ಮನುಷ್ಯರಿಗೆ ಮದುವೆ,ಮದರಂಗಿ, ಸೀಮಂತ ನಡೆಯುವುದನ್ನು ನೀವೆಲ್ಲ ಸಾಮಾನ್ಯವಾಗಿ ನೋಡಿರಬಹುದು, ಕೇಳಿರಬಹುದು. ಆದರೆ ಮನೆಯ ಸಾಕು ನಾಯಿಗಳಿಗೆ ಸೀಮಂತ ಮಾಡುವುದನ್ನು ಎಂದಾದರೂ ಕಂಡಿದ್ದೀರಾ. ಇಲ್ಲಾ ಎಂದಾದರೆ ಈ ವಿಡಿಯೋ ನೋಡಿ. ಇಲ್ಲೊಂದು ದಂಪತಿ ತಮ್ಮ ಮನೆಯ ಮುದ್ದಾದ ಸಾಕು ನಾಯಿಗಳಿಗೆ ಸಂಪ್ರದಾಯ ಬದ್ಧವಾಗಿ ಸೀಮಂತ ಮಾಡಿಸಿದ್ದಾರೆ. ಈ ಶ್ವಾನ ಸೀಮಂತದ ವಿಡಿಯೋ ಸದ್ಯ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

https://www.instagram.com/reel/Cxu3549SNHi/?utm_source=ig_web_copy_link
ರೋಸಿ ಮತ್ತು ರೆಮೋ ಎಂಬ ಎರಡು ಮುದ್ದಾದ ಸಾಕು ನಾಯಿಗಳಿಗೆ ಇವುಗಳ ಪೋಷಕ ಸಿದ್ಧಾರ್ಥ್ ಶಿವಂ ಚೆನ್ನಾಗಿ ಅಲಂಕಾರ ಮಾಡಿ, ನಾಯಿಗಳ ಇಷ್ಟದ ತಿಂಡಿ ತಿನಿಸುಗಳನ್ನು ನೀಡಿ ಸೀಮಂತ ಮಾಡಿಸಿ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಈತನಕ ಸುಮಾರು 90,000 ಜನ ಲೈಕ್ ಮಾಡಿದ್ದಾರೆ. ಈತನಕ ಸುಮಾರು 7 ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ. ನೂರಾರು ಜನರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋ ನೋಡಿ ಖುಷಿಯಾಗಿರುವ ನೆಟ್ಟಿಗರೊಬ್ಬರು, ‘ಮನಸ್ಸು ತುಂಬಿ ಬಂದಿದೆ, ಮುಂದಿನ ಹಂತದ ವಿಡಿಯೋಗಳನ್ನು ನೋಡಲು ಕಾತುರರಾಗಿದ್ದೇವೆ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ. ನಿಮ್ಮ ಮಗಳಿಗೆ ಸುಗಮವಾಗಿ ಹೆರಿಗೆ ಆಗಲಿ, ಆರೋಗ್ಯವಂತ ಮೊಮ್ಮಕ್ಕಳನ್ನು ನೀವು ಪಡೆಯಿರಿ, ದೇವರು ನಿಮ್ಮ ಕುಟುಂಬವನ್ನು ಆಶೀರ್ವದಿಸಲಿ ಎಂದಿದ್ದಾರೆ ಒಬ್ಬರು. ಅವಳಿಗೆ ಬಿಗಿಯಾಗಿ ಅಪ್ಪಿಕೊಂಡು ಮುತ್ತು ನೀಡಬೇಕು ಎಂದಿದ್ದಾರೆ ಇನ್ನೊಬ್ಬರು. ಅಂತೂ-ಇಂತೂ ಸಾಮಾಜಿಕ ಜಾಲತಾಣದ ಭರಾಟೆಯಿಂದಾಗಿ ಪ್ರಾಣಿಗಳಿಗೂ ಮನುಷ್ಯರಂತೆ ಮದುವೆ, ಸೀಮಂತ ಮಾಡಿಸುವ ಪದ್ದತಿ ಹುಟ್ಟುತ್ತಿರುವುದು ಖುಷಿಯ ವಿಚಾರ.