
ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಸ್ಪರ್ಧಿಯಾಗಿ ಬಂದಿರುವವರು ಐಶ್ವರ್ಯ ಸಿಂಧೋಗಿ. ಈ ಶೋಗೆ ಬಂದಮೇಲೆ ಇವರ ಬಗ್ಗೆ ಜನರಿಗೆ ಗೊತ್ತಾಗುತ್ತಿದೆ. ನೇರ ನಡೆ ಇಂದಲೇ ಎಲ್ಲರಿಗೂ ಇಷ್ಟ ಆಗುತ್ತಿದ್ದಾರೆ ಐಶ್ವರ್ಯ. ಈವರೆಗೂ ಹಲವು ಧಾರಾವಾಹಿಗಳಲ್ಲಿ ಐಶ್ವರ್ಯ ಸಿಂಧೋಗಿ ನಟಿಸಿದ್ದರೂ, ಬಿಗ್ ಬಾಸ್ ಇವರಿಗೆ ಒಳ್ಳೆಯ ಬ್ರೇಕ್ ಕೊಡುತ್ತಿದೆ. ಜನರ ಬೆಂಬಲ ಕೂಡ ಐಶ್ವರ್ಯ ಅವರಿಗೆ ಸಿಕ್ಕಿದೆ. ನಮಗೆಲ್ಲಾ ಈಗಾಗಲೇ ಗೊತ್ತಿರುವ ಹಾಗೆ ಐಶ್ವರ್ಯ ಅವರಿಗೆ ತಂದೆ ತಾಯಿ ಇಬ್ಬರೂ ಇಲ್ಲ. ಐಶ್ವರ್ಯ ಅವರ ತಾಯಿ ವಿಧಿವಶರಾಗಲು ಐಶ್ವರ್ಯ ಅವರು ಮಾಡಿದ ಆ ಒಂದು ತಪ್ಪು ಕಾರಣವಂತೆ..
ಹೌದು, ತಾಯಿ ಬಗ್ಗೆ ಐಶ್ವರ್ಯ ಅವರು ಮಾತನಾಡಿದ್ದಾರೆ. ಬಿಗ್ ಬಾಸ್ ಐಶ್ವರ್ಯ ಅವರಿಗೆ ಒಂದು ಅವಕಾಶ ನೀಡಿದರು. ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳಬೇಕು ಎಂದು ಹೇಳಿದರು. ಆಗ ಐಶ್ವರ್ಯ ಅವರು ತಾಯಿಯ ಸಾವಿನ ಬಗ್ಗೆ ಮಾತನಾಡಿದ್ದಾರೆ. ಐಶ್ವರ್ಯ ಅವರ ತಾಯಿ ನಿಧನರಾಗಿದ್ದು ಬಹು ಅಂಗಾಂಗಗಳ ವೈಫಲ್ಯದಿಂದ. ಇವರ ತಾಯಿ 2020ರಲ್ಲಿ ವಿಧಿವಶರಾದರು, ಐಶ್ವರ್ಯ ಅವರ ತಂದೆ 2 ವರ್ಷಗಳ ಹಿಂದೆ, 2018ರಲ್ಲಿ ವಿಧಿವಶರಾಗಿದ್ದರು. 2 ವರ್ಷಗಳ ಅಂತರದಲ್ಲಿ ತಂದೆ ತಾಯಿ ಇಬ್ಬರನ್ನು ಕಳೆದುಕೊಂಡಿದ್ದಾರೆ ಐಶ್ವರ್ಯ..
ತಂದೆ ಹೋದ ನಂತರ ಐಶ್ವರ್ಯ ಮತ್ತು ಅವರ ತಾಯಿ ಇಬ್ಬರು ಕೂಡ ಚೆನ್ನಾಗಿಯೇ ಇದ್ದರು. ಅಮ್ಮನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರಂತೆ ಐಶ್ವರ್ಯ. ಆದರೆ ಒಂದು ಸಾರಿ ತಾನು ಮಾಡಿದ ಅಡುಗೆಯನ್ನು ಅಮ್ಮ ಚೆಲ್ಲಿದರು ಎನ್ನುವ ಕಾರಣಕ್ಕೆ ಐಶ್ವರ್ಯ ಅವರಿಗೆ ತುಂಬಾ ಕೋಪ ಬಂದು ಬೈದುಬಿಟ್ಟರಂತೆ. ನಿನಗೆ ಇಷ್ಟ ಇಲ್ಲ ಅಂದ್ರೆ ಹೊರಟು ಹೋಗು ಎಂದು ಕಿರುಚಾಡಿ ಬೈದುಬಿಟ್ಟರಂತೆ. ಇದರಿಂದ ಅವರ ತಾಯಿಗೆ ತುಂಬಾ ನೋವಾಗಿ, ಅವರ ಅಜ್ಜಿ ಮನೆಗೆ ಹೋದರಂತೆ. ಆದರೆ ಮಗಳನ್ನು ಬಿಟ್ಟಿರಲು ಆಗದೇ, ಒಂದೇ ತಿಂಗಳಿಗೆ ವಾಪಸ್ ಬಂದರಂತೆ.

ಆದರೆ ಅವರ ಅಮ್ಮ ವಾಪಸ್ ಬಂದಾಗ, ತುಂಬಾ ವೀಕ್ ಆಗಿದ್ದರಂತೆ, ದೇಹ ಊದಿಕೊಂಡಿತ್ತಂತೆ. ಆ ವೇಳೆ ಐಶ್ವರ್ಯ ಅವರಿಗೂ ಕೋವಿಡ್ ಇದ್ದ ಕಾರಣ ಅಮ್ಮನನ್ನು ಸರಿಯಾಗಿ ನೋಡಿಕೊಳ್ಳಲು ಆಗಲಿಲ್ಲವಂತೆ. ಆ ಒಂದು ಕೊರಗು ಐಶ್ವರ್ಯ ಅವರಲ್ಲಿದೆ, ಬಳಿಕ ಅಮ್ಮನ ಆರೋಗ್ಯ ತುಂಬಾ ಹದಗೆಟ್ಟ ನಂತರ ಆಸ್ಪತ್ರೆಗೆ ಸೇರಿಸಿದರಂತೆ. ಐಶ್ವರ್ಯ ಮಾತನಾಡಿಸಲು ಹೋದಾಗ, ನಿನ್ನದು ಊಟ ಆಯ್ತಾ ಎಂದು ಕೇಳಿದರಂತೆ ಅವರ ತಾಯಿ. ಅದಾದ ಮೂರು ದಿನಕ್ಕೆ ಅಮ್ಮನನ್ನು ಕಳೆದುಕೊಂಡರು ಐಶ್ವರ್ಯ. ಅಮ್ಮನದ್ದು ನಿಸ್ವಾರ್ಥ ಮನಸ್ಸು ಎಂದು ಕಣ್ಣೀರು ಹಾಕಿದರು.
ಅಮ್ಮ ನನ್ನ ಜೊತೆ ಇದ್ದಿದ್ದರೆ ಹಾಗೆಲ್ಲಾ ಆಗ್ತಿರ್ಲಿಲ್ಲ. ಅಜ್ಜಿ ಮನೆಗೆ ಹೋಗಿ ಹಾಗೆಲ್ಲಾ ಆಯ್ತು ಎಂದು ಐಶ್ವರ್ಯ ಕಣ್ಣೀರು ಹಾಕಿದಾಗ, ಬಿಗ್ ಬಾಸ್ ಸಮಾಧಾನ ಮಾಡಿದ್ದಾರೆ. ಇನ್ನು ಹೊರಗಡೆ ಕೂಡ ಐಶ್ವರ್ಯ ಅವರಿಗೆ ಒಳ್ಳೆಯ ಸಪೋರ್ಟ್ ಇದೆ, ಅವರ ಕುಟುಂಬವಾಗಿ ನಾವಿದ್ದೇವೆ ಎಂದು ಹೊರಗಿನ ಜನರು ಐಶ್ವರ್ಯ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಐಶ್ವರ್ಯ ಅವರಿಗಾಗಿ ಸುದೀಪ್ ಅವರು ಕೂಡ ವಿಶೇಷವಾಗಿ ಕೆಲವು ತಿಂಡಿಗಳನ್ನು ಕಳಿಸಿಕೊಟ್ಟಿದ್ದರು. ಐಶ್ವರ್ಯ ಅವರು ಹೆಚ್ಚು ದಿನಗಳ ವರೆಗು ಬಿಗ್ ಬಾಸ್ ಮನೆಯಲ್ಲಿ ಇರಬೇಕು ಎನ್ನುವುದು ಎಲ್ಲರ ಆಸೆ ಆಗಿದೆ.