ಜೀಕನ್ನಡ್ ವಾಹಿನಿಯ ಪ್ರಸಿದ್ಧ ಧಾರಾವಾಹಿಗಳಲ್ಲಿ ಸೀತಾರಾಮ ಸಹ ಒಂದು. ಇದು ರೀಮೇಕ್ ಧಾರಾವಾಹಿ ಆಗಿದ್ದರೂ ಜನರಿಗೆ ತುಂಬಾ ಹತ್ತಿರ ಆಗಿತ್ತು. ಅದಕ್ಕೆ ಕಾರಣ ತಾರಾಬಳಗ, ಅಗ್ನಿಸಾಕ್ಷಿ ನಂತರ ನಟಿ ವೈಷ್ಣವಿ ಪೂರ್ಣಪ್ರಮಾಣದ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಧಾರಾವಾಹಿ ಇದು, ಮಂಗಳಗೌರಿ ಮದುವೆ ಖ್ಯಾತಿಯ ನಟ ಗಗನ್ ಚಿನ್ನಪ್ಪ ಅವರು ಅಭಿನಯಿಸಿ, ಪುಟ್ಟ ಸಿಹಿ ಪಾತ್ರದಲ್ಲಿ ರೀತು ಸಿಂಗ್, ಭಾರ್ಗವಿಯಾಗಿ ನಟಿ ಪೂಜಾ ಲೋಕೇಶ್, ಹಿರಿಯನಟ ಮುಖ್ಯಮಂತ್ರಿ ಚಂದ್ರು ಅವರು ಮುಖ್ಯ ಪಾತ್ರದಲ್ಲಿ, ನಟ ಅಶೋಕ್ ಶರ್ಮಾ, ಮೇಘನಾ ಶಂಕರ್ ಸೇರಿದಂತೆ ದೊಡ್ಡ ಅಭಿಮಾನಿ ಬಳಗ ಈ ಧಾರಾವಾಹಿಯಲ್ಲಿದೆ.

ಎಲ್ಲರನ್ನು ಹೆಚ್ಚು ಆಕರ್ಷಿಸಿದ್ದು ಸಿಹಿ ಪಾತ್ರ ಎಂದರೆ ತಪ್ಪಲ್ಲ. ಹೆಚ್ಚು ಜನರು ಸೀತಾರಾಮ ಧಾರಾವಾಹಿ ನೋಡುತ್ತಾ ಇದ್ದದ್ದೇ ಸಿಹಿಯ ಕ್ಯೂಟ್ನೆಸ್ ಹಾಗೂ ಪರ್ಫಾರ್ಮೆನ್ಸ್ ಗೋಸ್ಕರ. ಇದರ ಜೊತೆಗೆ ಸೀತಾ ರಾಮ ಇಬ್ಬರ ಪಾತ್ರಗಳು ಸಹ ಜನರಿಗೆ ತುಂಬಾ ಇಷ್ಟವಾಗಿತ್ತು. ಅವರಿಬ್ಬರ ಲವ್, ರೋಮ್ಯಾನ್ಸ್ ಎಲ್ಲವನ್ನು ಜನರು ಮೆಚ್ಚಿಕೊಂಡಿದ್ದರು. ಆದರೆ ಈಗ ಧಾರಾವಾಹಿ ಕಥೆಯೇ ಬದಲಾಗಿ ಹೋಗಿದೆ. ಹೌದು, ಸಿಹಿ ಪಾತ್ರವನ್ನು ಆಕ್ಸಿಡೆಂಟ್ ನಲ್ಲಿ ಮುಗಿಸಲಾಗಿದೆ. ಭಾರ್ಗವಿಯ ಕುತಂತ್ರಕ್ಕೆ ಸಿಹಿಯ ಪ್ರಾಣ ಪಕ್ಷಿ ಹಾರಿ ಹೋಗಿದೆ. ಇದರಿಂದ ಸೀತಾ ಮಾನಸಿಕವಾಗಿ ಡಿಸ್ಟರ್ಬ್ ಆಗಿದ್ದಾಳೆ. ಕಥೆ ಈ ರೀತಿ ಸಾಗುತ್ತಿದೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಇತ್ತ ಸೀತಾಗೆ ಹುಟ್ಟಿದ್ದು ಅವಳಿ ಮಕ್ಕಳು, ಒಂದು ಮಗು ಹುಟ್ಟುವಾಗಲೇ ಸ*ತ್ತು ಹೋಗಿತ್ತು ಎಂದು ಡಾಕ್ಟರ್ ರಿಪೋರ್ಟ್ ಕೊಟ್ಟಿದ್ದರು. ಆದರೆ ಈಗ ಸಿಹಿಯನ್ನೇ ಹೋಲುವ ಸುಬ್ಬಿಯನ್ನು ಧಾರಾವಾಹಿಯಲ್ಲಿ ತೋರಿಸಲಾಗುತ್ತಿದೆ. ಸುಬ್ಬಿ ಸಿಹಿಯ ಅಕ್ಕ ಅಥವಾ ತಂಗಿ ಅನ್ನೋದು ವೀಕ್ಷಕರಿಗೆ ಗೊತ್ತಾಗಿದೆ. ಆದರೆ ಇನ್ನೂ ಕೂಡ ಸುಬ್ಬಿಯನ್ನು ಸಿಹಿ ಆಗಲಿ, ಸೀತಾರಾಮ ಆಗಲಿ ನೋಡಿಲ್ಲ. ಇತ್ತ ಜೀಕನ್ನಡ ವಾಹಿನಿ ಸಿಹಿ ಸುಬ್ಬಿ ಜೊತೆಯಾದರೆ ಹೇಗಿರುತ್ತದೆ ಎನ್ನುವ ರೀತಿಯಲ್ಲಿ ಪೋಸ್ಟ್ ಮಾಡಿದ್ದು, ಜನರು ಜೀ ವಾಹಿನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಚೆನ್ನಾಗಿದ್ದ ಕಥೆಯನ್ನು ಹಳ್ಳ ಹಿಡಿಸಿದಿರಿ ಎಂದು ಕಾಮೆಂಟ್ಸ್ ನಲ್ಲಿ ಬಯ್ಯುತ್ತಿದ್ದಾರೆ.

250 ಸಂಚಿಕೆಗಳವರೆಗು ಧಾರಾವಾಹಿ ಎಷ್ಟು ಚೆನ್ನಾಗಿ ಮೂಡಿಬಂದಿತು, ಆದರೆ ಈಗ ಎತ್ತ ಹೋಗುತ್ತಿದೆ ಅಂತ ನಿರ್ದೇಶಕರೇ ಯೋಚನೆ ಮಾಡಬೇಕು ಎನ್ನುತ್ತಿದ್ದಾರೆ ಫ್ಯಾನ್ಸ್. ಹಾಗೆಯೇ ಇನ್ನಷ್ಟು ಜನರು, ಸಿಹಿ ಮತ್ತು ಸುಬ್ಬಿಯ ಕಥೆಯ ನಡುವೆ ಸೀತಾರಾಮ ಈ ಧಾರಾವಾಹಿ ನಾಯಕ ನಾಯಕಿ ಅನ್ನೋದನ್ನ ನಿರ್ದೇಶಕರು ಮರೆತಿರೋ ಹಾಗಿದೆ, ಹೆಸರಿಗೆ ಅಷ್ಟೇ ಅವರಿಬ್ಬರು, ಜನಪ್ರಿಯತೆಗೆ ಅವರನ್ನು ಬಳಸಿಕೊಳ್ಳಲಾಗುತ್ತಿದೆ, ಆದರೆ ಕಥೆ ಪೂರ್ತಿ ಸಿಹಿಯ ಸುತ್ತವೆ ಸುತ್ತುತ್ತಿದೆ ಎಂದು ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಕಥೆಯಲ್ಲಿ ಲಾಜಿಕ್ ಸಹ ಕಾಣುತ್ತಿಲ್ಲ ಎನ್ನುವುದು ವೀಕ್ಷಕರ ಅಭಿಪ್ರಾಯ.
ಸಿಹಿ ಏನೋ ಸುಬ್ಬಿಯನ್ನು ನೋಡಬಹುದು, ಆದರೆ ಸುಬ್ಬಿ ಹೇಗೆ ಸಿಹಿನ ನೋಡೋಕೆ ಆಗುತ್ತೆ? ಎನ್ನುವುದು ವೀಕ್ಷಕರ ಪ್ರಶ್ನೆ. ಧಾರಾವಾಹಿಯನ್ನು ಸುಮ್ಮನೆ ಡ್ರಾಗ್ ಮಾಡುತ್ತಿದ್ದಾರೆ, ಸುಬ್ಬಿ ಬಗ್ಗೆ ಬೇಗ ಸೀತಾ ರಾಮ ಇಬ್ಬರಿಗೂ ಗೊತ್ತಾಗೋ ಹಾಗೆ ಮಾಡಿ, ಭಾರ್ಗವಿಯ ಮೋಸದ ಬಗ್ಗೆ ರಿವೀಲ್ ಮಾಡಿ, ಧಾರಾವಾಹಿಯನ್ನ ತುಂಬಾ ಎಳೀಬೇಡಿ ಅಂತಿದ್ದಾರೆ ನೆಟ್ಟಿಗರು. ಒಟ್ಟಿನಲ್ಲಿ ಅಷ್ಟು ಚೆನ್ನಾಗಿ ಹೋಗುತ್ತಿದ್ದ, ಜನಪ್ರಿಯತೆ ಹೊಂದಿದ್ದ ಸೀತಾರಾಮ ಧಾರಾವಾಹಿಯನ್ನ ಜೀಕನ್ನಡ ವಾಹಿನಿ ಎಕ್ಕುಡಿಸಿ ಬಿಟ್ಟಿದೆ, ಇನ್ನುಮುಂದೆ ಆದರೂ ಕಥೆಯನ್ನು ಚೆನ್ನಾಗಿ ತೆಗೆದುಕೊಂಡು ಹೋಗಲಿ ಅನ್ನೋದು ಜನರ ಅಭಿಪ್ರಾಯ.



