ನಟಿ ಕೀರ್ತಿ ಸುರೇಶ್ ಅವರನ್ನು ಬಹುತೇಕ ಜನರು ಮಹಾನಟಿ ಎಂದೇ ಕರೆಯುತ್ತಾರೆ. ಅದಕ್ಕೆ ಕಾರಣ ಅವರು ನಟಿಸಿದ ಮಹಾನಟಿ ಸಿನಿಮಾ, ಇದರಲ್ಲಿ ಅವರು ತೆಲುಗು ಚಿತ್ರರಂಗದ ಒಂದು ಕಾಲದ ಸ್ಟಾರ್ ನಟಿ, ಕನ್ನಡದಲ್ಲಿಯೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದ ಮಹಾನಟಿ ಸಾವಿತ್ರಿ ಅವರ ಬಯೋಪಿಕ್ ಮಹಾನಟಿ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದರು. ಸಾವಿತ್ರಿ ಅವರಂತೆಯೇ ಕಂಡರು ಎಂದು ಹೇಳಿದರು ತಪ್ಪಲ್ಲ. ಅಂಥ ಅದ್ಭುತವಾದ ನಟನೆಗೆ ರಾಷ್ಟ್ರಪ್ರಶಸ್ತಿಯನ್ನು ಸಹ ಪಡೆದುಕೊಂಡರು ಕೀರ್ತಿ ಸುರೇಶ್. ಇದೇ ಕಾರಣಕ್ಕೆ ಇವರನ್ನು ಇವತ್ತಿಗೂ ಮಹಾನಟಿ ಎಂದೇ ಕರೆಯುತ್ತಾರೆ.

ಹೀಗೆ ಚಿತ್ರರಂಗದಲ್ಲಿ ಸ್ಟಾರ್ ಹೀರೋಯಿನ್ ಆಗಿ ಗುರುತಿಸಿಕೊಂಡಿರುವ ಕೀರ್ತಿ ಸುರೇಶ್ ಅವರು ಇತ್ತೀಚೆಗೆ ಮದುವೆಯಾದರು. ಕಳೆದ ಮೂರು ದಿನಗಳ ಹಿಂದೆ ಕೀರ್ತಿ ಸುರೇಶ್ ಅವರು ತಮ್ಮ ಬಹುಕಾಲದ ಗೆಳೆಯ ಆಂಟೋನಿ ತಟ್ಟಿಲ್ ಅವರೊಡನೆ ಗೋವಾದಲ್ಲಿ ಮದುವೆಯಾಗಿದ್ದಾರೆ. ಮದುವೆಯ ಫೋಟೋಸ್ ಗಳನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಇವರ ಮದುವೆ ಫೋಟೋಸ್ ವೈರಲ್ ಆಗಿದೆ. ಸೆಲೆಬ್ರಿಟಿಗಳು ಮತ್ತು ನೆಟ್ಟಿಗರು ಎಲ್ಲರೂ ಸಹ ಕೀರ್ತಿ ಸುರೇಶ್ ಹಾಗೂ ಆಂಟೋನಿ ದಂಪತಿಗೆ ಪ್ರೀತಿಯಿಂದ ವಿಶ್ ಮಾಡಿ ಶುಭಾಶಯ ತಿಳಿಸಿದ್ದಾರೆ. ಹಾಗೆಯೇ ಕೀರ್ತಿ ಸುರೇಶ್ ಅವರ ಬಗ್ಗೆ ಕೆಲವು ವಿಷಯಗಳು ಸಹ ಚರ್ಚೆ ಆಗುತ್ತಿದೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ನಮಗೆಲ್ಲಾ ಗೊತ್ತಿರುವ ಹಾಗೆ ಕೀರ್ತಿ ಸುರೇಶ್ ಅವರು ಖ್ಯಾತ ನಟಿ ಮೇನಕಾ ಅವರ ಮಗಳು, ಮೇನಕಾ ಅವರು 80ರ ದಶಕದಲ್ಲಿ ತಮಿಳು ಹಾಗು ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಮುದ್ದಾದ ನಟಿ, ಮೇನಕಾ ಅವರು ಕನ್ನಡದಲ್ಲಿ ಡಾ. ರಾಜ್ ಕುಮಾರ್ ಅವರ ಸಮಯದ ಗೊಂಬೆ ಸಿನಿಮಾದಲ್ಲಿ ನಟಿಸಿದ್ದಾರೆ. ಇವರು ನಟಿ, ಕೀರ್ತಿ ಸುರೇಶ್ ಅವರ ತಂದೆ ಸುರೇಶ್ ಅವರು ಮಲಯಾಳಂ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಹೆಸರು ಮಾಡಿರುವವರು, ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಕೀರ್ತಿ ಸುರೇಶ್ ಅವರಿಗೆ ಒಬ್ಬರು ಅಕ್ಕ ಇದ್ದಾರೆ, ಅವರ ಹೆಸರು ರೇವತಿ, ಅವರಿಗೆ ಮದುವೆಯಾಗಿದೆ.
ಇನ್ನು ಕೀರ್ತಿ ಸುರೇಶ್ ಅವರು ಸ್ಟಾರ್ ಹೀರೋಯಿನ್ ಆಗಿ, ಇವರ ವಾರ್ಷಿಕ ಆದಾಯ ಸುಮಾರು 15 ಕೋಟಿ ಎಂದು ಹೇಳಲಾಗುತ್ತಿದೆ. ಒಂದು ಸಿನಿಮಾಗೆ 3 ರಿಂದ 4 ಕೋಟಿ ಸಂಭಾವನೆ ಪಡೆಯುತ್ತಾರೆ ಕೀರ್ತಿ. ಹಲವು ಬ್ರ್ಯಾಂಡ್ ಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ, ಸೋಶಿಯಲ್ ಮೀಡಿಯಾದ ಸ್ಪಾನ್ಸರ್ಶಿಪ್ ಇಂದಲೇ ತಿಂಗಳಿಗೆ 25 ರಿಂದ 30 ಲಕ್ಷ ಸಿಗುತ್ತದೆ. ಹಲವು ಜಾಹಿರಾತುಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ. ಹಾಗೆಯೇ ಇವರ ಬಳಿ ಹೈದರಾಬಾದ್ ನ ಜುಬಿಲಿ ಹಿಲ್ಸ್ ನಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ಇದೆ, ಜೊತೆಗೆ ಮರ್ಸಿಡಿಸ್ ಬೆಂಜ್, ಆಡಿ ಸೇರಿದಂತೆ ಐಷಾರಾಮಿ ಕಾರ್ ಗಳನ್ನು ಹೊಂದಿದ್ದಾರೆ ಕೀರ್ತಿ.
ಈ ರೀತಿಯಾಗಿ ಇವರ ಆಸ್ತಿ ಸುಮಾರು 35 ಕೋಟಿ ವರೆಗು ಇದೆ ಎಂದು ಮಾಹಿತಿ ಸಿಕಿದೆ. ಇನ್ನು ಇವರು ಮದುವೆ ಆಗಿರುವ ಆಂಟೋನಿ ತಟ್ಟಿಲ್ ಕೀರ್ತಿ ಅವರಿಗಿಂತ 3 ವರ್ಷ ದೊಡ್ಡವರು, ಇವರು ಹೆಸರಾಂತ ಬ್ಯುಸಿನೆಸ್ ಮ್ಯಾನ್ ಆಗಿದ್ದು, ಮೂಲತಃ ಕೇರಳ ದವರೆ ಆಗಿದ್ದು, ಸೆಟ್ಲ್ ಆಗಿರೋದು ದುಬೈನಲ್ಲಿ.. ಆಂಟೋನಿ ಅವರ ಬಳಿ ದುಬೈನಲ್ಲಿ ಹಾಗೂ ಕೊಚ್ಚಿಯಲ್ಲಿ ದೊಡ್ಡ ದೊಡ್ಡ ರೆಸ್ಟೋರೆಂಟ್ ಗಳು ಇದೆಯಂತೆ, ಇವರ ಆಸ್ತಿ 150 ಕೋಟಿಗಿಂತ ಹೆಚ್ಚು ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಕೀರ್ತಿ ಸುರೇಶ್ ಅವರು ಲೈಫ್ ನಲ್ಲಿ ಒಳ್ಳೆಯ ರೀತಿಯಲ್ಲಿ ಸೆಟ್ಲ್ ಆಗಿದ್ದಾರೆ. 15 ವರ್ಷಗಳ ಕಾಲ ಪ್ರೀತಿಸಿದ ಹುಡುಗನನ್ನೇ ಮದುವೆಯಾಗಿದ್ದಾರೆ.