ನಟಿ ಅಭಿನಯ, ಇವರೊಬ್ಬ ವಿಶೇಷ ಕಲಾವಿದೆ. ಮೂಲತಃ ತಮಿಳಿನವರಾದರು ಕನ್ನಡ ಚಿತ್ರಪ್ರೇಮಿಗಳಿಗೆ ಇವರ ಪರಿಚಯ ಇದೆ. ಅದು ಅಪ್ಪು ಅವರ ಸಿನಿಮಾ ಮೂಲಕ. ಅಪ್ಪು ಅವರ ಹುಡುಗರು ಸಿನಿಮಾದಲ್ಲಿ, ಅವರ ತಂಗಿ ಪಾತ್ರದಲ್ಲಿ ನಟಿಸಿದ್ದರು ಅಭಿನಯ. ಈ ನಟಿ ಆಗಿನಿಂದ ಕನ್ನಡಿಗರಿಗೆ ಸಹ ಬಹಳ ಇಷ್ಟ ಆಗಿದ್ದಾರೆ. ಇತ್ತೀಚೆಗೆ ನಟಿ ಅಭಿನಯ ಅವರು ಎಂಗೇಜ್ಮೆಂಟ್ ಆಗಿರುವ ಸಂತೋಷದ ಸುದ್ದಿಯನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ಅಭಿಮಾನಿಗಳಿಗೆ ಇವರು ಮದುವೆ ಆಗುತ್ತಿರುವ ಹುಡುಗ ಯಾರು ಎನ್ನುವ ಕುತೂಹಲ ಶುರುವಾಗಿತ್ತು, ಯಾಕೆಂದರೆ ಅಭಿನಯ ಅವರು ತಮ್ಮ ಹುಡುಗನ ಮುಖವನ್ನು ರಿವೀಲ್ ಮಾಡಿರಲಿಲ್ಲ. ಇದೀಗ ಇವರು ತಮ್ಮ ಬಹುಕಾಲದ ಗೆಳೆಯನ ಜೊತೆಗೆ ಮದುವೆ ಆಗಿದ್ದಾರೆ.
ಅಭಿನಯ ಅವರಿಗೆ ಕಿವಿ ಕೇಳಿಸುವುದಿಲ್ಲ, ಮಾತು ಕೂಡ ಸರಿಯಾಗಿ ಬರುವುದಿಲ್ಲ. ಆದರೆ ಇವರಲ್ಲಿ ಅದ್ಭುತವಾದ ಟ್ಯಾಲೆಂಟ್ ಇದೆ. ನಟನೆಯಲ್ಲಿ ಅಭಿನಯ ಅವರಿಗೆ ಬಹಳ ಆಸಕ್ತಿ ಇತ್ತು. ಇವರು ಚಿತ್ರರಂಗಕ್ಕೆ ಬಂದ ಹಾದಿ ಕೂಡ ಸುಲಭದ ಹಾದಿ ಆಗಿರಲಿಲ್ಲ. ಅಭಿನಯ ಅವರಿಗೆ ನಟನೆ ಹಾಗೂ ಡ್ಯಾನ್ಸ್ ನಲ್ಲಿ ಆಸಕ್ತಿ ಇದೆ ಎಂದು ಅವರ ತಂದೆ ಹೇಗಾದರೂ ಮಾಡಿ ಮಗಳನ್ನು ಮುಂದೆ ತರಬೇಕು ಎಂದು ಮಗಳಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಗುವ ಹಾಗೆ ಮಾಡಬೇಕು ಎಂದು ಬಹಳ ಕಷ್ಟಪಟ್ಟಿದ್ದಾರೆ. ಮೊದಲಿಗೆ ಅಭಿನಯ ಅವರಿಗೆ ಮಾತು ಬರೋದಿಲ್ಲ, ಕಿವಿ ಕೇಳಿಸುವುದಿಲ್ಲ ಎಂದು ಹಲವು ಸಿನಿಮಾ ತಯಾರಕರು ನಿರ್ದೇಶಕರು ಇವರಿಗೆ ಅವಕಾಶ ಕೊಡುವುದಕ್ಕೆ ಒಪ್ಪುವುದಿಲ್ಲ. ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುವುದಕ್ಕೆ ಶುರು ಮಾಡುತ್ತಾರೆ..

ನಂತರ ಇವರಿಗೆ ಒಳ್ಳೆಯ ಅವಕಾಶ ಸಿಕ್ಕಿದ್ದು, ಸಮುದ್ರಖನಿ ಅವರು ನಿರ್ದೇಶನ ಮಾಡಿದ ತಮಿಳಿನ ನಾಡೋಡಿಗಳ್ ಸಿನಿಮಾದಲ್ಲಿ, ನಾಯಕನ ತಂಗಿ ಪಾತ್ರದಲ್ಲಿ ಅಭಿನಯಿಸಿದ್ದರು ಅಭಿನಯ. ಈ ಸಿನಿಮಾದಲ್ಲಿ ಅಭಿನಯ ಅವರ ನಟನೆ ಬಹಳ ಚೆನ್ನಾಗಿ ಮೂಡಿಬಂದಿತ್ತು. ಸಿನಿಮಾ ನೋಡಿದವರಿಗೆ ಇವರಿಗೆ ಮಾತನಾಡಲು ಆಗೋದಿಲ್ಲ, ಕಿವಿ ಕೇಳಿಸುವುದಿಲ್ಲ ಎಂದು ಸ್ವಲ್ಪ ಕೂಡ ಗೊತ್ತಾಗುವುದಿಲ್ಲ ಎನ್ನುವಷ್ಟು ಚೆನ್ನಾಗಿ ಅಭಿನಯಿಸಿದ್ದರು ಅಭಿನಯ. ಮುಂದೆ ಇದೇ ಸಿನಿಮಾ ಕನ್ನಡಕ್ಕೆ ರಿಮೇಕ್ ಆಯಿತು. ಸಿನಿಮಾದ ಹೆಸರು ಹುಡುಗರು. ಅಪ್ಪು ಅವರು, ಲೂಸ್ ಮಾದ ಯೋಗಿ ಹಾಗೂ ಶ್ರೀನಗರ ಕಿಟ್ಟಿ ಮೂವರು ಸಹ ಜೊತೆಯಾಗಿ ಅಭಿನಯಿಸಿದ ಸಿನಿಮಾ ಇದು. ಈ ಸಿನಿಮಾದಲ್ಲಿ ಕೂಡ ನಾಯಕನ ತಂಗಿ ಪಾತ್ರದಲ್ಲಿ ಅಂದರೆ ಅಪ್ಪು ಅವರ ತಂಗಿ ಪಾತ್ರದಲ್ಲಿ ಅಭಿನಯ ನಟಿಸಿದ್ದರು.

ಹುಡುಗರು ಸಿನಿಮಾದಲ್ಲಿ ಇವರ ನಟನೆ ಎಲ್ಲರಿಗೂ ಬಹಳ ಇಷ್ಟವಾಗಿತ್ತು, ಕನ್ನಡಿಗರು ಸಹ ಅಭಿನಯ ಅವರಿಗೆ ಪ್ರೀತಿ, ಅಭಿಮಾನ ಹಾಗು ಪ್ರೋತ್ಸಾಹ ನೀಡಿದ್ದರು. ಹುಡುಗರು ನಂತರ ಕಿಚ್ಚು ಹಾಗೂ ಇನ್ನೊಂದೆರಡು ಕನ್ನಡ ಸಿನಿಮಾಗಳಲ್ಲಿ ನಟಿಸಿದರು. ಆದರೆ ಅವರು ಹೆಚ್ಚು ಅವಕಾಶಗಳನ್ನು ಪಡೆದು, ನಟಿಸಿದ್ದು ತಮಿಳು ಸಿನಿಮಾಗಳಲ್ಲಿ. ತಮಿಳಿನಲ್ಲಿ ನಾಯಕಿಯಾಗಿ ಕೂಡ ಕೆಲವು ಸಿನಿಮಾಗಳಲ್ಲಿ ನಟಿಸಿದರು ಅಭಿನಯ. ಅವುಗಳು ಇವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿದೆ. ಇನ್ನು ನಟ ವಿಶಾಲ್ ಅವರ ಜೊತೆಗೆ ಅಭಿನಯ ಒಂದು ಸಿನಿಮಾ ಮಾಡಿದರು, ಆ ಸಿನಿಮಾದಲ್ಲಿ ಅಭಿನಯ ಅವರು ನಾಯಕಿ. ವಿಶಾಲ್ ಅವರೊಡನೆ ಸಿನಿಮಾ ಮಾಡಿದ ನಂತರ ಅಭಿನಯ ಹಾಗೂ ವಿಶಾಲ್ ನಡುವೆ ಏನೋ ಇದೆ ಎನ್ನುವ ಗುಸುಗುಸು ಕೇಳಿಬಂದಿತ್ತು.
ವಿಶಾಲ್ ಅವರನ್ನೇ ಅಭಿನಯ ಮದುವೆ ಆಗುತ್ತಾರೆ ಎನ್ನುವ ಮಾತುಗಳು ಸಹ ಕೇಳಿಬಂದಿತ್ತು. ಆದರೆ ಈ ಬಗ್ಗೆ ಖುದ್ದು ಅಭಿನಯ ಅವರೇ ಕ್ಲಾರಿಟಿ ಕೊಟ್ಟಿದ್ದರು. ತಮ್ಮ ಹಾಗೂ ವಿಶಾಲ್ ಅವರ ನಡುವೆ ಅಂಥದ್ದೇನು ಇಲ್ಲ. ತಾವು ಮದುವೆ ಆಗುವ ಹುಡುಗ ವಿಶಾಲ್ ಅವರಲ್ಲ ಎಂದು ಅಭಿನಯ ಅವರು ಸ್ಪಷ್ಟನೆ ನೀಡಿದ್ದರು. ಅಭಿನಯ ಅವರ ಎಂಗೇಜ್ಮೆಂಟ್ ಇತ್ತೀಚೆಗೆ ನಡೆದಾಗ ಕೂಡ ಹುಡುಗ ವಿಶಾಲ್ ಅವರೇ ಇರಬಹುದಾ ಎನ್ನುವ ಅನುಮಾನ ಸಹ ವ್ಯಕ್ತವಾಗಿತ್ತು. ಏಕೆಂದರೆ ಎಂಗೇಜ್ಮೆಂಟ್ ಆಗಿರುವ ಸಿಹಿ ಸುದ್ದಿಯನ್ನು ಅಭಿನಯ ತಿಳಿಸಿದರು. ಆದರೆ ಅದರಲ್ಲಿ ತಮ್ಮ ಭಾವಿಪತಿಯ ಮುಖವನ್ನು ರಿವೀಲ್ ಮಾಡಲಿಲ್ಲ. ಇಬ್ಬರು ದೇವಸ್ಥಾನದಲ್ಲಿ ಇದ್ದಾರೆ ಎಂದು ಅನ್ನಿಸುವ ರೀತಿಯಲ್ಲಿ, ರಿಂಗ್ ಧರಿಸಿರುವ ಒಂದು ಫೋಟೋವನ್ನು ಮಾತ್ರ ಶೇರ್ ಮಾಡಿಕೊಂಡಿದ್ದರು.
ಈ ಫೋಟೋಸ್ ವೈರಲ್ ಆಗಿ ಒಂದು ತಿಂಗಳು ಆಗಿದೆ, ಇದೀಗ ಏಪ್ರಿಲ್ 16ರಂದು ಅಭಿನಯ ಅವರ ಮದುವೆ ನಡೆದಿದೆ. ಅಭಿನಯ ಅವರಿಗೆ ಬಹಳ ವರ್ಷಗಳ ಹಿಂದೆ ಪರಿಚಯ ಆದ ಹುಡುಗ ಕಾರ್ತಿಕ್ ಅವರು. ಇವರಿಬ್ಬರ ಫ್ರೆಂಡ್ಶಿಪ್ ನಂತರ ಪ್ರೀತಿಯಾಗಿ ಬದಲಾಯಿತು. ಹಲವು ವರ್ಷಗಳ ಕಾಲ ಪ್ರೀತಿ ಮಾಡಿದ ಈ ಜೋಡಿ ಈಗ ಮದುವೆ ಆಗಿದ್ದಾರೆ. ಕಾರ್ತಿಕ್ ಅವರು ಸಹ ಉದ್ಯಮಿ ಆಗಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಇವರ ಬ್ಯುಸಿನೆಸ್ ಇದೆ. ಅಂಥ ಒಳ್ಳೆಯ ಹುಡುಗನ ಜೊತೆಗೆ ಅಭಿನಯ ಅವರು ಮದುವೆ ಆಗಿದ್ದಾರೆ. ನಿನ್ನೆಯಷ್ಟೇ ತಮ್ಮ ಮದುವೆಯ ಸುಂದರವಾದ ಫೋಟೋಸ್ ಗಳನ್ನು ಶೇರ್ ಮಾಡಿಕೊಂಡಿದ್ದಾರೆ ಅಭಿನಯ. ಫೋಟೋಗಳನ್ನು ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
ಅಭಿನಯ ಅವರಿಗೆ ಬಹಳ ವಿಶೇಷವಾದ ಅಭಿಮಾನಿ ಬಳಗ ಇದೆ. ಇವರನ್ನು ಸಿಂಪತಿ ಇಂದ ಕಾಣುವವವರಿಗಿಂತ ಇವರಲ್ಲಿ ಇರುವ ಕಲೆ ಮತ್ತು ಇವರ ಶ್ರದ್ಧೆಯನ್ನು ಗೌರವಿಸುವಂಥ, ಪ್ರೀತಿಸುವಂಥ ಜನರೇ ಇವರ ಅಭಿಮಾನಿಗಳಾಗಿ, ಇವರ ಜೊತೆಗೆ ಇರುವುದು. ಅಭಿನಯ ಅವರ ಮದುವೆ ಫೋಟೋಸ್ ಶೇರ್ ಮಾಡುತ್ತಿದ್ದ ಹಾಗೆ, ಅವರ ಫ್ಯಾನ್ಸ್ ಹಾಗೂ ಚಿತ್ರರಂಗದ ಗಣ್ಯರು ಎಲ್ಲರೂ ಸಹ ಅಭಿನಯ ಅವರಿಗೆ ವಿಶ್ ಮಾಡುತ್ತಿದ್ದಾರೆ, ಮದುವೆಯ ನಂತರ ಮುಂದಿನ ಜೀವನ ಚೆನ್ನಾಗಿರಲಿ ಎನ್ನುವುದು ಎಲ್ಲರ ಆಶಯ ಆಗಿದೆ. ನಾವು ಕೂಡ ಅಭಿನಯ ಅವರಿಗೆ ಒಳ್ಳೆದಾಗ್ಲಿ ಎಂದು ವಿಶ್ ಮಾಡೋಣ..