ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಕಂಡರೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ, ಅಪ್ಪು ಅವರು ನಮ್ಮನ್ನಗಲಿ ವರ್ಷಗಳೇ ಉರುಳಿ ಹೋಗಿದ್ದರೂ, ಇಂದಿಗು ಅವರ ನೆನಪು, ಅವರ ಮೇಲಿನ ಪ್ರೀತಿ ಒಂದಿಷ್ಟು ಕಡಿಮೆ ಆಗಿಲ್ಲ. ಆ ಪುಣ್ಯಾತ್ಮ ಒಂದೇ ಒಂದು ಸಾರಿ ಮತ್ತೆ ಬದುಕಿ ಬರಲಿ ಎಂದೇ ಅಭಿಮಾನಿಗಳು ಆಶಿಸುತ್ತಾರೆ. ಅದು ಸಾಧ್ಯವಿಲ್ಲ ಎಂದು ಗೊತ್ತಿದ್ದರೂ, ಅದೊಂದು ಕನಸು ಆಸೆ ಮಾತ್ರ ಅಭಿಮಾನಿಗಳಲ್ಲಿ ಹಾಗೆ ಇದೆ. ಈ ವೇಳೆ ನಮ್ಮ ಪ್ರೀತಿಯ ಅಪ್ಪು ಅವರನ್ನೇ ಹೋಲುವ ಪುಟ್ಟ ಹುಡುಗನೊಬ್ಬ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದಾನೆ. ಈ ಹುಡುಗ ಇರುವುದು ಕುಂದಾಪುರದಲ್ಲಿ. ನೋಡುವುದಕ್ಕೆ ಡಿಟ್ಟೋ ಅಪ್ಪು ಸರ್ ಥರಾನೇ ಇದ್ದಾನೆ.

ಹೌದು, ಈ ಮಗು ಅಪ್ಪು ಅವರನ್ನು ಬಾಲ್ಯದಲ್ಲಿ ಕಂಡ ಹಾಗೆಯೇ ಇದ್ದಾನೆ. ಅಪ್ಪು ಅವರು ಡಾ. ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ದಂಪತಿಯ ಮುದ್ದಿನ, ಚಿಕ್ಕ ಮಗ. ಕುಟುಂಬದ ಐದನೇ ಮಗ, ಎಲ್ಲರ ಪ್ರೀತಿಯ ಕೂಸು. ಚಿಕ್ಕಂದಿನಲ್ಲಿ ಮಾಸ್ಟರ್ ಲೋಹಿತ್ ಎಂದು ಇವರು ಹೆಸರು ಮಾಡಿದ್ದರು. ಅಪ್ಪು ಅವರು 6 ತಿಂಗಳ ಪುಟ್ಟ ಮಗು ಆಗಿದ್ದಾಗಲೇ ಪ್ರೇಮದ ಕಾಣಿಕೆ ಸಿನಿಮಾದಲ್ಲಿ ಮಗುವಿನ ಪಾತ್ರದಲ್ಲಿ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಂಡಿದ್ದರು. 1 ವರ್ಷದ ಮಗು ಆಗಿದ್ದಾಗಲೇ ಸನಾದಿ ಅಪ್ಪಣ್ಣ ಸಿನಿಮಾದಲ್ಲಿ ಅಪ್ಪು ಅವರನ್ನು ಕಾಣಬಹುದು. ಹೀಗೆ ಬುದ್ಧಿ ಬರುವ ಮೊದಲೇ ಚಿತ್ರರಂಗದಲ್ಲಿ ಬಣ್ಣ ಹಚ್ಚಿದವರು ಮಾಸ್ಟರ್ ಲೋಹಿತ್.
ಮುಂದಿನ ದಿನಗಳಲ್ಲಿ ಹಲವು ಸಿನಿಮಾಗಳಲ್ಲಿ ಬಾಲನಟನಾಗಿ ಅಪ್ಪು ಅವರು ನಟಿಸಿದರು. ಹೊಸಬೆಳಕು, ವಸಂತ ಗೀತ, ಯಾರಿವನು, ಎರಡು ನಕ್ಷತ್ರಗಳು, ಭೂಮಿಗೆ ಬಂದ ಭಗವಂತ, ಬೆಟ್ಟದ ಹೂವು, ಚಲಿಸುವ ಮೋಡಗಳು ಈ ಸಿನಿಮಾಗಳಲ್ಲಿ ಅಪ್ಪು ಅವರನ್ನು ಮರೆಯಲು ಸಾಧ್ಯವೇ? 10 ವರ್ಷದ ಪುಟ್ಟ ಬಾಲಕನಾಗಿ ನಟಿಸಿದ ಬೆಟ್ಟದ ಹೂವು ಸಿನಿಮಾಗೆ ರಾಷ್ಟ್ರಪ್ರಶಸ್ತಿ ಪಡೆದುಕೊಂಡರು ಅಪ್ಪು. ಇನ್ನು ಭಾಗ್ಯವಂತ ಸಿನಿಮಾದ ಪಾತ್ರ ಇದೆಲ್ಲವನ್ನು ಸಹ ಇಂದಿಗೂ ಮರೆಯುವ ಹಾಗಿಲ್ಲ. ಅಪ್ಪು ಅವರನ್ನು ಬಾಲ್ಯದ ಸಿನಿಮಾದಲ್ಲಿ ನೋಡುವುದೇ ಬೇರೆ ರೀತಿಯ ಸಂತೋಷ ಕೊಡುತ್ತದೆ ನಮ್ಮೆಲ್ಲರಿಗೂ..

ಬಾಲ್ಯದ ಅಪ್ಪು ಅವರಲ್ಲಿ ಇದ್ದ ಮುಗ್ಧತೆ, ಚಿಕ್ಕ ಹುಡುಗನಾಗಿದ್ದಾಗಲೇ ಹೇಳುತ್ತಿದ್ದ ಆ ಡೈಲಾಗ್ ಗಳು, ಇದೆಲ್ಲವೂ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಮಾಸ್ಟರ್ ಲೋಹಿತ್ ಆಗಿದ್ದ ಅಪ್ಪು ಅವರು ಮುಂದಿನ ದಿನಗಳಲ್ಲಿ ಪುನೀತ್ ರಾಜ್ ಕುಮಾರ್ ಆಗಿ ನಾಯಕನಾಗಿ ಯಶಸ್ವಿಯಾದರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎನ್ನಿಸಿಕೊಂಡರು. ಅಪ್ಪು ಅವರು ಚಿಕ್ಕ ವಯಸ್ಸಿನಲ್ಲಿ ಇದ್ದ ಹಾಗೆ ಇದೀಗ ಒಬ್ಬ ಪುಟ್ಟ ಹುಡುಗ ಕಾಣಿಸಿಕೊಂಡಿದ್ದಾರೆ. ಈ ಹುಡುಗನ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿರೋದು ಅಭಿಷೇಕ್ ತೀರ್ಥಹಳ್ಳಿ. ಹಾಗೆಯೇ ಈ ಹುಡುಗ ಇರೋದು ಕುಂದಾಪುರದ ರಟ್ಟಾಡಿಯಲ್ಲಿ. ಗ್ರಾಮದ ಮಕ್ಕಳಿಗೆ ಕಲೆಯನ್ನು ಕಲಿಸುವ ಕಾರ್ಯಕ್ರಮದಲ್ಲಿ ಶಾಲೆಯೊಂದಕ್ಕೆ ಭೇಟಿ ನೀಡಿದಾಗ, ಈ ಹುಡುಗನನ್ನು ನೋಡಿದ್ದಾರೆ ಅಭಿಷೇಕ್.
ಹುಡುಗನನ್ನು ಪ್ರೀತಿಯಿಂದ ಮಾತನಾಡಿಸಿ ಸಂತೋಷಪಟ್ಟಿದ್ದಾರೆ. ಇನ್ನು ಈ ಹುಡುಗ ನೋಡೋಕೆ ಮಾತ್ರ ಅಪ್ಪು ಸರ್ ಥರ ಇಲ್ಲ, ಮಾತನಾಡುವುದು ನಗುವುದು ಕೊನೆಗೆ ಈ ಪುಟ್ಟ ಹುಡುಗನ ಹಲ್ಲುಗಳು ಕೂಡ ಅಪ್ಪು ಸರ್ ಥರಾನೇ ಇದೆ. ಇವನ ಧ್ವನಿ ಕೂಡ ಅಪ್ಪು ಅವರ ಹಾಗೆಯೇ ಇದೆ. ಇದನ್ನು ನೋಡಿ ನೆಟ್ಟಿಗರು ಸರ್ಪ್ರೈಸ್ ಆಗಿದ್ದು, ಅಪ್ಪು ಅವರನ್ನೇ ನೋಡಿದ ಹಾಗಿದೆ ಎನ್ನುತ್ತಿದ್ದಾರೆ. ಈ ಹುಡುಗ ಕೂಡ ಅಪ್ಪು ಸರ್ ಅವರ ಹಾದಿಯಲ್ಲೇ ನಡೆದು, ಒಳ್ಳೆಯ ಸ್ಥಾನಕ್ಕೆ ಎನ್ನುತ್ತಿದ್ದಾರೆ ನೆಟ್ಟಿಗರು. ಇದೀಗ ಇವರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.