ನಟ ದರ್ಶನ್ ಅವರು ರೇಣುಕಾಸ್ವಾಮಿ ಕೇಸ್ ನಲ್ಲಿ ಜೈಲು ಪಾಲಾದ ವಿಷಯ ಗೊತ್ತೇ ಇದೆ. ದರ್ಶನ್ ಅವರು 100ಕ್ಕಿಂತ ಹೆಚ್ಚು ದಿವಸಗಳ ಕಾಲ ಜೈಲಿನಲ್ಲಿ ವಾಸ ಮಾಡಿದರು, ಅಂದುಕೊಂಡ ಹಾಗೆ ಅಂದುಕೊಂಡ ಸಮಯಕ್ಕೆ ಜಾಮೀನು ಸಿಗಲಿಲ್ಲ. ಈ ಕೇಸ್ ಅಷ್ಟು ಸ್ಟ್ರಾಂಗ್ ಆಗಿಗಿತ್ತು, ಜೊತೆಗೆ ದರ್ಶನ್ ಅವರೇ A2 ಆರೋಪಿ ಆಗಿದ್ದ ಕಾರಣ ಜಾಮೀನು ಸಿಗುವುದು ಅಷ್ಟು ಸುಲಭವು ಆಗಿರಲಿಲ್ಲ, ಕೊನೆಗೂ ಕಳೆದ ತಿಂಗಳು ದರ್ಶನ್ ಅವರಿಗೆ ಜಾಮೀನು ಸಿಕ್ಕಿತು. 6 ವಾರಗಳ ಕಾಲ, ಆರೋಗ್ಯದ ವಿಚಾರಕ್ಕಾಗಿ ಜಾಮೀನು ಸಿಕ್ಕಿದ್ದು, ದರ್ಶನ್ ಅವರಿಗೆ ಸರ್ಜರಿ ಮಾಡಿಸುವ ಅವಶ್ಯಕತೆ ಇದ್ದ ಕಾರಣ ಕೋರ್ಟ್ ಇವರಿಗೆ ಜಾಮೀನು ನೀಡಿತ್ತು. ಆದರೆ ಈಗಾಗಲೇ ಜಾಮೀನು ಸಿಕ್ಕಿ 4 ವಾರಗಳು ಕಳೆದು ಹೋಗಿದೆ.
ಇನ್ನು ಸಮಯ ಇರುವುದು ಕೆಲವೇ ದಿನಗಳು. ಇನ್ನು ಕೂಡ ದರ್ಶನ್ ಅವರಿಗೆ ಸರ್ಜರಿ ಆಗಿರಲಿಲ್ಲ ಎನ್ನುವ ವಿಷಯ ಭಾರಿ ಚರ್ಚೆ ಆಗುತ್ತಲೇ ಇತ್ತು. ದರ್ಶನ್ ಅವರ ಆರೋಗ್ಯದಲ್ಲಿ ಬಿಪಿ ವ್ಯತ್ಯಾಸ ಆಗುತ್ತಲೇ ಇದ್ದ ಕಾರಣಕ್ಕೆ ಇನ್ನು ಕೂಡ ಸರ್ಜರಿ ಮಾಡಿರಲಿಲ್ಲವಂತೆ. ಈ ಬಗ್ಗೆ ಆಸ್ಪತ್ರೆಯಿಂದ ಮಾಹಿತಿ ಸಿಕ್ಕಿದೆ, ಇದರ ಜೊತೆಗೆ ದರ್ಶನ್ ಅವರು ಕೂಡ ಸರ್ಜರಿ ಮಾಡಿಸಿಕೊಳ್ಳುವುದಕ್ಕೆ ಒಪ್ಪಿಗೆ ಕೊಟ್ಟಿರಲಿಲ್ಲವಂತೆ. ಅಕಸ್ಮಾತ್ ಸರ್ಜರಿ ಸಕ್ಸಸ್ ಆಗದೆ ಹೋದರೆ, ಏನು ಮಾಡಬೇಕೋ, ಆರೋಗ್ಯದ ಮೇಲೆ ಇನ್ನು ಸಮಸ್ಯೆ ಆಗಬಹುದು ಎನ್ನುವ ಭಯ ಶುರುವಾದ ಕಾರಣ ದರ್ಶನ್ ಅವರು ಸರ್ಜರಿ ಮಾಡಿಸಿಕೊಳ್ಳುವುದಕ್ಕೆ ಹಿಂದೇಟು ಹಾಕಿದರಂತೆ.

ಆದರೆ ಈಗ ನಟ ದರ್ಶನ್ ಅವರು ಧೈರ್ಯ ಮಾಡಿ, ಸರ್ಜರಿ ಮಾಡಿಸಿಕೊಳ್ಳುವುದಕ್ಕೆ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಸರ್ಜರಿ ಮಾಡಿಸಿಕೊಳ್ಳಬೇಕಿರುವುದು ದರ್ಶನ್ ಅವರ ಆರೋಗ್ಯದ ವಿಷಯದಲ್ಲಿ ತುಂಬಾ ಮುಖ್ಯ ಪತ್ನಿ ವಿಜಯಲಕ್ಷ್ಮೀ ಅವರು ಈ ವಿಷಯವಾಗಿ ಎಷ್ಟು ಹೇಳಿದರೂ ಸಹ ದರ್ಶನ್ ಅವರು ಒಪ್ಪಿಗೆ ಕೊಟ್ಟಿರಲಿಲ್ಲವಂತೆ. ಆದರೆ ಆ ಒಬ್ಬ ವ್ಯಕ್ತಿ ದರ್ಶನ್ ಅವರ ಜೊತೆಗೆ ಮಾತನಾಡಿದ ನಂತರ ಸರ್ಜರಿಗೆ ಓಕೆ. ಹೇಳಿದ್ದಾರಂತೆ ಡಿಬಾಸ್. ದರ್ಶನ್ ಅವರನ್ನು ಸರ್ಜರಿ ಮಾಡಿಸಿಕೊಳ್ಳುವುದಕ್ಕೆ ಒಪ್ಪಿಸಿದ ಮಹಾನುಭಾವ ಮತ್ಯಾರು ಅಲ್ಲ ಡಾ. ನವೀನ್ ಅಪ್ಪಾಜಿಗೌಡ. ಇವರು ದರ್ಶನ್ ಅವರನ್ನು ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ದರ್ಶನ್ ಅವರಿಗೆ ಭಯ ಆಗಿ, ಸರ್ಜರಿ ಬೇಡ ಎಂದು ಹೇಳಿದ ಬಳಿಕ ನವೀನ್ ಅಪ್ಪಾಜಿಗೌಡ ಅವರು ದರ್ಶನ್ ಅವರ ಜೊತೆಗೆ ಮಾತನಾಡಿ, ಸರ್ಜರಿ ಮಾಡಿಸಿಕೊಳ್ಳುವುದಕ್ಕೆ ಒಪ್ಪಿಗೆ ಕೊಡುವ ಹಾಗೆ ಮಾಡಿದ್ದಾರಂತೆ. ದರ್ಶನ್ ಅವರ ಬಿಪಿ ವೇರಿಯೇಷನ್ ಆಗುತ್ತಿದ್ದು, ಅವೆಲ್ಲವೂ ಸರಿ ಹೋದ ನಂತರ ಸರ್ಜರಿ ನಡೆಯಲಿದೆ. ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಅನುಸಾರ, ಇನ್ನು ಎರಡು ಅಥವಾ ಮೂರು ದಿನಗಳಲ್ಲಿ ದರ್ಶನ್ ಅವರಿಗೆ ಸರ್ಜರಿ ಮಾಡಲಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ. ದರ್ಶನ್ ಅವರು ಬೇಗ ಗುಣಮುಖರಾಗಲಿ ಎನ್ನುವುದು ಅಭಿಮಾನಿಗಳ ಮನದ ಆಸೆ ಕೂಡ ಹೌದು, ಎಲ್ಲರೂ ಇವರಿಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ.

ಇನ್ನು ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರು ಕೂಡ ಗಂಡ ಬೇಗ ಗುಣಮುಖರಾಗಲಿ ಎಂದು ಎಲ್ಲಾ ದೇವಸ್ಥಾನಗಳಲ್ಲಿ ಪೂಜೆ ಮಾಡಿಸುತ್ತಿದ್ದಾರಂತೆ. ಜೊತೆಗೆ ದೇವರಿಗೆ ಹರಕೆ ಮಾಡಿಕೊಂಡಿದ್ದಾರಂತೆ. ಇನ್ನು ದರ್ಶನ್ ಅವರು ಜಾಮೀನು ಸಿಕ್ಕಿ ಹೊರಗೆ ಬಂದಾಗಿನಿಂದ ಕೂಡ ಸಾಮಾಜಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಕೇಸ್ ಸಹ ಇನ್ನು ಪೂರ್ತಿಯಾಗಿಲ್ಲ. ಹಾಗಾಗಿ ಎಲ್ಲಾ ಅಭಿಮಾನಿಗಳು ಸಹ, ನಟ ದರ್ಶನ್ ಅವರು ಈ ಸಮಸ್ಯೆ ಇಂದ ಬೇಗ ಹೊರಗಡೆ ಬರಲಿ, ಅವರ ಸಿನಿಮಾಗಳ ಚಿತ್ರೀಕರಣಗಳು ಬೇಗ ಶುರುವಾಗಲಿ ಎಂದು ಕಾಯುತ್ತಿದ್ದಾರೆ.