ಬೆಂಗಳೂರು; ಸಾಮಾನ್ಯ ಜನರಿಗೆ ಬೆಲೆ ಏರಿಕೆ ಬಿಸ ತಟ್ಟುತ್ತಲೇ ಇದೆ.. ಇತ್ತೀಚೆಗಷ್ಟೇ ಬಸ್ ದರವನ್ನು ರಾಜ್ಯ ಸರ್ಕಾರ ಏರಿಕೆ ಮಾಡಿತ್ತು.. ಇದರಿಂದ ಜನ ಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿದೆ.. ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನ ಸಾಮಾನ್ಯರು ಸಾರಿಗೆ ಪ್ರಯಾಣ ದರ ಏರಿಕೆಯಿಂದ ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದಾರೆ.. ಹೀಗಿರುವಾಗಲೇ ಮೆಟ್ರೋ ಪ್ರಯಾಣ ದರವನ್ನು ಕೆಲ ದಿನಗಳ ಹಿಂದೆ ಏರಿಕೆ ಮಾಡಲಾಗಿದೆ.. ಅದೂ ಕೂಡಾ ಶೇಕಡಾ 45 ರಿಂದ 50 ರಷ್ಟು ಪ್ರಯಾಣ ದರವನ್ನು ಏರಿಕೆ ಮಾಡಿ ಬಿಎಂಆರ್ಸಿಎಲ್ ಆದೇಶ ಹೊರಡಿಸಿದೆ.. ಇದರ ವಿರುದ್ಧ ದೊಡ್ಡ ಆಕ್ರೋಶಗಳು ವ್ಯಕ್ತವಾಗುತ್ತಿವೆ.. ಒಂದು ಕಡೆ ಮೆಟ್ರೋ ಪ್ರಯಾಣ ದರ ಏರಿಕೆಗೆ ರಾಜ್ಯ ಸರ್ಕಾರ ಕಾರಣ ಎಂದು ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ.. ಆದ್ರೆ ಕಾಂಗ್ರೆಸ್ ಮಾತ್ರ ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುತ್ತಿದೆ..ಹೀಗಿರುವಾಗಲೇ ಸಿಎಂ ಸಿದ್ದರಾಮಯ್ಯ ಅವರು ಮೆಟ್ರೋ ಪ್ರಯಾಣ ದರ ಇಳಿಕೆ ಮಾಡುವಂತೆ ಬಿಎಂಆರ್ಸಿಎಲ್ಗೆ ಸೂಚನೆ ಕೊಟ್ಟಿದ್ದಾರೆ.. ಕೆಲವು ಸ್ಟೇಜ್ಗಳಿಗೆ ಮೆಟ್ರೋ ಪ್ರಯಾಣ ದರ ತುಂಬಾನೇ ಏರಿಕೆ ಮಾಡಲಾಗಿದೆ.. ಇದರ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.. ಈ ಹಿನ್ನೆಲೆಯಲ್ಲಿ ತೀರಾ ದುಬಾರಿಯಾಗಿರುವ ಸ್ಟೇಜ್ಗಳ ದರ ಇಳಿಸುವಂತೆ ಸಿಎಂ ಸಿದ್ದರಾಮಯ್ಯ ಅವರು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.. ಇದು ಒಂದು ರೀತಿಯಲ್ಲಿ ಕಣ್ಣೊರುಸುವ ತಂತ್ರ ಅಷ್ಟೆ.. ಅವೈಜ್ಞಾನಿಕವಾಗಿ ಕೆಲವು ಕಡೆ ತುಂಬಾನೇ ಜಾಸ್ತಿ ದರ ನಿಗದಿ ಮಾಡಲಾಗಿತ್ತು.. ಅದನ್ನು ಸ್ವಲ್ಪ ಕಡಿಮೆ ಮಾಡುತ್ತಾರೆ ಅಷ್ಟೇ.. ಇದರಿಂದ ಮೆಟ್ರೋ ಪ್ರಯಾಣಿಕರಿಗೆ ಹೆಚ್ಚೇನೂ ಲಾಭವಾಗೋದಿಲ್ಲ..

ಮೊನ್ನೆಯಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಸಿಎಂ ಸಿದ್ದರಾಮಯ್ಯ ಪೋಸ್ಟ್ ಒಂದನ್ನು ಹಾಕಿದ್ದರು.. ಬಿಜೆಪಿಯವರ ಆರೋಪಕ್ಕೆ ಅವರು ಇದರಲ್ಲಿ ಸ್ಪಷ್ಟನೆ ಕೊಟ್ಟಿದ್ದರು.. ಬಿಜೆಪಿಯವರು ಮೆಟ್ರೋ ದರ ಏರಿಕೆಗೆ ರಾಜ್ಯ ಸರ್ಕಾರ ಕಾರಣ ಎಂದು ಆರೋಪ ಮಾಡುತ್ತಿದ್ದಾರೆ.. ಆದ್ರೆ ದರ ಏರಿಕೆಗೂ ಕಾಂಗ್ರೆಸ್ ಸರ್ಕಾರಕ್ಕೂ ಸಂಬಂಧವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದರು.. ದರ ಏರಿಕೆ ಸಂಬಂಧ ಬಿಎಂಆರ್ಸಿಎಲ್ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.. ಈ ಬಗ್ಗೆ ವರದಿ ನೀಡಲು ಕೇಂದ್ರ ಸರ್ಕಾರ ಸಮಿತಿ ರಚನೆ ಮಾಡಿತ್ತು.. ಆ ಸಮಿತಿ ನೀಡಿದ ವರದಿ ಆಧಾರದ ಮೇಲೆ ದರ ಏರಿಕೆ ಮಾಡಲಾಗಿದೆ.. ಇದಕ್ಕೂ ರಾಜ್ಯ ಸರ್ಕಾರಕ್ಕೂ ಸಂಬಂಧ ಇಲ್ಲ ಎಂದು ಸಿಎಂ ಸ್ಪಷ್ಟನೆ ನೀಡಿದ್ದರು.. ಆದ್ರೆ ಸಾರ್ವಜನಿಕರು ಯಾರು ಏರಿಕೆ ಮಾಡಿದ್ದಾರೋ ನಮಗೆ ಗೊತ್ತಿಲ್ಲ, ಬೆಲೆ ಇಳಿಕೆ ಮಾಡಿ ಎಂದು ಆಕ್ರೋಶ ಹೊರಹಾಕುತ್ತಿದ್ದರು.. ಇನ್ನು ಕೆಲವೊಂದು ಸ್ಟೇಜ್ ಗಳಿಗೆ ಬಹುತೇಕ ದುಪ್ಪಟ್ಟು ಏರಿಕೆ ಮಾಡಿರುವ ಬಗ್ಗೆ ಹೆಚ್ಚು ಆಕ್ರೋಶಗಳು ವ್ಯಕ್ತವಾಗಿದ್ದವು.. ಹಲವಾರು ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸುವಾಗ ಬೋರ್ಡ್ಗಳನ್ನು ಹಿಡಿದು ಬೆಲೆ ಏರಿಕೆ ವಿರುದ್ಧ ಆಕ್ರೋಶಗಳನ್ನು ಹೊರಹಾಕಿದ್ದರು.. ಹೀಗಿರುವಾಗಲೇ ಸಿಎಂ ಸಿದ್ದರಾಮಯ್ಯ ಅವರು ಪ್ರಯಾಣಿಕರ ಕಣ್ಣೊರೆಸುವ ತಂತ್ರಕ್ಕೆ ಮುಂದಾಗಿದ್ದಾರೆ.. ಅತಿಹೆಚ್ಚು ನಿಗದಿ ಮಾಡಿರುವ ಬೆಲೆಗಳನ್ನು ಇಳಿಸುವಂತೆ ಸಿಎಂ ಸಿದ್ದರಾಮಯ್ಯ ಅವರು ಬಿಎಂಆರ್ಸಿಎಲ್ ಎಂಡಿಗೆ ಸೂಚನೆ ಕೊಟ್ಟಿದ್ದಾರೆ..

ಅಂದಹಾಗೆ ನಮ್ಮ ಮೆಟ್ರೋ ಸಾಕಷ್ಟು ಲಾಭದಲ್ಲೇ ನಡೆಯುತ್ತಿದೆ.. ಪ್ರತಿದಿನವೂ ಲಕ್ಷಾಂತರ ಜನರು ಮೆಟ್ರೋ ಆಶ್ರಯಿಸಿದ್ದಾರೆ.. ಕಾರು ಬೈಕ್ಗಳನ್ನು ಜನ ಮನೆಯಲ್ಲೇ ಬಿಟ್ಟು ಕೆಲಸ ಕಾರ್ಯಗಳಿಗೆ ಮೆಟ್ರೋವನ್ನೇ ಆಶ್ರಯಿಸಿದ್ದಾರೆ.. ಇದರಿಂದಾಗಿ ಬೆಂಗಳೂರು ನಗರದಲ್ಲಿ ವಾಯು ಮಾಲಿನ್ಯ ಕಡಿಮೆಯಾಗುತ್ತಿದೆ.. ಟ್ರಾಫಿಕ್ ಜಾಮ್ ಸಮಸ್ಯೆಗಳೂ ಸಾಕಷ್ಟು ಕಡಿಮೆಯಾಗುತ್ತಿವೆ.. ಮೆಟ್ರೋಗೆ ಸಾಕಷ್ಟು ಲಾಭವಿದ್ದರೂ ಕೂಡಾ ಪ್ರಯಾಣ ದರ ಏರಿಕೆ ಮಾಡಿರುವ ಬಗ್ಗೆ ಹೆಚ್ಚು ಆಕ್ರೋಶಗಳು ವ್ಯಕ್ತವಾಗುತ್ತಿವೆ.. ಬೇರೆ ನಗರಗಳಲ್ಲಿನ ಮೆಟ್ರೋಗಳಿಗೆ ಹೋಲಿಸಿಕೊಂಡರೆ ಬೆಂಗಳೂರು ನಗರದಲ್ಲಿನ ನಮ್ಮ ಮೆಟ್ರೋ ಪ್ರಯಾಣ ತುಂಬಾನೇ ದುಬಾರಿ ಇದೆ.. ಹೀಗಿದ್ದರೂ ಮತ್ತೆ ದರ ಏರಿಕೆ ಮಾಡಲಾಗಿದೆ.. ದೆಹಲಿ, ಮುಂಬೈ, ಕೋಲ್ಕತ್ತಾ, ಹೈದರಾಬಾದ್ ಮೆಟ್ರೋದಲ್ಲಿ ಪ್ರಯಾಣ ದರ ಅತಿ ಕಡಿಮೆ ಇದೆ.. ದೆಹಲಿಯಲ್ಲಿ ಮೆಟ್ರೋ ಪ್ರಯಾಣ ದರ ಅತಿಹೆಚ್ಚು ಅಂದರ 60 ರೂಪಾಯಿ ಮಾತ್ರ. 60 ರೂಪಾಯಿಯಲ್ಲಿ ಬರೋಬ್ಬರಿ 32 ಕಿಲೋ ಮೀಟರ್ ಪ್ರಯಾಣ ಮಾಡಬಹುದು.. ಅದೇ ಚೆನ್ನೈನಲ್ಲಿ ಮೆಟ್ರೋ ಪ್ರಯಾಣದ ಗರಿಷ್ಠ ದರ ಬರೀ 50 ರೂಪಾಯಿ ಮಾತ್ರ. ಕೋಲ್ಕತ್ತಾದಲ್ಲಂತೂ ಮೆಟ್ರೋ ಪ್ರಯಾಣ ದರ ಸಾಕಷ್ಟು ಕಡಿಮೆ ಇದೆ.. ಇಲ್ಲಿ 30 ಕಿಲೋ ಮೀಟರ್ವರೆಗಿನ ಪ್ರಯಾಣ ದರ 25 ರೂಪಾಯಿ ದಾಟೋದಿಲ್ಲ. ಇನ್ನು ಇಲ್ಲಿ ಕನಿಷ್ಠ ದರ 5 ರೂಪಾಯಿ ಮಾತ್ರ ಇದೆ.. ಗರಿಷ್ಠ ದರ ಇರೋದು 50 ರೂಪಾಯಿ ಅಷ್ಟೇ.. ಆದ್ರೆ ನಮ್ಮ ಮೆಟ್ರೋದಲ್ಲಿ ಕನಿಷ್ಠ ದರ 10 ರೂಪಾಯಿ ಇದೆ.. ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣಕ್ಕೆ ಎರಡು ನಿಮಿಷದಲ್ಲಿ ಹೋಗಬಹುದು. ಈ ಎರಡು ನಿಮಿಷದ ಪ್ರಯಾಣಕ್ಕೆ ಬರೋಬ್ಬರಿ 10 ರೂಪಾಯಿ ನೀಡಬೇಕು. ಇನ್ನು ಬೆಂಗಳೂರಿನಲ್ಲಿ ಮೆಟ್ರೋ ಗರಿಷ್ಠ ದರ 90 ರೂಪಾಯಿಗೆ ಏರಿಸಲಾಗಿದೆ.. ಅಂದರೆ ಹೋಗಿ ಬರೋದಕ್ಕೆ ದಿನಕ್ಕೆ 180 ರೂಪಾಯಿ ಬೇಕಾಗುತ್ತದೆ.. ಇದೇ ಹಣಕ್ಕೆ ಎರಡು ಲೀಟರ್ ಪೆಟ್ರೋಲ್ ಬರುತ್ತದೆ ಎಂದು ಜನ ಹೇಳುತ್ತಿದ್ದಾರೆ..

ಇನ್ನು ಮೆಟ್ರೋ ಪ್ರಯಾಣ ದರ ತೀರಾ ದುಬಾರಿ ಮಾಡುತ್ತಿದ್ದಂತೆ ಮೆಟ್ರೋದಲ್ಲಿ ಓಡಾಡುವವರ ಸಂಖ್ಯೆ ಕೂಡಾ ಕಡಿಮೆಯಾಗುತ್ತಿದೆ.. ದಿನಕ್ಕೆ ಸುಮಾರು 50 ಲಕ್ಷ ರೂಪಾಯಿ ಕಲೆಕ್ಷನ್ ಕಡಿಮೆಯಾಗಿದೆ ಎಂಬ ಮಾಹಿತಿ ಬಂದಿದೆ.. ಪ್ರಯಾಣ ದರ ಏರಿಕೆಗೂ ಮೊದಲು ದಿನಕ್ಕೆ ಎರಡೂವರೆ ಕೋಟಿ ರೂಪಾಯಿ ಕಲೆಕ್ಷನ್ ಆಗುತ್ತಿತ್ತು.. ಆದ್ರೆ ಇದೀಗ ಎರಡು ಕೋಟಿ ರೂಪಾಯಿ ಕೂಡಾ ಮುಟ್ಟುತ್ತಿಲ್ಲ ಎಂದು ತಿಳಿದುಬಂದಿದೆ.. ಇನ್ನು ಪ್ರಯಾಣಿಕರ ಸಂಖ್ಯೆ 35 ರಷ್ಟು ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ.. ಪ್ರಯಾಣ ದರ ಏರಿಕೆಗೂ ಮೊದಲು ನಮ್ಮ ಮೆಟ್ರೋದಲ್ಲಿ ದಿನಕ್ಕೆ 8-9 ಲಕ್ಷ ಜನರು ಪ್ರಯಾಣ ಮಾಡುತ್ತಿದ್ದರು. ಆದ್ರೆ ಇದೀಗ ದಿನದಲ್ಲಿ 6 ರಿಂದ 7 ಲಕ್ಷ ಜನ ಓಡಾಡಿದರೆ ಹೆಚ್ಚು ಅನ್ನುವ ಸ್ಥಿತಿಗೆ ಬಂದಿದೆ.. ಇದೂ ಕೂಡಾ ಬಿಎಂಆರ್ಸಿಎಲ್ಗೆ ತಲೆನೋವಾಗಿದೆ..
ಕಳೆದ ಐದು ವರ್ಷಗಳಿಂದ ನಮ್ಮ ಮೆಟ್ರೋ ದರವನ್ನು ಏರಿಕೆ ಮಾಡಿರಲಿಲ್ಲ.. ಹೀಗಾಗಿ ದರ ಏರಿಕೆ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ.. ದರ ಏರಿಕೆ ಅಂದರೆ ಶೇಕಡಾ 5ರಷ್ಟೋ ಅಥವಾ ಹತ್ತರಷ್ಟೋ ಏರಿಕೆ ಮಾಡಬೇಕು. ಆದ್ರೆ ಇಲ್ಲಿ ಶೇಕಡಾ 45 ರಿಂದ 50 ರಷ್ಟು ಪ್ರಯಾಣ ದರವನ್ನು ಏರಿಕೆ ಮಾಡಿದ್ದಾರೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ..