ಕನ್ನಡ ಬಿಟ್ಟು ಬೇರೆ ಭಾಷೆಗಳಲ್ಲಿ ಸಾಧಕರ ಬಯೋಪಿಕ್ ಸಿನಿಮಾಗಳು ಬರುತ್ತಲಿವೆ. ಅವುಗಳು ಯಶಸ್ವಿ ಸಹ ಆಗಿದೆ. ಸಿನಿಮಾ ನಟ, ನಟಿಯರ ಜೀವನಾಧಾರಿತ ಸಿನಿಮಾಗಳು ಬಂದು ಗೆದ್ದಿವೆ, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿವೆ. ಕನ್ನಡದಲ್ಲಿ ಈ ರೀತಿ ಬಯೋಪಿಕ್ ಬಂದಿರುವುದು ಬಹಳ ಕಡಿಮೆ. ಇತ್ತೀಚೆಗೆ ತಮಿಳಿನಲ್ಲಿ ಮೇಜರ್ ಮುಕುಂದ್ ವರದರಾಜನ್ ಅವರ ಬಯೋಪಿಕ್ ಸಿಕ್ಕಾಪಟ್ಟೆ ಸದ್ದು ಮಾಡಿತು, ಇನ್ನು ಸಿಲ್ಕ್ ಸ್ಮಿತಾ ಅವರ ಬಯೋಪಿಕ್ ಬಂದಿದೆ. ದಕ್ಷಿಣ ಭಾರತದ ಲೆಜೆಂಡ್ ಹಿರಿಯನಟಿ ಸಾವಿತ್ರಿ ಅವರ ಬಯೋಪಿಕ್ ಬಂದಿದೆ. ಇದೇ ರೀತಿ ಬಾಲಿವುಡ್ ನಲ್ಲಿ ನಟ ಸಂಜಯ್ ದತ್ ಅವರ ಬಯೋಪಿಕ್ ಬಂದಿತು. ಸಂಜು ಹೆಸರಿನಲ್ಲಿ ತೆರೆಕಂಡ ಈ ಸಿನಿಮಾವನ್ನು ರಾಜ್ ಕುಮಾರ್ ಹಿರಾನಿ ನಿರ್ದೇಶನ ಮಾಡಿದರು.
ರಣಬೀರ್ ಕಪೂರ್ ಅವರು ಸಂಜಯ್ ದತ್ ಆಗಿ ನಟಿಸಿದರು. ಸಂಜಯ್ ದತ್ ಅವರು ಒಬ್ಬ ಸ್ಟಾರ್ ಹೀರೋ ಎನ್ನುವುದರ ಜೊತೆಗೆ ವಿವಾದಗಳಿಗೆ ಹೆಚ್ಚು ಸುದ್ದಿಯಾದವರು. ಹಲವು ವಿಚಾರಗಳಿಂದ ಸುದ್ದಿಯಾಗಿ, ಜೈ*ಲಿಗೆ ಸಹ ಹೋಗಿಬಂದ ನಟ ಸಂಜಯ್ ದತ್. ಇವರ ಬಯೋಪಿಕ್ 90 ಕೋಟಿ ವೆಚ್ಚದಲ್ಲಿ ತಯಾರಾಗಿ, ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ ಗಳಿಸಿದ್ದು ಬರೋಬ್ಬರಿ ₹500 ಕೋಟಿ ರೂಪಾಯಿಗಳು. ಈ ಸಿನಿಮಾ ಇಂದ ರಣಬೀರ್ ಕಪೂರ್ ಅವರಿಗೂ ಸಹ ಒಳ್ಳೆಯ ಹೆಸರು ಬಂದಿತು. ಇನ್ನು ಈ ಸಿನಿಮಾ ರೀತಿಯಲ್ಲೇ ಕನ್ನಡದಲ್ಲಿ ನಟ ದರ್ಶನ್ ಅವರ ಬಯೋಪಿಕ್ ಬರಬೇಕು, ಆ ಸಿನಿಮಾದಲ್ಲಿ ದರ್ಶನ್ ಅವರ ಪಾತ್ರದಲ್ಲಿ ನಾನು ನಟಿಸಲು ಇಷ್ಟಪಡುತ್ತೇನೆ ಎಂದು ಕನ್ನಡದ ಯುವನಟ ತಿಳಿಸಿದ್ದಾರೆ.

ಹೌದು, ಈ ರೀತಿ ಹೇಳಿರುವುದು ಬೇರೆ ಯಾರು ಅಲ್ಲ, ಕನ್ನಡದಲ್ಲಿ ಭರವಸೆ ಮೂಡಿಸುತ್ತಿರುವ ಯುವನಟ ರಾಜ್ ವರ್ಧನ್. ಇವರು ಅಭಿನಯಿಸಿರುವ ಗಿಣಿರಾಮ ಸಿನಿಮಾ ತೆರೆ ಕಾಣುವುದಕ್ಕೆ ಸಿದ್ಧವಾಗಿದೆ. ಸಿನಿಮಾ ಪ್ರೊಮೋಷನ್ ನಲ್ಲಿ ಭಾಗಿಯಾಗಿರುವ ರಾಜ್ ವರ್ಧನ್ ಅವರು, ಸಂಜು ರೀತಿಯಲ್ಲೇ ಕನ್ನಡದಲ್ಲಿ ದರ್ಶನ್ ಸರ್ ಬಯೋಪಿಕ್ ಬರಬೇಕು, ಬಂದರೆ ತುಂಬಾ ಚೆನ್ನಾಗಿರುತ್ತದೆ, ದರ್ಶನ್ ಸರ್ ಪಾತ್ರದಲ್ಲಿ ನಟಿಸುವ ಆಸೆ ನನಗೆ ಇದೆ ಎಂದು ಹೇಳಿದ್ದಾರೆ. ಐತಿಹಾಸಿಕ ಪಾತ್ರಗಳಲ್ಲಿ ಕೂಡ ನಾನು ನಟಿಸಿದ್ದೀನಿ, ದರ್ಶನ್ ಸರ್ ಬಯೋಪಿಕ್ ನಲ್ಲಿ ನಟಿಸೋದು ನನ್ನ ದೊಡ್ಡ ಆಸೆ ಎಂದು ನಟ ರಾಜ್ ವರ್ಧನ್ ಹೇಳಿಕೆ ನೀಡಿದ್ದಾರೆ. ಇವರು ದರ್ಶನ್ ಅವರಿಗೆ ಬಹಳ ಆಪ್ತರು ಸಹ ಹೌದು. ಇದೀಗ ಇವರು ಹೇಳಿರುವ ಮಾತು ಬಹಳ ವೈರಲ್ ಆಗಿದೆ.

ರಾಜ್ ವರ್ಧನ್ ಅವರು ದರ್ಶನ್ ಅವರ ಅಪ್ಪಟ ಅಭಿಮಾನಿ, ಹಾಗಾಗಿ ಇವರು ಹೇಳಿರುವ ಮಾತು ದರ್ಶನ್ ಅವರ ಅಭಿಮಾನಿಗಳಿಗೆ ಬಹಳ ಸಂತೋಷ ತಂದಿದೆ. ದರ್ಶನ್ ಅವರ ಬಯೋಪಿಕ್ ಸಿನಿಮಾ ಆದರೆ ತುಂಬಾ ಚೆನ್ನಾಗಿರುತ್ತದೆ ಅಂತಿದ್ದಾರೆ ಫ್ಯಾನ್ಸ್. ದರ್ಶನ್ ಅವರ ಜೀವನ ಸುಲಭವಂತು ಅಲ್ಲ. ಸ್ಟಾರ್ ವಿಲ್ಲನ್ ಮಗ ಆದರೂ ಚಿತ್ರರಂಗಕ್ಕೆ ಬರುವುದು, ಇಲ್ಲಿ ಅವಕಾಶ ಪಡೆಯುವುದು ಸುಲಭ ಆಗಿರಲಿಲ್ಲ ದರ್ಶನ್ ಅವರಿಗೆ. ಲೈಟ್ ಬಾಯ್ ಆಗಿ ಕೆಲಸ ಶುರು ಮಾಡಿ, ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿ, ಹೀರೋ ಆಗಿ, ಒಂದೊಂದೇ ಅವಕಾಶಗಳನ್ನು ಉಪಯೋಗಿಸಿಕೊಂಡು, ಸ್ಟಾರ್ ಹೀರೋ ಆಗಿ ಬೆಳೆದು ನಿಂತರು ನಟ ದರ್ಶನ್. ಸ್ಯಾಂಡಲ್ ವುಡ್ ನಲ್ಲಿ ಅತಿಹೆಚ್ಚು ಅಭಿಮಾನಿ ಬಳಗ ಹೊಂದಿರುವ ನಟ ಎಂದರೂ ತಪ್ಪಲ್ಲ..
ಇವರ ಕೆರಿಯರ್ ಬಗ್ಗೆ ಹೇಳುವುದು ಈ ರೀತಿ ಆದರೆ, ವೈಯಕ್ತಿಕ ವಿಷಯದಲ್ಲಿ ದರ್ಶನ್ ಅವರ ಲೈಫ್ ನಲ್ಲಿ ತುಂಬಾ ವೇರಿಯೇಷನ್ ಇದೆ. ದಾಂಪತ್ಯ ಜೀವನದ ವಿಚಾರಕ್ಕೆ ಹಾಗೂ ಇನ್ನಿತರ ಹಲವು ಕಾರಣಗಳಿಗೆ ದರ್ಶನ್ ಅವರು ಸಿಕ್ಕಾಪಟ್ಟೆ ಸುದ್ದಿಯಾಗಿರುವುದು ಇದೆ. ಈ ಕಾರಣಕ್ಕೆ ಜೈಲಿಗೆ ಹೋಗಿ ಬಂದಿದ್ದರು. ಇನ್ನು ಇತ್ತೀಚೆಗೆ ರೇಣುಕಾಸ್ವಾಮಿ ಅವರ ಕೇಸ್ ನಲ್ಲಿ ಮತ್ತೆ ಜೈಲಿಗೆ ಹೋಗಿ ಬಂದು, ಇತ್ತೀಚೆಗೆ ಬಿಡುಗಡೆ ಆಗಿದೆ. ಹಾಗೆಯೇ ಆರೋಗ್ಯ ಸಮಸ್ಯೆ ಇಂದ ಬಳಲುತ್ತಿರುವ ದರ್ಶನ್ ಅವರು ಶೀಘ್ರದಲ್ಲೇ ಮತ್ತೆ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ದರ್ಶನ್ ಅವರ ಬಯೋಪಿಕ್ ಬಂದರೆ ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿ ಆಗುವುದಂತೂ ಖಂಡಿತ.