ಕಿಚ್ಚ ಸುದೀಪ್ ಅವರು ಕನ್ನಡದ ಖ್ಯಾತ ಮೇರು ನಟರಲ್ಲಿ ಒಬ್ಬರು. ಇತ್ತೀಚೆಗೆ ಇವರು ಅಭಿನಯಿಸಿರುವ ಮ್ಯಾಕ್ಸ್ ಸಿನಿಮಾ ಬಿಡುಗಡೆ ಆಗಿ, ಸೂಪರ್ ಹಿಟ್ ಅನ್ನಿಸಿಕೊಂಡಿದೆ. ಸಿನಿಮಾ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಿನಿಮಾ ಪ್ರೊಮೋಷನ್ ಗಳಲ್ಲಿ ಬಹಳ ಬ್ಯುಸಿ ಇದ್ದ ಸುದೀಪ್ ಅವರು ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಈ ವಾರ ಜೀಕನ್ನಡ ವಾಹಿನಿಯ ಸರಿಗಮಪ ವಿಶೇಷ ಸಂಚಿಕೆಯಲ್ಲಿ ಸುದೀಪ್ ಅವರು ವಿಶೇಷ ಅತಿಥಿಯಾಗಿ ಬಂದಿದ್ದಾರೆ. ಸುದೀಪ್ ಅವರ ಜೊತೆಗೆ ಅವರ ಪತ್ನಿ ಪ್ರಿಯಾ ಹಾಗೂ ಅವರ ಮಗಳು ಸಾನ್ವಿ ಸಹ ವಿಶೇಷವಾದ ಸರ್ಪ್ರೈಸ್ ನೀಡಿದ್ದಾರೆ. ಆದರೆ ಅಭಿಮಾನಿಗಳಿಗೆ ಮತ್ತು ಕನ್ನಡಿಗರಿಗೆ ಸಾನ್ವಿ ಅವರಿಂದ ಬೇಜಾರಾಗಿದೆ.

ಹೌದು, ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಅವರ ಮೇಲೆ ಒಂದಷ್ಟು ಜನರಿಗೆ ಬೇಸರ ಆಗಿರುವುದು ನಿಜ. ಅದಕ್ಕೆ ಕಾರಣ ಏನು ಎಂದರೆ, ಸುದೀಪ್ ಅವರ ಮಗಳು ಸಾನ್ವಿ ಅವರು ಕನ್ನಡದಲ್ಲಿ ಮಾತನಾಡಲಿಲ್ಲ ಎನ್ನುವುದು. ಹೌದು, ಸರಿಗಮಪ ಕಾರ್ಯಕ್ರಮಕ್ಕೆ ಬಂದ ಸಾನ್ವಿ ಅವರು ಜಸ್ಟ್ ಮಾತ್ ಮಾತಲ್ಲಿ ಸಿನಿಮಾದ ಹಾಡನ್ನು ಅಪ್ಪ ಅಮ್ಮನ ಎದುರು ಹಾಡಿದ್ದು ಎಲ್ಲರಿಗೂ ಸಂತೋಷ ತಂದಿತು, ಸುದೀಪ್ ಅವರು ಮಗಳು ಹಾಡೋದನ್ನ ನೋಡಿ, ಹೆಮ್ಮೆಯಿಂದ ಕಣ್ತುಂಬಿಕೊಂಡರು. ಇದೊಂದು ಭಾವನಾತ್ಮಕ ಕ್ಷಣವಾಗಿತ್ತು. ಸುದೀಪ್ ಅವರಿಗೆ ಮಗಳೆಂದರೆ ಬಹಳ ಹೆಮ್ಮೆ ಮತ್ತು ಪ್ರೀತಿ ಎರಡು ಸಹ ಇದೆ ಅನ್ನೋದು ನಮಗೆಲ್ಲ ಗೊತ್ತಿರುವ ವಿಷಯ. ಆದರೆ ಮಗಳಿಗೆ ಕನ್ನಡ ಬರೋದಿಲ್ಲ ಅನ್ನೋದು ಬೇಸರ.
ಹೌದು, ಸುದೀಪ್ ಅವರ ಮಗಳು ಸಾನ್ವಿ ಅವರಿಗೆ ನಿಜಕ್ಕೂ ಕನ್ನಡ ಬರುತ್ತೋ ಬರಲ್ವೋ ಅನ್ನೋ ಬಗ್ಗೆ ಸರಿಯಾಗಿ ಗೊತ್ತಿಲ್ಲ. ಅವರು ಹಾಡಿದ್ದು ಕನ್ನಡ ಹಾಡನ್ನೇ, ಆದರೆ ಅನುಶ್ರೀ ಅವರು ಸ್ಟೇಜ್ ಮೇಲೆ ಮಾತನಾಡಿಸಿದಾಗ ಸಾನ್ವಿ ಅವರು ಒಂದೇ ಒಂದು ಮಾತನ್ನು ಸಹ ಕನ್ನಡದಲ್ಲಿ ಆಡಲಿಲ್ಲ. ಸುದೀಪ್ ಅವರು ಸಹ ಮಗಳ ಜೊತೆಗೆ ಇಂಗ್ಲಿಷ್ ನಲ್ಲೇ ಮಾತನಾಡಿದರು. ಇದನ್ನ ನೋಡಿ ಅಭಿಮಾನಿಗಳಿಗೆ ಬೇಸರ ಆಗಿದೆ. ಸುದೀಪ್ ಅವರು ಕನ್ನಡದ ಬಗ್ಗೆ ಬಹಳ ಅಭಿಮಾನ ಹೊಂದಿರುವವರು, ಬೇರೆ ಬೇರೆ ಊರುಗಳಿಗೆ ಹೋದರು ಮೊದಲು ಕನ್ನಡದಲ್ಲೇ ಮಾತನಾಡಿ, ನಂತರ ಅಲ್ಲಿನ ಭಾಷೆ ಮಾತನಾಡುತ್ತಾರೆ. ಹಾಗೆಯೇ ಯಾರಾದರೂ ಕನ್ನಡದಲ್ಲಿ ತಪ್ಪಾಗಿ ಮಾತನಾಡಿದರೆ, ಸರಿ ಪಡಿಸುತ್ತಾರೆ.

ಈ ಕಾರಣಕ್ಕೆ ಸುದೀಪ್ ಅವರು ಹೆಚ್ಚು ಜನರಿಗೆ ಇಷ್ಟವಾಗುತ್ತಾರೆ. ಅವರ ಕನ್ನಡಾಭಿಮಾನ ಜನರಿಗೆ ತುಂಬಾ ಇಷ್ಟ, ಇದೇ ಕಾರಣಕ್ಕೆ ಸುದೀಪ್ ಅವರಿಗೆ ಹೆಚ್ಚು ಅಭಿಮಾನಿಗಳು ಇದ್ದಾರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದೀಪ್ ಅವರು ಗುರುತಿಸಿಕೊಂಡಿದ್ದಾರೆ. ಹಾಗಿರುವಾಗ ಸುದೀಪ್ ಅವರ ಮಗಳು ಕನ್ನಡದಲ್ಲಿ ಮಾತನಾಡಲೇ ಇಲ್ಲ ಎನ್ನುವ ಕಾರಣಕ್ಕೆ ಅವರ ಫ್ಯಾನ್ಸ್ ಹಾಗೂ ನೆಟ್ಟಿಗರು ಬೇಸರ ಮಾಡಿಕೊಂಡಿದ್ದಾರೆ. ಸುದೀಪ್ ಅವರು ಮಗಳಿಗೆ ಕನ್ನಡ ಮಾತಾಡೋದಕ್ಕೆ ಹೇಳಬಹುದಿತ್ತು, ಈ ಥರ ಆದ್ರೆ ಹೇಗೆ ಅಂತಿದ್ದಾರೆ ಫ್ಯಾನ್ಸ್. ಮುಂದಿನ ಕಾರ್ಯಕ್ರಮಗಳಲ್ಲಿ ಸಾನ್ವಿ ಕನ್ನಡದಲ್ಲಿ ಮಾತನಾಡುತ್ತಾರಾ ಎಂದು ಕಾದು ನೋಡಬೇಕಿದೆ.
ಸಾನ್ವಿ ಸುದೀಪ್ ಕನ್ನಡದ ವಿಷಯಕ್ಕೆ ಹೀಗೆ ಸುದ್ದಿ ಆಗಿರುವುದು ಇದೇ ಮೊದಲಲ್ಲ. ಹಲವು ಬಾರಿ ಇದೇ ರೀತಿ ಆಗಿದೆ. ಒಮ್ಮೆ ಸೋಷಿಯಲ್ ಮೀಡಿಯಾದಲ್ಲಿ ನಿಮ್ಮ ಮಾತೃಭಾಷೆ ಯಾವುದು ಎಂದು ಕೇಳಿದಾಗ, ಮಲಯಾಳಂ ಎಂದು ಹೇಳಿದ್ದರು. ಈ ವಿಷಯ ಸಹ ಸುದ್ದಿಯಾಗಿತ್ತು, ಸುದೀಪ್ ಅವರ ಪತ್ನಿ ಪ್ರಿಯಾ ರಾಧಾಕೃಷ್ಣನ್ ಅವರು ಮೂಲತಃ ಕೇರಳದವರು, ಅವರ ಮಾತೃಭಾಷೆ ಮಲಯಾಳಂ. ಹಾಗಾಗಿ ಸಾನ್ವಿ ಅವರು ಈ ಉತ್ತರ ಕೊಟ್ಟಿದ್ದರು ಕೊಟ್ಟಿರಬಹುದು. ಒಟ್ಟಿನಲ್ಲಿ ಕನ್ನಡದ ಸ್ಟಾರ್ ಹೀರೋ ಮಗಳಾಗಿ ಸಾನ್ವಿ ಸುದೀಪ್ ಕನ್ನಡದಲ್ಲಿ ಮಾತನಾಡಿದರೆ ಚೆನ್ನಾಗಿರುತ್ತದೆ ಎನ್ನುವುದು ಎಲ್ಲರ ಅಭಿಪ್ರಾಯ ಆಗಿದೆ.