಲೂ ಕಡಿಮೆಯಿಲ್ಲ.ಇಂದು ಕಿರುತೆರೆಯಲ್ಲಿ ಪ್ರಸಾರ ವಾಗುತ್ತಿರುವ ಧಾರಾವಾಹಿಗಳನ್ನು ನೋಡಿದರೆ ಯಾವ ಸಿನಿಮಾ ದೃಶ್ಯಗಳಿಗಿಂತಲು ಒಂದು ಪಟ್ಟು ಹೆಚ್ಚಿಗೆ ಇರುವಂತೆ ಪ್ರಸಾರ ಮಾಡುತ್ತಿದ್ದಾರೆ.ಇಲ್ಲಿಯ ಪಾತ್ರಧಾರಿಗಳು ಕೂಡ ಇಂದು ಬೆಳ್ಳಿ ತೆರೆ ಹಾಗೂ ಪರ ಭಾಷೆಯಲ್ಲಿ ಕನಿಸ್ಕೊಳ್ಳುತ್ತಿರುವುದನ್ನು ನಾವು ನೋಡಿದ್ದೇವೆ.ಹೀಗೆ ಕಿರುತೆರೆಯು ಕೂಡ ಒಳ್ಳೆಯ ಒಳ್ಳೆಯ ಕಲಾವಿದರನ್ನು ಪ್ರೇಕ್ಷಕರಿಗೆ ಪರಿಚಯಿಸುತ್ತಾ ಹಾಗೂ ಬಣ್ಣದ ಲೋಕಕ್ಕೆ ಕನಸು ಕಟ್ಟಿಕೊಂಡು ಬಂದವರನ್ನು ಅವಕಾಶ ನೀಡಿತ್ತಾ ಉನ್ನತ ಸ್ಥಾನಕ್ಕೆ ಬೆಳೆಯುತ್ತಿದ್ದಾರೆ. ಕಿರುತೆರೆಯಲ್ಲಿ ಕಳೆದ ಐದು ವರ್ಷಗಳಿಂದ ಸಾಕಷ್ಟು ಹೊಸ ಕಲಾವಿದರು ಪರಿಚಯಸಿಕೊಂಡಿದ್ದಾರೆ.ಅವರ ಸಾಲಿಗೆ ಬಹಳ ಹೆಸರು ಪಡೆದ ಕಲಾವಿದೆ ಎಂದರೆ ಅದು “ಐಶ್ವರ್ಯ ಬಸುರೇ”.ಈ ನಟಿ ಬಣ್ಣದ ಲೋಕಕ್ಕೆ ಪರಿಚಯಿಸಿಕೊಳ್ಳುವ ಮೊದಲೇ ಈ ಲೋಕದಲ್ಲಿ ಬಹಳ ಹೆಸರು ಮಾಡಿದ್ದರು.

ಈ ನಟಿ 2015ರಲ್ಲಿ ಐಶ್ವರ್ಯ ಬಸ್ಪುರೆ ಅವರು ಮಿಸ್ ಕರ್ನಾಟಕ ವಿಜೇತೆಯಾಗಿದ್ದರು. ನಟನೆಯ ಜೊತೆಗೆ ಐಶ್ವರ್ಯ ಬಸ್ಪುರೆ ಅವರು ಮಾಡೆಲಿಂಗ್ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದಾರೆ. ಹೀಗೆ ತಮ್ಮ ಕನಸಿನ ಮಾಡಲಿಂಗ್ ನಲ್ಲಿ ತೊಡಗಿಸಿಕೊಂಡಿದ್ದ ಈಕೆಗೆ ಒಂದು ದಿನ ಖ್ಯಾತ ಚಾನಲ್ ಒಂದ್ರಲ್ಲಿ ಧಾರಾವಾಹಿಯ ನಾಯಕಿ ಆಗಿ ನಟಿಸುವ ಅವಕಾಶ ಹುಡುಕಿಕೊಂಡು ಬರುತ್ತದೆ.ಆಗ ಆ ನಟಿ ಸಿಕ್ಕ ಅವಕಾಶವನ್ನು ಕೊಡ ಬಳಿಸಿಕೊಳ್ಳಲು ಆ ಧಾರಾವಾಹಿ ಅವರಿಗೆ ಗ್ರೀನ್ ಸಿಗ್ನಲ್ ಕೊಡುತ್ತಾರೆ. “ಮಹಾಸತಿ” ಧಾರಾವಾಹಿಯಲ್ಲಿ ಮೊದಲ ಬಾರಿಗೆ ಕಿರುತೆರೆಯಲ್ಲಿ ಐಶ್ವರ್ಯ ಬಸ್ಪುರೆ ಕಾಣಿಸಿಕೊಂಡಿದ್ದು. ಮಹಾಸತಿ ಧಾರಾವಾಹಿ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿತ್ತು.
ಇದರಲ್ಲಿ ಐಶ್ವರ್ಯ ಬಸ್ಪುರೆ ಅವರು ಮುಖ್ಯ ಭೂಮಿಕೆಯ ಪಾಯ್ರವಾದ ನಾಯಕಿಯಾಗಿ ಕಾಣಿಸಿಕೊಂಡರು. ‘ಆರತಿ’ ಎಂಬ ಪಾತ್ರದಲ್ಲಿ ಮೊದಲ ಬಾರಿಗೆ ಪ್ರೇಕ್ಷಕರಿಗೆ ಪರಿಚಯಿಸಿಕೊಂಡರು. ಆದರೆ, ಈ ಧಾರಾವಾಹಿಯಲ್ಲಿ ಈ ನಟಿಗೆ ಅಷ್ಟಾಗಿ ಜನಪ್ರಿಯತೆ ತಂದುಕೊಡಲಿಲ್ಲ. ಹಾಗಾಗಿ ಜನರಿಗೆ ಅಷ್ಟಾಗಿ ಪರಿಚಯಿಸಿಕೊಳ್ಳದ ಐಶ್ವರ್ಯ ಅವರಿಗೆ ದೊಡ್ಡ ಬ್ರೇಕ್ ತಂದುಕೊಟ್ಟ ಧಾರಾವಾಹಿ ಎಂದರೆ “ಜೀ ಕನ್ನಡ”ದಲ್ಲಿ ಪ್ರಸಾರವಾದ “ಯಾರೇ ನೀನು ಮೋಹಿನಿ” ಧಾರಾವಾಹಿ ಮೂಲಕ.ಈ ಧಾರಾವಾಹಿಯಲ್ಲಿ ಕಳ ನಾಯಕಿಯಾಗಿ ಕಾಣಿಸಿಕೊಂಡರು.ಇದೊಂದು ಪಾತ್ರ ದಿಂದ ಜನಪ್ರಿಯತೆ ಗಳಿಸಿದ ಈಕೆ ಇಂದಿಗೂ ಮಾಯ ಎಂಬ ಹೆಸರಿನ ಮೂಲಕ ಗುರುತಿಸಿಕೊಳ್ಳುತ್ತಾರೆ.
ಆದರೆ ಕೋವಿಡ್ ನಿಂದ ಈ ನಟಿಯ ವೇಗಕ್ಕೆ ಬ್ರೇಕ್ ಬಿದ್ದಂತಾಯಿತು.ಆ ನಂತರ ಈ ನಟಿ ಯಾವ ಧಾರಾವಾಹಿಯಲ್ಲಿಯು ಕಾಣಿಸಿಕೊಳ್ಳಲಿಲ್ಲ.ಇದೀಗ ಈ ನಟಿಯ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಆದೇನೆಂದರೆ ಮತ್ತೆ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿಯಾಗಿರುವ “ಸತ್ಯ” ಧಾರಾವಾಹಿಯಲ್ಲಿ ಮತ್ತೊಮ್ಮೆ ಖಳನಾಯಕ ಯಾಗಿ ಪ್ರೇಕ್ಷಕರಿಗೆ ರಂಜಿಸಲು ಬರುತ್ತಿದ್ದಾರೆ.ಈ ಪಾತ್ರ ಕೇವಲ ಅಥಿತಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಅಥವಾ ಆ ಧಾರಾವಾಹಿಯ ವಿಲನ್ ಗಳಿಗೆ ಸಾತ್ ನೀಡುತ್ತಾ ಮುಂದುವರೆಯುತ್ತರ ಎಂದು ಕಾದು ನೋಡಬೇಕಿದೆ.