ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ತ್ರಿಷಾ ಕೃಷ್ಣನ್ ಅವರು ಇದೀಗ ನೋವಿನಲ್ಲಿದ್ದಾರೆ. ತಮ್ಮ ಮಗನನ್ನು ಕಳೆದುಕೊಂಡ ತೀವ್ರವಾದ ದುಃಖದಲ್ಲಿದ್ದಾರೆ ನಟಿ ತ್ರಿಷಾ. ಇವರಿಗೆ ಇನ್ನು ಮದುವೆ ಕೂಡ ಆಗಿರಲಿಲ್ಲ, ಮಗ ಇರೋದಕ್ಕೆ ಹೇಗೆ ಸಾಧ್ಯ ಎಂದು ನಿಮಗೆ ಅನ್ನಿಸಬಹುದು. ಅದಕ್ಕೂ ಉತ್ತರ ಇಲ್ಲಿದೆ. ನಟಿ ತ್ರಿಷಾ ಅವರು ತಮ್ಮ ಮಗ ಎಂದು ಹೇಳುತ್ತಿರುವುದು ಅವರ ಮುದ್ದಿನ ಶ್ವಾನದ ಬಗ್ಗೆ. ಹೌದು, ಈಗ ಶ್ವಾನಗಳನ್ನು ದತ್ತು ಪಡೆದು, ತಮ್ಮ ಮನೆಯ ಸದಸ್ಯರ ಹಾಗೆ, ಮನೆಯ ಮಕ್ಕಳ ಹಾಗೆ ನೋಡಿಕೊಳ್ಳುವ ಸಾಕಷ್ಟು ಜನರಿದ್ದಾರೆ. ತ್ರಿಷಾ ಅವರು ಕೂಡ ಅದೇ ರೀತಿ, ತಮ್ಮ ಮುದ್ದಿನ ಶ್ವಾನವನ್ನು ಮಗ ಎಂದೆ ಅಂದುಕೊಂಡಿದ್ದರು..

ನಿನ್ನೆ ಕ್ರಿಸ್ಮಸ್ ಹಬ್ಬದ ಆಚರಣೆಯ ವೇಳೆ ತ್ರಿಷಾ ಅವರು ಇದ್ದಾಗ, ನಿನ್ನೆ ಬೆಳಗ್ಗಿನ ಜಾವ ಅವರ ಮುದ್ದಿನ ಶ್ವಾನ, ಮಗ ಜೋರೋ ಕೊನೆಯುಸಿರೆಳೆದಿದೆ. ಜೋರೋಗೆ ಈಗ 12 ವರ್ಷವಾಗಿತ್ತು, ಇಷ್ಟು ವರ್ಷಗಳಿಂದ ತ್ರಿಷಾ ಅವರು ಜೋರೋವನ್ನು ತಮ್ಮ ಸ್ವಂತ ಮಗುವಿನ ಹಾಗೆ ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಆದರೆ ಇದೀಗ ಹಬ್ಬದ ದಿನವೆ ಜೋರೋ ಇನ್ನಿಲ್ಲ ವಾಗಿರುವುದು ತ್ರಿಷಾ ಅವರ ಮನಸ್ಸಿಗೆ ಆಘಾತ ತಂದಿದೆ. 12 ವರ್ಷಗಳಿಂದ ಜೊತೆಗಿದ್ದ ಮಗ ಇನ್ಮೇಲೆ ಇರೋದಿಲ್ಲ ಅನ್ನೋ ನೋವಿನಲ್ಲಿದ್ದಾರೆ ನಟಿ ತ್ರಿಷಾ. ಈ ವಿಷಯದ ಬಗ್ಗೆ ಬಹಳ ನೋವಿನಿಂದ, ದುಃಖದಿಂದ ಪೋಸ್ಟ್ ಮಾಡಿದ್ದಾರೆ.
“ಕ್ರಿಸ್ಮಸ್ ಹಬ್ಬದ ದಿವಸ ಬೆಳಗ್ಗೆ ನನ್ನ ಮಗ ಜೋರೋ ಕೊನೆಯುಸಿರೆಳೆದಿದ್ದಾನೆ. ನನ್ನ ಬಗ್ಗೆ ಚೆನ್ನಾಗಿ ತಿಳಿದಿರುವವರಿಗೆ ಗೊತ್ತಿರುತ್ತದೆ, ಜೋರೋ ಇಲ್ಲದೇ ನನ್ನ ಜೀವನ ಶೂನ್ಯದಂತಾಗಿದೆ, ನನ್ನ ಜೀವನಕ್ಕೆ ಯಾವುದೇ ಅರ್ಥವಿಲ್ಲ ಎಂದು.. ನಾನು ಮತ್ತು ನನ್ನ ಇಡೀ ಕುಟುಂಬ ಶಾಕ್ ನಲ್ಲಿದ್ದೇವೆ, ನೋವಿನಲ್ಲಿದ್ದೇವೆ.. ಹಾಗಾಗಿ ನಾನು ಕೆಲ ಸಮಯ ದೂರ ಇರಲಿದ್ದೇನೆ ” ಎಂದು ನಟಿ ತ್ರಿಶಾ ಅವರು ಪೋಸ್ಟ್ ಮಾಡಿದ್ದಾರೆ. ಹಾಗೆಯೇ ಇನ್ನೊಂದು ಪೋಸ್ಟ್ ನಲ್ಲಿ ಜೋರೋ ಫೋಟೋಸ್ ಗಳನ್ನು ಹಂಚಿಕೊಂಡಿದ್ದಾರೆ. ಹಲವು ಸೆಲೆಬ್ರಿಟಿಗಳು ಮತ್ತು ನೆಟ್ಟಿಗರು ಹಾಗೂ ಅಭಿಮಾನಿಗಳು ತ್ರಿಷಾ ಅವರಿಗೇ ಸಮಾಧಾನ ಮಾಡುತ್ತಿದ್ದಾರೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಹಲವಾರು ಜನರು ತ್ರಿಷಾ ಅವರಿಗೆ ಧೈರ್ಯ ತುಂಬುತ್ತಿದ್ದಾರೆ. ಜೋರೋ ನಿನ್ನ ಜೊತೆ ಯಾವಾಗಲೂ ಇರುತ್ತಾನೆ ಎಂದು ಧೈರ್ಯ ತುಂಬುತ್ತಿದ್ದಾರೆ. ಒಂದು ಶ್ವಾನಕ್ಕೆ ಯಾಕಿಷ್ಟು ಪ್ರಾಮುಖ್ಯತೆ ಎನ್ನುವುದು ಹಲವರಿಗೆ ಉತ್ತರ ಸಿಗದ ಪ್ರಶ್ನೆಯಾಗಿ ಉಳಿದಿರುತ್ತದೆ., ಆದರೆ ನಿಜ ಹೇಳಬೇಕು ಎಂದರೆ ಮನುಷ್ಯರಿಗಿಂತ ಅವುಗಳೇ ಮೇಲು. ಮನುಷ್ಯರ ಹಾಗೆ ಅವುಗಳಿಗೆ ದುರಾಸೆ, ದ್ವೇಷ, ನಂಬಿಕೆ ದ್ರೋಹದ ಬುದ್ದಿ ಇದ್ಯಾವುದು ಕೂಡ ಇರುವುದಿಲ್ಲ. ಅವುಗಳಿಗೆ ಪ್ರೀತಿ ಕೊಡೋಕೆ ಮಾತ್ರ ಗೊತ್ತೇ ಹೊರತು, ಇನ್ಯಾವುದೇ ರೀತಿಯಲ್ಲಿ ನೋವು ಕೊಡಲು, ಮೋಸ ಮಾಡಲು , ದ್ವೇಷ ಸಾಧಿಸಲು, ಕೆಟ್ಟದ್ದನ್ನು ಬಯಸಲು ಬರುವುದಿಲ್ಲ.

ಇದೇ ಕಾರಣಕ್ಕೆ ಮನುಷ್ಯರಿಂದ ನೋವು ಅನುಭವಿಸಿರುವ ಹೆಚ್ಚಿನ ಜನರು ಶ್ವಾನಗಳನ್ನು ಹೆಚ್ಚು ಪ್ರೀತಿಸುತ್ತಾರೆ. ಒಂದು ಸಾರಿ ಒಂದು ಶ್ವಾನ ನಿಮ್ಮ ಜೀವನಕ್ಕೆ ಬಂದರೆ, ಅದು ನಿಮ್ಮನ್ನ ಬದಲಾಯಿಸಿಬಿಡುತ್ತದೆ, ಬೇರೆ ಯಾರು ಕೊಡದಷ್ಟು ಪ್ರೀತಿಯನ್ನು ನಿಮಗೆ ಕೊಡುತ್ತದೆ. ನಟಿ ತ್ರಿಷಾ ಅವರ ಬದುಕಿನಲ್ಲಿ ಸಹ ಅದೇ ರೀತಿ ಆಗಿದೆ. ಹಾಗಾಗಿ ತ್ರಿಷಾ ಅವರು ಜೋರೋ ಹೋದಾಗಿನಿಂದ ಬಹಳ ನೋವಿನಲ್ಲಿ ಇದ್ದಾರೆ, ಮನೆಯವರನ್ನ ಕಳೆದುಕೊಂಡಾಗ ಎಷ್ಟು ನೋವಾಗುತ್ತದೆಯೋ, ತ್ರಿಷಾ ಅವರಿಗೂ ಅಷ್ಟೇ ನೋವಾಗಿದೆ. ಆದಷ್ಟು ಬೇಗ ತ್ರಿಷಾ ಅವರು ಈ ನೋವಿನಿಂದ ಹೊರಬರಲಿ ಎಂದು ಹಾರೈಸೋಣ..