ದ್ರುವ ಸರ್ಜಾ ಕನ್ನಡ ಚಿತ್ರರಂಗದಲ್ಲಿ ಆಕ್ಷನ್ ಹೀರೊ ಆಗಿ ಸಾಕಷ್ಟು ಸದ್ದು ಮಾಡಿರುವ ನಟ. ಸ್ಯಾಂಡಲ್ ವುಡ್ ಆಕ್ಷನ್ ಪ್ರಿನ್ಸ್ ದ್ರುವ ಇದೀಗ ತನ್ನ ಸ್ನೇಹಿತ ಹುಟ್ಟುಹಬ್ಬಕ್ಕೆ ದುಬಾರಿ ಕಾರನ್ನ ನೀಡುವ ಮೂಲಕ ಸಾಕಷ್ಟು ಸುದ್ದಿಯಾಗಿದ್ದಾರೆ.51 ಲಕ್ಷ ಮೌಲ್ಯದ ಫಾರ್ಚುನರ್ ಕಾರನ್ನು ತನ್ನ ಸ್ನೇಹಿತ ಅಶ್ವಿನ್ ಹುಟ್ಟುಹಬ್ಬದ ಉಡುಗೊರೆಯಾಗಿ ನೀಡುವ ಮುಖಾಂತರ ಸ್ನೇಹಿತನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಸರ್ಜಾ ಕುಟುಂಬವೇ ಹಾಗೇ ಸಾಕಷ್ಟು ಪರೋಪಕಾರಿ ಗುಣವುಳ್ಳ ಕುಟುಂಬವಾಗಿದ್ದು, ಅರ್ಜುನ್ ಸರ್ಜಾ ಈಗಾಗಲೇ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚಿಗೆ ಹುನುಮಾನ್ ದೇವಸ್ಥಾನವನ್ನು ಕಟ್ಟಲು ಮುಂದಾಗಿದ್ದು, ರಾಮ ಭಕ್ತನಾದ ಹುನುಮಂತನ ಮೇಲೆ ಸರ್ಜಾ ಕುಟುಂಬಕ್ಕೆ ಎಲ್ಲಿಲ್ಲದ ಪ್ರೀತಿ.
ಇತ್ತೀಚಿಗಷ್ಟೇ ಸರ್ಜಾ ಪ್ಯಾಮಿಲಿ ಚಿರುವನ್ನ ಕಳೆದುಕೊಂಡು ಸಾಕಷ್ಟು ನೋವನ್ನ ಅನುಭವಿಸಿತ್ತು. ಇದೀಗ ಆ ಮನೆಯ ನೋವನ್ನು ನಿಗಿಸಲು ಜೂನಿಯರ್ ಚಿರು ಆರ್ಯನ್ ಮನೆ ತುಂಬಾ ನೆಮ್ಮದಿ ಮೂಡಿಸಿದ್ದಾನೆ. ಚಿರು ಸಾವಿನ ನಂತರ ಕುಗ್ಗಿದ್ದ ದ್ರುವ ಇದೀಗ ಮತ್ತೆ ತಮ್ಮ ಲಯಕ್ಕೆ ಮರಳಿದ್ದು ಮಾರ್ಟೀನ್ ಚಿತ್ರದಲ್ಲಿ ಬ್ಯುಸಿ ಆಗಿದ್ದು, ಈಗಾಗಲೇ ಮಾರ್ಟೀನ್ ಚಿತ್ರ ಟೀಸರ್ ಮೂಲಕ ಸಾಕಷ್ಟು ಸದ್ದು ಮಾಡಿದ್ದು, ದ್ರುವ ಸರ್ಜಾ ತಮ್ಮ ಆಕ್ಷನ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ದ್ರುವ ಸರ್ಜಾ ಮಾರ್ಟೀನ್ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ.
ಈ ಹಿಂದೆ ಪೊಗರು ಚಿತ್ರದಲ್ಲಿ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡ ದ್ರುವ ಸರ್ಜಾ, ಮಾರ್ಟೀನ್ ಮೂಲಕ ಇನ್ನಷ್ಟು ಸದ್ದು ಮಾಡುವ ನಿರೀಕ್ಷೆ ಇದೆ ಎನ್ನಲಾಗಿದೆ. ದ್ರುವ ಸರ್ಜಾ ಇತ್ತೀಚಿಗೆ ಮದುವೆಯಾಗಿದ್ದು, ತಮ್ಮ ವೈವಾಹಿಕ ಜೀವನವನ್ನು ಕೂಡ ಸುಂದರವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಇತ್ತೀಚಿಗೆ ಪ್ರೇಮ್ ನಿರ್ದೇಶನದ ಕೆ. ಡಿ ಚಿತ್ರಕ್ಕಾಗಿ ದ್ರುವ ಸರ್ಜಾ 18 ಕೆ. ಜಿ ತೂಕವನ್ನು ಇಳಿಸುವ ಕಾರ್ಯ ಮಾಡಿದ್ದರು. ದ್ರುವ ಸರ್ಜಾ ಸಿನಿಮಾ ವಿಚಾರದಲ್ಲಿ ಸಾಕಷ್ಟು ಶ್ರದ್ದೆಯನ್ನ ಹೊಂದಿದ್ದು,ಈ ಹಿಂದೆ ಸಿನಿಮಾಗಳಿಗೋಸ್ಕರ ದೇಹದ ತೂಕವನ್ನು ಜಾಸ್ತಿ ಮಾಡಿಕೊಂಡಿದ್ರು.
ಮಾರ್ಟೀನ್ ಚಿತ್ರದ ಬಗ್ಗೆ ಕೂಡ ಚಿತ್ರತಂಡ ಸಿಹಿ ಸುದ್ದಿ ನೀಡಲು ಸಿದ್ದವಾಗಿದೆ. ಹೌದು ಮಾರ್ಟೀನ್ ಚಿತ್ರ ಅಕ್ಟೊಬರ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಪ್ಯಾನ್ ಇಂಡಿಯಾ ಚಿತ್ರವಿದಾಗಿದ್ದು, ಆಕ್ಷನ್ ಪ್ರಿನ್ಸ್ ಇನ್ನೂ ಮುಂದೆ ಪ್ಯಾನ್ ಇಂಡಿಯಾ ಹೀರೊ ಆಗಲಿದ್ದಾರೆ. ಸರ್ಜಾ ಪ್ಯಾಮಿಲಿಯ ಅರ್ಜುನ್ ಸರ್ಜಾ ಈ ಹಿಂದೆಯೇ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದ್ದರು. ಮಾರ್ಟೀನ್ ಚಿತ್ರ ಬಹುಭಾಷಾ ಚಿತ್ರವಾಗಿದ್ದು, ಕೋಟಿಗಟ್ಟಲೆ ಬಜೆಟ್ ನಲ್ಲಿ ಈ ಚಿತ್ರ ಸಿದ್ದವಾಗಲಿದೆ.
ದ್ರುವ ಸರ್ಜಾ ಪ್ಯಾಮಿಲಿಗೆ ಮುದ್ದಾದ ಹೆಣ್ಣು ಮಗು ಹುಟ್ಟಿದ್ದು ಈಗಾಗಲೇ ನಾಮಕರಣದ ತಯಾರಿಯಲ್ಲಿದೆ ಸರ್ಜಾ ಕುಟುಂಬ. ಒಂದು ವಾರದ ಹಿಂದೆ ಚಿರು ಪುಣ್ಯ ಸ್ಮರಣೆಯಲ್ಲಿ ಭಾಗವಹಿಸಿದ ಕುಟುಂಬ ಭಾವುಕವಾಗಿತ್ತು. ಸಹೋದರನ ಕಳೆದುಕೊಂಡ ದಿನವನ್ನ ನೆನೆದು ದ್ರುವ ಅಳುತ್ತಿರುವ ದೃಶ್ಯಗಳು ಕೂಡ ಅಭಿಮಾನಿಗಳನ್ನ ಭಾವುಕರಾನ್ನಾಗಿಸಿತ್ತು. ಒಟ್ಟಾರೆ ದ್ರುವ ಇದೀಗ ಜಾಲಿ ಮೂಡ್ ನಲ್ಲಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಮಾರ್ಟೀನ್ ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿಯಾಗಲಿದ್ದಾರೆ. ದ್ರುವ ಸರ್ಜಾ ತನ್ನ ಸ್ನೇಹಿತನಿಗೆ ಭರ್ಜರಿ ಗಿಫ್ಟ್ ನ್ನ ಕೊಡುವ ಮೂಲಕ ತನ್ನ ಸ್ನೇಹಿತ ಹುಟ್ಟುಹಬ್ಬವನ್ನ ಅದ್ದೂರಿಯಾಗಿ ಆಚರಿಸುವ ಮೂಲಕ ಶುಭಾಶಯ ಕೊರಿದ್ದಾರೆ.