ನಟಿ ಶುಭ ಪೂಂಜಾ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ಶೋ ನ ನಂತರ ನೈಜ ಘಟನೆ ಆಧಾರಿತವಾದ ಸಿನಿಮಾವೊಂದರಲ್ಲಿ ಪಾತ್ರ ಮಾಡಿದ್ದಾರೆ. ಶುಭ ಪೂಂಜಾ ಹಾಗೂ ರಜನಿ ಇವರಿಬ್ಬರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ “ಅಂಬುಜಾ “ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದೆ. ಇದು ನೈಜ ಘಟನೆ ಆಧಾರಿತ ಸಿನಿಮಾವಾಗಿದ್ದು, ಟ್ರೈಲರ್ ಮೈ ರೋಮಾಂಚನಗೊಳಿಸುವಂತಿದೆ. ಟ್ರೈಲರ್ ಬಿಡುಗಡೆ ವೇಳೆ ಮಾತನಾಡಿದ ಅಂಬುಜಾ ಸಿನಿಮಾದ ನಿರ್ದೇಶಕ, “ಇಂದೊಂದು ಒಳ್ಳೆಯ ಕಥೆ. ಜನ ಈ ಸಿನಿಮಾವನ್ನು ಕಾಣುವಾಗ ಬೆಚ್ಚಿ ಬೀಳುವುದಂತೂ ಖಂಡಿತ.

ನಾವು ಈ ಸಿನಿಮಾದ ಪ್ರಮೋಷನ್ ಗೆಂದು ಹೇಳುತ್ತಿಲ್ಲ. ಸಿನಿಮಾ ನೋಡಿದ ಮೇಲೆ ನಿಮಗೆ ಅರಿವಾಗುತ್ತದೆ. ಅಂತಹ ಭರವಸೆಯನ್ನು ಇಡೀ ಚಿತ್ರತಂಡ ಕೊಡುತ್ತೇವೆ “ಎಂದಿದ್ದಾರೆ.
ಈ ಸಿನಿಮಾದ ಮುಖ್ಯ ಕಲಾವಿದರಾದ ಶುಭ ಪೂಂಜಾ ಮತ್ತು ಅಮೃತವರ್ಷಿಣಿ ಖ್ಯಾತಿಯ ರಜನಿ ತಮ್ಮ ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಈಗಾಗಲೇ ಟ್ರೈಲರ್ ನೋಡಿ ಕೆಲವರಿಗೆ ನಡುಕ ಶುರುವಾಗಿತ್ತು. ಸಿನಿಮಾದ ಬಗ್ಗೆ ಚರ್ಚೆಯೂ ನಡೆದಿತ್ತು”ಎಂದಿದ್ದಾರೆ ಸಿನಿಮಾದ ನಿರ್ದೇಶಕ ಶ್ರೀನಿ ಹನುಮಂತರಾಜು.
ನಿರ್ಮಾಪಕರೂ ಈ ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಕೊಟ್ಟಿದ್ದಾರೆ. “ಮೊದಲು ಕಥೆ ಬರೆಯುವಾಗ ಸಿನಿಮಾ ಇಷ್ಟೊಂದು ಚೆನ್ನಾಗಿ ಮೂಡಿ ಬರುತ್ತದೆ ಎಂದುಕೊಂಡಿರಲಿಲ್ಲ. ಎಲ್ಲರ ಶ್ರಮದಿಂದ ಒಳ್ಳೆಯ ರೀತಿಯಲ್ಲಿ ಬರಲು ಸಾಧ್ಯವಾಗಿದೆ. ಜನ ನೋಡಿ ಮೆಚ್ಚುಗೆ ವ್ಯಕ್ತ ಪಡಿಸಬೇಕು ಅಷ್ಟೆ “ಎಂದಿದ್ದಾರೆ ನಿರ್ಮಾಪಕರು. ಇದೇ ತಿಂಗಳ 21ರಂದು ಸಿನಿಮಾ ಬಿಡುಗಡೆಯಾಗಲಿದೆ. ಕ್ರೈಂ, ಹಾರರ್, ಸಸ್ಪೆನ್ಸ್ , ಕಾಮಿಡಿ, ಸೆಂಟಿಮೆಂಟ್ ಎಲ್ಲ ಅಂಶಗಳನ್ನು ಸಿನಿಮಾದಲ್ಲಿದೆ. ಕುಟುಂಬವೆಲ್ಲ ಒಟ್ಟಿಗೆ ಹೋಗಿ ನೋಡುವಂತಹ ಚಿತ್ರ ಅಂಬುಜಾ. ಟ್ರೈಲರ್ ಮೂಲಕವೇ ಕುತೂಹಲ ಮೂಡಿಸಿದ “ಅಂಬುಜಾ ” ವೀಕ್ಷಕರಿಗೆ ಇಷ್ಟವಾಗಿ ಗೆಲುವಿನ ಮೆಟ್ಟಿಲೇರಬಹುದು ಎಂದು ಇಡೀ ಚಿತ್ರತಂಡ ಆಶೆ ಪಡುತ್ತಿದೆ.