ಕನ್ನಡದವರೆ ಆಗಿರುವ ನಟಿ ಸೌಮ್ಯಾ ರಾವ್ ಅವರು ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವುದು ತೆಲುಗಿನಲ್ಲಿ. ಕನ್ನಡದಲ್ಲಿ ಮಹಾಪರ್ವ ಧಾರಾವಾಹಿ ಸೇರಿದಂತೆ ಇನ್ನು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಳಿಕ ತೆಲುಗು ಕಿರುತೆರೆಗೆ ಎಂಟ್ರಿ ಕೊಟ್ಟರು. ಧಾರಾವಾಹಿ ಚಿತ್ರೀಕರಣದ ವೇಳೆ ಚೆನ್ನಾಗಿ ಭಾಷೆ ಕಲಿತ ಇವರಿಗೆ ಜಬರ್ದಸ್ತ್ ಶೋ ನಿರೂಪಣೆ ಮಾಡುವ ಅವಕಾಶ ಸಿಕ್ಕಿತು. ಆ ಶೋ ಇಂದ ಬಹಳಷ್ಟು ಜನಪ್ರಿಯತೆ ಹೆಸರು ಎಲ್ಲವು ಸೌಮ್ಯ ಅವರಿಗೆ ಸಿಕ್ಕಿದೆ. ಇವರು ಕನ್ನಡದವರು ಎನ್ನುವ ವಿಷಯ ಬಹಳಷ್ಟು ಜನರಿಗೆ ಗೊತ್ತಿಲ್ಲ. ಇತ್ತೀಚೆಗೆ ಇವರು ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿ, ಕನ್ನಡ ಕಿರುತೆರೆಯ ಕರಾಳ ಮುಖದ ಅನಾವರಣ ಮಾಡಿದ್ದಾರೆ.

ಶೋನಲ್ಲಿ ಮಾತನಾಡಿರುವ ಸೌಮ್ಯ ಅವರು.. ತಾವು ಮೊದಲು ನ್ಯೂಸ್ ರೀಡರ್ ಆಗಿ ಕೆಲಸ ಶುರು ಮಾಡಿದ್ದು, ಬಳಿಕ ಕಿರುತೆರೆಯಲ್ಲಿ ಅವಕಾಶ ಪಡೆಯಲು ಎಲ್ಲರೂ ಬೇರೆ ಪ್ರಶ್ನೆಗಳನ್ನೇ ಕೇಳುತ್ತಿದ್ದರು ಎಂದು ಹೇಳಿದ್ದಾರೆ. ನಿನಗೆ ಅವಕಾಶ ಕೊಡಿಸಿದರೆ ನನಗೆ ಏನು ಕೊಡುತ್ತೀಯಾ ಎಂದೇ ನೇರವಾಗಿ ಕೇಳುತ್ತಿದ್ದರಂತೆ. ಇನ್ನು ಕೆಲವರು ಫೋನ್ ಮಾಡಿ, ಕಾಂಪ್ರೋಮೈಸ್ ಮಾಡಿಕೊಳ್ಳಬೇಕು ಎಂದು ಹೇಳಿದ್ದು ಇದೆಯಂತೆ. ಹಾಗೆಯೇ ಈಗ ಧಾರಾವಾಹಿಗಳಲ್ಲಿ ಒಳ್ಳೆಯ ಅವಕಾಶಗಳು ಸಿಗುವ ಹಾಗೆ ಮೊದಲು ಸಿಗುತ್ತಿರಲಿಲ್ಲ, ಸಣ್ಣ ಪುಟ್ಟ ಪಾತ್ರಗಳು ಸಿಗುತ್ತಿತ್ತು, ಅದಕ್ಕೆ ಸರಿಯಾಗಿ ಸಂಭಾವನೆ ಕೂಡ ಕೊಡುತ್ತಿರಲಿಲ್ಲ ಎಂದು ಹೇಳಿದ್ದಾರೆ ಸೌಮ್ಯ. ಅವರ ಜೊತೆಗಿದ್ದ ಹಲವರು ಈಗ ಒಳ್ಳೆಯ ಸ್ಥಾನದಲ್ಲಿ ಇದ್ದಾರಂತೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ದೊಡ್ಡ ಕಾರು, ದೊಡ್ಡ ಫ್ಲ್ಯಾಟ್ ಎಲ್ಲವನ್ನು ಹೊಂದಿದ್ದಾರಂತೆ. ಅಂಥದ್ದನ್ನೆಲ್ಲಾ ನೋಡಿದಾಗ ತುಂಬಾ ಆಶ್ಚರ್ಯ ಆಗುತ್ತದೆ ಎನ್ನುತ್ತಾರೆ ಸೌಮ್ಯಾ ರಾವ್. ನನಗೆ ಶಾರ್ಟ್ ಕಟ್ ದಾರಿ ಬೇಡ, ನಿಧಾನ ಆದರೂ ನೇರವಾದ ಒಳ್ಳೆಯ ದಾರಿಯಲ್ಲಿ ಹೋಗುತ್ತೇನೆ ಎನ್ನುತ್ತಾರೆ. ಇನ್ನು ಸಿನಿಮಾ ರಂಗದಲ್ಲಿ ಇದಕ್ಕಿಂತ ಬೇಸರದ ಘಟನೆಗಳು ನಡೆದಿದೆ ಎಂದಿದ್ದಾರೆ. ಗಾಂಧಿನಗರದ ಮೆಟ್ಟಿಲುಗಳ ಮೇಲೆ ಒಬ್ಬೊಬ್ಬ ಹೆಣ್ಣುಮಗಳು ಹೋಗುವ ದಾರಿ ಸುಲಭವಂತು ಅಲ್ಲ ಎನ್ನುತ್ತಾರೆ ನಟಿ ಸೌಮ್ಯಾ. ಒಂದು ಸಿನಿಮಾ ಅವಕಾಶಕ್ಕಾಗಿ ಹೋದಾಗ, ನೇರವಾಗಿಯೇ ಬಿಕಿನಿ ಹಾಕುತ್ತೀಯಾ, ಸೊಂಟದ ಸೈಜ್ ಎಷ್ಟು, ಲಿಪ್ ಕಿಸ್ ದೃಶ್ಯಗಳಲ್ಲಿ ನಟಿಸುತ್ತೀಯಾ ಎಂದು ಕೆಲವು ನಿರ್ದೇಶಕರು, ನಿರ್ಮಾಪಕರು ಕೇಳಿದ್ದರಂತೆ.

ಬಿಕಿನಿ ಹಾಕಿದರೆ ಮಾತ್ರ ಹೀರೋಯಿನ್ ಆಗೋಕೆ ಆಗೋದಾ ಎಂದು ಸೌಮ್ಯಾ ಅವರು ಪ್ರಶ್ನೆ ಮಾಡುತ್ತಾರೆ. ಆದರೆ ಇನ್ನೂ ಕೆಲವು ಹೆಣ್ಣುಮಕ್ಕಳು ಆ ಸಮಯದಲ್ಲಿ ಎಲ್ಲದಕ್ಕೂ ಸಹಕಾರ ನೀಡಿ, ಈಗ Me too ಎಂದು ಬರುತ್ತಾರೆ, ಅವರ ಹೆಸರುಗಳನ್ನ ಈಗ ತೆಗೆದುಕೊಳ್ಳೋಕೆ ಇಷ್ಟವಿಲ್ಲ ಎಂದಿದ್ದಾರೆ. ಈ ರೀತಿಯಾಗಿ ಸೌಮ್ಯಾ ಅವರು ಕನ್ನಡ ಕಿರುತೆರೆಯ ಕರಾಳ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಹಲವರು ನಮ್ಮಲ್ಲಿ ಈ ಥರ ಇಲ್ಲ, ಕನ್ನಡದಲ್ಲಿ ಇಂಥ ಸಮಸ್ಯೆಗಳಿಲ್ಲ ಅಂದುಕೊಂಡಿದ್ದಾರೆ. ಆದರೆ ಎಲ್ಲಾ ಭಾಷೆಯ ಚಿತ್ರರಂಗದಲ್ಲೂ ಕೂಡ ಈ ಒಂದು ಸಮಸ್ಯೆ ಇದ್ದೇ ಇದೆ. ಹಲವಾರು ನಟಿಯರು ಇದರಿಂದ ದೂರ ಉಳಿದಿದ್ದಾರೆ. ಅಂಥವರಲ್ಲಿ ಸೌಮ್ಯಾ ಅವರು ಕೂಡ ಒಬ್ಬರು.
ಸೌಮ್ಯಾ ಅವರು ಕನ್ನಡದಲ್ಲಿ ನಟಿಸಿ ಬಹಳ ವರ್ಷಗಳೇ ಕಳೆದು ಹೋಗಿದೆ. ತೆಲುಗು ಧಾರಾವಾಹಿಯಲ್ಲಿ ಸಿಕ್ಕ ಜನಪ್ರಿಯತೆ ತೆಲುಗು ಶೋ ಇಂದ ಇನ್ನು ಜಾಸ್ತಿಯಾಗಿದೆ. ಜಬರ್ದಸ್ತ್ ಶೋ ನೋಡುವ ಅನೇಕರು, ಸೌಮ್ಯಾ ಅವರನ್ನು ಪ್ರೀತಿಸುತ್ತಾರೆ, ಎಲ್ಲೇ ಹೋದರು ಆ ಪ್ರೀತಿ, ವಿಶ್ವಾಸವನ್ನು ಕೊಡುತ್ತಾರಂತೆ. ಈ ಪ್ರೀತಿ, ಜನರ ಪ್ರೋತ್ಸಾಹ ಸಾಕು ಎಂದು ಹೇಳುತ್ತಾರೆ ನಟಿ ಸೌಮ್ಯಾ ರಾವ್. ಕನ್ನಡದ ಪ್ರತಿಭೆ ಒಬ್ಬರು ಈ ರೀತಿ ಅನ್ಯಭಾಷೆಯಲ್ಲಿ ಹೆಸರು ಮಾಡಿ, ನಿರೂಪಕಿಯಾಗಿ ಗುರುತಿಸಿಕೊಂಡಿರುವುದು ಒಳ್ಳೆಯ ವಿಷಯ. ಹಾಗೆಯೇ ಕನ್ನಡದಲ್ಲಿ ಸಹ ಇವರಿಗೆಲ್ಲ ಒಳ್ಳೆಯ ಅವಕಾಶಗಳು, ಒಳ್ಳೆಯ ಪಾತ್ರಗಳು ಸಿಗಬೇಕು. ಆಗ ಕನ್ನಡದವರು ಕನ್ನಡದಲ್ಲೇ ಉಳಿದುಕೊಳ್ಳುತ್ತಾರೆ.