ಕಳೆದ ಕೆಲವು ತಿಂಗಳುಗಳಿಂದ ನಟಿ ಐಶ್ವರ್ಯ ರೈ ಹಾಗೂ ಅಭಿಶೇಕ್ ಬಚ್ಚನ್ ಕೌಟುಂಬಿಕ ಜೀವನದ ಬಗ್ಗೆ ಹಲವು ವದಂತಿಗಳು ಕೇಳಿಬರುತ್ತಿದೆ. ಈ ಬಗ್ಗೆ ಐಶ್ವರ್ಯ ಅವರಾಗಲಿ, ಅಭಿಶೇಕ್ ಬಚ್ಚನ್ ಅವರಾಗಲಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಈ ಜೋಡಿ ವಿಚ್ಛೇದನ ಪಡೆದು ದೂರ ಆಗಬಹುದು ಎನ್ನುವ ಸುದ್ದಿಯೊಂದು ಕೇಳಿಬಂದಿತ್ತು. ಆದರೆ ಇತ್ತೀಚೆಗೆ ನಡೆದ ಮಗಳ ಶಾಲೆಯ ಕಾರ್ಯಕ್ರಮದಲ್ಲಿ ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ಮತ್ತು ಆರಾಧ್ಯ ಮೂವರು ಕೂಡ ಜೊತೆಯಾಗಿ ಕಾಣಿಸಿಕೊಂಡು ವದಂತಿಗಳಿಗೆ ತೆರೆ ಎಳೆದಿದ್ದರು. ಆದರೆ ಇದೀಗ ಐಶ್ವರ್ಯ ರೈ ಹಾಗೂ ಆರಾಧ್ಯ ಇಬ್ಬರ ಏರ್ಪೋರ್ಟ್ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ..
ಹೌದು, ಇದೀಗ ಐಶ್ವರ್ಯ ಅಭಿಷೇಕ್ ದಂಪತಿ ಮಗಳ ಜೊತೆಗೆ ವಿದೇಶದಲ್ಲಿ ಹೊಸ ವರ್ಷದ ಆಚರಣೆ ಮಾಡಿದ್ದಾರೆ. ಕುಟುಂಬದ ಬಗ್ಗೆ ಬಂದಿರುವ ವದಂತಿಯ ಬಗ್ಗೆ ಇಬ್ಬರೂ ಸಹ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಜೊತೆಯಾಗಿ ಹೊರದೇಶದಲ್ಲಿ ಹೊಸ ವರ್ಷ ಆಚರಿಸಿ, ನಿನ್ನೆಯಷ್ಟೇ ಮುಂಬೈಗೆ ವಾಪಸ್ ಬಂದಿದ್ದಾರೆ. ಮುಂಬೈನಲ್ಲಿ ಇವರ ಕುಟುಂಬ ಪಾಪಾರಾಜಿಗಳ ಕಣ್ಣಿಗೆ ಬಂದಿದೆ. ಐಶ್ವರ್ಯ ರೈ ಅವರ ಜೊತೆಗೆ ಮಗಳು ಆರಾಧ್ಯ ಬರುತ್ತಿದ್ದಾಗ, ಆರಾಧ್ಯ ಖುಷಿಯಲ್ಲಿ, ಆಟಾಡುತ್ತಾ, ಜಂಪ್ ಮಾಡಿಕೊಂಡು ಬಂದಿದ್ದಾರೆ. ಮಗಳು ದಿಢೀರ್ ಎಂದು ಜಂಪ್ ಮಾಡಿದ್ದು ನೋಡಿ ಟೆನ್ಷನ್ ಮಾಡಿಕೊಂಡ ಐಶ್ವರ್ಯ ರೈ ಅವರು, ಯಾರಾದರೂ ತಳ್ಳಿರಬೇಕು ಎಂದು ಕೊಂಡಿದ್ದಾರೆ.
ಯಾರು ತಳ್ಳಿದ್ದು ಎಂದು ಕೂಡ ಕೇಳಿದರು, ಹಾಗೆಯೇ ನೋಡಿಕೊಂಡು ಹುಷಾರಾಗಿ ಓಡಾಡಿಕೊಂಡು ಬಾ ಎಂದು ಹೇಳಿದರು. ಆರಾಧ್ಯ ಈ ವರ್ತನೆಯ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೆಲವರು ಆರಾಧ್ಯ ಯಾಕೋ ನಾರ್ಮಲ್ ಆಗಿ ಕಾಣುತ್ತಿಲ್ಲ, ಮಾನಸಿಕವಾಗಿ ಏನೋ ಸಮಸ್ಯೆ ಇರಬಹುದು ಎಂದಿದ್ದಾರೆ. ಇನ್ನು ಕೆಲವು ನೆಟ್ಟಿಗರು, ಟೀನೇಜ್ ಹುಡುಗಿಯರು ಹೇಗೆ ವರ್ತನೆ ಮಾಡುತ್ತಾರೋ, ಆರಾಧ್ಯ ಕೂಡ ಅದೇ ರೀತಿ ವರ್ತನೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಹೀಗೆ ಆರಾಧ್ಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅಪ್ಪ ಅಮ್ಮನ ಜೊತೆಗೆ ಹೊರಗಡೆ ಹೋಗಿಬಂದ ಖುಷಿಯಲ್ಲಿ ಆರಾಧ್ಯ ಆ ರೀತಿ ವರ್ತನೆ ಮಾಡಿರಬಹುದು ಎಂದು ಹೇಳುತ್ತಿದ್ದಾರೆ..
ಇನ್ನು ಐಶ್ವರ್ಯ ರೈ ಅವರು ಆರಾಧ್ಯಗೆ ಫ್ರೀಡಂ ಕೊಡುತ್ತಿಲ್ಲ, ಮಕ್ಕಳು ಹೇಗಿರಬೇಕೋ ಆ ರೀತಿ ಇರೋದಕ್ಕೆ ಬಿಡುತ್ತಿಲ್ಲ. ಹ್ಯಾಂಡ್ ಬ್ಯಾಗ್ ರೀತಿ ಮಗಳನ್ನು ಎಲ್ಲಾ ಕಡೆಗೂ ಕರೆದುಕೊಂಡು ಹೋಗುತ್ತಿದ್ದಾರೆ, ಮಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎನ್ನುವ ಮಾತುಗಳು, ಟೀಕೆಗಳು ಐಶ್ವರ್ಯ ರೈ ಅವರ ಬಗ್ಗೆ ಕೇಳಿ ಬರುತ್ತಲೇ ಇದೆ. ಆದರೆ ಐಶ್ವರ್ಯ ರೈ ಅವರು ಈ ಯಾವುದೇ ಟೀಕೆಗಳಿಗೆ ಪ್ರತಿಕ್ರಿಯೆ ಕೊಡುವ ಗೋಜಿಗೆ ಹೋಗಿರಲಿಲ್ಲ, ನನ್ನ ಮಗಳನ್ನು ಹೇಗೆ ನೋಡಿಕೊಳ್ಳಬೇಕು ಎಂದು ನನಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿದರು. ಈ ರೀತಿ ಹೇಳಿಕೆ ಕೊಟ್ಟು, ಟೀಕೆಗಳಿಗೆ ತೆರೆ ಎಳೆದರು ಮಾಜಿ ವಿಶ್ವಸುಂದರಿ ಐಶ್ವರ್ಯ ರೈ.
ಇನ್ನು ಇವರ ಕುಟುಂಬದ ಬಗ್ಗೆ ಕೂಡ ವದಂತಿಗಳು ಕೇಳಿಬರುತ್ತಲೇ ಇದೆ. ಕೆಲ ತಿಂಗಳಿಗಳಿಂದ ಐಶ್ವರ್ಯ ಅವರು ಬಚ್ಚನ್ ಕುಟುಂಬದ ಜೊತೆಗೆ ಅವರ ಮನೆಯಲ್ಲಿ ವಾಸ ಮಾಡುತ್ತಿಲ್ಲ, ತಮ್ಮ ತಾಯಿ ಹಾಗೂ ಮಗಳ ಜೊತೆಗೆ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ಐಶ್ವರ್ಯ ಅವರಿಗೂ ಮತ್ತು ಅವರ ಅತ್ತೆ ಜಯಾ ಬಚ್ಚನ್ ಅವರಿಗೂ ಹೊಂದಾಣಿಕೆ ಇಲ್ಲ, ಬಚ್ಚನ್ ಕುಟುಂಬದ ಜೊತೆಗೆ ಐಶ್ವರ್ಯ ರೈ ಅವರ ಸಂಬಂಧ ಚೆನ್ನಾಗಿಲ್ಲ ಎನ್ನುವ ಮಾತುಗಳು ಕೇಳಿಬಂದು, ಇಬ್ಬರು ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ಕೇಳಿಬಂದಿತ್ತು. ಇದ್ಯಾವುದಕ್ಕೂ ಎರಡು ಕುಟುಂಬದವರು ಯಾವುದೇ ಪ್ರತಿಕ್ರಿಯೆ, ಸ್ಪಷ್ಟನೆ ಕೊಟ್ಟಿಲ್ಲ. ಆದರೆ ಈಗ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.