ಈಗಿನ ಕಾಲದಲ್ಲಿ ಪ್ರೀತಿಯ ವ್ಯಾಖ್ಯಾನ ಸಂಪೂರ್ಣವಾಗಿ ಬದಲಾಗಿ ಹೋಗಿದೆ. ಮೊದಲೆಲ್ಲ ಜನರು ಯೋಚನೆ ಮಾಡುತ್ತಿದ್ದ ರೀತಿಯೇ ಬೇರೆ ಇತ್ತು. ಆದರೆ ಈಗ ಎಲ್ಲವೂ ಬದಲಾಗಿದೆ. ಜನರು ಪ್ರೀತಿ ಪ್ರೇಮದ ವಿಷಯದಲ್ಲಿ ಯೋಚನೆ ಮಾಡುವ ರೀತಿಯೇ ಬದಲಾಗಿ ಹೋಗಿದೆ. ಯಾರು ಯಾವ ವಯಸ್ಸಿನಲ್ಲಿ ಯಾರನ್ನು ಬೇಕಾದರೂ ಪ್ರೀತಿಸಬಹುದು. ಯಾರು ಬೇಕಾದರೂ ಯಾರಿಗಾದರೂ ಇಷ್ಟವಾಗಬಹುದು. ಈ ಮಾತಿಗೆ ಸಾಕ್ಷಿ ಎನ್ನುವಂತೆ ಅನೇಕ ಘಟನೆಗಳನ್ನು ನಾವು ನೋಡಿದ್ದೇವೆ. ಇದೀಗ ಈ ವಿಷಯಕ್ಕೆ ಸಂಬಂಧಿಸಿದ ಹಾಗೆ, ಒಬ್ಬ ನಟಿಯ ಇನ್ಸ್ಟಾಗ್ರಾಮ್ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹೌದು, ಹಿಂದಿ ಕಿರುತೆರೆಯಲ್ಲಿ ಅಭಿನಯಿಸುತ್ತಿರುವ ನಟಿ ಶಿವಂಗಿ ವರ್ಮಾ ಅವರ ಪೋಸ್ಟ್ ಇದು. ಐದು ದಿನಗಳ ಹಿಂದೆ ಇವರು ಶೇರ್ ಮಾಡಿರುವ ಪೋಸ್ಟ್ ನಲ್ಲಿ ಶಿವಂಗಿ ಅವರು ಬಾಲಿವುಡ್ ನ ಹಿರಿಯ ನಟ ಗೋವಿಂದ್ ನಾಮ್ ದೇವ್ ಅವರ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಇಬ್ಬರು ಜೊತೆಯಾಗಿ ನಿಂತಿರುವ ಫೋಟೋ ಇದಾಗಿದ್ದು, ಈ ಫೋಟೋಗೆ ಕ್ಯಾಪ್ಶನ್ ನಲ್ಲಿ, ಪ್ರೀತಿಗೆ ವಯಸ್ಸಿನ ಹಂಗಿಲ್ಲ ಎಂದು ಬರೆದುಕೊಂಡಿದ್ದಾರೆ. ಶಿವಂಗಿ ಅವರು ಈ ಫೋಟೋ ಶೇರ್ ಮಾಡುತ್ತಿದ್ದ ಹಾಗೆಯೇ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಲವರು ಇವರಿಬ್ಬರು ಪ್ರೀತಿಸುತ್ತಿದ್ದಾರೆ ಎಂದುಕೊಂಡಿದ್ದಾರೆ..
ಹೌದು, 31ರ ಹರೆಯದ ನಟಿ ಶಿವಂಗಿ 70ರ ಹರೆಯದ ಹಿರಿಯನಟನ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಎಲ್ಲರೂ ಮಾತನಾಡಿಕೊಳ್ಳುವುದಕ್ಕೆ ಶುರು ಮಾಡಿದ್ದಾರೆ. ಒಂದಷ್ಟು ಜನರು 70ರ ವಯಸ್ಸಿನ ನಟನ ಜೊತೆಗೆ ಮದುವೆ ಆಗುತ್ತೀರಾ ಎಂದು ಒಂದಷ್ಟು ಜನರು ಶಿವಂಗಿ ಅವರನ್ನು ಪ್ರಶ್ನೆ ಕೇಳುತ್ತಿದ್ದಾರೆ. ಇನ್ನಷ್ಟು ಜನರು ಬಹುಶಃ ಈ ನಟಿ ಹಿರಿಯನಟನ ಬಳಿ ಇರುವ ದುಡ್ಡಿಗೋಸ್ಕರ ಈ ರೀತಿ ಮಾಡುತ್ತಿರಬಹುದು. ಅವರ ದುಡ್ಡನ್ನು ನೋಡಿ, ಪ್ರೀತಿಸಿ ಮದುವೆ ಆಗುತ್ತಿರಬಹುದು ಎನ್ನುವುದು ಇನ್ನು ಕೆಲವರ ಅಭಿಪ್ರಾಯ ಆಗಿದೆ. ಈ ಎಲ್ಲಾ ಚರ್ಚೆಗಳು ಜೋರಾಗಿಯೇ ನಡೆಯುತ್ತಿದೆ. ಆದರೆ ಅಸಲಿ ವಿಷಯ ಬೇರೆಯೇ ಇದೆ..
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಹೌದು, ಶಿವಂಗಿ ಮತ್ತು ನಾಮ್ ದೇವ್ ಸಿಂಗ್ ಕುರಿತಂತೆ ಅಸಲಿ ವಿಷಯ ಬೇರೆಯೇ ಇದೆ. ಇವರಿಬ್ಬರ ನಡುವೆ ಇರೋದು ಕೋಆರ್ಟಿಸ್ಟ್ ಎನ್ನುವ ರೀತಿಯ ಸಂಬಂಧ ಅಷ್ಟೇ ಆಗಿದೆ. ಶಿವಂಗಿ ಅವರು ಇಷ್ಟು ದಿವಸ ಹಿಂದಿ ಕಿರುತೆರೆಯಲ್ಲಿ ನಟಿಸುತ್ತಿದ್ದರು, ಆದರೆ ಈಗ ಅವರಿಗೆ ಬಾಲಿವುಡ್ ಪ್ರವೇಶ ಮಾಡುವ ಅವಕಾಶ ಸಿಕ್ಕಿದೆ. ಹಿಂದಿ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ ಶಿವಂಗಿ. ಈ ಸಿನಿಮಾದಲ್ಲಿ ಗೋವಿಂದ್ ನಾಮ್ ದೇವ್ ಅವರು ಮುಖ್ಯವಾದ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಕಾರಣಕ್ಕೆ ಇಬ್ಬರು ಜೊತೆಯಾಗಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ ಅಷ್ಟೇ ಹೊರತು ಇನ್ನೇನು ಇವರ ಮಧ್ಯೆ ಇಲ್ಲ.
ಇನ್ನು ಗೋವಿಂದ್ ನಾಮ್ ದೇವ್ ಅವರಿಗೆ ಮದುವೆ ಆಗಿದ್ದು, ಅವರ ಪತ್ನಿಯ ಹೆಸರು ಸುಧಾ ನಾಮ್ ದೇವ್. ಈ ಜೋಡಿಗೆ 3 ಹೆಣ್ಣುಮಕ್ಕಳು ಇದ್ದಾರೆ, ಮೊದಲ ಮಗಳಿಗೆ ಮದುವೆ ಕೂಡ ಮಾಡಿದ್ದಾರೆ. ಇವರ ದಾಂಪತ್ಯ ಜೀವನ ಬಹಳ ಚೆನ್ನಾಗಿದೆ. ಈ ಘಟನೆ ಇಂದ ನಾವು ಪ್ರತ್ಯಕ್ಷವಾಗಿ ಕಂಡರು ಪ್ರಮಾಣಿಸಿ ನೋಡಬೇಕು ಅನ್ನೋದನ್ನ ಕಲಿಯಬಹುದು. ಚಿತ್ರರಂಗ ಎಂದಮೇಲೆ ಇಂಥ ಗಾಸಿಪ್ ಗಳು, ಸುಳ್ಳು ಸುದ್ದಿಗಳು ಹರುಡುವುದು ನಿಲ್ಲೋದಿಲ್ಲ. ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಕಲಾವಿದರು ತಮ್ಮ ಕೆಲಸಗಳ ಕಡೆಗೆ ಗಮನ ಹರಿಸಬೇಕು. ಅದು ಎಲ್ಲರಿಗೂ ಒಳ್ಳೆಯದು.



