ನಟ ದರ್ಶನ್ ಅವರು ಕಳೆದ 6 ತಿಂಗಳುಗಳಿಂದ ಜೈಲಿನಲ್ಲಿದ್ದರು, ನಟಿ ಪವಿತ್ರಾ ಗೌಡ ಅವರಿಗೆ ಉತ್ತರ ಕರ್ನಾಟಕದ ರೇಣುಕಾಸ್ವಾಮಿ ಎನ್ನುವ ವ್ಯಕ್ತಿ, ಅಸಭ್ಯವಾಗಿ ಮೆಸೇಜ್ ಕಳುಹಿಸಿದ್ದ ಎನ್ನುವ ಕಾರಣಕ್ಕೆ ದರ್ಶನ್ ಅವರು ಆತನನ್ನು ಕರೆಸಿ, ಚೆನ್ನಾಗಿ ಹೊಡೆಸಿ, ಮುಗಿಸಿಬಿಟ್ಟಿದ್ದಾರೆ ಎನ್ನುವ ಆರೋಪದ ಕಾರಣ ಪೊಲೀಸರು ಜೂನ್ ತಿಂಗಳಿನಲ್ಲಿ ದರ್ಶನ್ ಅವರ ಅರೆಸ್ಟ್ ಮಾಡಿದ್ದರು. ದರ್ಶನ್ ಅವರು, ನಟಿ ಪವಿತ್ರಾ, ಹಾಗೂ ಇನ್ನು ಕೆಲವರು ಅರೆಸ್ಟ್ ಆಗಿದ್ದು ಈ ಪ್ರಕರಣದಲ್ಲಿ. ಆರಂಭದ ಮೂರು ತಿಂಗಳುಗಳಲ್ಲಿ ಯಾರು ಏನೇ ಮಾಡಿದರೂ, ದರ್ಶನ್ ಅವರಿಗೆ ಜಾ*ಮೀನು ಸಿಗಲಿಲ್ಲ.

ಆದರೆ ಒಂದೂವರೆ ತಿಂಗಳ ಹಿಂದೆ ಅವರ ಆರೋಗ್ಯದ ಕಾರಣಕ್ಕೆ ಕೋರ್ಟ್ ಇಂದ ಜಾಮೀನು ಸಿಕ್ಕಿತು. ದರ್ಶನ್ ಅವರಿಗೆ ವಿಪರೀತವಾಗಿ ಬೆನ್ನುನೋವಿನ ಸಮಸ್ಯೆ ಕಾಡುತ್ತಿದ್ದು, ಈಗ ಅದಕ್ಕೆ ಸರಿಯಾದ ಟ್ರೀಟ್ಮೆಂಟ್ ಸಿಗದೇ ಹೋದರೆ, ಪಾರ್ಶ್ವವಾಯು ಸಮಸ್ಯೆ ಶುರುವಾಗುತ್ತದೆ ಎಂದು ವೈದ್ಯರು ಹೇಳಿರುವುದಾಗಿ ಕೋರ್ಟ್ ಗೆ ತಿಳಿಸಿದ ದರ್ಶನ್ ಪರ ವಕೀಲರು, ಒಂದೂವರೆ ತಿಂಗಳ ಹಿಂದೆ ಮಧ್ಯಂತರ ಜಾಮೀನು ಪಡೆದರು. ಜಾ*ಮೀನು ಸಿಕ್ಕ ನಂತರ ದರ್ಶನ್ ಅವರು ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಅಡ್ಮಿಟ್ ಆಗಿದ್ದರು, ಒಂದೂವರೆ ತಿಂಗಳುಗಳಿಂದ ಅದೇ ಆಸ್ಪತ್ರೆಯಲ್ಲೇ ದರ್ಶನ್ ಇದ್ದಾರೆ..
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ದರ್ಶನ್ ಅವರಿಗೆ ಬೆನ್ನು ನೋವು, ಸರ್ಜರಿ ಆಗಲೇಬೇಕು ಅವರ ಆರೋಗ್ಯದ ಸ್ಥಿತಿ ಆ ರೀತಿ ಆಗಿದೆ ಎಂದು ವೈದ್ಯರು ರಿಪೋರ್ಟ್ ನೀಡಿದ ಕಾರಣ ಜಾಮೀನು ಸಿಕ್ಕಿತು. ಆದರೆ ಇದುವರೆಗೂ ದರ್ಶನ್ ಅವರು ಸರ್ಜರಿ ಮಾಡಿಸಿಕೊಂಡೇ ಇಲ್ಲ. ಅದರ ಬಗ್ಗೆ ಮುಂದಿನ ಹಿಯರಿಂಗ್ ನಲ್ಲಿ ಕೋರ್ಟ್ ಪ್ರಶ್ನಿಸಿದಾಗ, ದರ್ಶನ್ ಅವರಿಗೆ ಬಿಪಿಯಲ್ಲಿ ವೇರಿಯೇಷನ್ ಇರುವ ಕಾರಣ ಇನ್ನು ಸರ್ಜರಿ ಮಾಡಿಲ್ಲ ಎಂದು ಲಾಯರ್ ಸ್ಪಷ್ಟನೆ ನೀಡಿದ್ದಾರೆ. ಆದರೆ ನಟ ದರ್ಶನ್ ಅವರು ಆಸ್ಪತ್ರೆಯಲ್ಲೇ ಇದ್ದರು. ಈ ನಡುವೆ ಅವರಿಗೆ ಜಾಮೀನು ಸಿಕ್ಕಿ, ದರ್ಶನ್, ಪವಿತ್ರಾ ಗೌಡ ಹಾಗೂ ಎಲ್ಲರಿಗೂ ಜಾ*ಮೀನು ಸಿಕ್ಕಿ ಬಿಡುಗಡೆ ಆಗಿದೆ.

ಆದರೆ ಇದುವರೆಗೂ ಆಸ್ಪತ್ರೆಯಲ್ಲೇ ಇದ್ದ ದರ್ಶನ್ ಅವರು ಈಗ ಡಾಕ್ಟರ್ ಬಳಿ ಸಲಹೆ ಪಡೆದು, ಡಿಸ್ಚಾರ್ಜ್ ಮಾಡಿಸಿಕೊಂಡಿದ್ದಾರೆ. ಸರ್ಜರಿ ಇನ್ನು ಸಹ ಆಗಿಲ್ಲ, ಈ ಬಾರಿಯೂ ಬಿಪಿ ಕಾರಣ ನೀಡಲಾಗಿದೆ. ಒಟ್ಟಿನಲ್ಲಿ ಇಂದು ಆಸ್ಪತ್ರೆಯ ವಾಸವನ್ನು ದರ್ಶನ್ ಅವರು ಮುಗಿಸಿದ್ದಾರೆ ಎಂದು ಹೇಳಲಾಗುತ್ತಿದೆ. ದರ್ಶನ್ ಅವರು ಈಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಅವರನ್ನು ಮನೆಗೆ ಕರೆದುಕೊಂಡು ಹೋಗಲು ನಟ ಧನವೀರ್ ಸೇರಿದಂತೆ ಇನ್ನು ಕೆಲವರು ಬಂದಿದ್ದರು. ದರ್ಶನ್ ಅವರು ಆಸ್ಪತ್ರೆಯಿಂದ ನೇರವಾಗಿ ಪತ್ನಿ ವಿಜಯಲಕ್ಷ್ಮೀ ಅವರ ಹೊಸಕೆರೆಹಳ್ಳಿಯಲ್ಲಿರುವ ಮನೆಗೆ ಹೋಗಿದ್ದಾರೆ ಎಂದು ಮಾಹಿತಿ ಸಿಕ್ಕಿದೆ..
ದರ್ಶನ್ ಅವರಿಗೆ ಜಾ*ಮೀನು ಸಿಕ್ಕಿ, ಈಗ ಆಸ್ಪತ್ರೆಯಿಂದ ಕೂಡ ಡಿಸ್ಚಾರ್ಜ್ ಆಗಿರುವುದು ಅವರ ಅಭಿಮಾನಿಗಳಿಗೆ ಹೆಚ್ಚು ಸಂತೋಷ ತಂದಿದೆ. ಡಿಬಾಸ್ ವಾಪಸ್ ಬಂದಿದ್ದಾರೆ ಎಂದು ಬಹಳ ಸಂತೋಷಪಡುತ್ತಿದ್ದಾರೆ. ಇನ್ನು ಈ ಕೇಸ್ ಕಥೆ ಏನಾಗುತ್ತದೆ ಎನ್ನುವ ಸ್ವಲ್ಪ ಆತಂಕ ಕೂಡ ಇದೆ. ಆದರೆ ದರ್ಶನ್ ಅವರು ಇನ್ನುಮುಂದೆ ಹೊರಗಡೆಯೇ ಇರಬಹುದು, ಸಿನಿಮಾ ಚಿತ್ರೀಕರಣ ಎಲ್ಲವೂ ಶೀಘ್ರದಲ್ಲೇ ಶುರುವಾಗುತ್ತದೆ ಎನ್ನುವ ಸಮಾಧಾನ ಅಭಿಮಾನಿಗಳಲ್ಲಿ ಇದೆ. ಒಟ್ಟಿನಲ್ಲಿ ನಟ ದರ್ಶನ್ ಅವರು ಈಗ ಕೇಸ್ ಇಂದ ಒಂದು ಮಟ್ಟಿಗೆ ಫ್ರೀಡಂ ಪಡೆದುಕೊಂಡಿದ್ದಾರೆ.