ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಸಂಸದೆ ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್ ಇತ್ತೀಚೆಗಷ್ಟೇ ಅವಿವಾ ಬಿದ್ದಪ್ಪ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಹಾಗೂ ಜುಡಿತಾ ಬಿದ್ದಪ್ಪ ಪುತ್ರಿ ಅವಿವಾ ಬಿದ್ದಪ್ಪ. ಸದ್ಯ, ಅವಿವಾ ಬಿದ್ದಪ್ಪ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವರ್ಕೌಟ್ ವಿಡಿಯೋ ಸಕ್ಕತ್ ವೈರಲ್ ಆಗುತ್ತಿದೆ.

ವರ್ಷಗಳ ಹಿಂದಷ್ಟೇ ನಟ ಅಭಿಷೇಕ್ ಅಂಬರೀಶ್ ಜೊತೆ ಅವಿವಾ ಬಿದ್ದಪ್ಪ ಅವರು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಅವಿವಾ ಬಿದ್ದಪ್ಪ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಇವರು ಜಿಮ್ನಲ್ಲಿ ಸಖತ್ ವರ್ಕ್ ಔಟ್ ಮಾಡುತ್ತಿರೋ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನು ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಇನ್ನು ಅವಿವಾ ಬಿದ್ದಪ್ಪ ಕೂಡಾ ತಂದೆಯಂತೆ ಫ್ಯಾಷನ್ ಡಿಸೈನರ್. ಜೊತೆಗೆ ಮಾಡೆಲ್ ಹಾಗೂ ಬಿಸ್ನೆಸ್ವುಮನ್ ಆಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಅವಿವಾ ಹಾಗೂ ಅಭಿಷೇಕ್ ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಗುರು ಹಿರಿಯರ ಒಪ್ಪಿಗೆ ಮೇರೆಗೆ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ, ಈ ಮಟ್ಟಿಗೆ ಅವಿವಾ ಬಿದ್ದಪ್ಪ ವರ್ಕೌಟ್ ಮಾಡುತ್ತಿರುವುದು ಹೊಸ ಸಿನಿಮಾಗಾಗಿಯೋ ಅಥವಾ ಫಿಟ್ನೆಸ್ ಗಾಗಿಯೋ ಎಂಬುದನ್ನು ಕಾದು ನೋಡಬೇಕಾಗಿದೆ.