ಬಿಗ್ ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಆಗಿ ಹೊರಹೊಮ್ಮಿರುವುದು ಹಳ್ಳಿ ಹುಡುಗ ಹನುಮಂತ. ಹಾವೇರಿ ಜಿಲ್ಲೆಯ ಸಣ್ಣ ಊರಿನಿಂದ ಬಂದಿರುವ ಈ ಹುಡುಗ ಮೊದಲು ಸರಿಗಮಪ ಶೋ ಗೆದ್ದು, ಈಗ ಬಿಗ್ ಬಾಸ್ ಅಂಥ ದೊಡ್ಡ ಶೋ ವಿನ್ನರ್ ಆಗಿ ಹೊರ ಹೊಮ್ಮಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಬಿಗ್ ಬಾಸ್ ಶೋನಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ ಹನುಮಂತ. ಇವರು ಗೆದ್ದಿರುವುದು ಇಡೀ ಕರ್ನಾಟಕದ ಜನತೆಗೆ ತಮ್ಮ ಮನೆಯ ಹುಡುಗ ಗೆದ್ದಿರುವಷ್ಟೇ ಸಂತೋಷ ತಂದಿದೆ. ಎಲ್ಲರೂ ಸಂಭ್ರಮಿಸಬೇಕು ಎಂದುಕೊಂಡಿದ್ದ ವೇಳೆ ಹನುಮಂತ ಮಾತ್ರ ಯಾರ ಕೈಗೂ ಸರಿಯಾಗಿ ಸಿಗಲಿಲ್ಲ. ಇದರಿಂದ ವೋಟ್ ಹಾಕಿದ ಜನರಿಗೆ ಸ್ವಲ್ಪ ಬೇಸರ ಆಗಿರುವುದಂತೂ ನಿಜ. ಆದರೆ ಹನುಮಂತ ಹೊರಗಡೆ ಕಾಣಿಸಿಕೊಳ್ಳದೇ ಇರುವುದಕ್ಕೆ ಬೇರೆಯದೇ ಕಾರಣ ಇದೆ.
ಬಿಗ್ ಬಾಸ್ ಶೋ ವಿನ್ನರ್ ಆಗಿರುವ ಹನುಮಂತನಿಗೆ ಬಂದಿರುವ ವೋಟ್ಸ್ ಸಾಮಾನ್ಯ ಇಲ್ಲ. ಬರೋಬ್ಬರಿ 5.3 ಕೋಟಿ ವೋಟ್ಸ್ ಪಡೆದು ಜಯಶಾಲಿ ಆಗಿದ್ದಾನೆ ಹನುಮಂತ. ಉತ್ತರ ಕರ್ನಾಟಕದ ಸಾಮಾನ್ಯ ಕುಟುಂಬದ ಕುರಿ ಕಾಯುವ ಹುಡುಗ ಇಷ್ಟು ಕೋಟಿ ಜನರ ಪ್ರೀತಿಯನ್ನ ಗಳಿಸಿ, ಇಷ್ಟು ದೊಡ್ಡ ರಿಯಾಲಿಟಿ ಶೋ ವಿನ್ನರ್ ಆಗಿದ್ದಾನೆ ಎನ್ನುವುದು ಸುಲಭದ ವಿಷಯ ಅಲ್ಲ. ಇದು ನಿಜಕ್ಕೂ ದೊಡ್ಡ ಸಾಧನೆ. ಖುದ್ದು ಸುದೀಪ್ ಅವರು ಸಹ ಹನುಮಂತನನ್ನು ಹಾಡಿ ಹೊಗಳಿದರು. ಬಿಗ್ ಬಾಸ್ ಮನೆಯ ಒಳಗೆ ಆಟವನ್ನು ಅರ್ಥ ಮಾಡಿಕೊಂಡು, ಸರಿಯಾಗಿ ಆಡುತ್ತಿರುವುದು ಹನುಮಂತ ಒಬ್ಬನೇ ಎಂದು ಸುದೀಪ್ ಅವರು ವೀಕೆಂಡ್ ಸಂಚಿಕೆಯಲ್ಲಿ ಹೇಳಿ ಹನುಮಂತನನ್ನು ಹೊಗಳಿದರು. ಆಟವನ್ನು ಅದ್ಭುತವಾದ ಆಡಿಕೊಂಡು ಬಂದ ಸ್ಪರ್ಧಿ ಈತ ಒಬ್ಬನೇ ಎಂದರು ತಪ್ಪಲ್ಲ.

ಇವನ ಮುಗ್ಧತೆ ಜೊತೆಗೆ ಇವನಲ್ಲಿ ಇದ್ದ ಬುದ್ಧಿವಂತಿಕೆ ಜನರಿಗೆ ಇಷ್ಟವಾಗಿದೆ. ಕೆಲವರು ಈತ ಕಾಣುವಷ್ಟು ಮುಗ್ಧ ಅಲ್ಲ ಎಂದು ಅಂದುಕೊಂಡರು ಸಹ, ಜನರಿಗೆ ಇಷ್ಟ ಇದೆಲ್ಲವೂ ಇಷ್ಟವಾಗಿ ಈ ಮುಗ್ಧ ಹುಡುಗ ಗೆದ್ದಿದ್ದು ಆಗಿದೆ. ಬಿಗ್ ಬಾಸ್ ಕನ್ನಡ ಶೋನ 11 ವರ್ಷಗಳ ಇತಿಹಾಸದಲ್ಲಿ ಈ ಗೆಲುವು ಬಹಳ ವಿಶೇಷ. ಏಕೆಂದರೆ ಹನುಮಂತ ಬಿಗ್ ಬಾಸ್ ಶೋಗೆ ಬಂದಿದ್ದು ವೈಲ್ಡ್ ಕಾರ್ಡ್ ಎಂಟ್ರಿ ಆಗಿ. ಇದುವರೆಗೂ ಯಾವುದೇ ವೈಲ್ಡ್ ಕಾರ್ಡ್ ಸ್ಪರ್ಧಿ ಈ ಹಂತ ತಲುಪಿಲ್ಲ. ಫಿನಾಲೆ ತಲುಪಿದ್ದು ಕೂಡ ಬಹಳ ಅಪರೂಪ. ಆದರೆ ಹನುಮಂತ ಮತ್ತು ಮತ್ತೊಬ್ಬ ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಇಬ್ಬರೂ ಕೂಡ ಫಿನಾಲೆ ತಲುಪಿ ಟಾಪ್ 3 ವರೆಗು ಬಂದರು. ಅದರಲ್ಲಿ ರಜತ್ 2ನೇ ರನ್ನರ್ ಅಪ್ ಆದರೆ, ಹನುಮಂತ ಮೊದಲ ಸ್ಥಾನದಲ್ಲಿ ಟ್ರೋಫಿ ಗೆದ್ದಿದ್ದಾನೆ.
ಹೊರಗಿನ ಜನರಲ್ಲಿ ಸಹ ಮೊದಲಿನಿಂದ ಬಂದ ಸ್ಪರ್ಧಿಗಳಿಗಿಂತ ಹನುಮಂತ ಉತ್ತಮ ಎಂದು ಅನ್ನಿಸಿದ್ದ. ಹೊರಗಿನ ಜನರು ಹನುಮಂತ ಗೆಲ್ಲಬೇಕು ಎಂದು ಅಂದುಕೊಂಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಈತನಿಗೆ ಎಲ್ಲರ ಸಪೋರ್ಟ್ ಸಿಕ್ಕಿತ್ತು. ಹನುಮಂತ ಗೆದ್ದರೆ ಈ ಶೋಗೆ ನ್ಯಾಯ ಸಿಕ್ಕ ಹಾಗೆ ಎನ್ನುವ ಅಭಿಪ್ರಾಯ ಜನರಲ್ಲಿ ಕೇಳಿಬಂದಿತ್ತು. ಫಿನಾಲೆಯ ಕೊನೆಯ ಕ್ಷಣದಲ್ಲಿ ಹನುಮಂತ ವಿನ್ನರ್ ಎಂದು ಸುದೀಪ್ ಅವರು ಘೋಷಿಸಿದಾಗ ನಿಜಕ್ಕೂ ಹೊರಗಿನ ಎಲ್ಲಾ ಜನರಿಗೆ ತಾವು ಅಂದುಕೊಂಡ ಹಾಗೆ ನಡೆಯಿತು ಎಂದು ಆದ ಸಂತೋಷಕ್ಕೆ ಪಾರವೇ ಇಲ್ಲ. ಕೊನೆಗೂ ಹಿಂದಿನ ಸೀಸನ್ ಗಳ ರೀತಿ ಆಗದೇ ಜನರು ಇಷ್ಟಪಟ್ಟ ಸ್ಪರ್ಧಿಯೇ ಗೆದ್ದಿದ್ದಾನೆ ಎನ್ನುವ ಸಂತೋಷ ಜನರಲ್ಲಿತ್ತು. ಆದರೆ ಟ್ರೋಫಿ ಗೆದ್ದ ಬಳಿಕ ಹನುಮಂತ ಜನರ ಎದುರು ಬರಲಿಲ್ಲ.

ಫಿನಾಲೆ ಸಂಚಿಕೆ ಮುಗಿದ ಬಳಿಕ ಹನುಮಂತ ಕ್ಯಾರವನ್ ನಲ್ಲಿ ಹೊರಗೆ ಹೋದದ್ದು ಗೊತ್ತಾಯಿತು. ರನ್ನರ್ ಅಪ್ ಆದ ತ್ರಿವಿಕ್ರಂ ಬಂದು ಜನರನ್ನು ಮಾಧ್ಯಮದವರನ್ನು ಮಾತನಾಡಿಸಿ ಹೋದರು ಸಹ, ಹನುಮಂತ ಬರಲಿಲ್ಲ ಎಂದು ಜನರಿಗೆ ಸ್ವಲ್ಪ ಬೇಸರ ಆಗಿದ್ದು, ಹನುಮಂತ ಈ ರೀತಿ ಮಾಡಿದ್ದು ಯಾಕೆ ಎನ್ನುವ ಪ್ರಶ್ನೆ ಸಹ ಶುರುವಾಗಿತ್ತು. ಆದರೆ ಹನುಮಂತ ಆ ರೀತಿ ಮಾಡಿದ್ದು ಯಾಕೆ ಎನ್ನುವುದಕ್ಕೆ ಮುಖ್ಯವಾದ ಕಾರಣ ಬೇರೆಯೇ ಇದೆ. ನಿನ್ನೆ ಫಿನಾಲೆ ಸಂಚಿಕೆ ನಡೆಯುವ ದಿವಸ ಬೆಳಗಿನ ಜಾವ 4 ಗಂಟೆಗೆ ಹನುಮಂತ ಅವರ ಚಿಕ್ಕಪ್ಪ ದೇವರಾಜು ಅವರು ಹಾವೇರಿಯಲ್ಲಿ ನಿಧನ ರಾಗಿದ್ದಾರೆ. ಅವರಿಗೆ ಈಗ 45 ವರ್ಷ ವಯಸ್ಸಾಗಿದ್ದು, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಅಂಥ ಸ್ಥಿತಿಯಲ್ಲಿದ್ದ ಹನುಮಂತ ಅವರ ಚಿಕ್ಕಪ್ಪ ನಿನ್ನೆ ಬೆಳಗಿನ ಜಾವ ವಿಧಿವಶರಾಗಿದ್ದಾರೆ.
ಈ ಘಟನೆ ನಡೆದರು ಸಹ ಬೆಳಗ್ಗೆಯೇ ಹನುಮಂತ ಅವರ ಕುಟುಂಬ ಈ ವಿಷಯವನ್ನು ಬೆಂಗಳೂರಿಗೆ ಹೋಗಿದ್ದ ಹನುಮಂತ ಅವರ ತಾಯಿ ಮತ್ತು ಕುಟುಂಬದವರಿಗೆ ಈ ವಿಷಯವನ್ನು ತಿಳಿಸಿರಲಿಲ್ಲ ಎಂದು ಹನುಮಂತ ಅವರ ಕುಟುಂಬದವರು ತಿಳಿಸಿದ್ದಾರೆ. ಹಾಗೆಯೇ ಫಿನಾಲೆ ಸಂಚಿಕೆ ಶೂಟಿಂಗ್ ಗೆ ಹೋದ ಹನುಮಂತ ಅವರ ಕುಟುಂಬ ಅಲ್ಲಿ ಫೋನ್ ಬಳಸುವ ಹಾಗೆ ಸಹ ಇರಲಿಲ್ಲ. ಹಾಗಾಗಿ ಈ ವಿಷಯ ಹನುಮಂತ ಅವರಿಗೆ ತದವಾಗು ತಿಳಿದಿದೆ. ಫಿನಾಲೆ ಸಂಚಿಕೆ ಎಲ್ಲವೂ ಮುಗಿದ ಬಳಿಕ ಹನುಮಂತ ಅವರಿಗೆ ವಿಷಯ ಗೊತ್ತಾಗಿದ್ದು, ಆದಷ್ಟು ಬೇಗ ಊರಿಗೆ ಹೋಗಿ ಚಿಕ್ಕಪ್ಪನವರ ಕುಟುಂಬದ ಜೊತೆಗಿದ್ದು ಈ ಸಮಯದಲ್ಲಿ ಅವರಿಗೆ ಸಾಂತ್ವನ ನೀಡಬೇಕು ಎನ್ನುವ ಉದ್ದೇಶ ಹನುಮಂತ ಮತ್ತು ಅವರ ತಂದೆ ತಾಯಿಗೆ ಇತ್ತು. ಹಾಗಾಗಿ ಕ್ಯಾರವಾನ್ ಮೂಲಕ ಹನುಮಂತನನ್ನು ಒಂದಷ್ಟು ದೂರ ಕರೆದುಕೊಂಡು ಹೋಗಲಾಗಿದೆ.
ಅಲ್ಲಿಂದ ಆತನನ್ನು ಸ್ವಂತ ಕಾರ್ ನಲ್ಲಿ ಊರಿಗೆ ಕರೆದುಕೊಂಡು ಹೋಗಲಾಗಿದೆ ಎಂದು ಹೇಳಲಾಗುತ್ತಿದೆ. ಊರಿಗೆ ಬಂದು ಎಲ್ಲವನ್ನು ನೋಡಿಕೊಂಡು ಮತ್ತೆ ಬೆಂಗಳೂರಿಗೆ ಹೋಗಬೇಕಿತ್ತು ಹನುಮಂತ. ಅವರ ಕುಟುಂಬದ ಪರಿಸ್ಥಿತಿ ಈ ರೀತಿ ಇದ್ದ ಕಾರಣ ಹನುಮಂತ ಫಿನಾಲೆ ಮುಗಿದ ಬಳಿಕ ಮಾಧ್ಯಮದವರ ಜೊತೆಗೆ ಮತ್ತು ಅಭಿಮಾನಿಗಳ ಜೊತೆಗೆ ಮಾತನಾಡುವುದಕ್ಕೆ ಆಗಿಲ್ಲ. ಆದರೆ ಇಂದು ಸಂಜೆಯ ಬಳಿಕ ತ್ರಿವಿಕ್ರಂ ಅವರ ಜೊತೆಗೆ ಒಂದೆರಡು ಸಂದರ್ಶನಗಳಲ್ಲಿ ಪಾಲ್ಗೊಂಡಿರುವ ಕೆಲವು ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ. ಗೆದ್ದಿರುವ ಹನುಮಂತನ ಮಾತುಗಳನ್ನು ಕೇಳಲು ಜನರು ಸಹ ಕಾತುರರಾಗಿದ್ದಾರೆ.