ಪ್ರಸ್ತುತ ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ಹೀರೋಯಿನ್ ಗಳ ಪೈಕಿ ಅತಿಹೆಚ್ಚು ಸಕ್ಸಸ್ ಕಾಣುವುದರ ಜೊತೆಗೆ ಒಳ್ಳೊಳ್ಳೆಯ ಪಾತ್ರಗಳಲ್ಲಿ ನಟಿಸುತ್ತಿರುವವರು ಸಾಯಿಪಲ್ಲವಿ. ಇವರು ಒಪ್ಪುವ ಪಾತ್ರಗಳೆಲ್ಲವು ನಮ್ಮ ಮನಸ್ಸಿಗೆ ಬಹಳ ಹತ್ತಿರ ಎನ್ನಿಸುವಂಥ ಪಾತ್ರಗಳು. ನಮ್ಮ ಪಕ್ಕದ ಮನೆಯ ಹುಡುಗಿ, ನಮ್ಮ ಮನೆಯ ಹುಡುಗಿ ಎನ್ನಿಸುವಂಥ ಪಾತ್ರಗಳಲ್ಲಿ ಸಾಯಿಪಲ್ಲವಿ ನಟಿಸುತ್ತಾರೆ. ಇವರು ಒಬ್ಬ ನಟಿಯಾಗಿ ಮಾತ್ರವಲ್ಲ ಒಬ್ಬ ವ್ಯಕ್ತಿತ್ವವಾಗಿ ಕೂಡ ಜನರಿಗೆ ಬಹಳ ಇಷ್ಟವಾಗುತ್ತಾರೆ. ಇವರ ಸರಳ ಸ್ವಭಾವ ಎಲ್ಲರ ಮೆಚ್ಚುಗೆ ಪಡೆಯುತ್ತದೆ. ಆದರೆ ಈಗ ಸುಳ್ಳು ಸುದ್ದಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ ಪಲ್ಲವಿ.

ನಟಿ ಸಾಯಿಪಲ್ಲವಿ ಅವರು ಚಿತ್ರರಂಗಕ್ಕೆ ಪರಿಚಯವಾಗಿದ್ದು ಮಲಯಾಳಂ ಸಿನಿಮಾ ಪ್ರೇಮಂ ಮೂಲಕ. ಅದಕ್ಕಿಂತ ಮೊದಲು ಕೆಲವು ಡ್ಯಾನ್ಸ್ ಶೋಗಳಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು ಸಹ, ನಾಯಕಿಯಾಗಿ ಇವರು ಮೊದಲು ಅಭಿನಯಿಸಿದ್ದು ಪ್ರೇಮಂ ಸಿನಿಮಾದಲ್ಲಿ. ಈ ಸಿನಿಮಾ ಎಷ್ಟು ದೊಡ್ಡ ಹಿಟ್ ಆಯಿತು. ಸಾಯಿಪಲ್ಲವಿ ಅವರಿಗೆ ಎಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ತಂದುಕೊಟ್ಟಿತು ಎನ್ನುವುದು ನಮಗೆ ಗೊತ್ತೇ ಇದೆ. ಇದಾದ ಬಳಿಕ ಅವರು ತಿರುಗಿ ನೋಡಿದ್ದೆ ಇಲ್ಲ. ತೆಲುಗು, ತಮಿಳು, ಮಲಯಾಳಂ ಎಲ್ಲಾ ಭಾಷೆಗಳಲ್ಲಿ ನಟಿಸಿ, ಸ್ಟಾರ್ ಆಗಿದ್ದಾರೆ. ಉತ್ತಮವಾದ ಪಾತ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಕನ್ನಡದಲ್ಲಿ ಇನ್ನು ಕೂಡ ಸ್ಟ್ರೇಟ್ ಸಿನಿಮಾ ಮಾಡಿಲ್ಲದೇ ಹೋದರು ಸಹ, ಗಾರ್ಗಿ ಸಿನಿಮಾದ ಕನ್ನಡ ವರ್ಷನ್ ಅಚ್ಚುಕಟ್ಟಾಗಿ ಕನ್ನಡದಲ್ಲಿ ಡಬ್ ಮಾಡಿ, ಕನ್ನಡದಲ್ಲಿ ಕೂಡ ಸಿನಿಮಾವನ್ನು ಪ್ರೊಮೋಟ್ ಮಾಡಿ, ಹಲವು ಕನ್ನಡ ಸಂದರ್ಶನಗಳಲ್ಲಿ ಪಾಲ್ಗೊಂಡು ಕನ್ನಡಿಗರ ಮನಸ್ಸಿನಲ್ಲಿ ಕೂಡ ಸ್ಥಾನ ಗಳಿಸಿಕೊಂಡರು. ಇವರನ್ನು ಕಂಡರೆ ಎಲ್ಲರಿಗೂ ಒಂದು ರೀತಿಯ ಗೌರವ ಮನೋಭಾವ. ನೋಡಿದ ತಕ್ಷಣವೇ ಇಷ್ಟ ಆಗುವಂಥ ವ್ಯಕ್ತಿತ್ವ ಎಂದು ಹೇಳಿದರು ಕೂಡ ತಪ್ಪಲ್ಲ. ಹಾಗೆಯೇ ಇವರು ತುಂಬಾ ಒಳ್ಳೆ ಹುಡುಗಿ ಕೂಡ ಹೌದು. ಇಂಥ ಸಾಯಿಪಲ್ಲವಿ ಅವರ ವಿರುದ್ಧ ಕೂಡ ಕೆಲವು ಸಾರಿ ಕೆಲವು ಗಾಸಿಪ್ ಗಳು ಹರಿದಾಡಿವೆ.

ಇವರು ನೀಡುವ ಹೇಳಿಕೆಗಳನ್ನು ತಿರುಚಿ, ಅವರಿಗೆ ಬೇಕಾದ ಹಾಗೆ ಮೀಡಿಯಾಗಳು ಬಳಸಿಕೊಂಡು, ಗಾಸಿಪ್ ಗಳನ್ನು ಕ್ರಿಯೇಟ್ ಮಾಡಿರುವ ಘಟನೆಗಳು ನಡೆದಿದೆ. ಆದರೆ ಸಾಯಿಪಲ್ಲವಿ ಅವರು ಇದೆಲ್ಲದರಿಂದ ದೂರ ಉಳಿಯಲು ಬಯಸುತ್ತಾರೆ, ಸಾಮಾನ್ಯವಾಗಿ ಯಾವುದೇ ಗಾಸಿಪ್ ಗಳಿಗೆ ಸೊಪ್ಪು ಹಾಕಿ, ಅವುಗಳಿಗೆ ಅವರು ರಿಯಾಕ್ಟ್ ಮಾಡುವುದಿಲ್ಲ. ಆದರೆ ಇದೆ ಮೊದಲ ಸಾರಿ ಸಾಯಿಪಲ್ಲವಿ ಅವರು ತಮ್ಮ ಬಗ್ಗೆ ಬಂದಿರುವ ಒಂದು ಗಾಸಿಪ್ ಬಗ್ಗೆ ಖಾರವಾಗಿ ರಿಯಾಕ್ಟ್ ಮಾಡಿದ್ದು, ಮೀಡಿಯಾದವರಿಗೆ ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ. ಈ ವಿಚಾರ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಟ್ವೀಟ್ ಮಾಡುವ ಮೂಲಕ ಎಚ್ಚರಿಕೆ ನೀಡಿದ್ದಾರೆ ಪಲ್ಲವಿ.
ಇತ್ತೀಚೆಗೆ ತಮಿಳು ಮಾಧ್ಯಮ ಒಂದು ಸಾಯಿಪಲ್ಲವಿ ಅವರ ಬಗ್ಗೆ ಒಂದು ವರದಿ ಬರೆದಿದೆ, ಅದೇನೆಂದರೆ ಸಾಯಿಪಲ್ಲವಿ ಅವರು ಹಿಂದಿಯ ರಾಮಾಯಣದಲ್ಲಿ ಸೀತೆಯ ಪಾತ್ರದಲ್ಲಿ ನಟಿಸುತ್ತಿರುವ ವಿಷಯ ಗೊತ್ತೇ ಇದೆ. ಸಾಯಿಪಲ್ಲವಿ ಅವರು ಸೀತೆಯ ಪಾತ್ರದಲ್ಲಿ ನಟಿಸುವುದು ಬೇಡ ಎಂದು ಹಲವರು ವಿರೋಧ ಮಾಡಿದ್ದರು, ಅವೆಲ್ಲವನ್ನೂ ಬದಿಗಿಟ್ಟು ಚಿತ್ರತಂಡ ಇವರನ್ನೇ ನಾಯಕಿಯಾಗಿ ಆಯ್ಕೆ ಮಾಡಿದೆ, ಇದೇ ಸಿನಿಮಾದಲ್ಲಿ ಯಶ್ ಅವರು ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಕುರಿತಾಗಿ, ಸಾಯಿಪಲ್ಲವಿ ಅವರು ಸೀತೆಯ ಪಾತ್ರದಲ್ಲಿ ನಟಿಸುವುದಕ್ಕಾಗಿ ನಾನ್ ವೆಜ್ ಸೇವನೆ ಬಿಟ್ಟಿದ್ದಾರೆ ಎಂದು ವರದಿ ಮಾಡಲಾಗಿದೆ. ಇದು ಸುಳ್ಳು ಸುದ್ದಿ ಎಂದು ಹೇಳಲಾಗುತ್ತಿದೆ.
Most of the times, Almost every-time, I choose to stay silent whenever I see baseless rumours/ fabricated lies/ incorrect statements being spread with or without motives(God knows) but it’s high-time that I react as it keeps happening consistently and doesn’t seem to cease;… https://t.co/XXKcpyUbEC
— Sai Pallavi (@Sai_Pallavi92) December 11, 2024
ಹೌದು, ನಟಿ ಸಾಯಿಪಲ್ಲವಿ ಅವರು ಹುಟ್ಟಿದಾಗಿನಿಂದಲೂ ಸಸ್ಯಾಹಾರಿ ಆಗಿದ್ದು, ಅವರು ಮಾಂಸಾಹಾರ ಸೇವನೆಯನ್ನೇ ಮಾಡಿಲ್ಲ, ಹಾಗಿದ್ದರೂ ಅವರ ಬಗ್ಗೆ ಇಂಥ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವ ಕಾರಣ ಸಾಯಿಪಲ್ಲವಿ ಅವರು ಸಾಮಾನ್ಯವಾಗಿ ನಾನು ಗಾಸಿಪ್ ಗಳಿಂದ ದೂರ ಇರಲು ಬಯಸುತ್ತೇನೆ, ಆದರೆ ಪದೇ ಪದೇ ನನ್ನ ಬಗ್ಗೆ ಈ ರೀತಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದರೆ, ನಿಮ್ಮ ವಿರುದ್ಧ ಲೀಗಲ್ ಆಕ್ಷನ್ ತೆಗೆದುಕೊಳ್ಳಬೇಕಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ಸಾಯಿಪಲ್ಲವಿ ಅವರು ಇಷ್ಟು ಗರಂ ಆಗಿರುವುದನ್ನು ಯಾರು ಕೂಡ ನೋಡಿರಲಿಲ್ಲ, ಇದೇ ಮೊದಲ ಬಾರಿ ಆಗಿದ್ದು, ಅಭಿಮಾನಿಗಳು ಕೂಡ ಶಾಕ್ ಆಗಿದ್ದಾರೆ.