ಜೀಕನ್ನಡ ವಾಹಿನಿಯ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಹಿರಿಯನಟಿ ಉಮಾಶ್ರೀ ಅವರು ಪುಟ್ಟಕ್ಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವ ವಿಷಯ ನಮಗೆಲ್ಲಾ ಗೊತ್ತೇ ಇದೆ. ಈ ಧಾರಾವಾಹಿ ಇತ್ತೀಚೆಗೆ 900 ಸಂಚಿಕೆಗಳನ್ನು ಪೂರೈಸಿತು. ಇದನ್ನು ಜೀ ವಾಹಿನಿ ಉತ್ತಮವಾಗಿ ಸೆಲೆಬ್ರೇಟ್ ಕೂಡ ಮಾಡಿತು. ಪುಟ್ಟಕ್ಕನ ಮಕ್ಕಳು ಕಿರುತೆರೆ ವೀಕ್ಷಕರ ಫೇವರೆಟ್ ಧಾರಾವಾಹಿ ಆಗಿತ್ತು, ಆದರೆ ಈಗ ಧಾರಾವಾಹಿ ಹಳಿ ತಪ್ಪುತ್ತಿರುವ ಹಾಗೆ ಕಾಣುತ್ತಿದೆ. ವೀಕ್ಷಕರಿಗೆ ಈಗ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಹೋಗುತ್ತಿರುವ ರೀತಿ ಇಷ್ಟವಾಗುತ್ತಿಲ್ಲ. ಆದರೆ ಧಾರಾವಾಹಿಯನ್ನು ಒಳ್ಳೆಯ ಹಂತಕ್ಕೆ ತರಬೇಕು ಎಂದು ನಿರ್ದೇಶಕರು ಶತಾಯ ಗತಾಯ ಪ್ರಯತ್ನ ಮಾಡುತ್ತಲೇ ಇದ್ದಾರೆ. ಇದರ ಬೆನ್ನಲ್ಲೇ ಈಗ ಪುಟ್ಟಕ್ಕನ ಮಕ್ಕಳು ಶೂಟಿಂಗ್ ಸೆಟ್ ಇಂದ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪಾಪ ಉಮಾಶ್ರೀ ಅವರ ಕಷ್ಟವನ್ನ ನೋಡೋಕಾಗ್ತಿಲ್ಲ ಗುರು..
ನಟಿ ಉಮಾಶ್ರೀ ಅವರ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಅಭಿನಯಿಸುವ ಪ್ರತಿ ಪಾತ್ರಕ್ಕೂ ಜೀವ ತುಂಬಿ, ಸಹಜವಾಗಿ ನೈಜವಾಗಿ ಅಭಿನಯಿಸುವ ಕಲಾವಿದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನಾಗಿ ಉಮಾಶ್ರೀ ಅವರ ಅಭಿನಯವನ್ನು ಮೆಚ್ಚದೇ ಇರುವವರು ಇರುವುದಕ್ಕೆ ಸಾಧ್ಯವಿಲ್ಲ. ಪುಟ್ಟಕ್ಕನ ಮುಗ್ಧತೆ ಜೊತೆಗೆ ಗಟ್ಟಿಗಿತ್ತಿತನ ಇದೆಲ್ಲವೂ ವೀಕ್ಷಕರಿಗೆ ಬಹಳ ಇಷ್ಟ. ಆದರೆ ಇತ್ತೀಚೆಗೆ ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಬಂದ ಕೆಲವು ಟ್ವಿಸ್ಟ್ ಗಳು ಜನರಿಗೆ ಸ್ವಲ್ಪವೂ ಇಷ್ಟವಾಗಿಲ್ಲ. ಈ ಧಾರಾವಾಹಿಯನ್ನ ಕೆಲವು ದಿನಗಳ ಹಿಂದೆಯೇ ಮುಗಿಸಿಬಿಡಬಹುದಿತ್ತು, ಇಷ್ಟು ದಿವಸಗಳ ಕಾಲ ಎಳೆದುಕೊಂಡು ಹೋಗುವ ಅವಶ್ಯಕತೆಯೇ ಇರಲಿಲ್ಲ ಎನ್ನುವ ಅಭಿಪ್ರಾಯ ಶುರುವಾಗಿದೆ. ಅದಕ್ಕೆ ಕಾರಣ ಮುಖ್ಯ ಪಾತ್ರಗಳಲ್ಲೇ ಬದಲಾವಣೆ ಬಂದಿದ್ದು.

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಎಲ್ಲರಿಗು ಇಷ್ಟ ಆಗುತ್ತಿದ್ದು ಪುಟ್ಟಕ್ಕನ ಪಾತ್ರ ಮತ್ತು ಸ್ನೇಹ ಪಾತ್ರ. ಸ್ನೇಹಾಳ ದಿಟ್ಟತನ ತಾಯಿಯ ಜೊತೆಗೆ ಸ್ನೇಹ ನಿಲ್ಲುತ್ತಿದ್ದ ರೀತಿ, ನ್ಯಾಯಕ್ಕಾಗಿ ಸ್ನೇಹ ಮಾಡುತ್ತಿದ್ದ ಹೋರಾಟ ಇದೆಲ್ಲವೂ ವೀಕ್ಷಕರಿಗೆ ತುಂಬಾ ಇಷ್ಟವಾಗಿತ್ತು. ಆದರೆ ಈ ಪಾತ್ರವನ್ನೇ ಸಾ*ಯಿಸಿ ಕಥೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ವೀಕ್ಷಕರಿಗೆ ಸ್ವಲ್ಪವೂ ಇಷ್ಟವಾಗುತ್ತಿಲ್ಲ. ಆಗಲೇ ಧಾರಾವಾಹಿಯನ್ನು ನಿಲ್ಲಿಸಿಬಿಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವ ಅಭಿಪ್ರಾಯ ಜನರಿಂದ ವ್ಯಕ್ತವಾಗಿದೆ. ಆದರೆ ನಿರ್ದೇಶಕರು ಮಾತ್ರ, ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್ ತರಬೇಕು, ವೀಕ್ಷಕರು ಧಾರಾವಾಹಿ ನೋಡೋ ಹಾಗೆ ಮಾಡಬೇಕು ಎಂದು ಪ್ರಯತ್ನ ಮಾಡುತ್ತಿದ್ದಾರೆ. ಈ ಧಾರಾವಾಹಿಗೆ ಎದುರಾದ ಮತ್ತೊಂದು ಸಮಸ್ಯೆ ಅಂದರೆ ಪ್ರಸಾರದ ಸಮಯ ಬದಲಾವಣೆ ಆಗಿದ್ದು.
ಜೀಕನ್ನಡ ವಾಹಿನಿಗೆ 2 ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಅತಿಹೆಚ್ಚು ಟಿಆರ್ಪಿ ತಂದುಕೊಡುತ್ತಿದ್ದ ಧಾರಾವಾಹಿ ಪುಟ್ಟಕ್ಕನ ಮಕ್ಕಳು. ಟಿಆರ್ಪಿ, ಜನಪ್ರಿಯತೆ ಎಲ್ಲದರಲ್ಲೂ ಮುಂದಿದ್ದ ಧಾರಾವಾಹಿಯನ್ನ 7 ಗಂಟೆ ಸ್ಲಾಟ್ ಇಂದ, 6:30 ರ ಸ್ಲಾಟ್ ಗೆ ಬದಲಾವಣೆ ಮಾಡಿದ್ದು ಕೂಡ ಜನರಲ್ಲಿ ಆಸಕ್ತಿ ಕಡಿಮೆ ಆಗುವುದಕ್ಕೆ ಮತ್ತೊಂದು ಕಾರಣ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಪ್ರಸ್ತುತ ಧಾರಾವಾಹಿಯಲ್ಲಿ ಸ್ನೇಹಾಳಿಗೆ ಅಂಟಿರುವ ಕಳಂಕವನ್ನು ಬಿಡಿಸುವ ಕಾರ್ಯದಲ್ಲಿ ಪುಟ್ಟಕ್ಕ ತೊಡಗಿದ್ದಾಳೆ. ಇದಕ್ಕಾಗಿ ಒಂದು ಹೋರಾಟವನ್ನೇ ಮಾಡುತ್ತಿದ್ದಾಳೆ. ಪುಟ್ಟಕ್ಕನ ಜೊತೆಗೆ ಅವಳ ಮಕ್ಕಳು ಹಾಗೂ ಊರಿನ ಜನರು ಸೇರಿದ್ದಾರೆ, ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಸಹ ಪುಟ್ಟಕ್ಕನಿಗೆ ಸಾಥ್ ಕೊಡುತ್ತಿದ್ದಾರೆ. ಇದೆಲ್ಲವೂ ಒಂದು ಕಡೆ ನಡೆಯುತ್ತಿದೆ..

ಮತ್ತೊಂದು ಕಡೆ ಶೂಟಿಂಗ್ ಸಮಯದ ಕಷ್ಟಗಳು..ಈಗ ಬಿಸಿಲು ಹೆಚ್ಚಾಗುತ್ತಿರುವ ಸಮಯ, ಈ ವೇಳೆ ಬಿಸಿಲಿನಲ್ಲಿ ಕೂಡ ಧಾರಾವಾಹಿಯ ಚಿತ್ರೀಕರಣ ನಾನ್ ಸ್ಟಾಪ್ ಸಾಗುತ್ತಿದೆ, ಏನೇ ಆದರೂ ಶೂಟಿಂಗ್ ನಡೆಯಬೇಕಿದೆ. ಈ ಸಮಯದಲ್ಲಿ ಕೆಲವು ತಮಾಷೆ ಸಹ ನಡೆದಿದ್ದು, ಬಿಸಿಲಲ್ಲಿ ಸ್ವಲ್ಪ ನೀರು ಕೊಡಿ ಅಂತ ಕೇಳಿದ್ರೆ ಡೈಲಾಗ್ ಕೊಡ್ತಾರೆ ಎಂದು ಉಮಾಶ್ರೀ ಅವರು ತಮಾಷೆ ಮಾಡಿದ್ದು, ಆ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಇದನ್ನು ನೋಡಿದ ನೆಟ್ಟಿಗರು, ಪಾಪ ಅವರಿಗೆ ಸ್ವಲ್ಪ ರೆಸ್ಟ್ ಕೊಡಿ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಧಾರಾವಾಹಿ ಅಥವಾ ಸಿನಿಮಾ ಶೂಟಿಂಗ್ ಯಾವುದೇ ಇದ್ದರೂ, ಶೂಟಿಂಗ್ ಸಮಯದಲ್ಲಿ ಆಗೋ ಕಷ್ಟಗಳು ಒಂದೆರಡಲ್ಲ. ಕಲಾವಿದರು ಎಷ್ಟು ಕಷ್ಟಪಡುತ್ತಾರೆ ಎಂದು ಇಲ್ಲಿ ಗೊತ್ತಾಗುತ್ತದೆ.