ಧಾರವಾಡ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಡೇರಿ ಫಾರ್ಮ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ ಭಾನುವಾರ ಬೆಳಿಗ್ಗೆ ದಿಢೀರ್ ಭೇಟಿ ನೀಡಿ ಡೇರಿಯಲ್ಲಿನ ಜಾನುವಾರುಳನ್ನು ವೀಕ್ಷಿಸಿದರು.
ಒಂದು ಗಂಟೆಗೂ ಅಧಿಕ ಕಾಲ ಡೇರಿ ಫಾರ್ಮ್ ನಲ್ಲಿ ಸಮಯ ಕಳೆದ ದರ್ಶನ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಡೇರಿಯಲ್ಲಿನ ಜಾನುವಾರುಗಳ ಮಾಹಿತಿ ಪಡೆದರು.
ಶನಿವಾರ ಹುಬ್ಬಳ್ಳಿಯಲ್ಲಿ ಬನಾರಸ್ ಚಿತ್ರದ ಕಾರ್ಯಕ್ರಮಕ್ಕೆ ಬಂದಿದ್ದ ದರ್ಶನ್, ಭಾನುವಾರ ವಿನಯ್ ಅವರ ಡೇರಿಗೆ ದಿಢೀರ್ ಭೇಟಿ ನೀಡಿದರು.
ಫಾರ್ಮ್ನಲ್ಲಿನ ಎತ್ತು, ಎಮ್ಮೆ, ಮೇಕೆ, ಕುದುರೆ ಸೇರಿದಂತೆ ಇತ್ಯಾದಿ ಜಾನುವಾರು ಮೈಸವರಿದ ದರ್ಶನ, ಜಾನುವಾರುಗಳ ತಳಿ ಬಗ್ಗೆ ಮಾಹಿತಿ ಪಡೆದುಕೊಂಡರು.
ವಿನಯ ಅವರ ಧರ್ಮಪತ್ನಿ ಶಿವಲೀಲಾ ಕುಲಕರ್ಣಿ ಡೇರಿಯಲ್ಲಿನ ಮಾಹಿತಿಯನ್ನು ನಟ ದರ್ಶನ ಅವರಿಗೆ ವಿವರಿಸಿದರು.
ದರ್ಶನ ಭೇಟಿ ವೇಳೆ ವಿನಯ ಅವರ ಧರ್ಮಪತ್ನಿ ಶಿವಲೀಲಾ ಕುಲಕರ್ಣಿ ಸೇರಿದಂತೆ ವಿನಯ ಅವರ
ಬೆಂಬಲಿಗರು ಇದ್ದರು.