ನಟ ದರ್ಶನ್ ಅವರು ಕಳೆದ 4 ತಿಂಗಳುಗಳಿಂದ ಜೈಲಿನಲ್ಲಿ ಇರುವ ವಿಷಯ ಗೊತ್ತೇ ಇದೆ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ನಟ ದರ್ಶನ್, ನಟಿ ಪವಿತ್ರಾ ಗೌಡ ಹಾಗೂ ಇನ್ನಿತರರು, ಈ ವರ್ಷ ಜೂನ್ ತಿಂಗಳಿನಲ್ಲಿ ಜೈಲು ಪಾಲಾದರು. ದರ್ಶನ್ ಅವರು ಜೈಲಿನಲ್ಲಿದ್ದ ವೇಳೆ ಹೇಗಿದ್ದಾರೋ ಏನೋ ಎನ್ನುವ ಆತಂಕ ಅವರ ಅಭಿಮಾನಿಗಳಲ್ಲಿ ಇತ್ತು, ದರ್ಶನ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು.

ಆದರೆ ದರ್ಶನ್ ಅವರು ಜೈಲಿನಲ್ಲಿರುವ ಒಂದೆರಡು ಫೋಟೋಗಳು ವೈರಲ್ ಆಯಿತು. ಬೆಂಗಳೂರಿನ ರೌಡಿ ವಿಲ್ಸನ್ ಗಾರ್ಡನ್ ನಾಗ, ದರ್ಶನ್ ಹಾಗೂ ಇನ್ನಿತರರು ಆರಾಮವಾಗಿ ಕುಳಿತು ನಗುತ್ತಾ, ಸಿಗರೇಟ್ ಸೇದುತ್ತಿರುವ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಹಾಗೆಯೇ ದರ್ಶನ್ ಅವರು ಜೈಲಿನಿಂದ ವಿಡಿಯೋ ಕಾಲ್ ಮಾಡಿರುವ ಸ್ಕ್ರೀನ್ ಶಾಟ್ ಗಳು ಕೂಡ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಜೈಲಿನೊಳಗೆ ಐಶಾರಾಮಿ ಜೀವನ ನಡೆಸುತ್ತಿದ್ದಾರೆ, ಇದಕ್ಕೆಲ್ಲಾ ಪರ್ಮಿಶನ್ ಕೊಟ್ಟವರು ಯಾರು ಎನ್ನುವ ಪ್ರಶ್ನೆ ಕೂಡ ಎದ್ದಿತ್ತು..
ಈ ಕಾರಣಕ್ಕೆ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು. ಆಗಿನಿಂದ ದರ್ಶನ್ ಅವರಿಗೆ ಬೇಲ್ ಸಿಕ್ಕಿಲ್ಲ. ಅಭಿಮಾನಿಗಳು ಮಾತ್ರ ಡಿಬಾಸ್ ಹೊರಗೆ ಬರೋದು ಯಾವಾಗ ಎಂದು ಕಾಯುತ್ತಿದ್ದಾರೆ. ಇಂದು ದರ್ಶನ್ ಅವರ ಬೇಲ್ ಅರ್ಜಿಯ ವಿಚಾರಣೆ ಇದ್ದು, ಬೇಲ್ ಸಿಕ್ಕರೆ ಡಿಬಾಸ್ ಅಭಿಮಾನಿಗಳ ಜೊತೆಗೆ ದೀಪಾವಳಿ ಆಚರಣೆ ಮಾಡೋದು ಖಂಡಿತ. ಈ ವೇಳೆ ಅವರ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ಕೂಡ ಸಿಕ್ಕಿದೆ.

ದರ್ಶನ್ ಅವರ ಮೇಲೆ ಆಗಿದ್ದ ಪ್ರಕರಣಗಳ ಜೊತೆಗೆ ಜೈಲಿನಲ್ಲಿ ಐಷಾರಾಮಿ ಜೀವನ ನಡೆದಿದ್ದಕ್ಕೆ 2 ಕೇಸ್ ಗಳು ಹೆಚ್ಚಾಗಿ ಬಂದಿತ್ತು. ಅದರಲ್ಲಿ ಒಂದು ಕೇಸ್ ಗೆ ಕ್ಲೀನ್ ಚಿಟ್ ಸಿಗುವ ಹಾಗೆ ಕಾಣುತ್ತಿದೆ. ವಿಡಿಯೋ ಕಾಲ್ ಮಾಡುವುದಕ್ಕೆ ದರ್ಶನ್ ಅವರು ಫೋನ್ ಬಳಕೆ ಮಾಡಿಲ್ಲ, ಸತ್ಯ ಧರ್ಮನಿಗೆ ವಿಡಿಯೋ ಕಾಲ್ ಮಾಡಿದ್ದಾಗ, ದರ್ಶನ್ ಅವರಿಂದ ಹಲೋ ಎಂದು ಹೇಳಿಸಿದ್ದು ಅಷ್ಟೇ. ದರ್ಶನ್ ಅವರು ಫೋನ್ ಬಳಕೆ ಮಾಡಿಲ್ಲ ಎನ್ನಲಾಗಿದೆ. ಈ ವಿಚಾರದಲ್ಲಿ ದರ್ಶನ್ ಅವರ ತಪ್ಪಿಲ್ಲ ಎಂದು ಸಾಬೀತಾಗಿದೆ.
ಈ ಕಾರಣಕ್ಕೆ ದರ್ಶನ್ ಅವರಿಗೆ ಬೇಲ್ ಸಿಗುತ್ತಾ ಎಂದು ಅಭಿಮಾನಿಗಳು ಕೂಡ ಕಾತುರತೆಯಿಂದ ಕಾದು ಕುಳಿತಿದ್ದಾರೆ. ದರ್ಶನ್ ಅವರಿಗೆ ಬೆನ್ನು ನೋವಿದೆ, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಡಿಬಾಸ್ ಅವರ ಪರ ವಕೀಲರು ವಾದ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಇಂದು ದರ್ಶನ್ ಅವರ ಭವಿಷ್ಯ ನಿರ್ಧಾರ ಆಗಲಿದ್ದು, ದರ್ಶನ್ ಅವರಿಗೆ ಜೈಲು ಶಿಕ್ಷೆ ಸಿಗುತ್ತಾ ಅಥವಾ ಬೇಲ್ ಸಿಕ್ಕಿ ಹೊರಗಡೆ ಬರುತ್ತಾರಾ ಎಂದು ಕಾದು ನೋಡಬೇಕಿದೆ.