ನಿನ್ನೆಯಷ್ಟೇ ನಮ್ಮ ಶಿವಣ್ಣ ಅವರು ಅಮೆರಿಕಾಗೆ ತೆರಳಿದ್ದಾರೆ. ಶಿವಣ್ಣ ಅವರಿಗೆ ಅನಾರೋಗ್ಯ ಉಂಟಾಗಿರುವ ಕಾರಣ ಸರ್ಜರಿಗಾಗಿ ಅಮೆರಿಕಾಗೆ ಹೋಗುತ್ತಿದ್ದಾರೆ. ಡಿಸೆಂಬರ್ 24ರಂದು ಸರ್ಜರಿ ನಡೆಯಲಿದ್ದು, ಶಿವಣ್ಣ ನಿನ್ನೆ ರಾತ್ರಿಯ ಫ್ಲೈಟ್ ನಲ್ಲಿ ಅಮೆರಿಕಾಗೆ ಹೊರಟಿದ್ದಾರೆ. ನಿನ್ನೆ ಶಿವಣ್ಣ ಅವರ ಆಪ್ತರು, ಅವರ ಮನೆಗೆ ಹೋಗಿ, ಶಿವಣ್ಣ ಅವರನ್ನು ಭೇಟಿ ಮಾಡಿ, ಧೈರ್ಯ ತುಂಬಿ ಬಂದಿದ್ದಾರೆ. ಶಿವಣ್ಣ ಏರ್ಪೋರ್ಟ್ ಗೆ ಹೋಗುವ ಸಮಯ ತಿಳಿದಿದ್ದ ಅಭಿಮಾನಿಗಳೆಲ್ಲರು, ಶಿವಣ್ಣ ಅವರನ್ನು ನೋಡಿ, ಮಾತನಾಡಿಸಲು ಸಂಜೆ ಏರ್ಪೋರ್ಟ್ ಎದುರು ಜಮಾಯಿಸಿದ್ದರು. ಹಾಗೆಯೇ ಮಾಧ್ಯಮದವರು ಸಹ ಇದ್ದರು.

ಹೊರಡುವ ಮುನ್ನ ಶಿವಣ್ಣ ಮಾಧ್ಯಮದವರ ಜೊತೆಗೆ ಮಾತನಾಡುವಾಗ ಭಾವುಕರಾಗಿದ್ದಾರೆ. ಅಭಿಮಾನಿಗಳ ಪ್ರೀತಿ ನೋಡಿ, ಕುಟುಂಬದವರ ಪ್ರೀತಿ ಶಿವಣ್ಣನಿಗೆ ಮನಸ್ಸು ತುಂಬಿ ಬಂದಿದೆ. ಹೌದು, ನಿನ್ನೆ ಶಿವಣ್ಣ ಅವರ ಮನೆಗೆ ಅವರ ತಂಗಿ ಪೂರ್ಣಿಮಾ ಅವರ ಇಡೀ ಕುಟುಂಬ ಭೇಟಿ ನೀಡಿತ್ತು, ಅವರೆಲ್ಲರನ್ನೂ ಮಾತನಾಡಿಸುವಾಗ ಸ್ವಲ್ಪ ಎಮೋಷನಲ್ ಆದೇ ಎಂದು ಶಿವಣ್ಣ ಹೇಳಿದ್ದಾರೆ. ಹೊಸ ವರ್ಷಕ್ಕೆ ಇರೋದಿಲ್ಲ ಎಂದು ಹೇಳಿ, ಈಗಲೇ ಹೊಸ ವರ್ಷಕ್ಕೆ ವಿಶ್ ಮಾಡಿದ್ದಾರೆ. ಹಾಗೆಯೇ ಸುದೀಪ್ ಹಾಗೂ ಉಪೇಂದ್ರ ಅವರ ಸಿನಿಮಾಗಳಿಗೆ ವಿಶ್ ಮಾಡಿ, ಎರಡು ಸಿನಿಮಾಗಳು ಗೆಲ್ಲಲಿ ಎಂದು ಹಾರೈಸಿದ್ದಾರೆ.
ಇನ್ನು ಅಭಿಮಾನಿಗಳ ಪ್ರೀತಿಗೆ, ಮಾಧ್ಯಮದವರ ಪ್ರೀತಿಗೆ ಶಿವಣ್ಣ ಧನ್ಯವಾದ ಹೇಳಿದ್ದಾರೆ. ಡಿಸೆಂಬರ್ 24ರಂದು ನಡೆಯುವ ಸರ್ಜರಿ ಬಗ್ಗೆ ಭಯ ಇಲ್ಲ, ಎಲ್ಲವೂ ಚೆನ್ನಾಗೆ ಆಗುತ್ತದೆ ಅನ್ನೋ ನಂಬಿಕೆ ಇದೆ ಎಂದಿದ್ದಾರೆ ಶಿವಣ್ಣ. ಅಮೆರಿಕಾದಲ್ಲಿರುವ ಮಿಯಾಮಿ ಕ್ಯಾನ್ಸರ್ ಹಾಸ್ಪಿಟಲ್ ನಲ್ಲಿ ಶಿವಣ್ಣ ಅವರಿಗೆ ಸರ್ಜರಿ ನಡೆಯಲಿದ್ದು, ಅಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆ. ವೈದ್ಯರು ಎಲ್ಲವು ಸರಿ ಹೋಗುತ್ತದೆ ಎಂದು ಭರವಸೆ ನೀಡಿದ್ದಾರೆ. ಜನವರಿ 25ರಂದು ಅಲ್ಲಿಂದ ಫ್ಲೈಟ್ ಇದ್ದು, ಜನವರಿ 26ರಂದು ಭಾರತಕ್ಕೆ ಶಿವಣ್ಣ ಮರಳಿ ಬರುತ್ತಾರೆ. 35 ದಿನಗಳ ಕಾಲ ಮನೆಯಿಂದ, ಭಾರತದಿಂದ ಹೊರಗಡೆ ಇರಬೇಕು ಎನ್ನುವ ಬೇಸರ ಅವರಲ್ಲಿದೆ. ಬೇಗ ಬರುತ್ತೇನೆ ಎಂದು ಹೇಳಿದ್ದಾರೆ ಶಿವಣ್ಣ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಇನ್ನು ಅಭಿಮಾನಿಗಳು ಶಿವಣ್ಣ ಅವರ ಆರೋಗ್ಯಕ್ಕಾಗಿ ರಾಜ್ಯದ ಎಲ್ಲೆಡೆ ಪ್ರತಿದಿನ ಪೂಜೆ, ಅರ್ಚನೆ ಎಲ್ಲವನ್ನು ಮಾಡಿಸಲಿದ್ದಾರೆ. ಡಿಸೆಂಬರ್ 24ರಂದು ಶಿವಣ್ಣ ಅವರಿಗಾಗಿ ವಿಶೇಷ ಪೂಜೆಗಳು, ಅಭಿಷೇಕಗಳು ಎಲ್ಲವು ನಡೆಯಲಿದೆ. ಅಭಿಮಾನಿಗಳು ಶಿವಣ್ಣ ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ತೋರಿಸಿದ್ದು, ಈ ರೀತಿಯಲ್ಲಿ ಅವರ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಗಳ ಈ ಪ್ರೀತಿಗೆ ಶಿವಣ್ಣ ಭಾವುಕರಾಗಿದ್ದು, ಎಲ್ಲರ ಪ್ರೀತಿಗೆ ಏನು ಹೇಳೋದು ಗೊತ್ತಾಗ್ತಿಲ್ಲ ಎಂದಿದ್ದಾರೆ. ಸಧ್ಯಕ್ಕೆ ಶಿವಣ್ಣ ಬೇಗ ವಾಪಸ್ ಬರಲಿ ಎನ್ನುವುದೇ ಎಲ್ಲರ ಆಸೆ ಮತ್ತು ಆಶಯ ಆಗಿದೆ.
ಶಿವಣ್ಣ ಅವರು ಎಲ್ಲರಿಗೂ ಬಹಳ ಪ್ರಿಯವಾದ ವ್ಯಕ್ತಿ. ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ, ಈಗ ತಮಿಳು, ತೆಲುಗು ಮತ್ತು ಮಲಯಾಳಂ ನಲ್ಲಿ ಸಹ ಶಿವಣ್ಣ ಅವರಿಗೆ ಭಾರಿ ಬೇಡಿಕೆ ಇದೆ. ಜೈಲರ್ ಸಿನಿಮಾದ ಒಂದು ದೃಶ್ಯ ಎಲ್ಲರಿಗು ಎಷ್ಟು ಇಷ್ಟವಾಗಿದೆ, ಎಷ್ಟರ ಮಟ್ಟಿಗೆ ಜನಪ್ರಿಯತೆ ಪಡೆದುಕೊಂಡಿದೆ ಎಂದು ಗೊತ್ತೇ ಇದೆ. ಶಿವಣ್ಣ ಅವರ ಭೈರತಿ ರಣಗಲ್ ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಗಿ, ತೆಲುಗು ತಮಿಳಿನಲ್ಲಿ ಸಹ ಬಿಡುಗಡೆ ಆಗಿದೆ ಎನ್ನುವ ವಿಷಯ ಸಹ ನಮಗೆಲ್ಲ ಗೊತ್ತೇ ಇದೆ. ಇನ್ನು ಶಿವಣ್ಣ ಹುಷಾರಾಗಿ ಬಂದ ನಂತರ ಹಲವು ಸಿನಿಮಾಗಳಲ್ಲಿ ಬ್ಯಾಕ್ ಟು ಬ್ಯಾಕ್ ನಟಿಸಲಿದ್ದಾರೆ. ಮುಂದಿನ ವರ್ಷ 45 ಸಿನಿಮಾ ತೆರೆಕಾಣಲಿದೆ.