ಜೀಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗಟ್ಟಿಮೇಳ ಧಾರಾವಾಹಿ ಯಾರಿಗೆ ತಾನೇ ನೆನಪಿಲ್ಲ? ಈ ಧಾರಾವಾಹಿ ಮುಗಿದು ಓಂದು ವರ್ಷದ ಮೇಲಾಗಿದ್ದರೂ ಇಂದಿಗೂ ಸಹ ಎಲ್ಲರೂ ನೆನಪಿಸಿಕೊಳ್ಳುವ ಧಾರಾವಾಹಿಗಳಲ್ಲಿ ಗಟ್ಟಿಮೇಳ ಸಹ ಒಂದು. ಜನಪ್ರಿಯತೆ ಮತ್ತು ಟಿಆರ್ಪಿ ಎರಡು ವಿಷಯದಲ್ಲಿ ದಾಖಲೆಗಳನ್ನು ಬರೆದ ಧಾರಾವಾಹಿ ಇದು. ವೇದಾಂತ್ ಅಮೂಲ್ಯ ಜೋಡಿಗೆ ಎಲ್ಲರೂ ಫಿದಾ ಆಗಿದ್ದರು. ಈ ಧಾರಾವಾಹಿಯಲ್ಲಿ ಕೇವಲ ವೇದಾಂತ್ ಅಮೂಲ್ಯ ಪಾತ್ರ ಮಾತ್ರವಲ್ಲ, ಬೇರೆ ಎಲ್ಲಾ ಪಾತ್ರಗಳು ಸಹ ವೀಕ್ಷಕರಿಗೆ ಬಹಳ ಇಷ್ಟವಾಗಿತ್ತು. ಅವುಗಳಲ್ಲಿ ಆರತಿ ಪಾತ್ರ ಕೂಡ ಒಂದು. ಆರತಿ ಪಾತ್ರದಲ್ಲಿ ನಟಿಸಿದ್ದು, ನಟಿ ಅಶ್ವಿನಿ ಅವರು.

ಅಮೂಲ್ಯ ಅವರ ತಾಯಿಗೆ 4 ಹೆಣ್ಣುಮಕ್ಕಳು, ಅವರಲ್ಲಿ ಮೊದಲನೆ ಮಗಳ ಹೆಸರೇ ಆರತಿ. ಅಶ್ವಿನಿ ಅವರು ಮೊದಲಿಗೆ ಆರತಿ ಪಾತ್ರದಲ್ಲಿ ನಟಿಸುತ್ತಿದ್ದರು, ಕೆಲ ಸಮಯದ ನಂತರ ಈ ಪಾತ್ರದಿಂದ ಹೊರಬಂದರು. ಆದರೆ ಆರತಿ ಪಾತ್ರ ಎಂದ ತಕ್ಷಣ ನೆನಪಾಗುವುದಂತೂ ಇವರೇ. ಅಶ್ವಿನಿ ಅವರಿಗೆ ಅಷ್ಟು ಚೆನ್ನಾಗಿ ಈ ಪಾತ್ರ ಒಗ್ಗಿ ಹೋಗಿತ್ತು, ಬಹಳ ಮುಗ್ಧವಾಗಿ ನಾಜೂಕಾಗಿ ಆರತಿ ಪಾತ್ರದಲ್ಲಿ ಅಭಿನಯಿಸುತ್ತಿದ್ದರು ಅಶ್ವಿನಿ. ಇವರ ಪಾತ್ರಕ್ಕೆ ಒಳ್ಳೆಯ ಬೇಡಿಕೆ ಮತ್ತು ಜನಪ್ರಿಯತೆ ಕೂಡ ಇತ್ತು. ಅಶ್ವಿನಿ ಅವರು ಮಧ್ಯದಲ್ಲಿ ಧಾರಾವಾಹಿ ಬಿಟ್ಟು ಹೋಗಿದ್ದಕ್ಕೆ ಅಭಿಮಾನಿಗಳಿಗೆ ಬೇಸರ ಆಗಿದ್ದು ಇದೇ.
ಗಟ್ಟಿಮೇಳ ನಂತರ ಅಶ್ವಿನಿ ಅವರು ಬೇರೆ ಯಾವುದೇ ಧಾರಾವಾಹಿ ಅಥವಾ ಸಿನಿಮಾದಲ್ಲಿ ನಟಿಸಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಿದ್ದರು, ಜೊತೆಗೆ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಶುರು ಮಾಡಿ ತಮ್ಮ ಲೈಫ್ ಬಗ್ಗೆ ಅನೇಕ ಅಪ್ಡೇಟ್ಸ್ ಗಳನ್ನು ಕೊಡುತ್ತಿದ್ದರು. ಅಶ್ವಿನಿ ಅವರು ಹೋಮ್ ಲಿ ಹುಡುಗಿ ಹಾಗೆಯೇ ಇವರಿಗೆ ಪ್ರಾಣಿಗಳು ಅಂದ್ರೆ ತುಂಬಾ ಇಷ್ಟ. ತಮ್ಮ ಮನೆಯ ಸುತ್ತ ಮುತ್ತ ಇರುವ ಬೀದಿ ನಾಯಿಗಳಿಗೆ ಅಡುಗೆ ಮಾಡಿ, ಅವುಗಳಿಗೆ ಪ್ರತಿದಿನವೂ ಊಟ ಹಾಕುತ್ತಿದ್ದರು. ಇವರೇ ಸ್ವತಃ ಅಡುಗೆ ಮಾಡುತ್ತಿದ್ದದ್ದು ಇನ್ನಷ್ಟು ವಿಶೇಷ. ಅವುಗಳ ವಿಡಿಯೋ ವನ್ನು ಸಹ ಶೇರ್ ಮಾಡುತ್ತಿದ್ದರು.

ಬೀದಿ ನಾಯಿಗಳಿಗೆ ಊಟ ಮತ್ತು ಪ್ರೀತಿಯ ಅಗತ್ಯ ಎಷ್ಟಿದೆ ಎನ್ನುವುದನ್ನು ಜನರಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡುತ್ತಿದ್ದರು. ಅದರ ಜೊತೆಗೆ ಅಶ್ವಿನಿ ಅವರು ತಮ್ಮದೇ ಆದ ಸಣ್ಣ ಬ್ಯುಸಿನೆಸ್ ಒಂದನ್ನು ಸಹ ಶುರು ಮಾಡಿಕೊಂಡಿದ್ದರು, ರಾಗಿ ಮಾಲ್ಟ್ ಇದನ್ನೆಲ್ಲ ತಯಾರಿಸಿ ಮಾರಾಟ ಮಾಡುತ್ತಿದ್ದರು. ಇಂಥ ಅಶ್ವಿನಿ ಅವರು ತಮ್ಮ ಸಾಮಾಜಿಕ ಬದುಕಿನ ಬಗ್ಗೆ ಎಲ್ಲಾ ಕಡೆ ಹೇಳಿಕೊಳ್ಳುತ್ತಿದ್ದರೆ ಹೊರತು ಪರ್ಸನಲ್ ಲೈಫ್ ಬಗ್ಗೆ ಎಲ್ಲಿಯೂ ಮಾಹಿತಿ ಕೊಟ್ಟಿರಲಿಲ್ಲ. ಇವರ ಮದುವೆ ಒಂದು ವರ್ಷದ ಹಿಂದೆಯೇ ನಡೆದಿದ್ದು, ನವೆಂವರ್ 27 ಅಂದರೆ ನಿನ್ನೆ ಇವರ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ.
ನಿನ್ನೆಯ ದಿವಸ ಪತಿಯ ಜೊತೆಗಿರುವ ಫೋಟೋಸ್ ಶೇರ್ ಮಾಡಿ, ಮದುವೆಯಾದ ವಿಷಯವನ್ನು ರಿವೀಲ್ ಮಾಡಿದ್ದಾರೆ. ಇವರದ್ದು 15 ವರ್ಷಗಳ ಲವ್ ಆಗಿದ್ದು, ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದಾರೆ. ಅಶ್ವಿನಿ ಅವರು ಗಂಡನ ಜೊತೆಗೆ ಫೋಟೋಸ್ ಶೇರ್ ಮಾಡುತ್ತಿದ್ದ ಹಾಗೆಯೇ ಅಭಿಮಾನಿಗಳು ಶಾಕ್ ಆಗಿದ್ದು, ಒಂದು ವರ್ಷ ಮದುವೆ ಆದ ವಿಷಯವನ್ನು ಮುಚ್ಚಿಟ್ಟಿದ್ದು ಯಾಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಕೆಲವರು ಯಾವಾಗಲೂ ಹೀಗೆ ಚೆನ್ನಾಗಿರಿ, ನಿಮ್ಮಿಬ್ಬರ ಜೀವನ ಚೆನ್ನಾಗಿರಲಿ ಎಂದು ವಿಶ್ ಮಾಡುತ್ತಿದ್ದಾರೆ..



