ಕನ್ನಡದ ಹುಡುಗಿ ಪ್ರೇರಣಾ ಕಂಬಮ್ ತೆಲುಗು ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಪ್ರೇರಣಾ ಅವರಿಗೆ ತೆಲುಗು ಬಿಗ್ ಬಾಸ್ ಇಂದ ಎಷ್ಟರ ಮಟ್ಟಿಗೆ ಜನಪ್ರಿಯತೆ ಸಿಕ್ಕಿದೆ ಎಂದು ನಮಗೆಲ್ಲ ಗೊತ್ತೇ ಇದೆ. ಕನ್ನಡದ ಹುಡುಗಿ ತೆಲುಗು ಭಾಷೆಯಲ್ಲಿ ಇಷ್ಟು ಜನಪ್ರಿಯತೆ ಪಡೆದು, ಜನರ ಪ್ರೀತಿಯನ್ನು ಗಳಿಸಿಕೊಂಡಿರುವುದು ಬಹಳ ಸಂತೋಷದ ವಿಷಯ. ಪ್ರೇರಣಾ ಅವರು ಬಹಳ ಕ್ಯೂಟ್ ಆದ ಸುಂದರವಾದ ಹುಡುಗಿ, ಆದರೆ ಇವರು ನಾಲ್ಕು ದಿನ ಆದರೂ ಸ್ನಾನ ಮಾಡುವುದಿಲ್ಲವಂತೆ. ಈ ವಿಷಯವನ್ನು ಪ್ರೇರಣಾ ಅವರ ಪತಿ ರಿವೀಲ್ ಮಾಡಿದ್ದು, ಈ ವಿಚಾರ ಕೇಳಿದ ಆಂಕರ್ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಅಸಲಿ ವಿಚಾರ ಏನು ಎಂದು ತಿಳಿಯೋಣ.

ಪ್ರೇರಣಾ ಅವರು ನಟನೆ ಶುರು ಮಾಡಿದ್ದು ಕನ್ನಡ ಕಿರುತೆರೆಯ ಮೂಲಕ. ಬಹಳ ಖ್ಯಾತಿ ಪಡೆದು ಯಶಸ್ವಿಯಾದ ಹರ ಹರ ಮಹಾದೇವ ಧಾರಾವಾಹಿಯಲ್ಲಿ ಚಂದ್ರನ ಪತ್ನಿಯ ಪಾತ್ರದಲ್ಲಿ ನಟಿಸುವ ಮೂಲಕ ನಟನೆ ಶುರು ಮಾಡಿದವರು ಪ್ರೇರಣಾ. ಇದಾದ ನಂತರ ರಂಗನಾಯಕಿ ಧಾರಾವಾಹಿಯಲ್ಲಿ ನಾಯಕಿಯ ಪಾತ್ರದಲ್ಲಿ ನಟಿಸಿದರು. ಜೊತೆಗೆ ಇನ್ನು ಕೆಲವು ಕನ್ನಡ ಧಾರಾವಾಹಿಗಳಲ್ಲಿ ನಟಿಸಿದ ಬಳಿಕ, ಪೆಂಟಗನ್ ಸೇರಿದಂತೆ ಒಂದೆರಡು ಕನ್ನಡ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ, ಬೆಳ್ಳಿ ತೆರೆಯಲ್ಲಿ ಸಹ ಗುರುತಿಸಿಕೊಂಡರು ಪ್ರೇರಣಾ. ಈ ಖ್ಯಾತಿ ಅವರನ್ನು ತೆಲುಗು ಕಿರುತೆರೆಗೆ ಕರೆದುಕೊಂಡು ಹೋಯಿತು.
ಪ್ರೇರಣಾ ಅವರು ತೆಲುಗು ಧಾರಾವಾಹಿಯಲ್ಲಿ ನಟಿಸಿ ಅಲ್ಲಿ ಸಹ ಅವರಿಗೆ ಒಳ್ಳೆಯ ಜನಪ್ರಿಯತೆ ಬಂದಿತು, ಇವರ ಸೀರಿಯಲ್ ಸೂಪರ್ ಹಿಟ್ ಆಯಿತು. ಧಾರಾವಾಹಿ ನಂತರ ಪ್ರೇರಣಾ ಅವರಿಗೆ ತೆಲುಗು ಬಿಗ್ ಬಾಸ್ ಶೋ ಹೋಗುವ ಅವಕಾಶ ಸಿಕ್ಕಿತು. ತೆಲುಗು ಬಿಗ್ ಬಾಸ್ ಗೆ ಕನ್ನಡತಿ ಹೋಗಿ, ಫಿನಾಲೆ ವರೆಗು ತಲುಪಿ 4ನೇ ಸ್ಥಾನಕ್ಕೆ ಎಲಿಮಿನೇಟ್ ಆದರು ಪ್ರೇರಣಾ. ಬಿಗ್ ಬಾಸ್ ಇಂದ ಸಹ ಇವರ ವ್ಯಕ್ತಿತ್ವ ಬಹಳಷ್ಟು ಜನರಿಗೆ ಇಷ್ಟವಾಗಿತ್ತು. ಪ್ರೇರಣಾ ಅವರು ತೆಲುಗಿನಲ್ಲಿ ಎಲ್ಲರಿಗೂ ತುಂಬಾ ಇಷ್ಟವಾಗಿದ್ದಾರೆ, ತೆಲುಗಿನಲ್ಲಿ ಅವರಿಗೆ ಪಾಪ್ಯುಲಾರಿಟಿ ಹೆಚ್ಚಾಗಿದೆ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ತೆಲುಗು ಕಾರ್ಯಕ್ರಮಗಳಲ್ಲಿ ಸಹ ಕಾಣಿಸಿಕೊಳ್ಳುತ್ತಾರೆ ಪ್ರೇರಣಾ.
ಇತ್ತಿಚೆಗೆ ಒಂದು ತೆಲುಗು ಕಾರ್ಯಕ್ರಮಕ್ಕೆ ತಮ್ಮ ಪತಿಯ ಜೊತೆಗೆ ಹೋಗಿದ್ದರು. ಕಾರ್ಯಕ್ರಮದಲ್ಲಿ ಅವರ ಪತಿ ಶ್ರೀಪಾದ್ ಅವರು ಪ್ರೇರಣಾ ಅವರ ಬಗ್ಗೆ ಕೆಲವು ವಿಚಾರಗಳನ್ನು ರಿವೀಲ್ ಮಾಡಿದ್ದು, ಅದನ್ನೆಲ್ಲ ಕೇಳಿ ಆಂಕರ್ ಶಾಕ್ ಆಗಿದ್ದಾರೆ. ಹೌದು, ಶ್ರೀಪಾದ್ ಅವರು ಹೇಳಿರುವ ಪ್ರಕಾರ ಮನೆಯಲ್ಲಿ ಇದ್ದರೆ ಪ್ರೇರಣಾ ಅವರು ಸ್ನಾನ ಮಾಡೋದೆ ಇಲ್ಲವಂತೆ. 3 ದಿನ ಇರಲಿ ಕೆಲವೊಮ್ಮೆ 4 ದಿನ ಆದರೂ ಸ್ನಾನ ಮಾಡೋದಿಲ್ಲವಂತೆ. ಶೂಟಿಂಗ್ ಇಲ್ಲದೇ ಮನೆಯಲ್ಲಿ ರೆಸ್ಟ್ ಮಾಡುವಾಗ ಸ್ನಾನ ಯಾಕೆ ಮಾಡಬೇಕು ಎಂದು ಹೇಳುತ್ತಾರಂತೆ ಪ್ರೇರಣಾ. ಇದಕ್ಕೆ ಉತ್ತರ ಕೊಟ್ಟ ಪ್ರೇರಣಾ ಅವರು ನೀರನ್ನು ಹಿತಮಿತವಾಗಿ ಬಳಕೆ ಮಾಡಬೇಕು, ಅತಿಯಾಗಿ ಬಳಕೆ ಮಾಡಬಾರದು ಎಂದಿದ್ದಾರೆ.

ನೀರನ್ನು ಉಳಿಸುವ ಸಲುವಾಗಿಯೇ ತಾವು ಸ್ನಾನ ಮಾಡುವುದಿಲ್ಲ ಎಂದು ತಮಾಷೆಯಾಗಿ ಹೇಳಿದ್ದಾರೆ. ಈ ಮಾತು ಕೇಳಿ ಈ ಕಾರ್ಯಕ್ರಮಕ್ಕೆ ಬರುವಾಗ ಸ್ನಾನ ಮಾಡಿಕೊಂಡು ಬಂದಿದ್ದೀರಾ ಎಂದು ಆಂಕರ್ ಕೇಳಿದ್ದು, ಅದಕ್ಕೆ ಉತ್ತರವಾಗಿ ಹೌದು ಸ್ನಾನ ಮಾಡಿಕೊಂಡೆ ಬಂದಿದ್ದೇನೆ ಎಂದು ಹೇಳಿದ್ದಾರೆ ಪ್ರೇರಣಾ. ಅವರ ಪತಿ ಕೂಡ ಅವಳು ಸ್ನಾನ ಮಾಡಿರೋದಕ್ಕೆ ನಾನು ಅವಳ ಜೊತೆಗೆ ಬಂದಿರೋದು ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಈ ಜೋಡಿ ಮತ್ತು ಇವರಿಬ್ಬರ ಮಾತುಕತೆ ಬಹಳ ತಮಾಷೆಯಾಗಿತ್ತು. ವೀಕ್ಷಕರು ಸಹ ಈ ಕಾಮಿಡಿಯನ್ನು ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ. ಪ್ರೇರಣಾ ಅವರು ಹೆಚ್ಚು ತೆಲುಗು ಸಿನಿಮಾಗಳಲ್ಲಿ ಧಾರಾವಾಹಿಗಳಲ್ಲಿ ನಟಿಸಬೇಕು ಎನ್ನುವುದು ಎಲ್ಲರ ಆಸೆ.