ವಿಮಾನದ ಮೂಲಕ ವೈಮಾನಿಕ ಮಾರ್ಗವಾಗಿ ಸಂಚರಿಸುವಾಗ ಸಾಮಾನ್ಯವಾಗಿ ದೇಹ ಮುಚ್ಚುವಂತೆ ಬಟ್ಟೆ ಧರಿಸುತ್ತಾರೆ. ಆದರೆ ಅಮೆರಿಕದ ಫ್ಲೋರಿಡಾದಲ್ಲಿ ವಿಮಾನ ಹತ್ತಲು ಮಹಿಳೆಯೊಬ್ಬರು ಅರೆಬೆತ್ತಲಾಗಿ ವಿಮಾನ ನಿಲ್ದಾಣಕ್ಕೆ ಎಂಟ್ರಿ ಕೊಟ್ಟಿರುವ ಶಾಕಿಂಗ್ ಘಟನೆ ನಡೆದಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ.
ಸದ್ಯ, ವೈರಲ್ ಆಗಿರುವ ವಿಡಿಯೋದಲ್ಲಿ ಅರೆಬೆತ್ತಲಾಗಿ ಮಹಿಳೆ ಟಿಕೆಟ್ ಕೌಂಟರ್ ನಲ್ಲಿ ನಿಂತಿರುವುದು ಕಂಡುಬಂದಿದೆ. ಈ ವಿಡಿಯೋ ನೋಡುಗರ ಹುಬ್ಬೇರಿಸುವಂತೆ ಮಾಡಿದೆ. ಫ್ಲೋರಿಡಾದಿಂದ ಹೊರಡುವ ತಮ್ಮ ವಿಮಾನಕ್ಕಾಗಿ ಕ್ಯೂನಲ್ಲಿ ನಿಂತಿದ್ದ ಈ ಮಹಿಳೆ ಸರಿಯಾಗಿ ಬಟ್ಟೆ ಧರಿಸದೆ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದಾರೆ. ಮಹಿಳೆಯ ಈ ಅವತಾರ ಕಂಡು ಸುತ್ತಮುತ್ತಲಿದ್ದ ಜನ ಹೌಹಾರಿದ್ದಾರೆ.
ಫೋರ್ಟ್ ಲಾಡರ್ಡೇಲ್-ಹಾಲಿವುಡ್ ಇಂಟರ್ನ್ಯಾಶನಲ್ ಏರ್ಪೋರ್ಟ್ನಲ್ಲಿ ಕಂಡು ಬಂದಿದೆ. ಸ್ಪಿರಿಟ್ ಏರ್ಲೈನ್ಸ್ ಕೌಂಟರ್ನಲ್ಲಿ ಅರಬೆತ್ತಲೆಯಾಗಿರುವ ಕಾಣಿಸಿಕೊಂಡಿರುವ ಮಹಿಳೆಯನ್ನು ಕಂಡ ಇತರ ಪ್ರಯಾಣಿಕರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಸರದಿ ಸಾಲಿನಲ್ಲಿ ನಿಂತಿದ್ದ ಈ ಮಹಿಳೆ ಕಿತ್ತಳೆ ಬಣ್ಣದ ಹಾಲ್ಟರ್-ನೆಕ್ ಉಡುಪನ್ನಷ್ಟೇ ಧರಿಸಿದ್ದರು. ಸೊಂಟದಿಂದ ಕೆಳಗಿನ ಭಾಗದಲ್ಲಿ ಬೆತ್ತಲೆಯಾಗಿದ್ದು, ಇದನ್ನು ಕಂಡ ಇತರೆ ಪ್ರಯಾಣಿಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇಲ್ಲಿ ಏನು ನಡೆಯುತ್ತಿದೆ ಅಂತಾ ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.