ಸಾಮಾಜಿಕ ಜಾಲತಾಣ ಅನ್ನುವ ಸಾಗರದಲ್ಲಿ ದಿನಕ್ಕೆ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತವೆ. ಅವುಗಳಲ್ಲಿ ಕೆಲವೊಂದು ವಿಡಿಯೋಗಳು ನಮ್ಮನ್ನು ಅಚ್ಚರಿ ಪಡಿಸಿದರೆ ಇನ್ನು ಕೆಲವು ನಮ್ಮನ್ನು ನಗೆಗಡಲಲ್ಲಿ ತೇಲಾಡುವಂತೆ ಮಾಡುತ್ತವೆ. ಸದ್ಯ, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಗಜ ಗಾತ್ರದ ಗೂಳಿಯೊಂದಿಗೆ ಕಾಳಗ ನಡೆಸಲು ಮುಂದಾಗಿದ್ದಾನೆ. ಆಮೇಲೆ ಏನಾಯ್ತು? ಎಂಬ ಪ್ರಶ್ನೆಗೆ ಈ ವಿಡಿಯೋ ನೋಡಿ.

https://www.instagram.com/reel/CwwWf44pTN0/?utm_source=ig_web_copy_link
ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಗೂಳಿ ಜೊತೆಗೆ ಸೆಣಸಾಡಲು ಹೋಗಿ ಅವಾಂತರ ಮಾಡಿಕೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಕುಡಿದ ನಶೆಯಲ್ಲಿದ್ದ ಆ ವ್ಯಕ್ತಿ ನಡುರಸ್ತೆಯಲ್ಲಿ ಸುಮ್ಮನೆ ನಿಂತಿದ್ದ ಗೂಳಿ ಬಳಿ ಹೋಗಿ ಅದರ ಕೊಂಬು ಹಿಡಿಯಲು ಯತ್ನಿಸಿದ್ದಾನೆ. ಹಲವಾರು ಬಾರಿ ಕೊಂಬು ಹಿಡಿಯಲು ಯತ್ನಿಸಿದ ವ್ಯಕ್ತಿಯ ವರ್ತನಯಿಂದ ಗೂಳಿಗೆ ಕಡುಕೋಪ ಬಂದಿದೆ.ಇರಲಾರದವರು ಇರುವೆ ಬಿಟ್ಟುಕೊಂಡರು’ ಎಂಬ ಗಾದೆಯಂತೆ ಈ ವ್ಯಕ್ತಿ ಸುಮ್ಮನೆ ಇದ್ದ ಗೂಳಿಗೆ ಕಾಟ ಕೊಟ್ಟಿದ್ದಾನೆ.
ಅಂತಿಮವಾಗಿ ಈತನ ಹುಚ್ಚಾಟ ಕಂಡು ರೋಸಿ ಹೋದ ಗೂಳಿ ಆತನ ವಿರುದ್ಧ ಯುದ್ಧಕ್ಕೆ ನಿಂತೇ ಬಿಟ್ಟಿತು. ಪರಿಣಾಮ ಕೋಪಗೊಂಡ ಗೂಳಿ ಆತನನ್ನು ತನ್ನ ಕೊಂಬಿನಿಂದ ತಿವಿದು ಮೇಲಕ್ಕೆ ಎತ್ತಿ ಬೀಸಾಡದೆ. ಪರಿಣಾಮ ನೆಲಕ್ಕೆ ಬಿದ್ದ ವ್ಯಕ್ತಿಯ ನಶೆ ಇಳಿದುಹೋಗಿದೆ. ಕೂಡಲೇ ಆತ ಗೂಳಿಯ ಸಹವಾಸ ಸಾಕು ಅಂತಾ ರಸ್ತೆ ಬದಿ ತೆರಳಿ ಕುಳಿತುಕೊಂಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಲಕ್ಷಾಂತರ ವೀಕ್ಷಣೆ ಕಂಡಿದೆ.