ಎಲ್ಲಾ ದೇಶಗಳಲ್ಲೂ ಪಶುಸಂಗೋಪನೆ ಎಂಬುದು ನಾಗರೀಕತೆಯೊಂದಿಗೆ ಬೆಳೆದು ಬಂದಿದೆ. ಕೆಲವು ದೇಶಗಳಲ್ಲಿ ಹಸುಗಳನ್ನು ಮಾಂಸಕ್ಕಾಗಿಯೂ ಬಳಸಲಾಗುತ್ತದೆ. ಸಾಕಲಿ ಅಥವಾ ಮಾಂಸಕ್ಕಾಗಿ ಮಾರಾಟವಾಗುವ ಹಸುಗಳ ಬೆಲೆ ಎಷ್ಟಿರಬಹುದು?. ಹೆಚ್ಚೆಂದರೆ 5 ಲಕ್ಷ. ಆದರೆ ಇಲ್ಲೊಂದು ಹಸು ಬರೋಬ್ಬರಿ ₹35 ಕೋಟಿ ಬೆಲೆಗೆ ಮಾರಾಟವಾಗು ವಿಶ್ವ ದಾಖಲೆ ಬರೆದಿದೆ. ಅಷ್ಟಕ್ಕೂ ಈ ಹಸುವಿನಲ್ಲಿ ಅಂತಾದ್ದೇನಿದೆ ಅಂತೀರಾ?. ಈ ವರದಿ ಓದಿ.

2022ರ ಜೂನ್ ನಲ್ಲಿ ನೆರೆಯ ಬ್ರೆಜಿಲ್ ದೇಶದಲ್ಲಿ ಹಸುಗಳ ಹರಾಜು ಪ್ರಕ್ರಿಯೆ ನಡೆದಿತ್ತು, ಈ ಹರಾಜಿನಲ್ಲಿ ಬಿಳಿ ಬಣ್ಣದ, ನೆಲ್ಲೂರು ತಳಿಯ ದೈತ್ಯಾಕಾರದ ಹಸುವೊಂದು 35 ಕೋಟಿ ಬೆಲೆಗೆ ಹರಾಜಾಗಿದೆ. ಇದರೊಂದಿಗೆ ಈ ಹಸು ಅತ್ಯಂತ ದುಬಾರಿ ಬೆಲೆಗೆ ಮಾರಾಟವಾದ ವಿಶ್ವದ ಮೊಟ್ಟಮೊದಲ ಹಸು ಎಂಬ ಹಿರಿಮೆ ತನ್ನದಾಗಿಸಿಕೊಂಡಿದೆ. ಇಷ್ಟು ದೊಡ್ಡ ಮೊತ್ತಕ್ಕೆ ಹರಾಜಾಗುವಂತಹ ವಿಶೇಷತೆ ಈ ಹಸುವಿನಲ್ಲಿ ಏನಿದೆ? ಎಂದು ನೀವು ಯೋಚಿಸಬಹುದು.
ಈ ಹಸುವನ್ನು ಹೆಚ್ಚಾಗಿ ಮಾರ್ಬಲ್ಡ್ ಗೋಮಾಂಸ ತಯಾರಿಕೆಗೆ ಬಳಸಲಾಗುತ್ತದೆ. ಜೊತೆಗೆ ಈ ತಳಿಯ ಹಸುಗಳು ಶುಭ್ರವಾದ ಬಿಳಿ ಬಣ್ಣದ ತುಪ್ಪಳವನ್ನು ಹೊಂದಿರುತ್ತದೆ. ಜೊತೆಗೆ ಭುಜದ ಮೇಲೆ ಆಕರ್ಷಕವಾದ ಗೂನು ಹೊಂದಿರುತ್ತದೆ. ಜೊತೆಗೆ ಈ ದುಬಾರಿ ಹಸುವು ತನ್ನಲ್ಲಿರುವ ಸಡಿಲವಾದ ಮತ್ತು ಇಳಿ ಬಿದ್ದ ಚರ್ಮದಿಂದಾಗಿ ಹೆಚ್ಚಿನ ತಾಪಮಾನವನ್ನು ತಡೆದುಕೊಳ್ಳುವ ಶಕ್ತಿ ಹೊಂದಿರುತ್ತಾದೆ. ಹಾಗೆಯೇ ಈ ಹಸುಗಳನ್ನು ಯುರೋಪಿಯನ್ ಹಸುಗಳಿಗೆ ಹೋಲಿಸಿದರೆ ಅವುಗಳಿಗಿಂತಲೂ ಎರಡು ಪಟ್ಟು ಹೆಚ್ಚು ಬೆವರು ಗ್ರಂಥಿಗಳನ್ನು ಹೊಂದಿದೆ.