ತೆಲುಗಿನ ಖ್ಯಾತ ನಟ ನಾಗಚೈತನ್ಯ ಅವರು ಮೊನ್ನೆಯಷ್ಟೇ ನಟಿ ಶೋಭಿತಾ ಧೂಳಿಪಾಲ ಅವರ ಜೊತೆಗೆ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ. ಈ ಜೋಡಿ ಮದುವೆ ಅದ್ಧೂರಿಯಾಗಿ ಕುಟುಂಬದವರು, ಸ್ನೇಹಿತರು ಮತ್ತು ಬಂಧುಗಳ ಸಮ್ಮುಖದಲ್ಲಿ ನಡೆದಿದೆ. ಮದುವೆಯ ಫೋಟೋಸ್ ಗಳನ್ನು ಸ್ವತಃ ವಧುವರರು ಹಂಚಿಕೊಂಡಿದ್ದಾರೆ. ಈ ಫೋಟೋಸ್ ಎಲ್ಲವೂ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆದರೆ ಈ ಫೋಟೋಸ್ ನೋಡಿದವರಿಗೆ ಕಾಡಿದ್ದು ಒಂದೇ ಪ್ರಶ್ನೆ, ನಾಗಚೈತನ್ಯ ಅವರನ್ನು ಹೆತ್ತ ತಾಯಿ ಲಕ್ಷ್ಮೀ ದಗ್ಗುಬಾಟಿ ಅವರು ಮದುವೆಗೆ ಬರಲಿಲ್ವಾ ಎಂದು, ಅವರು ಯಾವುದೇ ಫೋಟೋದಲ್ಲಿಯು ಕಾಣಿಸಿಕೊಂಡಿರಲಿಲ್ಲ.
ಹೌದು, ಇಂಥದ್ದೊಂದು ಗಾಸಿಪ್ ಈಗ ಶುರುವಾಗಿದೆ. ನಾಗಾರ್ಜುನ್ ಅವರ ಮೊದಲ ಪತ್ನಿಯೇ ಲಕ್ಷ್ಮೀ ದಗ್ಗುಬಾಟಿ ಅವರು, ಇವರೊಡನೆ ನಾಗಾರ್ಜುನ ಅವರು ಮೊದಲು ಮದುವೆಯಾಗಿದ್ದು. ತೆಲುಗಿನ ಖ್ಯಾತ ನಟ ವೆಂಕಟೇಶ್ ಅವರ ತಂಗಿ, ತೆಲುಗಿನ ಮತ್ತೊಬ್ಬ ಖ್ಯಾತ ನಟ ರಾಣಾ ಅವರಿಗೆ ಲಕ್ಷ್ಮೀ ದಗ್ಗುಬಾಟಿ ಅವರು ಚಿಕ್ಕಮ್ಮ ಆಗಬೇಕು. ಲಕ್ಷ್ಮೀ ಅವರು ದೊಡ್ಡ ಮನೆತನದ ಮಗಳು. ಇವರೊಡನೆ ನಾಗಾರ್ಜುನ ಅವರು ಮೊದಲು ಮದುವೆ ಆಗಿದ್ದು, ನಾಗಚೈತನ್ಯ ಇವರಿಬ್ಬರ ಮಗ. ಆದರೆ ಕೆಲವು ವರ್ಷಗಳ ನಂತರ ಇಬ್ಬರ ಮನಸ್ತಾಪ ಮೂಡಿದ ಕಾರಣ ನಾಗಾರ್ಜುನ ಅವರಿಂದ ವಿಚ್ಛೇದನ ಪಡೆದರು.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ನಂತರ ನಾಗಾರ್ಜುನ ಅವರು ಖ್ಯಾತ ನಟ ಅಮಲಾ ಅವರೊಡನ್ ಮದುವೆಯಾದರು, ಇನ್ನು ಲಕ್ಷ್ಮೀ ದಗ್ಗುಬಾಟಿ ಅವರು ಸಹ ಶರತ್ ವಿಜಯೇಂದ್ರನ್ ಅವರೊಡನೆ ಮದುವೆಯಾದರು. ಇಬ್ಬರು ಕೂಡ ಪ್ರತ್ಯೇಕ ಜೀವನ ನಡೆಸುತ್ತಿದ್ದಾರೆ. ಲಕ್ಷ್ಮಿ ಅವರು ಯು. ಎಸ್ ನಲ್ಲಿ ಸೆಟ್ಲ್ ಆಗಿದ್ದು ತಮ್ಮದೇ ಆದ ಸ್ವಂತ ಬ್ಯುಸಿನೆಸ್ ಹೊಂದಿದ್ದಾರೆ. ಆಗಾಗ ಭಾರತಕ್ಕೆ ಬಂದು ಹೋಗುತ್ತಾರೆ, ಕಳೆದ ಬಾರಿ ನಾಗಚೈತನ್ಯ ಮತ್ತು ಶೋಭಿತಾ ಅವರ ಎಂಗೇಜ್ಮೆಂಟ್ ನಲ್ಲಿ ಬಂದು ಹೋಗಿದ್ದರು. ಆದರೆ ನಾಗಚೈತನ್ಯ ಮದುವೆಯಲ್ಲಿ ಇವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಹಾಗಾಗಿ ಇವರು ಮದುವೆಗೆ ಬಂದಿದ್ದಾರೋ ಇಲ್ಲವೋ ಎನ್ನುವ ಅನುಮಾನ ಬಂದಿತ್ತು.
ಸ್ವಂತ ಮಗನ ಮದುವೆಗೆ ಲಕ್ಷ್ಮೀ ಅವರು ಬರಲಿಲ್ವಾ? ಈಮದುವೆ ಲಕ್ಷ್ಮೀ ಅವರಿಗೆ ವಿರುದ್ಧದಲ್ಲಿ ನಡೆಯುತ್ತಿದೆಯಾ ಎನ್ನುವ ಹಲವು ಪ್ರಶ್ನೆಗಳು ಶುರುವಾಯಿತು. ಆದರೆ ವಿಷಯವೇ ಬೇರೆ ಇದೆ. ಲಕ್ಷ್ಮೀ ಅವರು ಮದುವೆಗೆ ಬಂದಿದ್ದು, ಅವರ ಫೋಟೋಗಳು ಹೆಚ್ಚಾಗಿ ಎಲ್ಲೂ ಸಿಕ್ಕಿಲ್ಲ. ಆದರೆ ನಟ ವೆಂಕಟೇಶ್ ಅವರು ಮದುವೆಯ ಕೆಲವು ಫೋಟೋಸ್ ಗಳನ್ನು ಶೇರ್ ಮಾಡಿಕೊಂಡಿದ್ದು, ಅದರಲ್ಲಿ ಲಕ್ಷ್ಮೀ ಅವರನ್ನು ನೋಡಬಹುದು. ನಾಗಚೈತನ್ಯ, ವೆಂಕಟೇಶ್ ಅವರು, ಲಕ್ಷ್ಮೀ ಅವರು ಮತ್ತು ಇನ್ನಿತರರು ಫೋಟೋಸ್ ನಲ್ಲಿ ಇದ್ದಾರೆ. ಈ ಫೋಟೋಸ್ ಸಹ ಇತ್ತೀಚೆಗೆ ವೈರಲ್ ಆಗಿದೆ..
ಒಟ್ಟಿನಲ್ಲಿ ನಾಗಚೈತನ್ಯ ಅವರ ಎರಡನೇ ಮದುವೆ ಅನೇಕ ವಿಚಾರಗಳಿಂದ ಸುದ್ದಿ ಆಗುತ್ತಲೇ ಇದೆ. ಮದುವೆಯಾದ ನಂತರ ನಾಗಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರ ಜೊತೆಗೆ ನಾಗಾರ್ಜುನ ಅವರು ಸೇರಿ ಎಲ್ಲರು ಶ್ರೀಶೈಲಂ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬಂದಿದ್ದರು. ಆ ಸಮಯದ ಫೋಟೋಗಳು ಮತ್ತು ವಿಡಿಯೋಗಳು ಸಹ ವೈರಲ್ ಆದವು. ಇನ್ನು ಬೇರೆ ದೇವಸ್ಥಾನಗಳಿಗೆ ಕೂಡ ಹೊಸ ವಧುವರರು ಹೋಗಿ ದೇವರಿಗೆ ಪೂಜೆ ಮಾಡಿಸಿ, ದೇವರ ಆಶೀರ್ವಾದ ತೆಗೆದುಕೊಂಡು ಬರುತ್ತಿದ್ದಾರೆ. ಫ್ಯಾನ್ಸ್ ಗಳು ಇವರಿಗೆ ಒಳ್ಳೆದಾಗಲಿ ವಿಶ್ ಮಾಡುತ್ತಿದ್ದಾರೆ.