ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದ ಹನುಮಂತ ಅವರು 94 ದಿವಸಗಳ ಪ್ರಯಾಣ ಮುಗಿಸಿ, ಫಿನಾಲೆ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ಫಿನಾಲೆ ನಡೆಯುವುದಕ್ಕೆ ಬಾಕಿ ಉಳಿದಿರುವುದು ಇನ್ನು 3 ವಾರಗಳು ಮಾತ್ರ. ಹಾಗಾಗಿ ಯಾವೆಲ್ಲಾ ಸ್ಪರ್ಧಿಗಳು ಫಿನಾಲೆಗೆ ಬರುತ್ತಾರೆ ಎನ್ನುವುದನ್ನು ನೋಡಲು ಅಭಿಮಾನಿಗಳು ಸಹ ಕಾಯುತ್ತಿದ್ದಾರೆ. ಇನ್ನು ಕಳೆದ ವಾರ ಅಂದರೆ 14ನೇ ವಾರ ಬಿಗ್ ಬಾಸ್ ಮನೆಯಲ್ಲಿ ಫ್ಯಾಮಿಲಿ ವೀಕ್ ಇತ್ತು. ಎಲ್ಲಾ ಸ್ಪರ್ಧಿಗಳ ಫ್ಯಾಮಿಲಿ ಬಿಗ್ ಬಾಸ್ ಮನೆಗೆ ಬಂದಿದ್ದರು. ಇದೇ ಮೊದಲ ಬಾರಿಗೆ ಸ್ಪರ್ಧಿಗಳ ಫ್ಯಾಮಿಲಿ ಒಂದು ದಿವಸ ಬಿಗ್ ಬಾಸ್ ಮನೆಯ ಒಳಗೆ ಇರುವುದಕ್ಕೆ ಅವಕಾಶ ಸಹ ಸಿಕ್ಕಿತು.

ಇದೆಲ್ಲವೂ ಸ್ಪರ್ಧಿಗಳಿಗೆ ಮತ್ತು ಅವರ ಫ್ಯಾಮಿಲಿಗೆ ಬಹಳ ಸಂತೋಷ ತಂದ ವಿಷಯ. ಎಲ್ಲಾ ಸ್ಪರ್ಧಿಗಳ ಫ್ಯಾಮಿಲಿಯ ಹಾಗೆ ಹನುಮಂತ ಅವರ ತಾಯಿ ಮತ್ತು ತಂದೆ ಇಬ್ಬರು ಸಹ ಬಿಗ್ ಬಾಸ್ ಮನೆಗೆ ಬಂದಿದ್ದರು. ಹನುಮಂತ ಅವರ ತಂದೆ ತಾಯಿ ಇಬ್ಬರು ಸಹ ಉತ್ತರ ಕರ್ನಾಟಕದವರು ಹಾಗೆ ಲಂಬಾಣಿ ಕುಟುಂಬಕ್ಕೆ ಸೇರಿದವರು. ಅದೇ ರೀತಿಯಾಗಿ ಲಂಬಾಣಿ ಸೀರೆ ಹಾಕೊಂಡು ಬಂದಿದ್ದರು. ಇದನ್ನು ನೋಡುವುದಕ್ಕೆ ಚೆಂದವಾಗಿದ್ದರು ಎಂದು ಹೇಳಿದರೆ ತಪ್ಪಲ್ಲ. ಹನುಮಂತ ಅವರ ತಾಯಿ ಮನೆಯ ಎಲ್ಲಾ ಸ್ಪರ್ಧಿಗಳನ್ನು ತಮ್ಮ ಮಕ್ಕಳ ಹಾಗೆಯೇ ನೋಡಿಕೊಂಡರು. ಹಾಗೆಯೇ ಎಲ್ಲರಿಗೂ ಊಟವನ್ನು ಸಹ ತಂದಿದ್ದರು.
ಹನುಮಂತ ಅವರ ತಾಯಿ ಮತ್ತು ತಂದೆ ಇಬ್ಬರು ಸಹ, ಮಗನ ಜೊತೆಗೆ ಹಲವು ವಿಚಾರಗಳನ್ನು ಮಾತನಾಡಿದರು. ಹನುಮಂತನ ತಂದೆ ತಾಯಿ ಇಬ್ಬರಿಗೂ ಸಹ ಬಿಗ್ ಬಾಸ್ ದೊಡ್ಡ ಮನೆಯನ್ನು ನೋಡಿ ಆಶ್ಚರ್ಯವಾಗಿ ನಾವು ಯಾವಾಗ ಇಂಥ ಮನೆ ಕಟ್ಟಿಸೋದು ಎಂದು ಮಗನನ್ನು ಕೇಳಿದರು, ಆ ದೊಡ್ಡ ಮನೆಯಲ್ಲಿ ಮಗನನ್ನು ಕಂಡು ಅವರ ತಾಯಿ ಶೀಲವ್ವ ಸಂತೋಷದಲ್ಲಿ ಕಣ್ಣೀರು ಹಾಕಿದರು. ಹಾಗೆಯೇ ಈಗ ಅವರಿಗೆ ಸಾಲದ ಕಂತು ಕಟ್ಟಬೇಕಾಗಿ ಬಂದಿತ್ತು, ಆದರೆ ಅದನ್ನ ಕಟ್ಟಲು ಹಣ ಇರಲಿಲ್ಲ, ಕಂತು ಕಟ್ಟಿಲ್ಲ ಎಂದು ಹೇಳಿದ್ದಾರೆ. ಬೇಗ ತೀರಿಸೋಣ ಎಂದು ಹನುಮಂತ ಧೈರ್ಯ ತುಂಬಿದ್ದಾರೆ..

ಹಾಗೆಯೇ ಹನುಮಂತ ಅವರ ಚಿಕ್ಕಪ್ಪನ ಮದುವೆಗೆ ಧಾರವಾಡಕ್ಕೆ ಹೋಗಿದ್ದಾಗ, ಕಂಬಳಿ ಕಳೆದುಕೊಂಡು ಬಂದಿದ್ದಾರೆ ಎಂದು ಹೇಳಿದ್ದಾರೆ ಹನುಮಂತನ ತಾಯಿ. ಮಗನನ್ನು ಆ ಸ್ಥಾನದಲ್ಲಿ ನೋಡಿ ಅವರ ತಾಯಿಗೆ ಸಂತೋಷವಾಗಿದೆ. ಇನ್ನು ಹನುಮಂತ ಸಹ ಸಂತೋಷದಿಂದ ತಮ್ಮ ತಂದೆ ತಾಯಿಯ ಜೊತೆಗೆ ಮಾತನಾಡಿದ್ದಾರೆ. ನನಗೆ ಬಟ್ಟೆಯನ್ನೆಲ್ಲಾ ಸುದೀಪ್ ಸರ್ ಅವರು ಕಳಿಸಿಕೊಟ್ಟರು ಎಂದು ಹೇಳಿದರು. ಅದಕ್ಕೆ ಅವರ ತಾಯಿ ಗೊತ್ತಾಯಿತು ತುಂಬಾ ಸಂತೋಷ ಆಯ್ತು ಎಂದು ಹೇಳಿದ್ದಾರೆ. ಹಾಗೆಯೇ ರಜತ್ ಗೆ ನಮ್ಮಮ್ಮ ಹೇಗಿದ್ದಾರೆ ಎಂದು ಕೇಳುತ್ತಾರೆ ಹನುಮಂತ.
ಆಗ ರಜತ್ ಅವರು, ಸಖತ್ ಆಗಿದ್ದಾರೆ. ನನಗೂ ಈ ಥರ ಬಟ್ಟೆ ಹೊಲಿಸಿಕೊಡಿ, ಹಾಕೊಂಡು ಫೋಟೋಶೂಟ್ ಮಾಡಿಸಿಕೊಳ್ತೀನಿ ಎಂದು ತಮಾಷೆ ಮಾಡಿದ್ದಾರೆ. ಹನುಮಂತನ ತಂದೆ ತಾಯಿ ಬಂದು ಹೋಗಿದ್ದು, ಮನೆಯಲ್ಲಿ ಬೇರೆಯದೇ ವಾತಾವರಣ ಮನೆ ಮಾಡಿತು. ಇನ್ನು ಮನೆಯ ಮತ್ತೊಬ್ಬ ಸ್ಪರ್ಧಿ ಭವ್ಯ, ಹನುಮಂತನ ತಾಯಿಯ ಹಾಗೆ ಲಂಬಾಣಿ ಬಟ್ಟೆ ಧರಿಸಿ ಚೆನ್ನಾಗಿ ಕಾಣುತ್ತಿದ್ದರು. ಲಂಬಾಣಿ ವಾತಾವರಣ ಬಿಗ್ ಬಾಸ್ ಮನೆಯಲ್ಲಿ ಸುಂದರವಾಗಿತ್ತು. ಹಾಗೆಯೇ ಹನುಮಂತ ಈ ಬಾರಿ ಫಿನಾಲೆ ತಲುಪಿ, ವಿನ್ನರ್ ಆಗಬೇಕು ಎನ್ನುವುದು ಎಲ್ಲರ ಆಸೆ ಆಗಿದೆ. ಅದೇ ರೀತಿ ಆಗುತ್ತಾ ಎಂದು ಕಾದು ನೋಡಬೇಕಿದೆ.