ದೊಡ್ಮನೆ ಕುಟುಂಬದ ಬಗ್ಗೆ ನಮಗೆಲ್ಲಾ ಹಲವು ವಿಚಾರಗಳು ಗೊತ್ತೇ ಇದೆ. ಡಾ. ರಾಜ್ ಕುಮಾರ್ ಅವರು ಪಾರ್ವತಮ್ಮ ಅವರು ಮನೆಯ ಆಧಾರ ಸ್ಥಂಭಗಳಾಗಿ, ಇವರಿಬ್ಬರು ಮನೆಯ ಜವಾಬ್ದಾರಿ ತೆಗೆದುಕೊಂಡು ಬೆಳೆಸಿದ ಕುಟುಂಬ ಇಂದು ಸಹ ಇವರ ಮನೆಗೆ, ಕುಟುಂಬಕ್ಕೆ ಅಷ್ಟೇ ಗೌರವ ಇದೆ. ದೊಡ್ಮನೆ ಕುಟುಂಬ ಹಲವು ಕಲಾವಿದರಿಗೆ ಬದುಕು ನೀಡಿರುವ ಕುಟುಂಬ ಆಗಿದೆ. ಈ ಮನೆಯ ಮೂವರು ಗಂಡುಮಕ್ಕಳು ಹಾಗೂ ಅವರ ಮದುವೆ ವಿಚಾರ ಎಲ್ಕವು ನಮಗೆಲ್ಲಾ ಗೊತ್ತೇ ಇದೆ. ಆದರೆ ಹೆಣ್ಣುಮಕ್ಕಳ ಬಗ್ಗೆ ಅಷ್ಟಾಗಿ ಯಾರಿಗೂ ಗೊತ್ತಿಲ್ಲ. ಪೂರ್ಣಿಮಾ ರಾಮ್ ಕುಮಾರ್ ಜೋಡಿಯ ಮದುವೆ ವಿಚಾರ ಇದಕ್ಕೆ ಸಾಕ್ಷಿ..

ಹೌದು, ಡಾ. ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ದಂಪತಿಯ ಕೊನೆಯ ಮಗಳು, ಮುದ್ದಿನ ಮಗಳು ಪೂರ್ಣಿಮಾ ಅವರು. ಇವರು ಅಣ್ಣಾವ್ರ ಜೊತೆಗೆ ನಾ ನಿನ್ನ ಮರೆಯಲಾರೆ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿದ್ದಾರೆ. ಅಣ್ಣಾವ್ರ ಜೊತೆಗೆ ಇವರ ಹಾಡು ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ಹಾಡು ಇಂದಿಗೂ ಎಲ್ಲರ ಫೇವರೆಟ್ ಆಗಿದೆ. ತಂದೆ ತಾಯಿ ಇಬ್ಬರಿಗೂ ಸಹ ಮುದ್ದಿನ ಮಗಳಾಗಿದ್ದರು ಪೂರ್ಣಿಮಾ. ಇವರು ಮದುವೆ ಆಗಿದ್ದು ಸ್ಯಾಂಡಲ್ ವುಡ್ ನಟ ರಾಮ್ ಕುಮಾರ್ ಅವರ ಜೊತೆಗೆ. ಈ ಮದುವೆಗೆ ಮನೆಯಲ್ಲಿ ಒಪ್ಪಿಗೆ ಇರಲಿಲ್ಲ. ಈ ಜೋಡಿಯದ್ದು ಲವ್ ಮ್ಯಾರೇಜ್, ಅಮ್ಮನ ಜೊತೆಗೆ ಶೂಟಿಂಗ್ ಸೆಟ್ ಗೆ ಬರುತ್ತಿದ್ದ ಪೂರ್ಣಿಮಾ ಅವರನ್ನು ರಾಮ್ ಕುಮಾರ್ ಅವರು ನೋಡಿದ್ದರು.
ಇಬ್ಬರ ನಡುವೆ ಸ್ನೇಹ ಶುರುವಾಗಿ, ಸ್ನೇಹ ಪ್ರೀತಿಯಾಗಿ ಇಬ್ಬರು ಲವ್ ಮಾಡೋದಕ್ಕೆ ಶುರು ಮಾಡಿದ್ದರು. ಆದರೆ ಇವರಿಬ್ಬರು ಪ್ರೀತಿ ಮಾಡುತ್ತಿರುವುದು ಹಾಗೆಯೇ ಇವರಿಬ್ಬರು ಮದುವೆ ಆಗಬೇಕು ಎನ್ನುವುದು ಡಾ. ರಾಜ್ ಕುಮಾರ್ ಅವರಿಗೆ ಇಷ್ಟವಿರಲಿಲ್ಲ. ಅಮ್ಮ ಅಪ್ಪನ ಸಂಪೂರ್ಣ ಒಪ್ಪಿಗೆ ಸಿಗದೆಯೇ ಪೂರ್ಣಿಮಾ ಅವರು ರಾಮ್ ಕುಮಾರ್ ಅವರೊಡನೆ ಮದುವೆ ಆಗಿದ್ದರು. ಇದರಿಂದ ಪಾರ್ವತಮ್ಮ ಅವರು ಬೇಸರಗೊಂಡು ಪೂರ್ಣಿಮಾ ಅವರ ಜೊತೆಗೆ 3 ವರ್ಷಗಳ ಕಾಲ ಮಾತನಾಡಿರಲಿಲ್ಲವಂತೆ. ಮಕ್ಕಳಾಗಿ, ಕೆಲ ವರ್ಷಗಳು ಉರುಳಿದ ಬಳಿಕ, ಕುಟುಂಬದಲ್ಲಿ ಎಲ್ಲವೂ ಸರಿ ಹೋಯಿತಂತೆ. ಇದು ಅಣ್ಣಾವ್ರ ಕುಟುಂಬದ ಬಗ್ಗೆ ಅನೇಕರಿಗೆ ಗೊತ್ತಿಲ್ಲದ ಕಥೆ..

ಇಂದು ಎರಡು ಕುಟುಂಬಗಳು ಸಹ ಬಹಳ ಅನ್ಯೋನ್ಯವಾಗಿ ಸಂತೋಷವಾಗಿದ್ದಾರೆ. ಪೂರ್ಣಿಮಾ ಅವರ ಮಕ್ಕಳ ಕೆರಿಯರ್ ಗೆ ದೊಡ್ಮನೆಯ ಸಾಥ್ ಇದೆ. ಧೀರೆನ್ ರಾಮ್ ಕುಮಾರ್ ಅವರ ಮುಂದಿನ ಸಿನಿಮಾವನ್ನು ಗೀತಾ ಶಿವ ರಾಜ್ ಕುಮಾರ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಧನ್ಯಾ ರಾಮ್ ಕುಮಾರ್ ಅವರು ಸಹ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿ ಆಗಿದ್ದಾರೆ. ಅಪ್ಪು ಅವರು ಇದ್ದಾಗ ಸಹ, ಇವರಿಬ್ಬರಿಗೆ ಸಪೋರ್ಟ್ ಮಾಡುತ್ತಿದ್ದರು. ಈಗಲೂ ಸಹ ಅದೇ ಸಪೋರ್ಟ್ ಮುಂದುವರೆದಿದೆ. ಕುಟುಂಬದ ಎಲ್ಲರೂ ಕೂಡ ಈ ರೀತಿ ಜೊತೆಯಾಗಿ ಇರುವುದನ್ನು ನೋಡುವುದೇ ಸಂತೋಷ ಎಂದರೂ ತಪ್ಪಲ್ಲ..

ಇನ್ನು ದೊಡ್ಮನೆ ಕುಟುಂಬದ ಗಂಡುಮಕ್ಕಳ ವಿಷಯಕ್ಕೆ ಬಂದರೆ ಶಿವಣ್ಣ ಅವರ ಅಪ್ಪಟ ಅರೇಂಜ್ಡ್ ಮ್ಯಾರೇಜ್. ಆದರೆ ರಾಘಣ್ಣ ಮತ್ತು ಅಪ್ಪು ಇಬ್ಬರದ್ದು ಸಹ ಲವ್ ಮ್ಯಾರೇಜ್. ಇಬ್ಬರ ಪ್ರೀತಿಯನ್ನು ಒಪ್ಪಿ, ಅವರಿಬ್ಬರು ಚಿತ್ರರಂಗಕ್ಕೆ ಬರುವುದಕ್ಕಿಂತ ಮೊದಲೇ ಮದುವೆ ಮಾಡಲಾಗಿತ್ತು. ಆದರೆ ವಿನಯ್ ರಾಜ್ ಕುಮಾರ್ ಅವರಿಗೆ ಇನ್ನು ಕೂಡ ಮದುವೆ ಆಗಿಲ್ಲ. ವಿನಯ್ ಅವರು ದೊಡ್ಮನೆಯ ಮೂರನೇ ತಲೆಮಾರಿನ ಉತ್ತಮ ಕಲಾವಿದ. ಆದರೆ ಇನ್ನೂ ಸಹ ಇವರಿಗೆ ಮದುವೆ ಆಗಿಲ್ಲ. ಒಳ್ಳೆಯ ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿ ಆಗಿದ್ದಾರೆ ವಿನಯ್ ರಾಜ್ ಕುಮಾರ್. ದೊಡ್ಮನೆಯ ಮೂರನೇ ತಲೆಮಾರಿನ ಎಲ್ಲಾ ಕಲಾವಿದರು ಉತ್ತಮ ಕಲಾವಿದರಾಗಿದ್ದಾರೆ