ಪ್ರೀತಿಗೆ ಕಣ್ಣಿಲ್ಲ, ಪ್ರೀತಿಗೆ ಯಾವುದೇ ಧರ್ಮ, ವಯಸ್ಸು, ಬಣ್ಣ, ಸೌಂದರ್ಯ ಹಂಗಿಲ್ಲ ಎನ್ನುವ ಮಾತಿದೆ. ಸದ್ಯ, ಈ ಮಾತು ಅಕ್ಷರಶಃ ಸತ್ಯವಾಗಿದೆ. ಕೇವಲ ಹೊರದೇಶಗಳಲ್ಲಿ ಮಾತ್ರ ಆಗುತ್ತಿದ್ದ ಸಲಿಂಗಕಾಮಿಗಳ ಮದುವೆ ಇದೀಗ ನಮ್ಮ ಭಾರತ ದೇಶದಲ್ಲೂ ನಡೆಯುತ್ತಿದೆ. ಇದಕ್ಕೆ ಉದಾಹರಣೆ ಮಹಾರಾಷ್ಟ್ರದ ಅವಿನಾಶ್ ಹಾಗೂ ವರುಣ್ ದಂಪತಿ. 6 ವರ್ಷಗಳ ಕಾಲ ಪ್ರೀತಿ ಮಾಡಿದ ಇವರು ಕುಟುಂಬದ ಒಪ್ಪಿಗೆ ಮೇರೆಗೆ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ತಮ್ಮ ವಿವಾಹದ ಮಧುರ ಕ್ಷಣಗಳ ವಿಡಿಯೋ ಹಂಚಿಕೊಂಡಿದ್ದಾರೆ.

https://www.instagram.com/reel/CutIO-vA_r1/?utm_source=ig_web_copy_link&igshid=MzRlODBiNWFlZA==
ತಮ್ಮ ಪ್ರೀತಿಯ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡಿರುವ ವರುಣ್, ‘6 ವರ್ಷಗಳ ದೀರ್ಘ ಪ್ರೇಮ ಸಂಬಂಧ ಮುಗ್ಗರಿಸಿದ್ದರಿಂದ ನಾನು ತೀವ್ರ ಬೇಸರದಲ್ಲಿದ್ದೆ. 2021ರಲ್ಲಿ ಪೋಷಕರನ್ನು ನೋಡಲು ಆಗಷ್ಟೇ ಭಾರತಕ್ಕೆ ಬಂದಿದ್ದ ನಾನು ಅವಿನಾಶ್ ಅವರನ್ನು ಭೇಟಿಮಾಡಿದೆ. ನಾನು ಗಂಭೀರವಾಗಿ ಸಂಗಾತಿಯ ಹುಡುಕಾಟದಲ್ಲಿದ್ದೆ. ನಾನು ಮತ್ತು 37 ವರ್ಷದ ಅವಿನಾಶ್ ಪರಸ್ಪರ ಪ್ರೀತಿಯಲ್ಲಿ ಬಿದ್ದೆವು’ ಎಂದು ಬರೆದುಕೊಂಡಿದ್ದಾರೆ.
ಸದ್ಯ, ಈ ಸಲಿಂಗ ಜೋಡಿ ಬಿಹಾರದಲ್ಲಿ ಅದ್ದೂರಿಯಾಗಿ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ವಿವಾಹವಾಗಿದ್ದಾರೆ. ಬಳಿಕ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈತನಕ 1.2 ಲಕ್ಷ ಜನರು ಲೈಕ್ ಮಾಡಿದ್ದು ಸುಮಾರು ಮೂರು ಮಿಲಿಯನ್ ಜನರು ನೋಡಿದ್ದಾರೆ. ಸಾವಿರಾರು ಜನರು ಈ ಜೋಡಿಗೆ ಶುಭಹಾರೈಸಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.