ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಅವರು ಪತಿ ಅಭಿಷೇಕ್ ಬಚ್ಚನ್ ಅವರಿಂದ ವಿಚ್ಛೇದನ ಪಡೆಯುತ್ತಾರೆ, ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ, ಅಭಿಷೇಕ್ ಬಚ್ಚನ್ ಅವರ ಮನೆಯನ್ನು ತೊರೆದು ಐಶ್ವರ್ಯ ರೈ ಅವರು ಪ್ರತ್ಯೇಕವಾಗಿ ಅವರ ತಾಯಿ ಮತ್ತು ಮಗಳು ಆರಾಧ್ಯ ಜೊತೆಗೆ ವಾಸ ಮಾಡುತ್ತಿದ್ದಾರೆ. ಬಚ್ಚನ್ ಕುಟುಂಬದ ಜೊತೆಗೆ ಐಶ್ವರ್ಯ ರೈ ಅವರ ಒಡನಾಟ ಅಷ್ಟಕ್ಕಷ್ಟೇ, ಇಬ್ಬರು ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ಕೆಲವು ತಿಂಗಳುಗಳಿಂದ ಮಾಧ್ಯಮದಲ್ಲಿ ಭಾರಿ ಸದ್ದು ಮಾಡುತ್ತಿದೆ. ಆದರೆ ಆ ಎಲ್ಲಾ ಊಹಾಪೋಹಗಳಿಗೆ ಇದೀಗ ಐಶ್ವರ್ಯ ಅಭಿಷೇಕ್ ದಂಪತಿ ತೆರೆ ಎಳೆದಿದ್ದಾರೆ. ಇವರಿಬ್ಬರು ಜೊತೆಯಾಗಿ ಎಂಜಾಯ್ ಮಾಡುತ್ತಿರುವ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ವದಂತಿಗಳಿಗೆ ಈ ಜೋಡಿ, ಉತ್ತರ ಕೊಟ್ಟಿದೆ. ಇಬ್ಬರು ಚೆನ್ನಾಗಿಯೇ ಇದ್ದಾರೆ ಎನ್ನುವುದನ್ನ ಸಾಬೀತು ಪಡಿಸುವ ಹಾಗಿದೆ ಐಶ್ವರ್ಯ ರೈ ಅವರ ಹೊಸ ವಿಡಿಯೋ.. ಈ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ..

ಹೌದು, ಒಂದಷ್ಟು ಸಮಯದಿಂದ ಅಭಿಶೇಕ್ ಹಾಗೂ ಐಶ್ವರ್ಯ ಜೋಡಿ ಜೊತೆಯಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಒಂದೆರಡು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡರೂ, ಬಚ್ಚನ್ ಕುಟುಂಬ ಐಶ್ವರ್ಯ ಅವರ ಜೊತೆಗೆ ಅಷ್ಟೇನು ಚೆನ್ನಾಗಿ ವರ್ತಿಸಲಿಲ್ಲ, ಇದೆಲ್ಲವನ್ನ ಮಾಧ್ಯಮದವರು ಹಾಗೂ ನೆಟ್ಟಿಗರು ಗಮನಿಸಿ, ಬಹುಶಃ ಐಶ್ವರ್ಯ ರೈ ಅವರು ಬಚ್ಚನ್ ಕುಟುಂಬದಿಂದ ದೂರದಲ್ಲೇ ಇದ್ದಾರೆ, ವಿಚ್ಛೇದನದ ಸುದ್ದಿ ನಿಜವೇ ಇರಬಹುದು ಎಂದು ಗಾಸಿಪ್ ಗಳು ಜೋರಾಗಿಯೇ ಹಬ್ಬಿತ್ತು. ಸೋಶಿಯಲ್ ಮೀಡಿಯಾದಲ್ಲಿ ಇದರ ಬಗ್ಗೆ ಒಂದಷ್ಟು ಪೋಸ್ಟ್ ಗಳು ಸಹ ಕೇಳಿಬಂದಿತ್ತು. ಒಂದಷ್ಟು ಕಾರ್ಯಕ್ರಮಗಳಲ್ಲಿ ಐಶ್ವರ್ಯ ರೈ ಅವರು ಬಚ್ಚನ್ ಕುಟುಂಬದ ಜೊತೆಗೆ ಕಾಣಿಸಿಕೊಳ್ಳಲಿಲ್ಲ. ಅಭಿಷೇಕ್ ಅವರು ಒಂಟಿಯಾಗಿ ಬರುತ್ತಿದ್ದರು. ಇದರಿಂದ ವಿವಾದಗಳು ಜಾಸ್ತಿ ಆಗಿದ್ದವು.
ಇನ್ನು ಐಶ್ವರ್ಯ ರೈ ಅವರು ಬಚ್ಚನ್ ಕುಟುಂಬದ ಜೊತೆಗೆ ವಾಸ ಮಾಡುತ್ತಿಲ್ಲ, ಅವರು ಪ್ರತ್ಯೇಕವಾಗಿ ಮಗಳ ಜೊತೆಗೆ ವಾಸ ಮಾಡುತ್ತಿದ್ದಾರೆ, ಬಚ್ಚನ್ ಕುಟುಂಬದ ಜೊತೆಗೆ ಇವರು ಇಲ್ಲ. ಅಭಿಷೇಕ್ ಅವರು ತಂದೆ ತಾಯಿಯ ಜೊತೆಗೆ ಇದ್ದಾರೆ, ಪತ್ನಿ ಮತ್ತು ಮಗಳ ಜೊತೆಗೆ ಇಲ್ಲ ಎನ್ನುವ ವಿಚಾರ ವೈರಲ್ ಆಗಿತ್ತು. ಇನ್ನು, ಅತ್ತೆ ಜಯಾ ಬಚ್ಚನ್ ಅವರಿಗೆ, ಅಭಿಷೇಕ್ ಬಚ್ಚನ್ ಅವರ ತಂಗಿ ಜೊತೆಗೆ ಸಹ ಐಶ್ವರ್ಯ ರೈ ಅವರ ಸಂಬಂಧ ಚೆನ್ನಾಗಿಲ್ಲ, ಯಾರಿಗೂ ಅವರನ್ನು ಕಂಡರೆ ಆಗೋದಿಲ್ಲ ಎನ್ನುವ ಸುದ್ದಿಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಇದೆಲ್ಲವೂ ಸುಳ್ಳಿರಬಹುದು ಎನ್ನುವ ಹಾಗೆ, ಕೆಲವು ಸಾರಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಜೊತೆಯಾಗಿ ಒಂದೆರಡು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರು. ಮಗಳ ಸ್ಕೂಲ್ ಡೇ ಕಾರ್ಯಕ್ರಮದಲ್ಲಿ ಸಹ ಇವರಿಬ್ಬರು ಜೊತೆಯಾಗಿ ಬಂದಿದ್ದರು, ಜೊತೆಯಾಗಿ ಒಂದೇ ಕಡೆ ಕುಳಿತಿದ್ದರು.

ಇಬ್ಬರೂ ಕೂಡ, ಮಗಳ ಪರ್ಫಾರ್ಮೆನ್ಸ್ ಅನ್ನು ವಿಡಿಯೋ ಮಾಡಿಕೊಳ್ಳುವ ಹಲವು ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಆ ಘಟನೆ ನಂತರ ಸಹ ಇವರಿಬ್ಬರ ನಡುವೆ ಏನೋ ಸರಿ ಇಲ್ಲ ಎಂದು ಅನ್ನಿಸಿತ್ತು. ಮತ್ತೆ ವಿಚ್ಛೇದನದ ಬಗ್ಗೆ ಗಾಸಿಪ್ ಗಳು ಶುರುವಾಗಿದ್ದವು. ಆದರೆ ಈಗ ಮತ್ತೊಮ್ಮೆ ಈ ವಿಷಯ ಸುಳ್ಳು ಎನ್ನುವ ಹಾಗೊಂದು ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದೊಂದು ಬಹಳ ಸ್ಪೆಷಲ್ ವಿಷಯ ಆಗಿದ್ದು, ಪ್ರತಿ ವರ್ಷ ಈ ಸಮಯದಲ್ಲಿ ಐಶ್ವರ್ಯ ರೈ ಅವರು ಮಗಳ ಜೊತೆಗೆ ಕಾನ್ ಫಿಲ್ಮ್ ಫೆಸ್ಟಿವಲ್ ಗೆ ಹೋಗುತ್ತಿದ್ದರು. ಆದರೆ ಈ ವರ್ಷ ಅವರು ಅಲ್ಲಿ ಮಗಳ ಜೊತೆಗೆ ಕಾಣಿಸಿಕೊಂಡಿಲ್ಲ. ಬದಲಾಗಿ ಜಿಯೋ ವರ್ಲ್ಡ್ ಕನೆಕ್ಷನ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದ ಫೋಟೋಸ್ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇಲ್ಲಿ ಅಭಿಷೇಕ್ ಹಾಗೂ ಐಶ್ವರ್ಯ ರೈ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ..
ಇವರ ಜೊತೆಗೆ ವಿರಾಟ್ ಕೊಹ್ಲಿ ಅವರ ಜೊತೆಗೆ ಜಗಳ ಮಾಡಿಕೊಂಡು, ಬ್ಲಾಕ್ ಆಗಿದ್ದ ಗಾಯಕ ರಾಹುಲ್ ವೈದ್ಯ ಸಹ ಕಾಣಿಸಿಕೊಂಡಿದ್ದು, ಐಶ್ವರ್ಯ ರೈ ಹಾಗೂ ಅಭಿಷೇಕ್ ಇಭರೂ ಜೊತೆಯಾಗಿ ನಟಿಸಿರುವ ಬಂಟಿ ಔರ್ ಬಬ್ಲಿ ಸಿನಿಮಾದ ಕಜ್ರಾ ರೇ ಹಾಡನ್ನು ಹಾಡಿದ್ದು, ರಾಹುಲ್ ವೈದ್ಯ ಈ ಹಾಡನ್ನು ಹಾಡುತ್ತಿದ್ದ ಹಾಗೆ, ಐಶ್ವರ್ಯ ರೈ ಅವರು ಖುಷಿಯಿಂದ ಎದ್ದು ಡ್ಯಾನ್ಸ್ ಮಾಡುವುದಕ್ಕೆ ಶುರು ಮಾಡುತ್ತಾರೆ, ಪತ್ನಿ ಡ್ಯಾನ್ಸ್ ಮಾಡುವುದನ್ನು ನೋಡಿದ ಅಭಿಷೇಕ್ ಅವರು ತಾವು ಕೂಡ ಐಶ್ವರ್ಯ ರೈ ಅವರೊಡನೆ ಸೇರಿ ಡ್ಯಾನ್ಸ್ ಮಾಡುತ್ತಾರೆ. ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಇಬ್ಬರೂ ಸಹ ಬಹಳ ಸಂತೋಷವಾಗಿದ್ದಾರೆ, ಇಬ್ಬರ ನಡುವೆ ಯಾವುದೇ ಸಮಸ್ಯೆ ಇಲ್ಲ ಎಂದು ಜನರಿಗೆ ಗೊತ್ತಾಗಿದ್ದು, ಎಲ್ಲಾ ಗಾಸಿಪ್ ಗಳಿಗೆ ಉತ್ತರ ಕೊಟ್ಟ ಹಾಗೆ ಆಗಿದೆ.
ಸೋಷಿಯಲ್ ಮೀಡಿಯಾ ಎಂದರೆ ಹಾಗೆ, ಸೆಲೆಬ್ರಿಟಿಗಳ ಬಗ್ಗೆ ಮತ್ತು ಅವರ ಜೀವನದ ಬಗ್ಗೆ ಅನೇಕ ಇಲ್ಲ ಸಲ್ಲದ ವಿಚಾರಗಳನ್ನ ಗಾಸಿಪ್ ಗಳಾಗಿ ಸ್ಪ್ರೆಡ್ ಮಾಡುತ್ತಾರೆ. ಅದರಲ್ಲೂ ಮಾಜಿ ವಿಶ್ವಸುಂದರಿ ಅವರ ಜೀವನದ ಬಗ್ಗೆ ಒಂದು ವಿಷಯ ಎಂದರೆ, ಜನರು ಬಿಡುತ್ತಾರಾ? ಐಶ್ವರ್ಯ ರೈ ಅವರ ವಿಚಾರದಲ್ಲಿ ಸಹ ಅದೇ ರೀತಿ ಆಗಿದೆ. ಏನೂ ಇಲ್ಲದೇ ಹೋದರು, ಮೇಲಿಂದ ಮೇಲೆ ಅದೇ ರೀತಿಯ ಗಾಸಿಪ್ ಗಳು ಸುದ್ದಿ ಆಗುತ್ತಿದ್ದು, ಐಶ್ವರ್ಯ ಅವರಾಗಲಿ ಅಥವಾ ಅಭಿಶೇಕ್ ಬಚ್ಚನ್ ಅವರಾಗಲಿ ಯಾವುದೇ ಸ್ಪಷ್ಟನೆ ಕೊಡುವುದಕ್ಕೆ ಹೋಗಿಲ್ಲ. ಆದರೆ ಅವರಿಬ್ಬರು ಬಹಳ ಸಂತೋಷವಾಗಿ ಇರುವ ವಿಡಿಯೋಗಳು ವೈರಲ್ ಆಗುತ್ತಿದ್ದ ಇದೆಲ್ಲ ಸುಳ್ಳು ಅನ್ನಿಸಿದರೂ ಸಹ ಮತ್ತೆ ಕೆಲ ದಿನಗಳ ಬಳಿಕ ವಿಚ್ಛೇದನದ ಸುದ್ದಿ ವೈರಲ್ ಆಗುತ್ತಿದೆ. ಒಟ್ಟಿನಲ್ಲಿ ಈ ಜೋಡಿ ಯಾವುದರ ಬಗ್ಗೆ ಕೂಡ ತಲೆ ಕೆಡಿಸಿಕೊಳ್ಳುವುದಕ್ಕೆ ಹೋಗಿಲ್ಲ.
ಇನ್ನು ಐಶ್ವರ್ಯ ರೈ ಅವರು ಈಗ ಸಿನಿಮಾದಲ್ಲಿ ಹೆಚ್ಚಾಗಿ ನಟಿಸುವುದಿಲ್ಲ. ಆಗೊಮ್ಮೆ, ಈಗೊಮ್ಮೆ ಎಂದಾದರೂ ಒಂದು ಸಿನಿಮಾದಲ್ಲಿ ನಟಿಸುತ್ತಾರೆ. ಹೆಚ್ಚಾಗಿ ಮಗಳ ಬಗ್ಗೆ ಚಿಂತೆ ಮಾಡುತ್ತಾರೆ, ಮಗಳು ಆರಾಧ್ಯ ಳನ್ನು ಚೆನ್ನಾಗಿ ಬೆಳೆಸಬೇಕು ಎನ್ನುವ ನಿಟ್ಟಿನಲ್ಲಿ ಹೆಚ್ಚು ಸಮಯ ಮಗಳ ಜೊತೆಗೆ ಕಳೆಯುತ್ತಿದ್ದಾರೆ. ಅಷ್ಟೇ ಅಲ್ಲದೇ, ಐಶ್ವರ್ಯ ರೈ ಅವರು ತಮ್ಮ ತಾಯಿಯ ಜೊತೆಗೆ ಸಹ ಇದ್ದಾರೆ. ಐಶ್ವರ್ಯ ರೈ ಅವರು ಮತ್ತು ಮಗಳು ಆರಾಧ್ಯ ಮತ್ತು ತಾಯಿ ಜೊತೆಗೆ ಇದ್ದಾರೆ. ಹೀಗೆ ತಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಿದ್ದಾರೆ ಐಶ್ವರ್ಯ ರೈ ಅವರು.



