ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದ ವಾರಾಂತ್ಯದ ಸಂಚಿಕೆಗಳು ಅತೀ ಪ್ರಾಮುಖ್ಯ. ಸ್ಪರ್ಧಿಗಳು ವಾರವಿಡೀ ಆಡುವ ಆಟವನ್ನು ನೋಡಿ ಅವರನ್ನೆಲ್ಲಾ ವಾರಕ್ಕೊಮ್ಮೆ ಮಾತಾಡಿಸಿ, ಪಂಚಾಯತಿ ನಡೆಸಿ, ತಿದ್ದಿ ತೀಡುವ ಕಿಚ್ಚ ಸುದೀಪ್ ಅವರ ಮಾತುಗಳನ್ನು ಕೇಳಲು ವೀಕ್ಷಕರು ತುದಿಗಾಲಲ್ಲಿ ನಿಂತಿರುತ್ತಾರೆ. ಈ ವಾರದಿಂದಲೇ ‘ವಾರದ ಕತೆ ಕಿಚ್ಚನ ಜೊತೆ’ ಹಾಗೂ ‘ಸೂಪರ್ ಸಂಡೆ ವಿತ್ ಸುದೀಪ್’ ಎಪಿಸೋಡ್ಗಳ ಸಮಯ ಬದಲಾವಣೆ ಆಗಲಿದೆ. ಈ ವಾರದಿಂದ ‘ವಾರದ ಕತೆ ಕಿಚ್ಚನ ಜೊತೆ’ ಹಾಗೂ ‘ಸೂಪರ್ ಸಂಡೆ ವಿತ್ ಸುದೀಪ’ ಎಪಿಸೋಡ್ಗಳು ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.ವಾರದ ಪ್ರತಿ ದಿನ ಬಿಗ್ಬಾಸ್ ರಾತ್ರಿ 9.30ಕ್ಕೆ ಪ್ರಸಾರವಾದರೂ ವಾರಾಂತ್ಯದ ಎಪಿಸೋಡ್ಗಳು ಮಾತ್ರ ರಾತ್ರಿ 9 ಗಂಟೆಗೆ ವೀಕ್ಷಕರ ಮುಂದೆ ಬರಲಿವೆ.

ಬಿಗ್ ಬಾಸ್’ ಮನೆಯಿಂದ ಎಲಿಮಿನೇಟ್ ಆಗಲು ಮೂರನೇ ವಾರ ರೂಪೇಶ್ ರಾಜಣ್ಣ, ಪ್ರಶಾಂತ್ ಸಂಬರಗಿ, ದರ್ಶ್, ದಿವ್ಯಾ ಉರುಡುಗ, ಮಯೂರಿ, ವಿನೋದ್ ಗೊಬ್ಬರಗಾಲ, ದೀಪಿಕಾ ದಾಸ್, ರೂಪೇಶ್ ಶೆಟ್ಟಿ, ಅನುಪಮಾ ಗೌಡ ಹಾಗೂ ಅಮೂಲ್ಯ ಗೌಡ ನಾಮಿನೇಟ್ ಆಗಿದ್ದಾರೆ. ಇವರುಗಳ ಪೈಕಿ ಯಾರು ಔಟ್ ಆಗ್ತಾರೆ ಅನ್ನೋದು ಈ ವಾರಾಂತ್ಯದ 9 ಗಂಟೆ ಸಂಚಿಕೆಗಳಲ್ಲಿ ಬಹಿರಂಗವಾಗಲಿದೆ.
ಈಗಾಗಲೇ ಮೊದಲ ಎರಡು ವಾರ ಐಶ್ವರ್ಯ ಪಿಸೆ ಹಾಗೂ ನವಾಜ್ ಬಿಗ್ಬಾಸ್ನಿಂದ ಹೊರನಡೆದಿದ್ದಾರೆ. ಈ ವಾರ ಯಾರು ಹೊರ ಹೋಗುತ್ತಾರೆ ಎಂಬ ಕುತೂಹಲ ವೀಕ್ಷಕರಿಗೆ ಇದೆ. ಬಿಗ್ ಬಾಸ್ ಮನೆಯಲ್ಲಿ ಸಿಕ್ರೇಟ್ ರೂಮ್ ತುಂಬ ಮುಖ್ಯವಾದುದು. ಕೆಲ ಸೀಸನ್ಗಳಲ್ಲಿ ಸಿಕ್ರೇಟ್ ರೂಮ್ ಇರಲಿಲ್ಲ. ಈ ಬಾರಿ ಇರುತ್ತದಾ ಎಂದು ಪ್ರೇಕ್ಷಕರು ಕಾತರರಾಗಿದ್ದಾರೆ. ಈ ಹಿಂದಿನ ಸೀಸನ್ಗಳಲ್ಲಿ ಕಿಚ್ಚ ಸುದೀಪ್ ಜೊತೆ ಪ್ರತಿ ವಾರ ಅತಿಥಿಗಳು ವೀಕೆಂಡ್ ವೇದಿಕೆಯಲ್ಲಿ ಇರುತ್ತಿದ್ದರು.
ಕೆಲವರು ಸಿನಿಮಾ ಪ್ರಚಾರಕ್ಕೆ ಬಂದರೆ ಇನ್ನೂ ಕೆಲವರು ಬಿಗ್ ಬಾಸ್ ಶೋನ ಕಳೆ ಹೆಚ್ಚಿಸಲು ಬರುತ್ತಿದ್ದರು. ಈ ಬಾರಿ ಕಿಚ್ಚ ಸುದೀಪ್ ಜೊತೆ ಸೆಲೆಬ್ರಿಟಿಗಳು ಇರುತ್ತಿಲ್ಲ. ಈ ಹಿಂದಿನ ಕೆಲ ಸೀಸನ್ಗಳಲ್ಲಿ ಕಿಚ್ಚ ಸುದೀಪ್ ಅವರು ಸೆಲೆಬ್ರಿಟಿಗಳ ಜೊತೆ ಅಡುಗೆ ಮಾಡಿದ್ದರು. ಈ ಸೀಸನ್ನಲ್ಲಿ ಪ್ರೇಕ್ಷಕರು ಮಿಸ್ ಮಾಡಿಕೊಂಡಿದ್ದಾರೆ.