ಸೂಪರ್ ಸ್ಟಾರ್ ರಜನಿಕಾಂತ್ ಅವರು ವಿಶ್ವದ ಎಲ್ಲೇ ಹೋದರು, ಎಷ್ಟೇ ದೊಡ್ಡ ಸ್ಟಾರ್ ಹೀರೋ ಆದರೂ ಸಹ ಅವರಿಗೆ ಬೆಂಗಳೂರಿನ ಬಗ್ಗೆ ಇರುವ ಪ್ರೀತಿ ಮಾತ್ರ ಕಡಿಮೆ ಆಗೋದೇ ಇಲ್ಲ. ಯಾಕೆಂದರೆ ಅವರು ಹುಟ್ಟಿದ್ದು, ಬೆಳೆದಿದ್ದು, ಮೊದಲು ಕೆಲಸ ಮಾಡಿದ್ದು ಎಲ್ಲವೂ ಇಲ್ಲೇ. ಮರಾಠಿ ಕುಟುಂಬದಲ್ಲಿ ಹುಟ್ಟಿದರು ಸಹ, ಕನ್ನಡ ನಾಡಲ್ಲಿ ಬೆಳೆದ ರಜನಿಕಾಂತ್ ಅವರಿಗೆ ಇಲ್ಲಿನ ನಂಟು ಹೆಚ್ಚಿದೆ. ಹಾಗೆಯೇ ಕರ್ನಾಟಕದ ಬಗ್ಗೆ ವಿಶೇಷ ಪ್ರೀತಿ ಸಹ ಇದೆ. ಆಗಾಗ ಸೈಲೆಂಟ್ ಆಗಿಯೇ ಬೆಂಗಳೂರಿಗೆ ಬಂದು ಹೋಗ್ತಾರೆ ತಲೈವಾ. ಇದೀಗ ದಿಢೀರ್ ಎಂದು ಡಿಸೆಂಬರ್ 27ರಂದು ಬಂದು ಹೋಗಿದ್ದಾರೆ. ಈ ಬಾರಿ ಅವರು ಬಂದಿರೋದು ಯಾಕೆ ಗೊತ್ತ?

ಸೂಪರ್ ಸ್ಟಾರ್ ರಜನಿಕಾಂತ್ ಅವರು ಓದಿದ್ದು ಇಲ್ಲೇ.. ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಶುರು ಮಾಡಿದರು, ಸಿನಿಮಾದಲ್ಲಿ ನಟನೆ ಶುರು ಮಾಡಿದಾಗ, ಮೊದಲು ನಟಿಸಿದ್ದು ಕೂಡ ಸಿನಿಮಾದಲ್ಲೇ. ಬಳಿಕ ಅವಕಾಶ ಹುಡುಕಿಕೊಂಡು ತಮಿಳುನಾಡಿಗೆ ಹೋದರು. ಅಲ್ಲಿ ಉತ್ತಮವಾದ ಅವಕಾಶಗಳು ಸಿಕ್ಕಿ, ಸ್ಟಾರ್ ಆದರು.. ಅಲ್ಲಿಯೇ ನೆಲೆಯೂರಿದರು. ತಮಿಳಿನಲ್ಲಿ ರಜನಿಕಾಂತ್ ಅವರ ಪ್ರತಿಭೆಗೆ ಪೋಷಣೆ ನೀಡುವಂತಹ ಹಲವು ಪಾತ್ರಗಳು ಸಿಗುತ್ತಾ ಹೋದವು. ರಜನಿಕಾಂತ್ ಅವರು ಮುಂದಿನ ದಿನಗಳಲ್ಲಿ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡ ಸ್ಟಾರ್ ಆದರು ಎನ್ನುವುದು ನಮಗೆಲ್ಲಾ ಗೊತ್ತಿರುವ ವಿಷಯ.
ಆದರೆ ಅವರ ಬೇರು ಕರ್ನಾಟಕ, ಬೆಂಗಳೂರು. ಇಲ್ಲಿ ಕೂಡ ರಜನಿಕಾಂತ್ ಅವರನ್ನು ಗೌರವಿಸಿ, ಆರಾಧಿಸುವ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ರಜನಿಕಾಂತ್ ಅವರಿಗೂ ಇಲ್ಲಿನ ಜನರ ಬಗ್ಗೆ ಅಷ್ಟೇ ಪ್ರೀತಿ ಇದೆ. ಇತ್ತೀಚೆಗೆ ರಜನಿಕಾಂತ್ ಅವರು ತಾವು ಕೆಲಸ ಮಾಡುತ್ತಿದ್ದ ಬಸ್ ಡಿಪೋ ಗೆ ಭೇಟಿ ನೀಡಿದ್ದರು. ಸಿಬ್ಬಂದಿಗಳ ಜೊತೆಗೆ ಮಾತನಾಡಿ, ಸ್ವಲ್ಪ ಹೊತ್ತು ಸಮಯ ಕಳೆದು, ಅವರ ಜೊತೆಗೆ ಫೋಟೋ ಕೂಡ ತೆಗೆಸಿಕೊಂಡಿದ್ದರು. ಆಗ ಸಹ ರಜನಿಕಾಂತ್ ಅವರ ಫೋಟೋಸ್ ಸಿಕ್ಕಾಪಟ್ಟೆ ವೈರಲ್ ಆಗಿದ್ದವು.. ಇದೀಗ ಮತ್ತೊಮ್ಮೆ ಬೆಂಗಳೂರಿಗೆ ಬಂದು ಹೋಗಿದ್ದಾರೆ. ಈ ಸಾರಿ ಅವರು ಬಂದಿರುವುದು ಅಣ್ಣನ ಮನೆಗೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಹೌದು, ರಜನಿಕಾಂತ್ ಅವರು ಚೆನ್ನೈನಲ್ಲಿ ನೆಲೆಸಿದ್ದರು ಸಹ, ಅವರ ಅಣ್ಣ ಇರುವುದು ಬೆಂಗಳೂರಿನಲ್ಲೇ. ರಜನಿಕಾಂತ್ ಅವರ ಕುಟುಂಬದ ಸಾಕಷ್ಟು ಸದಸ್ಯರು ಇನ್ನು ಕೂಡ ಇಲ್ಲೇ ಇದ್ದಾರೆ. ಡಿಸೆಂಬರ್ 25ರಂದು ರಜನಿಕಾಂತ್ ಅವರ ಅಣ್ಣನ ಹುಟ್ಟುಹಬ್ಬ ಇತ್ತು. ಆ ದಿವಸ ಅವರು ಶೂಟಿಂಗ್ ನಲ್ಲಿ ಬ್ಯುಸಿ ಇದ್ದ ಕಾರಣ, ಅಣ್ಣನನ್ನು ನೋಡಲು ಬರುವುದಕ್ಕೆ ಆಗಿರಲಿಲ್ಲ. ಹಾಗಾಗಿ ಡಿಸೆಂಬರ್ 27ರಂದು ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ತ್ಮ ಅಣ್ಣನ ಮನೆಗೆ ಬಂದು, ಅಣ್ಣನ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ. ಅಣ್ಣನ ಕುಟುಂಬದ ಜೊತೆಗೆ ಒಂದಷ್ಟು ಸಮಯ ಕಳೆದು, ಬಳಿಕ ಚೆನ್ನೈಗೆ ವಾಪಸ್ ಹೋಗಿದ್ದಾರೆ..

ರಜನಿಕಾಂತ್ ಅವರು ಎಷ್ಟು ದೊಡ್ಡ ಸ್ಥಾನದಲ್ಲಿ ಇದ್ದರು ಸಹ, ಕುಟುಂಬಕ್ಕೆ ಕೊಡುವ ಸಮಯವನ್ನು ಅವರು ಮರೆತಿಲ್ಲ, ಅವರ ಬೇರನ್ನು ಮರೆತಿಲ್ಲ, ಈಗಲೂ ಅಣ್ಣನ ಹುಟ್ಟುಹಬ್ಬಕ್ಕೆ ಬಂದು ಹೋಗಿದ್ದಾರೆ ಎನ್ನುವುದು ಬಹಳ ಹೆಮ್ಮೆ ಪಡುವಂಥ ವಿಷಯ. ಇನ್ನು ರಜನಿಕಾಂತ್ ಅವರ ಸಿನಿಮಾ ಬಗ್ಗೆ ಹೇಳುವುದಾದರೆ, ಈ ವರ್ಷ ದಸರಾ ವೇಳೆಗೆ ಅವರ ವೇಟೈಯನ್ ಸಿನಿಮಾ ತೆರೆಕಂಡು ಬ್ಲಾಕ್ ಬಸ್ಟರ್ ಆಗಿದೆ. ಕೂಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಕೂಲಿ ಸಿನಿಮಾದಲ್ಲಿ ನಮ್ಮ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರು ಕೂಡ ಅಭಿನಯಿಸುತ್ತಿದ್ದಾರೆ ಎನ್ನುವುದು ನಮಗೆ ಸಂತೋಷ ಕೊಡುವಂಥ ವಿಷಯ ಆಗಿದೆ.