ಕನ್ನಡದ ಖ್ಯಾತ ನಟಿ ಶುಭಾ ಪೂಂಜಾ ಅವರು ತಾಯಿಯನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ. ಅಮ್ಮನನ್ನು ಕಳೆದುಕೊಂಡ ನೋವು ಎಲ್ಲರಿಗೂ ಒಂದೇ ರೀತಿ, ತಾಯಿ ಅನ್ನೋಳು ನಮ್ಮ ಜೀವನದ ಅತ್ಯಂತ ಮುಖ್ಯವಾದ ವ್ಯಕ್ತಿ. ಆವರಿಲ್ಲದೆ ನಾವ್ಯಾರು ಇರೋದಕ್ಕೆ ಸಾಧ್ಯವಿಲ್ಲ. ನಿಸ್ವಾರ್ಥ ಪ್ರೀತಿ ಸಿಗೋದು ಈ ಒಂದು ಜೀವದಿಂದ ಮಾತ್ರ. ಪ್ರಪಂಚದಲ್ಲಿ ಕೆಟ್ಟ ಮಕ್ಕಳು ಇರಬಹುದು ಆದರೆ ಕೆಟ್ಟ ತಾಯಿ ಇರೋದಕ್ಕೆ ಸಾಧ್ಯವೇ ಇಲ್ಲ. ಅಂಥ ತಾಯಿಯೇ ಇಲ್ಲದೇ ಹೋದರೆ ಜೀವನ ಏನಾಗಬೇಡ? ಯಾವ ಪರಿಸ್ಥಿತಿಗೆ ತಲುಪಬೇಡ? ಮಕ್ಕಳು ಎಷ್ಟೇ ಬೆಳೆದು ದೊಡ್ಡವರಾದರು ತಾಯಿಗೆ ಅವರು ಪುಟ್ಟ ಮಕ್ಕಳೇ ಆಗಿರುತ್ತಾರೆ. ಮಕ್ಕಳನ್ನು ಅಷ್ಟು ಪ್ರೀತಿಸುವ ತಾಯಿ ಇಲ್ಲ ಎಂದರೆ ಆ ಮಕ್ಕಳಿಗೆ ಪ್ರಪಂಚವೇ ನಿಂತ ಹಾಗೆ ಅನ್ನಿಸದೇ ಇರದು. ಈಗ ಶುಭಾ ಪೂಂಜಾ ಅವರು ಕೂಡ ಅದೇ ನೋವಿನಲ್ಲಿದ್ದಾರೆ. ಅಮ್ಮನನ್ನು ಕಳೆದುಕೊಂಡು ಆ ನೋವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.
ಶುಭಾ ಪೂಂಜಾ ಅವರ ತಾಯಿ ವಿಧಿವಶರಾಗಿರುವುದು ಮಾರ್ಚ್ 6ರಂದು, ಅಂದರೆ ನಿನ್ನೆ. ಕಳೆದ 4 ತಿಂಗಳುಗಳಿಂದ ಇವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರು. ನಿಮೋನಿಯಾ ಅಟ್ಯಾಕ್ ಆಗಿ ಅವರ ಆರೋಗ್ಯ ಹದಗೆಟ್ಟಿತ್ತು ಎನ್ನಲಾಗಿದೆ. ಲಂಗ್ಸ್ ಒಳಗೆ ನೀರು ಸೇರಿಕೊಂಡು, ಅದು ಆರೋಗ್ಯದ ವಿಪರೀತ ಪರಿಣಾಮ ಬೀರಿತ್ತು ಎನ್ನಲಾಗಿದೆ. 4 ತಿಂಗಳುಗಳಿಂದ ಈ ಸಮಸ್ಯೆಯ ಜೊತೆಗೆ ಹೋರಾಟ ಮಾಡುತ್ತಿದ್ದ ಶುಭಾ ಪೂಂಜಾ ಅವರ ತಾಯಿ ಕೊ*ನೆಯುಸಿರೆಳೆದಿದ್ದಾರೆ. ಅಮ್ಮನನ್ನು ಕಳೆದುಕೊಂಡ ನೋವಿನಲ್ಲಿ ಶುಭಾ ಪೂಂಜಾ ಅವರಿಗೆ ದಿಕ್ಕೆ ತೋಚದ ಹಾಗೆ ಆಗಿದೆ. ತಮ್ಮ ನೋವನ್ನು ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ ಶುಭಾ. ಅಮ್ಮ ನನ್ನನ್ನು ಯಾಕೆ ಬಿಟ್ಟು ಹೋದೆ ಎಂದು ನೋವನ್ನು ಹೊರ ಹಾಕಿದ್ದಾರೆ.

“ಅಮ್ಮ ನನ್ನ ನೀನು ಯಾಕೆ ಬಿಟ್ಟು ಹೋದೆ ನೀನು ಇಲ್ಲದೆ ನನಗೆ ಜೀವನವಿಲ್ಲ.. ನಿನ್ನ ಬಿಟ್ಟು ನನಗೆ ಬದುಕಕ್ಕೆ ಬರೋದು ಇಲ್ಲ 24 ಗಂಟೆ ನಿನ್ನ ಜೊತೇನೆ ಇರುತ್ತಿದ್ದೆ ಈಗ ನಾನು ಏನು ಮಾಡಲಿ.. ಎಲ್ಲಿ ಹೋಗಲಿ ಯಾರಿಗೋಸ್ಕರ ವಾಪಸ್ ಮನೆಗೆ ಬರಲಿ. ನೀನು ನನ್ನ ಯಾಕೆ ಬಿಟ್ಟು ಹೋದೆ ನನ್ನ ಇಡೀ ಜೀವನಕ್ಕೆ ಅರ್ಥವಿಲ್ಲದೆ ಆಯ್ತು.. ನನ್ನ ಇಡೀ ಜೀವನವೇ ನೀನಾಗಿದ್ದೆ ನನ್ನ ಯಾಕೆ ಬಿಟ್ಟು ಹೋದೆ..” ಎಂದು ಬರೆದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗೆಯೇ ಅಮ್ಮನ ಜೊತೆಗಿನ ಕೆಲವು ಫೋಟೋಸ್ ಗಳನ್ನು ಸಹ ಶೇರ್ ಮಾಡಿಕೊಂಡಿದ್ದಾರೆ ಶುಭಾ ಪೂಂಜಾ. ಅವರು ಬರೆದಿರುವ ಒಂದೊಂದು ಸಾಲುಗಳನ್ನು ಓದಿದರೆ, ಅವರ ಮನಸ್ಸಿನಲ್ಲಿ ಎಷ್ಟು ನೋವಿದೆ ಎನ್ನುವುದು ನಮಗೆ ಅರ್ಥವಾಗುತ್ತದೆ.
ಶುಭಾ ಪೂಂಜಾ ಅವರು ಇದ್ದಿದ್ದು ಬೆಂಗಳೂರಿನಲ್ಲಿ ಆದರೆ ಇವರ ಕುಟುಂಬ ಮೂಲತಃ ಮಂಗಳೂರಿನವರು. ಶುಭಾ ಪೂಂಜಾ ಅವರ ತಾಯಿಗೆ ಒಂದು ಕೊನೆಯ ಆಸೆ ಇತ್ತಂತೆ, ತಮ್ಮ ಅಂತ್ಯ ಸಂಸ್ಕಾರ ಮಂಗಳೂರಿನಲ್ಲಿ ನಡೆಯಬೇಕು ಎಂದು. ಹಾಗಾಗಿ ಶುಭಾ ಪೂಂಜಾ ಅವರ ಕುಟುಂಬ ಅವರ ತಾಯಿಯ ಪಾರ್ಥಿವ ಶರೀರವನ್ನು ಮಂಗಳೂರಿಗೆ ತೆಗೆದುಕೊಂಡು ಹೋಗಿ, ಅಲ್ಲಿನ ಸಂಪ್ರದಾಯದ ಪ್ರಕಾರ ಅವರ ತಾಯಿಯ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ತಾಯಿಯ ಕೊನೇ ಆಸೆಯನ್ನು ಶುಭಾ ಪೂಂಜಾ ಅವರು ಈಡೇರಿಸಿದ್ದಾರೆ. ತಂದೆ ತಾಯಿ ಇದ್ದಾಗಲೇ ಅವರನ್ನು ಅರ್ಥ ಮಾಡಿಕೊಳ್ಳಬೇಕು, ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಈಗಿನ ಪ್ರಪಂಚದಲ್ಲಿ ಯಾವಾಗ ಏನಾಗುತ್ತದೆ ಎಂದು ಊಹೆ ಕೂಡ ಮಾಡೋದಕ್ಕೆ ಸಾಧ್ಯವಿಲ್ಲ.

ಜೀವನ ಎಷ್ಟು ಅನಿರೀಕ್ಷಿತ ಆಗಿದೆ ಅಂದ್ರೆ ಇವತ್ತು ಇದ್ದವರು ನಾಳೆ ಇಲ್ಲ ಇರುತ್ತಾರೆ ಎಂದು ಯಾವ ನಂಬಿಕೆಯೂ ಇಲ್ಲ. ನಮ್ಮ ತಂದೆ ತಾಯಿಯರೆ ಆಗಲಿ, ಹಿರಿಯರೇ ಆಗಲಿ.. ಎಲ್ಲರನ್ನು ಪ್ರೀತಿಯಿಂದ ನೋಡಿಕೊಳ್ಳಿ. ಎಲ್ಲರೊಡನೆ ಪ್ರೀತಿಯಿಂದ ಇರಿ. ಪ್ರೀತಿ ಕೊಟ್ಟರೆ ಅಬ್ಬಬ್ಬಾ ಅಂದ್ರೆ ಪ್ರೀತಿ ಅಷ್ಟೇ ವಾಪಸ್ ಸಿಗೋದು ಇನ್ನೇನು ಆಗೋದಿಲ್ಲ. ಸ್ವಾರ್ಥವೇ ತುಂಬಿರೋ ಪ್ರಪಂಚದಲ್ಲಿ ಪ್ರೀತಿ ಹಂಚೋದ್ರಿಂದ ಒಂದಷ್ಟು ಜನರಿಗೆ ಒಳ್ಳೆಯದು ಆಗಬಹುದು. ಅದೇ ನಿಟ್ಟಿನಲ್ಲಿ ಸಾಗೋಣ. ಇನ್ನು ಶುಭಾ ಪೂಂಜಾ ಅವರ ಬಗ್ಗೆ ಹೇಳುವುದಾದರೆ ಇವರು ಒಂದು ದಶಕಕ್ಕಿಂತ ಹೆಚ್ಚಿನ ಸಮಯದಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವವರು. ಮೊಗ್ಗಿನ ಮನಸ್ಸು ಸಿನಿಮಾ ಇವರು ನಟಿಯಾಗಿ ಅಭಿನಯಿಸಿದ ಮೊದಲ ಸಿನಿಮಾ. ಈ ಸಿನಿಮಾದಲ್ಲಿನ ಅಭಿನಯಕ್ಕೆ ಪ್ರಶಸ್ತಿಯನ್ನು ಕೂಡ ಪಡೆದರು.
ಒಳ್ಳೆಯ ಪ್ರತಿಭೆ ಇರುವ ಶುಭಾ ಅವರು ಕೆಲವು ಒಳ್ಳೆಯ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದರಿಂದ ಒಳ್ಳೆಯ ಹೆಸರು ಮತ್ತು ಜನಪ್ರಿಯತೆಯನ್ನು ಕೂಡ ಪಡೆದುಕೊಂಡಿದ್ದಾರೆ. ಕಮರ್ಶಿಯಲ್ ಸಿನಿಮಾಗಳು ಮತ್ತು ಕಲಾತ್ಮಕ ಸಿನಿಮಾಗಳು ಎರಡರಲ್ಲೂ ನಟಿಸಿ ಸಕ್ಸಸ್ ಕಂಡಿದ್ದಾರೆ ಶುಭಾ. ಆದರೆ ಇವರಿಗೆ ಜನಪ್ರಿಯತೆ ಹೆಚ್ಚಾಗಿದ್ದು ಬಿಗ್ ಬಾಸ್ ಶೋಗೆ ಬಂದ ನಂತರ. ಬಿಗ್ ಬಾಸ್ ಮನೆಯ ಒಳಗೆ ಇದ್ದಾಗಲೇ ಇವರು ಎಷ್ಟು ಮುಗ್ಧರು ಎನ್ನುವುದು ಎಲ್ಲರಿಗೂ ಗೊತ್ತಾಗಿತ್ತು. ಮಂಜು ಪಾವಗಡ ಹಾಗೂ ಶುಭಾ ಅವರ ಫ್ರೆಂಡ್ಶಿಪ್ ಇದೆಲ್ಲವೂ ಜನರಿಗೆ ತುಂಬಾ ಇಷ್ಟವಾಗಿತ್ತು. ಹಾಗೆಯೇ ಶುಭಾ ಪೂಂಜಾ ಅವರು ತಮಾಷೆಯಾಗಿ ಕೊಡುತ್ತಿದ್ದ ಎಂಟರ್ಟೈನ್ಮೆಂಟ್, ಹೇಳುತ್ತಿದ್ದ ಜೋಕ್ ಗಳು ಇದೆಲ್ಲವೂ ವೀಕ್ಷಕರ ಫೇವರೆಟ್. ಇನ್ನು ಬಿಗ್ ಬಾಸ್ ಶೋ ಇಂದ ಹೊರಗಡೆ ಬರುತ್ತಿದ್ದ ಹಾಗೆ ತಮ್ಮ ಬಹುಕಾಲದ ಗೆಳೆಯನ ಜೊತೆಗೆ ಮದುವೆಯಾದರು.
ಇತ್ತೀಚೆಗೆ ಮದುವೆಯಾಗಿ ಸಂತೋಷವಾದ ಜೀವನ ನಡೆಸುತ್ತಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಇತ್ತೀಚೆಗೆ ಶುರುವಾದ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ಶುಭಾ ಪೂಂಜಾ ಅವರು ಹುಡುಗಿಯರ ಟೀಮ್ ನ ಮೆಂಟರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಶೋ ಇಂದ ಕೂಡ ಇವರಿಗೆ ಒಳ್ಳೆಯ ಜನಪ್ರಿಯತೆ ಸಿಗುತ್ತಿದೆ. ಹೀಗೆ ಜೀವನ ಚೆನ್ನಾಗಿ ಹೋಗುತ್ತಿದೆ ಎಂದುಕೊಳ್ಳುವ ಸಮಯದಲ್ಲೇ ಇವರು ತಾಯಿಯನ್ನು ಕಳೆದುಕೊಂಡಿರುವುದು ನಿಜಕ್ಕೂ ನೋವಿನ ವಿಷಯ. ಅಮ್ಮನನ್ನು ಕಳೆದುಕೊಳ್ಳುವ ನೋವು ಎಂದಿಗೂ ಮಕ್ಕಳನ್ನು ಬಿಟ್ಟು ಹೋಗುವುದಿಲ್ಲ. ಅಂಥಾ ನೋವಿನಲ್ಲಿ ಈಗ ಶುಭಾ ಪೂಂಜಾ ಅವರು ಇದ್ದಾರೆ. ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ಶುಭಾ ಪೂಂಜಾ ಹಾಗೂ ಅವರ ಕುಟುಂಬಕ್ಕೆ ನೀಡಲಿ.