ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಶೋನ ಸಾರಥಿ. ಇವರಿಲ್ಲದೆ ಈ ಶೋಗೆ ಆ ಶೋಭೆ, ಕಳೆ ಇರೋದಿಲ್ಲ. ಇದು ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡುತ್ತಿರುವ ಕೊನೆಯ ಸೀಸನ್ ಎನ್ನುವ ವಿಷಯ ಗೊತ್ತೇ ಇದೆ. ಇದು ಅಭಿಮಾನಿಗಳಿಗೆ ಬೇಸರ ಇರುವ ವಿಚಾರವೇ, ಆದರೆ ಎಲ್ಲರೂ ಸಹ ಈ ಸೀಸನ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್ ಅವರಿಗಾಗಿ ಪ್ರತಿ ದಿನ ಬಿಗ್ ಬಾಸ್ ಶೋ ಅನ್ನು ತಪ್ಪದೇ ನೋಡುತ್ತಿದ್ದಾರೆ. ಹಾಗೆಯೇ ವೀಕೆಂಡ್ ಎಪಿಸೋಡ್ ಗಳನ್ನಂತೂ ಮಿಸ್ ಮಾಡದೆ ನೋಡುತ್ತಿದ್ದಾರೆ. ಈ ವೇಳೆ ಸುದೀಪ್ ಅವರಿಂದ ಹನುಮಂತನಿಗೆ ಭರ್ಜರಿಯಾದ ಗಿಫ್ಟ್ ಸಿಕ್ಕಿದೆ.

ಕಿಚ್ಚ ಸುದೀಪ್ ಅವರು ತುಂಬಾ ಒಳ್ಳೆಯ ಮನುಷ್ಯ, ಸಹಾಯ ಗುಣ, ಮಾನವೀಯತೆ ಹೊಂದಿರುವವರು. ಹಲವು ಬಾರಿ ಇದನ್ನು ನಾವು ಬಿಗ್ ಬಾಸ್ ವೇದಿಕೆಯಲ್ಲಿ ಸಹ ನೋಡಿದ್ದೇವೆ. ಸುದೀಪ್ ಅವರು ಸ್ಪರ್ಧಿಗಳಿಗೆ ಅಡುಗೆ ಮಾಡಿ ಕೊಟ್ಟಿದ್ದಾರೆ, ಸ್ಪರ್ಧಿಗಳು ಕೇಳಿದಾಗ ಜ್ಯಾಕೆಟ್ ಕೂಡ ಕೊಟ್ಟಿದ್ದಾರೆ. ಇದೀಗ ಹನುಮಂತ ಅವರಿಗೆ ಸಹ ಸುದೀಪ್ ಅವರ ಕಡೆಯಿಂದ ಭರ್ಜರಿ ಸಹಾಯ ಹಾಗೂ ಉಡುಗೊರೆ ಸಿಕ್ಕಿದೆ. ಹೌದು, ಭಾನುವಾರದ ಸಂಚಿಕೆಯಲ್ಲಿ ಹನುಮಂತ ಅವರ ಬಗ್ಗೆ ಒಂದು ವಿಚಾರ ಚರ್ಚೆ ಆಯಿತು. ಸರಿಗಮಪ ಖ್ಯಾತಿಯ ಹನುಮಂತ ಬಿಗ್ ಬಾಸ್ ಮನೆಗೆ ಬಂದಿದ್ದಾರೆ.
ಇವರು ಪ್ರತಿದಿನ ಸ್ನಾನ ಮಾಡುತ್ತಿಲ್ಲ ಎನ್ನುವುದು ಮನೆಯ ಬೇರೆ ಸದಸ್ಯರಿಗೆ ಸ್ವಲ್ಪ ಮುಜುಗರ ಉಂಟು ಮಾಡಿತು. ಸುದೀಪ್ ಅವರು ಇದಕ್ಕೆ ಕಾರಣ ಏನೆಂದು ಕೇಳಿದರು, ಅದಕ್ಕೆ ಹನುಮಂತ ತಾನು ತಂದಿರುವುದೇ ಕೆಲವು ಜೊತೆ ಬಟ್ಟೆಗಳು, ದಿನಾ ಸ್ನಾನ ಮಾಡಿದರೆ ಒಗೆದು ಹಾಕಿಕೊಳ್ಳೋಕೆ ಕಷ್ಟ ಆಗುತ್ತದೆ ಎಂದು, ಅದೇ ಕಾರಣಕ್ಕೆ ಪ್ರತಿದಿನ ಸ್ನಾನ ಮಾಡುತ್ತಿಲ್ಲ ಎಂದು ಹೇಳಿದರು. ಆಗ ಮೊದಲು ಸುದೀಪ್ ಅವರು ಏನನ್ನು ಸಹ ಮಾತನಾಡಲಿಲ್ಲ, ಆ ಟಾಪಿಕ್ ಬಿಟ್ಟು ಬೇರೆ ವಿಷಯಗಳನ್ನು ಮಾತನಾಡಿದರು. ಬಳಿಕ ಹನುಮಂತನಿಗೆ ನಿಮ್ಮ ಅಳತೆ ಕಳಿಸಿಕೊಡಿ, ನಮ್ಮ ಡಿಸೈನರ್ ಗಳು ನಿಮಗೆ ಬಟ್ಟೆ ರೆಡಿ ಮಾಡುತ್ತಾರೆ ಎಂದಿದ್ದರು.

ಇದೀಗ ಸುದೀಪ್ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಸುದೀಪ್ ಅವರು ಹನುಮಂತನಿಗೆ ಹೊಸದಾದ ರಾಶಿ ಬಟ್ಟೆಗಳನ್ನು ಕಳಿಸಿಕೊಟ್ಟಿದ್ದಾರೆ. ಇದನ್ನು ನೋಡಿ ಹನುಮಂತನಿಗೆ ಬಹಳ ಸಂತೋಷ ಆಗಿದೆ. ಹಾಗೆಯೇ ದೊಡ್ಡ ದೊಡ್ಡ ಬ್ರ್ಯಾಂಡ್ ನ 3000 ರೂಪಾಯಿ ಬೆಲೆ ಬಾಳುವ ಚಡ್ಡಿಗಳನ್ನು ಸಹ ಹನುಮಂತನಿಗೆ ಕಳಿಸಿದ್ದಾರೆ. ಇದರ ಜೊತೆಗೆ ಸುದೀಪ್ ಅವರ ಕಡೆಯಿಂದ ಹನುಮಂತನಿಗೆ ಒಂದು ವಿಶೇಷವಾದ ಲೆಟರ್ ಕೂಡ ಬಂದಿದೆ.

“ಮೈ ಮುಚ್ಚೋ ಬಟ್ಟೆ ನೋಡಿ ಮನವ ಅಳಿಬ್ಯಾಡ್ರಿ.. ಮನಸ ತೋರೋ ನಗುವ ನೋಡಲು ಸುಮ್ಮನೆ ಇರಬೇಡಿ. ಕುರಿಯ ಕಾಯೋ ಕುರಿಗಾಹಿ ಕೊಡುತ್ತಾನೋ ಕಂಬಳಿ..
ಲೋ ತಮ್ಮ ಹನುಮಂತ ದಿನವೂ ಜಳಕ ಮಾಡೋ.. ದಿನದಿನವೂ ಪದವ ಕಟ್ಟಿ ಹೊಸ ಹಾಡು ಹಾಡೋ.. ಇಂತಿ ಕಿಚ್ಚ..” ಎಂದು ಕಿಚ್ಚ ಸುದೀಪ್ ಅವರು ಪತ್ರದಲ್ಲಿ ಬರೆದಿದ್ದಾರೆ. ಹನುಮಂತನಿಗೆ ಇದು ಒಳ್ಳೆಯ ಬೂಸ್ಟ್ ಕೊಟ್ಟಿದೆ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಇನ್ನು ಸುದೀಪ್ ಅವರ ಈ ಗುಣಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಿಚ್ಚ ಅವರ ಒಳ್ಳೆಯತನವನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ. ಸುದೀಪ್ ಅವರ ಈ ಮಾನವೀಯತೆಯ ಗುಣವೇ ಎಲ್ಲರಿಗೂ ಇಷ್ಟ ಆಗುತ್ತಿರುವುದು. ಕಿಚ್ಚ ಅವರ ಈ ಗುಣದಿಂದಲೇ ಕೋಟಿ ಅಭಿಮಾನಿಗಳ ಪ್ರೀತಿ ಗಳಿಸಿದ್ದಾರೆ.